ನವದೆಹಲಿ, ಫೆಬ್ರವರಿ 10: ಭಾರತದ ಭವ್ಯ ಕನಸಿನ ಮಂದಿರ ರಾಮಮಂದಿರ ಲೋಕಾರ್ಪಣೆಯಾಗಿದೆ. ಮಂದಿರದ ಎರಡನೇ ಹಂತದ ಕಾಮಗಾರಿಗೆ ಫೆ.15 ರಂದು ಚಾಲನೆ ಸಿಗಲಿದೆ. ಪ್ರತಿಷ್ಠಿತ ಅಯೋಧ್ಯೆ ರಾಮ ಮಂದಿರವನ್ನು ನಿರ್ಮಿಸುತ್ತಿರುವ ಕಾರಣದಿಂದ ಬಹುರಾಷ್ಟ್ರೀಯ ಸಂಸ್ಥೆ ಎಲ್ ಆಂಡ್ ಟಿ ಎಂದೇ ಜನಪ್ರಿಯವಾಗಿರುವ ಲಾರ್ಸೆನ್ ಆಂಡ್ ಟೂಬ್ರೊ ಕಂಪನಿ ಕಳೆದ ಕೆಲವು ವಾರಗಳಿಂದ ಸುದ್ದಿಯಲ್ಲಿದೆ.
ಎಲ್ ಆಂಡ್ ಟಿ ಸಂಸ್ಥೆಯೂ ನಿರ್ಮಾಣ ಕಾರ್ಯ, EPC ಪ್ರಾಜೆಕ್ಟ್, ಮ್ಯಾನುಫ್ಯಾಕ್ಚರಿಂಗ್ ಸೇರಿದಂತೆ ಹೆಚ್ಚಿನವುಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಲಾರ್ಸೆನ್ ಅಂಡ್ ಟೂಬ್ರೊ ಸಂಸ್ಥೆ ಪ್ರಸ್ತುತ 4,19,000 ಕೋಟಿ ರೂ.ಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.

ಈ ಸಂಸ್ಥೆಯ ಯಶಸ್ಸಿನ ಹಿಂದೆ ಅನೇಕ ಮಂದಿಯ ದೊಡ್ಡ ಹೆಸರುಗಳಿದ್ದರೂ, ಇದು ಹೊಸ ಎತ್ತರವನ್ನು ತಲುಪಲು ಸಹಾಯ ಮಾಡಿದ ವ್ಯಕ್ತಿ ಎಂದರೆ ಅದು ಅನಿಲ್ ಮಣಿಭಾಯ್ ನಾಯಕ್. ಎ.ಎಮ್. ನಾಯಕ್ ಎಂದು ಜನಪ್ರಿಯವಾಗಿರುವ ಅನಿಲ್ ಮಣಿಭಾಯ್ ನಾಯಕ್ ಅವರು ಲಾರ್ಸೆನ್ ಮತ್ತು ಟೂಬ್ರೊದ ಎಮೆರಿಟಸ್ ಅಧ್ಯಕ್ಷರಾಗಿದ್ದಾರೆ. ಇದು ಪ್ರಸ್ತುತ ರೂ 4,59,000 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಮಾರ್ಕೆಟ್ ಕ್ಯಾಪ್ ಹೊಂದಿದೆ.
1942 ರಲ್ಲಿ ಗುಜರಾತ್‌ನಲ್ಲಿ ಜನಿಸಿದ ಅನಿಲ್ ಮಣಿಭಾಯ್ ನಾಯಕ್ ಅವರು ಸ್ವಾತಂತ್ರ್ಯ ಹೋರಾಟಗಾರ ಮಣಿಭಾಯ್ ನಿಚ್ಚಭಾಯ್ ನಾಯ್ಕ್ ಅವರ ಪುತ್ರರಾಗಿದ್ದಾರೆ. ಅಂದು ಅವರು ಗ್ರಾಮೀಣ ಭಾರತಕ್ಕೆ ಸೇವೆ ಮಾಡಲು ತಮ್ಮ ಕೆಲಸವನ್ನು ತೊರೆದಿದ್ದರು. ಅನಿಲ್ ಮಣಿಭಾಯ್ ನಾಯಕ್ ಅವರು ತಮ್ಮ ವೃತ್ತಿಜೀವನದ ಎತ್ತರವನ್ನು ಏರಿದ ಬಳಿಕ ಅವರು ಕೂಡಾ ತಮ್ಮ ತಂದೆಯ ಹಾದಿಯನ್ನೇ ಅನುಸರಿಸಿದರು.
