ಬೆಂಗಳೂರು, ಜೂನ್ 27: ಭಾರತೀಯ ಖಾಸಗಿ ಸಾಲದಾತ ಯೆಸ್ ಬ್ಯಾಂಕ್ ತನ್ನ ಪುನರ್ ರಚನೆಯ ಭಾಗವಾಗಿ ಸುಮಾರು 500 ಉದ್ಯೋಗಿಗಳನ್ನು ವಜಾಗೊಳಿಸುವ ಮೂಲಕ ತನ್ನ ಸಿಬ್ಬಂದಿ ವರ್ಗಕ್ಕೆ ಬಿಗ್ ಶಾಕ್ ನೀಡಿದೆ. ಮಾತ್ರವಲದೇ ಮುಂದಿನ ದಿನಗಳಲ್ಲಿ ವಜಾಗೊಳಿಸುವಿಕೆ ಪ್ರಕ್ರಿಯೆ ಮುಂದುವರಿಯಬಹುದು ಎನ್ನಲಾಗಿದೆ.
ಎಕಾನಮಿಕ್ಸ್ ಟೈಮ್ಸ್ ವರದಿ ಪ್ರಕಾರ , ವಜಾಗೊಳಿಸುವಿಕೆಯು ಸಗಟು, ರಿಟೇಲ್ ಬ್ಯುಸಿನೆಸ್ ಮತ್ತು ಗಮನಾರ್ಹವಾಗಿ ಯೆಸ್ ಬ್ಯಾಂಕಿಂಗ್ ಶಾಖೆಯ ಮೇಲೆ ಸೇರಿ ವಿವಿಧ ಕ್ಷೇತ್ರಗಳ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ. ಯೆಸ್ ಬ್ಯಾಂಕ್ ನ ಈ ನಿರ್ಧಾರ ಮಹತ್ವದಾಗಿದ್ದು, ಹಲವಾರು ವರ್ಷಗಳಲ್ಲಿ ಖಾಸಗಿ ವಲಯದ ಬ್ಯಾಂಕ್ ಗಳಲ್ಲಿ ನೋಡುವುದಾದರೆ ಯೆಸ್ ಬ್ಯಾಂಕ್ ನ ವಜಾಗೊಳಿಸುವಿಕೆ ಮೊದಲ ನಿದರ್ಶನವಾಗಿದೆ. ವಜಾಗೊಂಡ ಉದ್ಯೋಗಿಗಳಿಗೆ ಮೂರು ತಿಂಗಳ ವೇತನಕ್ಕೆ ಸಮನಾದ ಪ್ಯಾಕೇಜ್ ಪಡೆದಿದ್ದಾರೆ ಎಂದು ಕಂಪನಿ ತಿಳಿಸಿದೆ.

"ಯೆಸ್ ಬ್ಯಾಂಕ್ ಬಹುರಾಷ್ಟ್ರೀಯ ಸಲಹೆಗಾರರ ಸಲಹೆಯ ಆಧಾರದ ಮೇಲೆ ಆಂತರಿಕ ಪುನರ್ರಚನಾ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಇಲ್ಲಿಯವರೆಗೆ, ಸುಮಾರು 500 ನೌಕರರ ಕೈ ಬಿಡಲಾಗಿದೆ ಮತ್ತು ಮುಂಬರುವ ವಾರಗಳಲ್ಲಿ ಮತ್ತಷ್ಟು ಉದ್ಯೋಗಿಗಳನ್ನು ಕೈಬಿಡಲಾಗುವುದು ಎಂದು" ಎಂದು ಬಲ್ಲ ಮೂಲಗಳು ಎಕಾನಮಿಕ್ಸ್ ಟೈಮ್ಸ್ ತಿಳಿಸಿರುವುದಾಗಿ ವರದಿಯಾಗಿದೆ.
ವಿಶ್ವಾಸಾರ್ಹ ಮೂಲಗಳ ಪ್ರಕಾರ, ಯೆಸ್ ಬ್ಯಾಂಕ್ ಡಿಜಿಟಲ್ ಬ್ಯಾಂಕಿಂಗ್ ಮೇಲೆ ಕೇಂದ್ರೀಕರಿಸುವ ಮೂಲಕ ಮತ್ತು ಹಸ್ತಚಾಲಿತ ಪ್ರಕ್ರಿಯೆಗಳನ್ನು ಕಡಿಮೆ ಮಾಡುವ ಮೂಲಕ ತನ್ನ ನಿರ್ವಹಣಾ ವೆಚ್ಚಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಹಿಂದಿನ ಹಣಕಾಸು ವರ್ಷದಲ್ಲಿ, ಯೆಸ್ ಬ್ಯಾಂಕ್ ನ ನಿರ್ವಹಣಾ ವೆಚ್ಚವು ಸುಮಾರು 17% ರಷ್ಟು ಹೆಚ್ಚಾಗಿದೆ ಎನ್ನಲಾಗಿದೆ. ಹೀಗಾಗಿ ಪ್ರಸುತ ನಡೆಯುತ್ತಿರುವ ಪುನರ್ರಚನೆಯ ಉಪಕ್ರಮವು ಬ್ಯಾಂಕಿನ ಕಾರ್ಯಾಚರಣೆಯ ವೆಚ್ಚವನ್ನು ಕಡಿಮೆ ಮಾಡಲು ಕೊಡುಗೆ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.
2020 ರಲ್ಲಿ, ಯೆಸ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್, ಆರ್‌ಬಿಐ ಬೆಂಬಲದೊಂದಿಗೆ ಬ್ಯಾಂಕ್ ಕುಸಿಯುವುದನ್ನು ತಡೆಯಲು ಮಧ್ಯಪ್ರವೇಶಿಸಿದಾಗ ಯೆಸ್ ಬ್ಯಾಂಕ್ ಇದೇ ರೀತಿಯ ಪುನರ್ರಚನೆಗೆ ಒಳಗಾಯಿತು. ಆ ಅವಧಿಯಲ್ಲಿ, ಗಮನಾರ್ಹ ಸಂಖ್ಯೆಯ ಹಿರಿಯ ಸಿಬ್ಬಂದಿಗಳು ಬ್ಯಾಂಕ್‌ನಿಂದ ನಿರ್ಗಮಿಸಿದ್ದರು.


Click it and Unblock the Notifications