ಸದ್ಯ ಬೆಂಗಳೂರಿನಲ್ಲಿ ಮುಂಬೈ ಹಾಗೂ ದೆಹಲಿಯಂಥ ಮಹಾನಗರಗಳಲ್ಲಿ ಇರುವ ಸಂಚಾರ ವ್ಯವಸ್ಥೆ ಅಥವಾ ಮೂಲಭೂತ ವ್ಯವಸ್ಥೆಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಬೆಂಗಳೂರಿನ ಮೂಲಕ ಭಾರತದಲ್ಲಿ ಐಟಿ ಕ್ರಾಂತಿ ಆರಂಭಗೊಂಡ ಬಳಿಕ, ಉದ್ಯಾನ ನಗರಿಯಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಅಭಿವೃದ್ದಿಯಾಗುತ್ತಿದ್ದು, ಮುಖ್ಯವಾಗಿ ನಗರಗಳು ಸದ್ಯ ಹೆಚ್ಚಿನ ಪ್ರಮಾಣದಲ್ಲಿ ವಿಸ್ತರಣೆಯಾಗುತ್ತಿದೆ. ಸದ್ಯ ಬೆಂಗಳೂರು ನಗರ ಕೇಂದ್ರದಲ್ಲಿ ನಗರ ಬೆಳವಣಿಗೆಗೆ ಸ್ಥಳಾವಕಾಶದ ಕೊರತೆ ಇದ್ದು, ಸಹಜವಾಗಿಯೇ ಬೆಂಗಳೂರು ಗ್ರಾಮೀಣ ಪ್ರದೇಶಕ್ಕೂ ನಗರ ವಿಸ್ತರಣೆಯಾಗುತ್ತಿದೆ. ಪರಿಣಾಮ ಅನೇಕ ಕೈಗಾರಿಕೆಗಳು, ಕಂಪೆನಿಗಳು ಗ್ರಾಮೀಣ ಭಾಗದಲ್ಲೂ ಆರಂಭವಾಗುತ್ತಿದೆ.
ಸಹಜವಾಗಿಯೇ ಇದರಿಂದ ಗ್ರಾಮೀಣ ಪ್ರದೇಶಗಳ ಜನತೆಗೆ ಉದ್ಯೋಗ ಸೇರಿದಂತೆ ಅನೇಕ ಉತ್ತಮ ಅವಕಾಶಗಳು ಲಭಿಸುತ್ತಿದೆ. ಇನ್ನು ನಗರ ಬೆಳೆದಂತೆಲ್ಲಾ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜ್ಯಾಮ್ ಉಂಟಾಗುತ್ತಿದ್ದು, ಜನತೆ ಲೆಕ್ಕವಿಲ್ಲದಷ್ಟು ಸಮಯವನ್ನು ಟ್ರಾಫಿಕ್‌ನಲ್ಲೇ ಕಳೆಯುವಂತ ಸ್ಥಿತಿ ಉಂಟಾಗುತ್ತಿದೆ. ಸದ್ಯ ಇದೇ ಕಾರಣಕ್ಕಾಗಿ ನಗರದಲ್ಲಿ ರಸ್ತೆಗಳ ಅಭಿವೃದ್ದಿ, ಫ್ಲೈಓವರ್, ಸುರಂಗ ಮಾರ್ಗಗಳ ನಿರ್ಮಾಣಕ್ಕೆ ಭಾರೀ ಮೊತ್ತದಲ್ಲಿ ಹಣ ನೀಡಲಾಗುತ್ತಿದೆ.