ಅನಿಲ್ ಮಣಿಭಾಯ್ ಅವರು ದೇಶದ ದೊಡ್ಡ ಕೊಡುಗೈ ದಾನಿಗಳಲ್ಲಿ ಒಬ್ಬರಾಗಿದ್ದಾರೆ. 2016 ರಲ್ಲಿ, ಅವರು ತಮ್ಮ ಸಂಪೂರ್ಣ ಆದಾಯದ 75 ಪ್ರತಿಶತವನ್ನು ದೇಣಿಗೆ ರೂಪದಲ್ಲಿ ನೀಡುವುದಾಗಿ ವಾಗ್ದಾನ ಮಾಡಿದ್ದಾರೆ. 2022 ರಲ್ಲಿ, ಅವರು ಭಾರತದ ಟಾಪ್ 10 ಕೊಡುಗೈ ದಾನಿಗಳಲ್ಲಿ ಒಬ್ಬರಾಗಿದ್ದರು. ಯಾಕೆಂದರೆ ಅವರು 142 ಕೋಟಿ ರೂ. ದಾನ ಮಾಡಿದ್ದರು. ಟೈಮ್ಸ್ ನೌ ವರದಿಯಂತೆ, ಮಾರ್ಚ್ 31, 2023 ಕ್ಕೆ ಸಲ್ಲಿಸಲಾದ ಕಾರ್ಪೊರೇಟ್ ಷೇರುಗಳ ಪ್ರಕಾರ, ಎಎಮ್ ನಾಯಕ್ ಅವರು ಸಾರ್ವಜನಿಕವಾಗಿ 171.3 ಕೋಟಿ ರೂ.ಗಿಂತ ಹೆಚ್ಚಿನ ನಿವ್ವಳ ಮೌಲ್ಯದೊಂದಿಗೆ 9 ಷೇರುಗಳನ್ನು ಹೊಂದಿದ್ದಾರೆ. ಉದ್ಯಮ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ಅನಿಲ್ ಮಣಿಭಾಯ್ ಅವರಿಗೆ ಭಾರತದ ಭಾರತದ ಮೂರನೇ ಅತೀದೊಡ್ಡ ನಾಗರಿಕ ಪ್ರಶಸ್ತಿ ಪದ್ಮ ಭೂಷಣ ಒಲಿದುಬಂದಿದೆ.
ಎ.ಎಮ್. ನಾಯಕ್ ಅವರು ಬಿರ್ಲಾ ವಿಶ್ವಕರ್ಮ ಮಹಾವಿದ್ಯಾಲಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ಆದರೆ ಈ ಪದವಿ ಎಲ್ ಆಂಡ್ ಟಿ ಸಂಸ್ಥೆಯಲ್ಲಿ ಉದ್ಯೋಗ ಪಡೆಯಲು ಸಾಕಾಗಿರಲಿಲ್ಲ. ಏಕೆಂದರೆ ಅಂದು ಆ ಸಂಸ್ಥೆಯು ಐಐಟಿ ಪದವೀಧರರಿಗೆ ಮಾತ್ರ ಹೆಚ್ಚಿನ ಆದ್ಯತೆ ನೀಡುತ್ತಿತ್ತು. ಎಲ್ ಆಂಡ್ ಟಿಯಲ್ಲಿ ತಿರಸ್ಕೃತಗೊಂಡಿದ್ದ ನಂತರ, ಎಎಮ್ ನಾಯಕ್ ನೆಸ್ಟರ್ ಬಾಯ್ಲರ್ ಸಂಸ್ಥೆಗೆ ಸೇರಿದರು. ಇಲ್ಲಿ ಸ್ವಲ್ಪ ಅನುಭವವನ್ನು ಪಡೆದ ನಂತರ ಮತ್ತೆ ನಿರ್ಮಾಣ ದೈತ್ಯ್ ಸಂಸ್ಥೆ ಎಲ್ ಆಂಡ್ ಟಿಯಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಿದರು. ಅನುಭವದ ಹಿನ್ನೆಲೆಯಲ್ಲಿ ಅವರಿಗೆ ಉದ್ಯೋಗ ದೊರಕಿತು. 1965 ರಲ್ಲಿ 670 ರೂ. ಸಂಬಳದಲ್ಲಿ ಸಹಾಯಕ ಎಂಜಿನಿಯರ್ ಆಗಿ ಕಂಪನಿಗೆ ಸೇರಿದರು.
