ಗತಕಾಲದಲ್ಲಿ ಭಾರತದಲ್ಲಿ ರಾಜ-ಮಹಾರಾಜರ ವೈಭವದ ಜೀವನದ ಬಗ್ಗೆ ನಾವು ಸಾಕಷ್ಟು ಕೇಳಿದ್ದೇವೆ. ಅವರ ಸಂಪದ್ಭರಿತ ರಾಜಮನೆತನ ಹಾಗೂ ಐಷಾರಾಮಿ ಜೀವನದ ಹಲವು ನಿದರ್ಶನಗಳನ್ನು ನಾವು ಓದಿದ್ದೇವೆ. ಸದ್ಯ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ, ಪ್ರಜಾಪ್ರಭುತ್ವ ಅಂಗೀಕಾರವಾದ ಬಳಿಕ ಅಂಥ ರಾಜಮನೆತನಗಳ ಬಹುತೇಕ ಅಂತ್ಯಗೊಂಡಿದ್ದರೆ ಕೆಲವೊಂದು ಕಡೆ ರಾಜಮನೆತನದ ಹೆಸರೂ ಈಗಲೂ ಉಳಿದುಕೊಂಡಿದೆ. ಅಂಥ ರಾಜಮನೆಗಳ ಪೈಕಿ ಗ್ವಾಲಿಯಾರ್‌ನ ರಾಜಕುಮಾರ್ ಮಹಾನಾರ್ಯಮಾನ್ ಸಿಂಧಿಯಾ ಕೂಡ ಒಬ್ಬರು. ಇವರು ಮತ್ತಾರೂ ಅಲ್ಲ, ಬದಲಾಗಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಪುತ್ರರಾಗಿದ್ದಾರೆ. ಮಹಾನಾರ್ಯಮಾನ್ ಅವರು ನೆಲೆಸಿರುವ ಅರಮನೆಯೇ ಬರೊಬ್ಬರಿ 4 ಸಾವಿರ ಕೋಟಿ ರೂ. ಬೆಳೆಬಾಳುತ್ತಿದ್ದು, ಖ್ಯಾತನಾಮರುಗಳಲ್ಲಿ ಒಬ್ಬರಾಗಿದ್ದಾರೆ.
ಏನಿದು ಗ್ವಾಲಿಯಾರ್ ಮನೆತನ?
ಒಂದು ಕಾಲದಲ್ಲಿ ಗ್ವಾಲಿಯರ್ ರಾಜ್ಯವನ್ನು ಸಿಂಧಿಯಾ ರಾಜವಂಶ ಎಂಬ ಹೆಸರಾಂತ ಹಿಂದೂ ಮರಾಠ ರಾಜಮನೆತನ ಆಳ್ವಿಕೆ ಮಾಡಿತ್ತು. ಶಿಂಧೆ ರಾಜವಂಶ ಎಂದೂ ಕರೆಯಲ್ಪಡುವ ಸಿಂಧಿಯಾ ರಾಜವಂಶವು ಹಿಂದೂ ಮರಾಠಾ ಆಡಳಿತದ ಕುಟುಂಬವಾಗಿದ್ದು ಅದು ಮಧ್ಯ ಭಾರತದಲ್ಲಿನ ಐತಿಹಾಸಿಕ ಗ್ವಾಲಿಯರ್ ರಾಜ್ಯದ ಮೇಲೆ ಪ್ರಭುತ್ವ ಹೊಂದಿತ್ತು. ವಾಯ್ ಜಿಲ್ಲೆಯ ಕುಂಬರ್‌ಕೆರ್ರಾಬ್‌ನ ಪಾಟಿಲ್-ಶಿಪ್‌ನಲ್ಲಿ ಪೂರ್ವಜರ ಮೂಲದೊಂದಿಗೆ ರಾಜವಂಶವನ್ನು ರಾಣೋಜಿ ಸಿಂಧಿಯಾ ಸ್ಥಾಪಿಸಿದರು. ಆರಂಭದಲ್ಲಿ ಪೇಶ್ವೆ ಮೊದಲನೇ ಬಾಜಿರಾವ್‌ನ ವೈಯಕ್ತಿಕ ಸೇವಕರಾಗಿ ಸೇವೆ ಸಲ್ಲಿಸಿದ್ದರು. ಕಾಲಾನಂತರದಲ್ಲಿ ಸಿಂಧಿಯಾ ಕುಟುಂಬದ ಪ್ರಾಮುಖ್ಯತೆ ಹೆಚ್ಚಿ, 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸುವ ವರೆಗೂ ಅಧಿಕಾರ ನಡೆಸಿತ್ತು. ಸದ್ಯ ಅದೇ ರಾಜಮನೆತನವನ್ನು ಮಹಾನಾರ್ಯಮಾನ್ ಪ್ರತಿನಿಧಿಸುತ್ತಿದ್ದರೂ ಸದ್ಯ ಸಂಪೂರ್ಣವಾಗಿ ಅವರು ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ʻಮೈ ಮಂಡಿʼ ಎಂಬ ಕೃಷಿಗೆ ಸಂಬಂಧಿಸಿದ ಯಶಸ್ವಿ ಉದ್ಯಮವನ್ನು ಮಹಾನಾರ್ಯಮಾನ್ ನಡೆಸಿಕೊಂಡು ಬರುತ್ತಿದ್ದಾರೆ. ತಂದೆ ಜ್ಯೋತಿರಾದಿತ್ಯ ಸಿಂಧ್ಯಾ ಪ್ರಸಿದ್ದ ರಾಜಕಾರಣಿಯಾಗಿದ್ದರೂ ಪುತ್ರ ಮಾತ್ರ ತನ್ನದೇ ಆದ ವಿಭಿನ್ನ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ.