ಸದ್ಯ ಇದರ ನಡುವೆಯೇ ಸಾಮಾಜಿಕ ಕಾರ್ಯಕರ್ತೆ ಕಾತ್ಯಾಯಿನಿ ಚಾಮರಾಜ್ ಅವರು ಸುರಂಗ ಮಾರ್ಗ ನಿರ್ಮಾಣದ ವಿರುದ್ದ ಸಹಿ ಅಭಿಯಾನ ಆರಂಭಿಸಿದ್ದು, ಆನ್‌ಲೈನ್ ದೂರು ದಾಖಲಿಸಿ ಯೋಜನೆಗಳ ವಿರುದ್ದ ಅಪಸ್ವರ ಎತ್ತಿದ್ದಾರೆ. ಸುರಂಗ ರಸ್ತೆಗಳು, ಸ್ಕೈ ಡೆಕ್‌ಗಳು ಮತ್ತು ಎಕ್ಸ್‌ಪ್ರೆಸ್‌ವೇಗಳ ವಿರುದ್ಧ ಕಾತ್ಯಾಯಿನಿ ಸಹಿ ಅಭಿಯಾನ ಆರಂಭಿಸಿದ್ದಾರೆ.
ಏನಿದು ಪ್ರಕರಣ?
ಸಾರಿಗೆ ಯೋಜನೆಗಳು ಮತ್ತು ಸಮಗ್ರ ಚಲನಶೀಲ ಯೋಜನೆ (ಸಿಎಮ್‌ಪಿ) ಮೇಲ್ವಿಚಾರಣೆ ಮಾಡಲು ಡಿಸೆಂಬರ್ 2022 ರಲ್ಲಿ ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ (ಬಿಎಂಎಲ್‌ಟಿಎ)ವನ್ನು ಸ್ಥಾಪಿಸಲಾಗಿತ್ತು. ಆದರೆ ಯೋಜನೆಗಳ ಪ್ರಸ್ತಾವನೆಗಳು ಮುಂದುವರಿಯುವಾಗ ಇದು ನಿಷ್ಕ್ರಿಯವಾಗಿದೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ. ಇನ್ನು ಅರ್ಜಿ ದೂರಿನಲ್ಲಿ ಹೆಚ್ಚಿನ ವಿವರಣೆ ನೀಡಿರುವ ಅವರು, ಕರ್ನಾಟಕ ಕ್ಯಾಬಿನೆಟ್ ಎರಡು ಅತೀ ದೊಡ್ಡ ಯೋಜನೆಗಳಾದ ಸುರಂಗ ರಸ್ತೆ ಹಾಗೂ ಸ್ಕೈ ಡೆಕ್ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಬೆಂಗಳೂರು ಸುರಂಗ ರಸ್ತೆಗಾಗಿ BBMP ಯ ಡಿಪಿಆರ್ (ವಿವರವಾದ ಯೋಜನಾ ವರದಿ) ಆರು ಲೇನ್, 18-ಕಿಲೋಮೀಟರ್ ಭೂಗತ ಸುರಂಗವಾಗಿದ್ದು ಅದು ಉತ್ತರದ ಹೆಬ್ಬಾಳದಿಂದ ದಕ್ಷಿಣದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ಗೆ ಸಂಪರ್ಕಿಸುತ್ತದೆ.
ಈ ಯೋಜನೆಯು ಬರೊಬ್ಬರಿ ಅಂದಾಜು 16,500 ಕೋಟಿ ರೂ. ಮೊತ್ತವನ್ನು ಹೊಂದಿದೆ. ಉದ್ದೇಶಿತ 250 ಮೀಟರ್ ಎತ್ತರದ ಸ್ಕೈ ಡೆಕ್ ಯೋಜನೆಯು ದಕ್ಷಿಣ ಏಷ್ಯಾದ ಅತಿ ಎತ್ತರದ ಗೋಪುರವಾಗಲಿದ್ದು, ಅಂದಾಜು 500 ಕೋಟಿ ರೂ. ಮೊತ್ತವನ್ನು ಹೊಂದಿದೆ ಎನ್ನಲಾಗಿದೆ. ಸುರಂಗ ರಸ್ತೆಗಳನ್ನು ವಿಸ್ತರಿಸಬಹುದು ಮತ್ತು ಯೋಜನೆಗಳ ಪಟ್ಟಿಯಲ್ಲಿ ಇತರ ಎಕ್ಸ್‌ಪ್ರೆಸ್‌ವೇಗಳು, ಫ್ಲೈಓವರ್‌ಗಳು, ಡಬಲ್ ಡೆಕ್ಕರ್ ರಸ್ತೆಗಳು ಇತ್ಯಾದಿ ಇರಬಹುದು. ಓಟ್ಟಾರೆಯಾಗಿ ಈ ಎಲ್ಲಾ ಯೋಜನೆಗಳನ್ನು ಒಟ್ಟಾಗಿ ತೆಗೆದುಕೊಂಡರೆ ಇನ್ನಷ್ಟು ಹೆಚ್ಚಿನ ವೆಚ್ಚವನ್ನು ನಿರೀಕ್ಷಿಸಲಾಗಿದೆ. ಅಂದರೆ ಎಲ್ಲಾ ಯೋಜನೆಗಳ ಮೊತ್ತದ ಗಾತ್ರವು 50000 ಕೋಟಿ ರೂ. ಮೊತ್ತವನ್ನು ಕೂಡ ಮೀರಬಹುದು ಎಂದು ಅಂದಾಜಿಸಲಾಗಿದೆ. ಸಹಜವಾಗಿಯೇ ಇದು ಕರ್ನಾಟಕ ರಾಜ್ಯದ ಆದ್ಯತೆಗಳ ಬಗ್ಗೆ ಕಳವಳಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಒಂದೇ ಯೋಜನೆಗೆ ಭಾರೀ ದೊಡ್ಡ ಮೊತ್ತ
