ಬೆಂಗಳೂರು, ಏಪ್ರಿಲ್ 13: ಭಾರತೀಯ ಉದ್ಯಮಿಯೊಬ್ಬರು ತಮ್ಮ ಪುತ್ರನ 18 ನೇ ಹುಟ್ಟುಹಬ್ಬದಂದು ಉಡುಗೊರೆ ನೀಡಿದ ವೀಡಿಯೊ ವೈರಲ್ ಆಗಿದೆ. ಆದರೆ ಈ ಉಡುಗೊರೆ ಅಂತಿಂಥಾ ಉಡುಗೊರೆಯಲ್ಲ. ಇದು ಬರೋಬ್ಬರಿ ₹5 ಕೋಟಿ ಮೌಲ್ಯದ ಗಿಫ್ಟ್.
ಹೌದು ಉದ್ಯಮಿ ವಿವೇಕ್ ಕುಮಾರ್ ರುಂಗ್ಟಾ ಮತ್ತು ಅವರ ಮಗ ತರುಷ್ ನಡುವಿನ ಹೃದಯಸ್ಪರ್ಶಿ ಕ್ಷಣದ ವಿಡಿಯೋ ವೈರಲ್ ಆಗಿದ್ದು ತಮ್ಮ ಮಗ ಹರೆಯಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಆತನ ಕನಸಿನ ಕಾರಾಗಿರುವ ₹5 ಕೋಟಿ ಮೌಲ್ಯದ ಲಂಬೋರ್ಘಿನಿ ಹುರಾಕನ್ STO (ಸೂಪರ್ ಟ್ರೋಫಿಯೊ ಒಮೊಲೊಗಾಟೊ) ಉಡುಗೊರೆಯಾಗಿ ನೀಡಿದ್ದಾರೆ.

ತರುಣ್ ರುಂಗ್ಟಾ ಮಾರ್ಚ್‌ನಲ್ಲಿ ತಮ್ಮ ತಂದೆಯಿಂದ ಈ ಗಿಫ್ಟ್ ಪಡೆದಿದ್ದು, ಅವರು ಕಾರಿನ ವೀಡಿಯೊವನ್ನು Instagram ನಲ್ಲಿ ಪೋಸ್ಟ್ ಮಾಡಿದ ನಂತರ ಅದರ ವೀಡಿಯೊ ಆನ್‌ಲೈನ್‌ನಲ್ಲಿ ಟ್ರೆಂಡಿಂಗ್ ಆಗಲು ಪ್ರಾರಂಭಿಸಿದೆ.
ತರುಷ್ ಇನ್ಸ್ಟಾಗ್ರಾಮ್ನಲ್ಲಿ ಪ್ರೀತಿ ತುಂಬಿದ ಶೀರ್ಷಿಕೆಯೊಂದಿಗೆ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. "ನನ್ನ ಕನಸಿನ ಕಾರಿನ ಉಡುಗೊರೆಯೊಂದಿಗೆ ನನ್ನ 18 ನೇ ಹುಟ್ಟುಹಬ್ಬವನ್ನು ಮಾಂತ್ರಿಕವಾಗಿಸಿದ ನನ್ನ ಅದ್ಭುತ ತಂದೆ ವಿವೇಕ್ ಕುಮಾರ್ ರುಂಗ್ಟಾ ಅವರಿಗೆ ನನ್ನ ಪ್ರೀತಿಪೂರ್ವಕ ಕೃತಜ್ಞತೆಗಳು! ನಿಮ್ಮ ಪ್ರೀತಿ ಮತ್ತು ಬೆಂಬಲ ನನ್ನೆಲ್ಲಾ ಸರ್ವಸ್ವ ಆಗಿದೆ ಎಂದು ಬರೆದುಕೊಂಡಿದ್ದಾರೆ.
ವೀಡಿಯೊದಲ್ಲಿ, ರುಂಗ್ಟಾ ಅವರು ತಮ್ಮ ಮಗನೊಂದಿಗೆ ಲಂಬೋರ್ಗಿನಿ ಡೀಲರ್‌ಶಿಪ್ ಎಂಟ್ರಿ ಕೊಡುತ್ತಾರೆ . ವೀಡಿಯೊ ಮುಂದುವರೆದಂತೆ, ಹಳದಿ ಬಣ್ಣದ ಐಷಾರಾಮಿ ಕಾರು ಅನಾವರಣಗೊಳ್ಳುತ್ತದೆ. ಕೊನೆಯಲ್ಲಿ, ತರುಷ್ ತನ್ನ ತಂದೆಯೊಂದಿಗೆ ಬಿಗಿದಪ್ಪಿಕೊಂಡು ತಮ್ಮ ಸಂತೋಷವನ್ನು ಹಂಚಿಕೊಳ್ಳುತ್ತಾರೆ.
