ನವದೆಹಲಿ, ಜೂನ್ 26: ದೇಶದಲ್ಲಿ ತೆರಿಗೆ ವಂಚನೆ ನಿಗ್ರಹಿಸಲು ಮತ್ತು ಏಕ ರೂಪದ ತೆರಿಗೆ ದರ ಅನುಷ್ಠಾನಗೊಳಿಸಲು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೊಳಿಸಿ ಏಳು ವರ್ಷಗಳು ಪೂರ್ಣಗೊಳಿಸಲಿದೆ.
2017ರ ಜುಲೈ 1ರಂದು ದೇಶದಲ್ಲಿ ಜಿಎಸ್‌ಟಿಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಜಾರಿಗೆ ತಂದಿತು. ಪರೋಕ್ಷ ತೆರಿಗೆ ಸುಧಾರಣೆಗಳ ಅಡಿಯಲ್ಲಿ ಇದನ್ನು ಜಾರಿಗೆ ತರಲಾಗಿದ್ದು, 17 ಸ್ಥಳೀಯ ತೆರಿಗೆಗಳು ಮತ್ತು ಶುಲ್ಕಗಳು ಇದರಲ್ಲಿ ಸೇರಿದ್ದವು. ಕಳೆದ ಏಳು ವರ್ಷಗಳಲ್ಲಿ ನೋಡಿದರೆ, ಜಿಎಸ್‌ಟಿ ಹಲವು ಉತ್ಪನ್ನಗಳು ಮತ್ತು ಸೇವೆಗಳ ಮೇಲಿನ ತೆರಿಗೆ ದರವನ್ನು ಕಡಿಮೆ ಮಾಡಿದೆ ಮತ್ತು ಸಾರ್ವಜನಿಕರಿಗೆ ನೇರವಾಗಿ ಲಾಭವಾಗಿದೆ.

ಜಿಎಸ್‌ಟಿಯಿಂದ ಕೆಲ ಸರಕುಗಳು ಅಗ್ಗ
ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಜಿಎಸ್‌ಟಿ ಜಾರಿಯ ನಂತರ, ಹಿಟ್ಟು, ಸೌಂದರ್ಯವರ್ಧಕಗಳು, ಟೆಲಿವಿಷನ್ ಮತ್ತು ರೆಫ್ರಿಜರೇಟರ್‌ನಂತಹ ಅನೇಕ ಗೃಹೋಪಯೋಗಿ ವಸ್ತುಗಳ ಬೆಲೆಗಳು ಕಡಿಮೆಯಾಗಿದೆ.
ಹಿಟ್ಟು, ಮೊಸರು, ಮಜ್ಜಿಗೆ ಅಗ್ಗ
ಸಿಬಿಐಸಿ ಅಂಕಿಅಂಶಗಳ ಪ್ರಕಾರ, ಜಿಎಸ್‌ಟಿ ಬರುವ ಮೊದಲು, ಹಿಟ್ಟು, ಮೊಸರು, ಮಜ್ಜಿಗೆ ಮತ್ತು ಜೇನುತುಪ್ಪದ ಮೇಲಿನ ತೆರಿಗೆ ಕ್ರಮವಾಗಿ ಶೇಕಡಾ 3.5, ಶೇಕಡಾ 4 ಮತ್ತು 6 ರಷ್ಟಿತ್ತು, ಆದರೆ ಜಿಎಸ್ ಟಿ ಜಾರಿಗೆ ಬಂದ ಬಳಿಕ ಅದು ಶೂನ್ಯವಾಗಿದೆ. ಇದಲ್ಲದೇ ಸಮಯದಲ್ಲಿ, ಸೌಂದರ್ಯವರ್ಧಕಗಳು ಮತ್ತು ಮಾರ್ಜಕಗಳ ಮೇಲೆ 28 ಪ್ರತಿಶತ ತೆರಿಗೆಯನ್ನು ವಿಧಿಸಲಾಗುತ್ತಿತ್ತು, ಕೂದಲು ಎಣ್ಣೆ, ಸಾಬೂನು ಮತ್ತು ಟೂತ್ ಪೇಸ್ಟ್ ಮೇಲೆ 27 ಪ್ರತಿಶತ ತೆರಿಗೆಯನ್ನು ವಿಧಿಸಲಾಗುತ್ತಿತ್ತು. ಜಿಎಸ್‌ಟಿ ಜಾರಿಯಾದ ನಂತರ ಈ ಉತ್ಪನ್ನಗಳ ಮೇಲೆ ಶೇ.18ರಷ್ಟು ತೆರಿಗೆ ವಿಧಿಸಲಾಗುತ್ತದೆ.
ಜಿಎಸ್‌ಟಿ ಜಾರಿಯಾಗುವ ಮೊದಲು ಎಲ್‌ಪಿಜಿ ಸ್ಟೌವ್ ಮೇಲೆ ಶೇ.21ರಷ್ಟು ತೆರಿಗೆ ಇತ್ತು, ಅದೀಗ ಶೇ.18ಕ್ಕೆ ಇಳಿಕೆಯಾಗಿದೆ. ಎಲೆಕ್ಟ್ರಾನಿಕ್ ಉಪಕರಣಗಳು, ಫ್ಯಾನ್‌ಗಳು, ವಾಟರ್ ಕೂಲರ್‌ಗಳು ಮತ್ತು ಪೀಠೋಪಕರಣಗಳ ಮೇಲಿನ ತೆರಿಗೆ ಶೇಕಡಾ 31.3 ರಷ್ಟಿತ್ತು, ಅದು ಈಗ ಶೇಕಡಾ 18 ಕ್ಕೆ ಇಳಿದಿದೆ ಎಂದು CBIC ಅಂಕಿಅಂಶಗಳು ಬಹಿರಂಗಪಡಿಸಿವೆ.
ತೆರಿಗೆದಾರರ ಜೀವನ ಸುಗಮವಾಗಲಿದೆ: ಹಣಕಾಸು ಸಚಿವೆ
ಇತ್ತೀಚೆಗೆ ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜಿಎಸ್‌ಟಿ ತೆರಿಗೆದಾರರ ಜೀವನವನ್ನು ಸುಲಭಗೊಳಿಸುವುದು ನಮ್ಮ ಉದ್ದೇಶ ಎಂದು ತೆರಿಗೆದಾರರಿಗೆ ಭರವಸೆ ನೀಡಲು ನಾನು ಬಯಸುತ್ತೇನೆ. ವ್ಯವಸ್ಥೆಯ ಸಂಕೀರ್ಣತೆಗಳನ್ನು ಕಡಿಮೆ ಮಾಡಲು ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ತೆರಿಗೆ ವಂಚನೆಯನ್ನು ನಿಯಂತ್ರಿಸುವಲ್ಲಿ ಜಿಎಸ್‌ಟಿ ಅತ್ಯಂತ ಪರಿಣಾಮಕಾರಿ ಎಂಬುದು ಸಾಬೀತಾಗಿದೆ. ತೆರಿಗೆ ಅಧಿಕಾರಿಗಳು ತೆರಿಗೆ ವಂಚನೆಯನ್ನು ತಡೆಯಲು ಹಲವು ಹೊಸ ವಿಧಾನಗಳನ್ನು ಅನುಸರಿಸುತ್ತಿದ್ದಾರೆ.


Click it and Unblock the Notifications