ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಈಗ ಮತ್ತೊಮ್ಮೆ ಶುಭ ಸುದ್ದಿ ದೊರೆತಿದೆ. ಕೇಂದ್ರ ಸರ್ಕಾರವು ಕೇಂದ್ರ ಸರ್ಕಾರದ ಸಿಬ್ಬಂದಿಗಳಿಗೆ ತುಟ್ಟಿ ಭತ್ಯೆಯನ್ನು (ಡಿಎ) ಹೆಚ್ಚಳ ಮಾಡುವ ತೀರ್ಮಾನಕ್ಕೆ ಬಂದಿದೆ. ಕೇಂದ್ರ ಸರ್ಕಾರದ ಉದ್ಯೋಗಿಗಳು ಸೇರಿದಂತೆ ಪಿಂಚಣಿದಾರರ ತುಟ್ಟಿ ಭತ್ಯೆ ಹೆಚ್ಚಳವಾಗಲಿದೆ.
7 ನೇ ಆಯೋಗದ ಶಿಫಾರಸ್ಸಿನ ಪ್ರಕಾರ ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಡಿಎ ಅಥವಾ ತುಟ್ಟಿಭತ್ಯೆಯು ಸಾಮಾನ್ಯವಾಗಿ ವರ್ಷಕ್ಕೆ ಎರಡು ಭಾರೀ ಹೆಚ್ಚಳ ಆಗುತ್ತದೆ. ಅದರಂತೆ ಕೇಂದ್ರ ಸರ್ಕಾರವು ಜನವರಿಯಲ್ಲಿ ಶೇಕಡ 4 ರಷ್ಟು ತುಟ್ಟಿ ಭತ್ಯೆ ಹೆಚ್ಚಳವನ್ನು ಘೋಷಣೆ ಮಾಡಿತ್ತು. ಜುಲೈ 1 ರಿಂಂದ ಅನ್ವಯವಾಗುವಂತೆ ಈ ನಿಯಮ ಜಾರಿಗೆ ಬರಲಿದೆ. ಜುಲೈ 1 ರಿಂದ ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಹಾಗೂ ಪಿಂಚಣಿದಾರರಿಗೆ ಶೇಕಡ 28 ತುಟ್ಟಿ ಭತ್ಯೆ ದೊರೆಯಲಿದೆ. ಜುಲೈ ತಿಂಗಳ ಸಂಬಳದಿಂದಲ್ಲೇ ಈ ತುಟ್ಟಿ ಭತ್ಯೆ ಹೆಚ್ಚಳ ಆರಂಭವಾಗಲಿದೆ.
ವರದಿಗಳ ಪ್ರಕಾರ ಕೇಂದ್ರ ಸರ್ಕಾರವು ಜೂನ್ ತಿಂಗಳ ತುಟ್ಟಿ ಭತ್ಯೆಯನ್ನು ಬಿಡುಗಡೆ ಮಾಡಲಿದೆ. ಈ ರೀತಿ ಸರ್ಕಾರ ಬಿಡುಗಡೆ ಮಾಡಿದಲ್ಲಿ, ತುಟ್ಟಿ ಭತ್ಯೆಯು ಶೇಕಡ 28 ರಿಂದ ಶೇಕಡ 31 ಕ್ಕೆ ಏರಿಕೆಯಾಗಲಿದೆ. ಇದರಿಂದಾಗಿ ಕೇಂದ್ರ ಸರ್ಕಾರದ ನೌಕರರ ಸಂಬಳದಲ್ಲೂ ಹೆಚ್ಚಳವಾಗಲಿದೆ. 2021 ರ ಜೂನ್ ತಿಂಗಳ ತುಟ್ಟಿ ಭತ್ಯೆ ಎಷ್ಟು ಎಂಬುವುದು ಇನ್ನೂ ಅಂತಿಮಗೊಂಡಿಲ್ಲ. ಆದರೆ ಎಐಸಿಪಿಐ ಡೇಟಾದ ಪ್ರಕಾರ ಜೂನ್ ತಿಂಗಳಿನ ತುಟ್ಟಿ ಭತ್ಯೆಯೂ ಮತ್ತೆ ಶೇಕಡ 3 ರಷ್ಟು ಹೆಚ್ಚಳ ಕಾಣಲಿದೆ. 7 ನೇ ಆಯೋಗದ ಶಿಫಾರಸ್ಸಿನ ಪ್ರಕಾರವಾಗಿ 18 ಸಾವಿರ ಸಂಬಂಳದಿಂದ 56,900 ಸಂಬಳವನ್ನು ಪಡೆಯುವ ಪ್ರಥಮ ಹಂತದ ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಈ ತುಟ್ಟಿ ಭತ್ಯೆ ಹೆಚ್ಚಳವಾಗಲಿದೆ.

ತುಟ್ಟಿ ಭತ್ಯೆ ಶೇಕಡ 31 ಹೆಚ್ಚಳವಾದರೆ ಸಂಬಳ ಎಷ್ಟು ಹೆಚ್ಚಳವಾಗುತ್ತದೆ?
