ಕೇಂದ್ರ ಸರ್ಕಾರದ ನೌಕರರು 8ನೇ ವೇತನ ಆಯೋಗಕ್ಕಾಗಿ ಕಾದು ಕುಳಿತಿದ್ದಾರೆ. ಸಂಬಳ ಹೆಚ್ಚಳದ ನಿರೀಕ್ಷೆಯಲ್ಲಿರುವ ನೌಕರರಿಗೆ, ಈಗೊಂದು ಹೊಸ ಸುದ್ದಿ ಸಿಕ್ಕಿದೆ. ಅದೇನೆಂದರೆ ಕೇಂದ್ರ ಸರ್ಕಾರದ ನೌಕರರು, ಪಿಂಚಣಿದಾರರು ಮತ್ತು ವಿವಿಧ ಸಂಘಗಳಿಂದ ಅಭಿಪ್ರಾಯ ಸಲ್ಲಿಸುವಂತೆ ಆಹ್ವಾನ ನೀಡಿದೆ. ಇದಕ್ಕಾಗಿ ಗಡುವು ಕೂಡ ನೀಡಲಾಗಿದೆ. ಈ ಆಯೋಗವು ಕೇಂದ್ರ ಸರ್ಕಾರಿ ನೌಕರರ ವೇತನ, ಪಿಂಚಣಿ, ಭತ್ಯೆಗಳು ಮತ್ತು ಸಂಬಂಧಿತ ಸೇವಾ ಪರಿಸ್ಥಿತಿಗಳನ್ನು ಪರಿಗಣಿಸಿ ಶಿಫಾರಸುಗಳನ್ನು ನೀಡಲಿದೆ.

ಹೌದು, 8ನೇ ವೇತನ ಆಯೋಗದ ಪ್ರಾತಿನಿಧ್ಯತೆಗಳನ್ನು ಪಡೆಯಲು, ಸಂಪೂರ್ಣವಾಗಿ ಆನ್‌ಲೈನ್ ಪ್ರಕ್ರಿಯೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಸಂಬಳ ಹೆಚ್ಚಳದ ಅಪೇಕ್ಷೆಯಲ್ಲಿರುವ ನೌಕರರು, ಪಿಂಚಣಿದಾರರು ಎಲ್ಲರ ಅಭಿಪ್ರಾಯಗಳನ್ನು ಸುಲಭವಾಗಿ ಸ್ವೀಕರಿಸಲು ಮತ್ತು ವಿಶ್ಲೇಷಿಸಲು ಸಹಾಯವಾಗುತ್ತದೆ. ಅಂದಹಾಗೆ ಅಭಿಪ್ರಾಯ ಸಲ್ಲಿಸಲು, ಎರಡು ಅಧಿಕೃತ ಅಧಿಕೃತ ಪೋರ್ಟಲ್ಗಳು ಉಪಯೋಗಿಸಲು ಸೂಚಿಸಲಾಗಿದೆ: 8cpc.gov.in ಮತ್ತು innovateindia.mygov.in. ನಲ್ಲಿ ಸಲ್ಲಿಸಬೇಕಾಗುತ್ತದೆ. ಮುಖ್ಯವಾಗಿ ಗಮನಿಸಬೇಕಾದ ವಿಚಾರ ಏನೆಂದರೆ ಕಾಗದದ ಅರ್ಜಿಗಳು, ಇಮೇಲ್ ಅಥವಾ PDF ಲಗತ್ತುಗಳನ್ನು ಸ್ವೀಕರಿಸಲಾಗುವುದಿಲ್ಲ.
ಕೇಂದ್ರ ಸರ್ಕಾರದ ನೌಕರರು ಮತ್ತು ಪಿಂಚಣಿದಾರರು ತಮ್ಮ ಅನುಭವಗಳು, ಬೇಡಿಕೆಗಳು ಮತ್ತು ಸಮಸ್ಯೆಗಳನ್ನು ಈ ಪೋರ್ಟಲ್‌ಗಳ ಮೂಲಕ ಹಂಚಿಕೊಳ್ಳತಕ್ಕದ್ದು.. ಸ್ವಚ್ಚ, ಸ್ಪಷ್ಟ ಹಾಗೂ ರಚನಾತ್ಮಕ ರೀತಿಯಲ್ಲಿ ತಮ್ಮ ಅಭಿಪ್ರಾಯ ಸಲ್ಲಿಸಬಹುದು. ವೇತನ ಸಮಾನತೆ, ಪಿಂಚಣಿ ಸುಧಾರಣೆ, ಭತ್ಯೆಗಳ ಪರಿಷ್ಕರಣೆ, ವೃತ್ತಿ ಪ್ರಗತಿ ಇತ್ಯಾದಿ ವಿಷಯಗಳಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಬಹುದು.