ಕಳೆದ ತಿಂಗಳೇ ಈ ವಿಡಿಯೋ ಪೋಸ್ಟ್ ಮಾಡಲಾಗಿತ್ತು. ಅಂದಿನಿಂದ, ಕ್ಲಿಪ್ 1.1 ಮಿಲಿಯನ್ ವಿವ್ಯೂ ಕಂಡಿದ್ದು ಇದರ ನಂಬರ್ ಇನ್ನೂ ಹೆಚ್ಚುತ್ತಿವೆ. ಇದರೊಂದಿಗೆ ಹಲವು ಶೇರ್ ಲೈಕ್ ಗಳು ಕೂಡಾ ಸಿಕ್ಕಿದೆ. ತಂದೆ-ಮಗ ಈ ಜೋಡಿಯ ವೀಡಿಯೊವನ್ನು ಲಂಬೋರ್ಘಿನಿ ಅಬುಧಾಬಿ ಮತ್ತು ಲಂಬೋರ್ಘಿನಿ ದುಬೈನ ಅಧಿಕೃತ Instagram ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. ವಿವೇಕ್ ಕುಮಾರ್ ರುಂಗ್ಟಾ ಅವರು ಮಧ್ಯಪ್ರಾಚ್ಯದಲ್ಲಿ ದೊಡ್ಡ ವ್ಯಾಪಾರವನ್ನು ಹೊಂದಿರುವ ಹೂಡಿಕೆ ಸಂಸ್ಥೆಯಾದ VKR ಗ್ರೂಪ್ ಅನ್ನು ಹೊಂದಿದ್ದಾರೆ.
ಈ ವೀಡಿಯೊಗೆ ನೆಟ್ಟಿಗರು ಹೇಗೆ ಪ್ರತಿಕ್ರಿಯಿಸಿದರು?
ಈ ಪೋಸ್ಟ್ ಗೆ ಅಸಂಖ್ಯಾತ ಕಾಮೆಂಟ್‌ಗಳನ್ನು ಬಂದಿದ್ದು, ನೆಟ್ಟಿಗರು "ಅದ್ಭುತ ರೈಡ್. ಅಭಿನಂದನೆಗಳು!" ಮತ್ತೊಬ್ಬರು, "ಅಭಿನಂದನೆಗಳು ಸಹೋದರ, ನಿಮಗೆ ಅದ್ಭುತವಾದ ರೈಡ್ ಇದೆ" ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು ಹಾರ್ಟ್ ಎಮೋಜಿಗಳೊಂದಿಗೆ ಪ್ರತಿಕ್ರಿಯಿಸಿದರೆ, ಕೆಲವರು ವೈರಲ್ ವೀಡಿಯೊಗೆ ಪ್ರತಿಕ್ರಿಯಿಸುವಾಗ ಬೆಂಕಿಯ ಎಮೋಜಿಗಳನ್ನು ಹಾಕಿದ್ದಾರೆ.
ಲಂಬೋರ್ಘಿನಿ ಹುರಾಕನ್ STO ಬಗ್ಗೆ:
ಲಂಬೋರ್ಘಿನಿಯ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, ಈ ಸೂಪರ್-ಸ್ಪೋರ್ಟ್ಸ್ ಕಾರನ್ನು "singular purpose" ದೊಂದಿಗೆ ರಚಿಸಲಾಗಿದೆ, ಇದು "ರೋಡ್-ಲೀಗಲ್ ಮಾದರಿಯಲ್ಲಿ ನಿಜವಾದ ರೇಸ್ ಕಾರ್‌ನ ಎಲ್ಲಾ ಭಾವನೆ ಮತ್ತು ತಂತ್ರಜ್ಞಾನವನ್ನು ಒದಗಿಸುತ್ತದೆ. "ಇದರ ತೀವ್ರ ವಾಯುಬಲವಿಜ್ಞಾನ, ಟ್ರ್ಯಾಕ್-ಹೋನ್ಡ್ ಹ್ಯಾಂಡ್ಲಿಂಗ್ ಡೈನಾಮಿಕ್ಸ್, ಹಗುರವಾದ ಕಂಟೆನ್ಟ್ಗಳು ನಿಮ್ಮ ದೈನಂದಿನ ಜೀವನದಲ್ಲಿ ರೇಸ್‌ಟ್ರಾಕ್‌ನ ಎಲ್ಲಾ ಭಾವನೆಗಳನ್ನು ಪ್ರಚೋದಿಸಲು ಸಿದ್ಧವಾಗಿದೆ" ಎಂದು ಕಂಪನಿ ವಿವರಿಸಿದೆ.
Huracan STO 5.2-ಲೀಟರ್ V10 ನಿಂದ ಚಾಲಿತವಾಗಿದ್ದು ಅದು ಹಿಂದಿನ ಚಕ್ರಗಳಿಗೆ ಮಾತ್ರ ಶಕ್ತಿಯನ್ನು ನೀಡುತ್ತದೆ. ಕಾರು 8000 rpm ನಲ್ಲಿ 631bhp ಶಕ್ತಿಯನ್ನು ಉತ್ಪಾದಿಸುತ್ತದೆ ಮತ್ತು ಇ ಸೆಕೆಂಡುಗಳಲ್ಲಿ 0-11 kmph ಅನ್ನು ತಲುಪಬಹುದಾಗಿದೆ.


Click it and Unblock the Notifications