ಮಹಾನಾರ್ಯಮಾನ್ ವಿದ್ಯಾಭ್ಯಾಸ
ತಂದೆ ಜ್ಯೋತಿರಾದಿತ್ಯ ಸಿಂಧಿಯಾ ಅವರಂತೆಯೇ ಮಹಾನಾರ್ಯಮನ್ ಸಿಂಧಿಯಾ ಕೂಡ ತಮ್ಮ ಆರಂಭಿಕ ಶಿಕ್ಷಣವನ್ನು ಡೂನ್ ಶಾಲೆಯಲ್ಲಿ ಪೂರ್ಣಗೊಳಿಸಿದರು. ಅಲ್ಲದೆ ಮಹಾನಾರ್ಯಮಾನ್ ಅವರು GAIL ವಿಶ್ವವಿದ್ಯಾಲಯದಿಂದ ಪದವಿ ಪಡೆದಿದದು, ತನ್ನ ಅಧ್ಯಯನವನ್ನು ಮುಗಿಸಿದ ನಂತರ ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್‌ನಲ್ಲಿ ಕೆಲಸ ಮಾಡಿದ್ದರು. ಸಂಪರ್ಕ ಮತ್ತು ಕೃಷಿ ಕ್ಷೇತ್ರಕ್ಕೆ ಕೊಡುಗೆ ನೀಡುವ ಬಯಕೆಯಿಂದ ಸ್ಫೂರ್ತಿ ಪಡೆದ ಮಹಾನಾರ್ಯಮನ್ ಅವರು ಬಳಿಕ ಉದ್ಯಮಶೀಲತೆಯ ಪ್ರಯಾಣ ಪ್ರಾರಂಭಿಸಿದರು. ಇದರ ಭಾಗವಾಗಿ ೨೦೨೨ರಲ್ಲಿ ಅವರು ಕೃಷಿ ಸ್ಟಾರ್ಟಪ್ ʻಮೈ ಮಂಡಿʼ ಯ ಸಹ-ಸ್ಥಾಪಕರಾಗಿ ಹೊರಹೊಮ್ಮಿದರು. ಆಧುನಿಕ ರೀತಿಯಲ್ಲಿ ಕೇಂದ್ರೀಕರಿಸಿ MyMandi ತ್ವರಿತವಾಗಿ ಮನ್ನಣೆಯನ್ನು ಗಳಿಸಿದ್ದು, ಸದ್ಯ ಮಾಸಿಕ ೧ ಕೋಟಿ ರೂ.ನಷ್ಟು ಆದಾಯವನ್ನು ಗಳಿಸುತ್ತಿದೆ. ಭಾರೀ ಪ್ರಮಾಣದಲ್ಲಿ ತರಕಾರಿಗಳನ್ನು ಖರೀದಿಸಿ ಬಳಿಕ ಅವುಗಳನ್ನು ಆಧುನಿಕ ರೀತಿಯಲ್ಲಿ ಪ್ಯಾಕೇಜಿಂಗ್ ನಡೆಸಿ, ರಿಟೇಲರ್‌ಗಳಿಗೆ ಮಾರಾಟ ಮಾಡುವುದನ್ನು ʻಮೈ ಮಂಡಿʼ ನಡೆಸುತ್ತಿದೆ. ಸದ್ಯ ಜೈಪುರ, ನಾಗ್ಪುರ, ಗ್ವಾಲಿಯರ್ ಮತ್ತು ಆಗ್ರಾದಲ್ಲಿ ಈ ವ್ಯವಹಾರಗಳು ಕೇಂದ್ರೀಕೃತವಾಗಿದೆ. ಪ್ರಸಕ್ತ ವರ್ಷವು ಕಂಪೆನಿಯು ಮಾಸಿಕ 5 ಕೋಟಿ ರೂ.ಗಳ ಆದಾಯದ ನಿರೀಕ್ಷೆಯನ್ನು ಹೊಂದಿದೆ. ಕಳೆದ ವರ್ಷ ಜುಲೈನಲ್ಲಿ ಕಂಪೆನಿಯು 4.2 ಕೋಟಿ ರೂ.ಗಳ ಫಂಡಿಂಗ್ (ಹೂಡಿಕೆ) ಕೂಡ ಪಡೆದುಕೊಂಡಿದ್ದು, ಇದರ ಮೇಲಿರುವ ನಂಬಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಉದ್ಯಮದ ಹೊರಗೂ ಕೈಚಾಚಿದ ಮಹಾನಾರ್ಯಮನ್