ಎಲ್ ಆಂಡ್ ಟಿಯಲ್ಲಿ ಉದ್ಯೋಗ ದೊರೆತ ಆರು ತಿಂಗಳಲ್ಲಿ ಅವರನ್ನು ಸೂಪರ್ ವೈಸರ್ ಹುದ್ದೆಗೆ ಬಡ್ತಿ ಪಡೆದರು. ಮುಂದಿನ 18 ತಿಂಗಳಲ್ಲಿ 800 ಮಂದಿಗೆ ಅವರು ಮುಖ್ಯಸ್ಥರಾಗಿದ್ದರು. ಈ ವೇಳೆ ಅವರ ವಯಸ್ಸು ಕೇವಲ 25 ತುಂಬಿರಲಿಲ್ಲ. "ವೃತ್ತಿರಂಗದಲ್ಲಿ ಇಷ್ಟು ಎತ್ತರಕ್ಕೆ ನಾನು ಬೆಳೆಯುತ್ತೇನೆ ಎಂದು ಭಾವಿಸಿರಲಿಲ್ಲ ಎಂದು ಅನೇಕ ಸಂದರ್ಶನಗಳಲ್ಲಿ ಎ.ಎಂ. ನಾಯಕ್ ಹೇಳಿದ್ದಾರೆ. 10 ಸಾವಿರ ರೂ. ವೇತನದೊಂದಿಗೆ ನಿವೃತ್ತಿಯಾಗಬಹುದೆಂದು ಅವರು ಯೋಚಿಸಿದ್ದರಂತೆ.
ಅವರು 1999 ರಲ್ಲಿ ಕಂಪನಿಯ CEO ಆದ ಅವರು ಜುಲೈ 2003 ರಲ್ಲಿ ಅವರು ಎಲ್ ಆಂಡ್ ಟಿ ಗ್ರೂಪ್ ಅಧ್ಯಕ್ಷರಾದರು. ಅವರ ಅಡಿಯಲ್ಲಿ ಕಂಪನಿಯ ಒಟ್ಟು ಆಸ್ತಿ 870 ಕೋಟಿ ಡಾಲರ್‌ಗೆ ಏರಿತು. ಇವೆಲ್ಲದರ ಹೊರತಾಗಿ ಅವರೊಬ್ಬ ಉತ್ತಮ ವೇತನ ಪಡೆಯುತ್ತಿರುವ ಕಾರ್ಪೋರೇಟ್ ನಾಯಕರಾಗಿದ್ದಾರೆ. 2017-2018ನೇ ಸಾಲಿನಲ್ಲಿ ಕಂಪನಿ ಅವರಿಗೆ 137 ಕೋಟಿ ರೂ. ಪಾವತಿಸಿತ್ತು. ಅವರ ರಜೆ ನಗದೀಕರಣದ ಮೊತ್ತವೇ 19 ಕೋಟಿ ರೂ. ಆಗಿತ್ತು. 2016ರಲ್ಲಿ ಅವರ ನಿವ್ವಳ ಸಂಪತ್ತು ಅಂದಾಜು 400 ಕೋಟಿ ರೂ. ಇತ್ತು.


Click it and Unblock the Notifications