ತುಟ್ಟಿ ಭತ್ಯೆ ಶೇಕಡ 31 ರಷ್ಟು ಹೆಚ್ಚಳವಾದರೆ ಮೂಲ ವೇತನವು ಸುಮಾರು 18 ಸಾವಿರ ಆಗಿರಲಿದೆ. ಹಾಗೆಯೇ ತುಟ್ಟಿ ಭತ್ಯೆ ಶೇಕಡ 31 ರಷ್ಟು ಅಧಿಕವಾದರೆ ತುಟ್ಟಿ ಭತ್ಯೆಯು ತಿಂಗಳಿಗೆ 5, 580 ರೂಪಾಯಿ ಆಗಲಿದೆ. ಪ್ರಸ್ತುತ ಅಸ್ತಿತ್ತದಲ್ಲಿರುವ ತುಟ್ಟಿ ಭತ್ಯೆಯು ಶೇಕಡ 28 ಹೆಚ್ಚಳವಾಗಿತ್ತು. ಅಂದರೆ ಪ್ರಸ್ತುತ ಅಸ್ತಿತ್ತದಲ್ಲಿರುವ ತುಟ್ಟಿ ಭತ್ಯೆ ತಿಂಗಳಿಗೆ 5040 ರೂಪಾಯಿ ಆಗಿದೆ. ಈ ಪ್ರಸ್ತುತ ಅಸ್ತಿತ್ತದಲ್ಲಿರುವ ತುಟ್ಟಿ ಭತ್ಯೆ ಹಾಗೂ ಹೊಸ ತುಟ್ಟಿ ಭತ್ಯೆಯ ನಡುವಿನ ವ್ಯತ್ಯಾಸವು ರೂಪಾಯಿ 540 ಆಗಿರುತ್ತದೆ. ಪ್ರಸ್ತುತ ಚಾಲ್ತಿಯಲ್ಲಿರುವ ತುಟ್ಟಿ ಭತ್ಯೆಗಿಂತ ರೂಪಾಯಿ 540 ಹೆಚ್ಚಳವಾಗಲಿದೆ. ಇದರಿಂದಾಗಿ ವಾರ್ಷಿಕ ವೇತನವೂ ಕೂಡಾ ಹೆಚ್ಚಳವಾಗಲಿದೆ. ತಿಂಗಳಿಗೆ ರೂಪಾಯಿ 540 ರಂತೆ 12 ತಿಂಗಳಿಗೆ ಅಂದರೆ ಒಂದು ವರ್ಷಕ್ಕೆ ಸುಮಾರು 6,480 ಹೆಚ್ಚಳವಾಗಲಿದೆ.
ಇನ್ನ ತುಟ್ಟಿ ಭತ್ಯೆ ಶೇಕಡ 31 ರಷ್ಟು ಹೆಚ್ಚಳವಾದರೆ ಗರಿಷ್ಢ ಮೂಲ ವೇತನವು 56,900 ಆಗಿರುತ್ತದೆ. ಶೇಕಡ 31 ರಷ್ಟು ತುಟ್ಟಿ ಭತ್ಯೆ ಹೆಚ್ಚಾದ್ದಲ್ಲಿ 56,900 ವೇತನ ಹೊಂದಿರುವವರ ನೂತನ ತುಟ್ಟಿ ಭತ್ಯೆ ತಿಂಗಳಿಗೆ 17,639 ಆಗಿರುತ್ತದೆ. ಪ್ರಸ್ತುತ ಅಸ್ತಿತ್ತದಲ್ಲಿರುವ ತುಟ್ಟಿ ಭತ್ಯೆಯು ಶೇಕಡ 28 ಹೆಚ್ಚಳವಾಗಿತ್ತು. ಈ ಹಿನ್ನೆಲೆ ಪ್ರಸ್ತುತ ತುಟ್ಟಿ ಭತ್ಯೆ ರೂಪಾಯಿ 15,932 ರಷ್ಟು ಇದೆ. ಈ ಪ್ರಸ್ತುತ ಅಸ್ತಿತ್ತದಲ್ಲಿರುವ ತುಟ್ಟಿ ಭತ್ಯೆ ಹಾಗೂ ಹೊಸ ತುಟ್ಟಿ ಭತ್ಯೆಯ ನಡುವಿನ ವ್ಯತ್ಯಾಸವು ರೂಪಾಯಿ 1,707 ಆಗಿದ್ದು, ಪ್ರಸ್ತುತ ಚಾಲ್ತಿಯಲ್ಲಿರುವ ತುಟ್ಟಿ ಭತ್ಯೆಗಿಂತ ರೂಪಾಯಿ 1,707 ಹೆಚ್ಚಳವಾಗಲಿದೆ. ಇದರಿಂದಾಗಿ ವಾರ್ಷಿಕ ವೇತನವೂ ಕೂಡಾ ಹೆಚ್ಚಳವಾಗಲಿದೆ. ತಿಂಗಳಿಗೆ ರೂಪಾಯಿ 1,707 ರಂತೆ 12 ತಿಂಗಳಿಗೆ ಅಂದರೆ ಒಂದು ವರ್ಷಕ್ಕೆ ಸುಮಾರು 20,484 ತುಟ್ಟಿ ಭತ್ಯೆ ಹೆಚ್ಚಳವಾಗಲಿದೆ.


Click it and Unblock the Notifications