ಮಹಾನಾರ್ಯಮನ್ ಅವರ ಪ್ರಭಾವ ಕೇವಲ ಉದ್ಯಮದಲ್ಲಿ ಗಮನ ಹರಿಸಿಲ್ಲ. ಬದಲಾಗಿ ಅದರ ಹೊರಗೂ ತಮ್ಮ ಛಾಪು ಮೂಡಿಸಲು ಆರಂಭಿಸಿದ್ದಾರೆ. 2022ರ ಎಪ್ರಿಲ್‌ನಲ್ಲಿ ಮಹಾನಾರ್ಯಮನ್ ಅವರು ಗ್ವಾಲಿಯರ್ ಡಿವಿಷನ್ ಕ್ರಿಕೆಟ್ ಅಸೋಸಿಯೇಷನ್ (GDCA) ನ ಡೆಪ್ಯೂಟಿ ಚೇರ್ಮನ್ ಹುದ್ದೆಯನ್ನು ಅಲಂಕರಿಸಿದ್ದರು. ಈ ಮೂಲಕ ಕ್ರೀಡೆಯಲ್ಲಿ ತಮ್ಮ ಆರಂಭಿಕ ಛಾಪು ಮೂಡಿಸಿದ್ದಾರೆ. ಅಲ್ಲದೆ ಏಕಪಕ್ಷೀಯವಾಗಿ ಅವರು ಎರಡನೇ ಹಂತದ ರಾಜತಾಂತ್ರಿಕತೆಯಲ್ಲೂ ಮುನ್ನಡೆದಿದ್ದರು. ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ 60 ಸದಸ್ಯರ ವಿದ್ಯಾರ್ಥಿಗಳ ತಂಡಗಳ ಸಮ್ಮೇಳನ ನಡೆಸುವ ಮೂಲಕ ತಮ್ಮ ರಾಜತಾಂತ್ರಿಕ ಬುದ್ದಿವಂತಿಕೆಯನ್ನೂ ಕೂಡ ಪ್ರದರ್ಶಿಸಿದ್ದರು.
ಐಷಾರಾಮಿ 4 ಸಾವಿರ ಕೋ.ರೂ. ಬೆಲೆಬಾಳುವ ಅರಮನೆ
ಮಹಾನಾರ್ಯಮನ್ ಕೇವಲ ಹೆಸರಿಗೆ ಮಾತ್ರ ಸಂಪತ್ತು ಹೊಂದಿಲ್ಲ. ಬದಲಾಗಿ ಅದೇ ರೀತಿಯಲ್ಲಿ ಕೂಡ ಜೀವನ ನಡೆಸುತ್ತಿದ್ದಾರೆ. ಗ್ವಾಲಿಯಾರ್‌ನಲ್ಲಿ ಮಹಾನಾರ್ಯಮನ್ ಬರೊಬ್ಬರಿ 4 ಸಾವಿರ ಕೋಟಿ ರೂ. ಬೆಲೆಬಾಳುವ ಅರಮನೆ ಹೊಂದಿದ್ದು, ವಿದೇಶಗಳಲ್ಲೂ ಪ್ರಖ್ಯಾತಿ ಪಡೆದುಕೊಂಡಿದೆ. ಈ ಅರಮನೆಯಲ್ಲಿ ಬರೊಬ್ಬರಿ ಭವ್ಯತೆಯ 400 ಕೊಠಡಿಗಳು ಹೊಂದಿವೆ. ಅರಮನೆಯ ಕಿರೀಟದ ಆಭರಣ, ದರ್ಬಾರ್ ಕೋಣೆ, ವಿಶ್ವದ ಅತಿದೊಡ್ಡ ಕಾರ್ಪೆಟ್ ಅನ್ನು ಹೊಂದಿದೆ. ಅಲ್ಲದೆ ಇದು ಸಿಂಧಿಯಾ ರಾಜವಂಶದ ಶ್ರೀಮಂತ ಪರಂಪರೆಗೆ ಸಾಕ್ಷಿಯಾಗಿದೆ. ಇನ್ನು ಈ ಅರಮನೆಯುವ 1,24,771 ಚದರ ಅಡಿ ವಿಸ್ತಾರವನ್ನು ಹೊಂದಿದೆ.
ಬಹಿರಂಗವಾಗದ ಮಹಾನಾರ್ಯಮನ್ ನಿವ್ವಳ ಸಂಪತ್ತು!
ಇಷ್ಟೆಲ್ಲಾ ಆಸ್ತಿಪಾಸ್ತಿಗಳನ್ನು ಹೊಂದಿದ್ದರೂ ಮಹಾನಾರ್ಯಮನ್ ಅವರು ಎಷ್ಟು ಆಸ್ತಿ ಹೊಂದಿದ್ದಾರೆ ಎಂಬ ಬಗ್ಗೆ ಯಾರಿಗೂ ಗೊತ್ತಿಲ್ಲ. ತಂದೆ ಚುನಾವಣಾ ಸಮಯದಲ್ಲಿ ತನ್ನ ಸಂಪತ್ತನ್ನು 379 ಕೋಟಿ ರೂ. ಎಂದು ಘೋಷಿಸಿದ್ದು, ಇದರಲ್ಲಿ ಪುತ್ರ ಮಹಾನಾರ್ಯಮನ್ ಅವರ ಸ್ಟಾರ್ಟ್ ಅಪ್ ಹಾಗೂ ಉದ್ಯಮಗಳು ಕೂಡ ಸೇರಿವೆ.
More From GoodReturns