ಇನ್ನು ಕಾತ್ಯಾಯಿನಿ ಚಾಮರಾಜ್ ಅವರ ಪ್ರಕಾರ, ಸುರಂಗ ರಸ್ತೆಗಳು ಪ್ರಾಥಮಿಕವಾಗಿ ಬೆಂಗಳೂರಿನ 23 ಲಕ್ಷ ಖಾಸಗಿ ಕಾರು ಮಾಲೀಕರಿಗೆ ಪ್ರಯೋಜನವನ್ನು ನೀಡುತ್ತವೆ. ಆದರೆ ಇದು ರಾಜ್ಯದ ಸರಿಸುಮಾರು 7 ಕೋಟಿ ಜನಸಂಖ್ಯೆಯಲ್ಲಿ ಕೇವಲ 2.8% ಪಟ್ಟು ಮಾತ್ರ ಆಗಿದೆ. ಹಾಗಾಗಿ ಇಷ್ಟು ದೊಡ್ಡ ಮೊತ್ತವನ್ನು ಈ ಒಂದೇ ಯೋಜನೆಗೆ ಬಳಸುವುದು ಎಷ್ಟು ಸರಿ ಎಂಬ ರೀತಿಯಲ್ಲಿ ಪ್ರಶ್ನಿಸಿದ್ದಾರೆ. ಅದೂ ಅಲ್ಲದೆ ಇಡೀ ಕಲ್ಯಾಣ ಕರ್ನಾಟಕಕ್ಕೆ ವಾರ್ಷಿಕವಾಗಿ ಕೇವಲ 3000 ಕೋಟಿ ರೂ.ಗಿಂತಲೂ ಕಡಿಮೆ ಅನುದಾನವನ್ನು ನೀಡುತ್ತಿರುವುದರ ಬಗ್ಗೆ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಕಲ್ಯಾಣ ಕರ್ನಾಟಕಕ್ಕೆ ನೀಡುವ ಅನುದಾನ ಕೂಡ ಸರಿಯಾದ ರೀತಿಯಲ್ಲಿ ಉಪಯೋಗವಾಗುತ್ತಿಲ್ಲ ಎನ್ನಲಾಗಿದೆ. ಅಲ್ಲದೆ ಕಾತ್ಯಾಯಿನಿ ಅವರು ತಮ್ಮ ದೂರಿನಲ್ಲಿ ಹಲವು ವಿಚಾರಗಳ ಬಗ್ಗೆ ಉಲ್ಲೇಖಿಸಿದ್ದಾರೆ. ನೀರಿನ ಸಮಸ್ಯೆ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಸೂಚಿಸಿದ ಅವರು ಕರ್ನಾಟಕದ ಎರಡನೇ ಹಾಗೂ ಮೂರನೇ ಹಂತದ ನಗರಗಳ ಆರೋಗ್ಯ ಹಾಗೂ ವಿದ್ಯಾಭ್ಯಾಸ ಸಮಸ್ಯೆಗಳನ್ನು ನೀಗಿಸುವತ್ತ ಸರ್ಕಾರ ಗಮನ ಹರಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಅದೂ ಅಲ್ಲದೆ ಘನತ್ಯಾಜ್ಯ ನಿರ್ವಹಣೆಯನ್ನು ಹೆಚ್ಚಿಸುವುದು ಮತ್ತು ಸಾರ್ವಜನಿಕ ಸಾರಿಗೆಯನ್ನು ಹೆಚ್ಚಿಸುವುದು ಕೂಡ ಅವರ ಮನವಿನಲ್ಲಿ ಸೇರಿದೆ.
More From GoodReturns

Bengaluru: ಮಳೆಗಾಲಕ್ಕೂ ಮುನ್ನ ಫೀಲ್ಡ್ಗೆ ಇಳಿದ ಶಾಸಕ ಗೋಪಾಲಯ್ಯ...ಮಹಾಲಕ್ಷ್ಮಿ ಲೇಔಟ್ನಲ್ಲಿ ಕಾಮಗಾರಿಗಳ ಪರಿಶೀಲನೆ!

Bengaluru - Stock Market: ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ; ಮನನೊಂದು ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

BMTC Bus: ಬೆಂಗಳೂರು-ರಾಮನಗರ ಮತ್ತು ಕನಕಪುರಕ್ಕೆ ಬಿಎಂಟಿಸಿ ಬಸ್… ಬಸ್ ನಿಲ್ದಾಣಗಳ ಬಗ್ಗೆ ತಿಳಿಯಿರಿ

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ



Click it and Unblock the Notifications