ಟೋಲ್ ಟ್ಯಾಕ್ಸ್ ಎನ್ನುವುದು ಎಕ್ಸ್‌ಪ್ರೆಸ್‌ವೇ ಅಥವಾ ಹೆದ್ದಾರಿಯನ್ನು ಬಳಸಲು ನೀವು ಪಾವತಿಸುವ ಮೊತ್ತ. ವಿವಿಧ ರಾಜ್ಯಗಳ ನಡುವೆ ಉತ್ತಮ ಸಂಪರ್ಕವನ್ನು ನಿರ್ಮಿಸುವಲ್ಲಿ ಇವು ಸಹಾಯಕ. ವಿವಿಧ ನಗರಗಳು ಅಥವಾ ರಾಜ್ಯಗಳಿಗೆ ಪ್ರಯಾಣಿಸಲು ಹೆದ್ದಾರಿ ಅಥವಾ ಎಕ್ಸ್‌ಪ್ರೆಸ್‌ವೇ ಅನುಕೂಲಕರ ಆಯ್ಕೆ. ಟೋಲ್ ದರ ಸಹ ಒಂದೇ ರೀತಿ ಇರುವುದಿಲ್ಲ. ವಿವಿಧ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್ ರಸ್ತೆಗಳಿಗೆ ಈ ದರ ಬದಲಾಗುತ್ತದೆ.
ದೇಶದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹದಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಈ ಆರ್ಥಿಕ ವರ್ಷದ ಜನವರಿ ಅಂತ್ಯಕ್ಕೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ 50,000 ಕೋಟಿ ರೂ. ದಾಟಿದೆ. ಈ ವರ್ಷ ಟೋಲ್ ಸಂಗ್ರಹ ದಾಖಲೆ ಮಟ್ಟ 62,000 ಕೋಟಿ ತಲುಪುವ ನಿರೀಕ್ಷೆ ಇದೆ.

ಟೋಲ್ ರಸ್ತೆಗಳ ವಿಸ್ತರಣೆ ಮತ್ತು ಫಾಸ್ಟ್‌ಟ್ಯಾಗ್ ಬಳಕೆದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಸಂಗ್ರಹಣೆಯಲ್ಲಿ ಈ ಹೆಚ್ಚಳಕ್ಕೆ ಕಾರಣ. ಈ ಆರ್ಥಿಕ ವರ್ಷದ ಮೊದಲ ಹತ್ತು ತಿಂಗಳಲ್ಲಿ ದೇಶದ ಟೋಲ್ ಸಂಗ್ರಹವು 53,289.41 ಕೋಟಿ ರೂಪಾಯಿಗಳಿಗೆ ತಲುಪಿದೆ ಎದು ವರದಿಯಿಂದ ತಿಳಿದು ಬಂದಿದೆ.
ಪ್ರತಿ ತಿಂಗಳು ಸಂಗ್ರಹವಾಗು ಮೊತ್ತ ಎಷ್ಟು?
ಸರ್ಕಾರದ ಅಂಕಿಅಂಶಗಳ ಪ್ರಕಾರ, ಏಪ್ರಿಲ್ ನಿಂದ ಜನವರಿವರೆಗೆ ಸರಾಸರಿ ಮಾಸಿಕ ಟೋಲ್ ಸಂಗ್ರಹವು 5,328.9 ಕೋಟಿ ರೂ. 2024 ಸಾಲಿನಲ್ಲಿ ಟೋಲ್ ಸಂಗ್ರಹವು ದಾಖಲೆಯ ಗರಿಷ್ಠ 62,000 ಕೋಟಿ ರೂಪಾಯಿಗಳನ್ನು ತಲುಪುವ ಸಾಧ್ಯತೆ ಇದೆ. ನವೆಂಬರ್ ಅಂತ್ಯದ ವೇಳೆಗೆ, ದೇಶದಲ್ಲಿ ಟೋಲ್ ರಸ್ತೆಗಳ ಉದ್ದವು ಒಟ್ಟು 25,996 ಕಿಲೋ ಮೀಟರ್‌ಗಳಿಂದ 45,428 ಕಿಲೋ ಮೀಟರ್‌ಗೆ ಹೆಚ್ಚಾಗಿದೆ.

ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ಯಾವಾಗ?
ಸರ್ಕಾರ ಶೀಘ್ರದಲ್ಲೇ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಪ್ರಾರಂಭಿಸಲಿದೆ. ಇದರಿಂದ ಟೋಲ್ ಸಂಗ್ರಹ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯು ಸರ್ಕಾರದ ಆದಾಯವನ್ನು ಹೆಚ್ಚಿಸುತ್ತದೆ ಎಂದು ತಜ್ಞರು ನಂಬಿದ್ದಾರೆ.
ಇದು ಟೋಲ್ ರಸ್ತೆಗಳಲ್ಲಿ ದಟ್ಟಣೆಯನ್ನು ಹೆಚ್ಚಿಸಬಹುದು ಮತ್ತು ಸರ್ಕಾರಕ್ಕೆ ಹೊಸ ಸವಾಲುಗಳನ್ನು ಸೃಷ್ಟಿಸಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಕಳೆದ ವರ್ಷ ನವೆಂಬರ್ ಅಂತ್ಯದ ವೇಳೆಗೆ 79.8 ಮಿಲಿಯನ್ ಫಾಸ್ಟ್‌ಟ್ಯಾಗ್‌ಗಳನ್ನು ನೀಡಲಾಗಿದೆ.


Click it and Unblock the Notifications