Gold Rate Today: ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಕುಸಿತ! ದಿಢೀರ್ 9,800 ರೂ. ಇಳಿಕೆ

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ

Silver Rate Today: ಬೆಳ್ಳಿ ದರಕ್ಕೂ ತಟ್ಟಿದ ಇಸ್ರೇಲ್-ಇರಾನ್ ವಾರ್ ಬಿಸಿ! ಬೆಲೆ ಭಾರೀ ಏರಿಕೆ

Silver Rate Today: 3 ದಿನದ ನಂತರ ಗಗನಕ್ಕೇರಿದ ಬೆಳ್ಳಿ ದರ! ದಿಢೀರ್ 10,000 ರೂ. ಹೆಚ್ಚಳ

Saudi Arabia-India: ಭಾರತ ಸೇರಿ 40 ದೇಶಗಳಿಂದ ಸೌದಿಗೆ ಹೋಗಲ್ಲ ಕೋಳಿ ಮಾಂಸ, ಮೊಟ್ಟೆ! ನಿಷೇಧ ಹೇರಿದ ಸರ್ಕಾರ

Silver Rate Today: ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ; ಬೆಳ್ಳಿ ಬೆಲೆ ಇಂದೂ ಸ್ಥಿರ

Gold Guidelines: ಭಾರತದಲ್ಲಿ ಚಿನ್ನಾಭರಣ ಎಷ್ಟು ಇಟ್ಟುಕೊಳ್ಳಬಹುದು? ಕಾನೂನಾತ್ಮಕವಾಗಿ ನಿರ್ವಹಿಸುವುದು ಹೇಗೆ ತಿಳಿಯಿರ

Gold Price Today: ಇರಾನ್-ಇಸ್ರೇಲ್ ಸಂಘರ್ಷದ ನಡುವೆ ಭಾನುವಾರವೂ ಚಿನ್ನದ ಬೆಲೆ ಏರಿಕೆ...ದಿಢೀರ್ 40,000 ಹೆಚ್ಚಳ!

Investment: ಹೂಡಿಕೆ ತಡವಾಗಿ ಮಾಡ್ತಿದ್ದೀರ? 35ರ ನಂತರ ಹೇಗೆ ಸಂಪತ್ತು ನಿರ್ಮಿಸಬೇಕು ಎಂದು ಇಲ್ಲಿ ತಿಳಿಯಿರಿ

SBI Credit Card: ಎಸ್ಬಿಐ ಗ್ರಾಹಕರೇ ಇಲ್ಲಿ ಗಮನಿಸಿ! ಏಪ್ರಿಲ್ 1 ರಿಂದ ಈ ನಿಯಮ ಚೇಂಜ್

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!



Click it and Unblock the Notifications