ಅಂದಹಾಗೆ ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ, ಏಪ್ರಿಲ್ 30, 2026 ಆಗಿದೆ. ಈ ದಿನಾಂಕದ ನಂತರ ಆಯೋಗವು ಎಲ್ಲಾ ಸಲಹೆಗಳನ್ನು ಪರಿಶೀಲಿಸಿ, ಮಾಹಿತಿ ವಿಶ್ಲೇಷಿಸಿ ನಂತರ ಸರ್ಕಾರಕ್ಕೆ ಶಿಫಾರಸುಗಳನ್ನು ಸಲ್ಲಿಸುತ್ತದೆ. ಈ ಶಿಫಾರಸುಗಳು ಭವಿಷ್ಯದಲ್ಲಿ ನೌಕರರ ವೇತನ ಮತ್ತು ಪಿಂಚಣಿ ಯೋಜನೆಗಳಿಗೆ ಮಾರ್ಗದರ್ಶಕವಾಗುತ್ತವೆ.
ಅಭಿಪ್ರಾಯದಲ್ಲಿ ಏನು ಸೇರಿಸಬಹುದು?
• ವೇತನ ಸಮಾನತೆ: ಸಮಾನ ಕೆಲಸಕ್ಕೆ ಸಮಾನ ವೇತನ ಅಥವಾ ವಿವಿಧ ವರ್ಗದ ನೌಕರರ ನಡುವೆ ವೇತನ ವ್ಯತ್ಯಾಸಗಳನ್ನು ಸಮತೋಲನಗೊಳಿಸುವ ಸಲಹೆಗಳು.
• ಪಿಂಚಣಿ ಮತ್ತು ನಿವೃತ್ತಿ ಯೋಜನೆಗಳು: ಪಿಂಚಣಿ ಪ್ರಮಾಣ, ಬಡ್ತಿ, ಹಕ್ಕುಗಳು ಮತ್ತು ನಿವೃತ್ತಿ ನಂತರದ ಸಹಾಯ ಕುರಿತು ಸಲಹೆಗಳು.
• ಭತ್ಯೆಗಳ ಪರಿಷ್ಕರಣೆ: ಮನೆ ಬಾಡಿಗೆ, ವೈದ್ಯಕೀಯ, ಪ್ರಯಾಣ ಮತ್ತು ಅನೇಕ ಇತರ ಭತ್ಯೆಗಳ ಪ್ರಮಾಣ ಹೆಚ್ಚಿಸುವ ಬಗ್ಗೆ ಸಲಹೆಗಳು.
• ವೃತ್ತಿ ಪ್ರಗತಿ: ನೌಕರರ ಕರಿಯರ್ ಪ್ರಗತಿ, ಹುದ್ದೆ ಬದಲಾವಣೆ, ತರಬೇತಿ ಮತ್ತು ಹೆಚ್ಚುವರಿ ಪ್ರೋತ್ಸಾಹದ ಕುರಿತು ಅಭಿಪ್ರಾಯ.
• ಸೇವಾ ಪರಿಸ್ಥಿತಿ ಸಮಸ್ಯೆಗಳು: ಕೆಲಸದ ಭಾರ, ಆಡಳಿತಾತ್ಮಕ ಸಮಸ್ಯೆಗಳು, ಪೂರಕ ಬೆಂಬಲಗಳು ಮತ್ತು ಕಾರ್ಯಕ್ಷೇತ್ರ ಸುಧಾರಣೆ.
ಆನ್ಲೈನ್ ಸ್ವರೂಪಗಳು ಹಂತ ಹಂತವಾಗಿ ಮಾರ್ಗದರ್ಶನ ನೀಡುತ್ತವೆ, ಇದರಿಂದ ಯಾವುದೇ ತೊಂದರೆ ಇಲ್ಲದೆ, ಸರಳ ಮತ್ತು ರಚನಾತ್ಮಕವಾಗಿ ಅಭಿಪ್ರಾಯವನ್ನು ಸಲ್ಲಿಸಬಹುದು. ಈ ಮೂಲಕ, ಕೇಂದ್ರ ನೌಕರರು ಮತ್ತು ನಿವೃತ್ತ ಪಿಂಚಣಿದಾರರು ತಮ್ಮ ಧ್ವನಿಯನ್ನು ಕೇಳಿಸಲು ಹಾಗೂ ಸರ್ಕಾರದ ಪರಿಹಾರ ಕ್ರಮಗಳಲ್ಲಿ ಪ್ರಭಾವ ಬೀರುವ ಮಹತ್ವದ ಅವಕಾಶವನ್ನು ಹೊಂದಿದ್ದಾರೆ.


Click it and Unblock the Notifications