ಕೇಂದ್ರ ಸರ್ಕಾರಿ ನೌಕರರು (Govt Employees) ಸದ್ಯ ಭಾರೀ ಕಾತುರದಿಂದ ಕಾಯುತ್ತಿರುವ ಘೋಷಣೆಯೆಂದರೆ 8ನೇ ವೇತನ ಆಯೋಗ. ಭಾರತ ಸರ್ಕಾರದಿಂದ ರಚಿಸಲ್ಪಟ್ಟ ಒಂದು ಉನ್ನತ ಮಟ್ಟದ ಸಮಿತಿಯನ್ನು 8ನೇ ವೇತನ ಆಯೋಗ ಎಂದು ಕರೆಯಲಾಗುತ್ತದೆ. ಇದಿರಂ ಸರಮಾರು 50 ಲಕ್ಚ ಕೇಂದ್ರ ಸರ್ಕಾರಿ ನೌಕರರು ಮತ್ತು 69 ಲಕ್ಷಕ್ಕೂ ಅಧಿಕ ಪಿಂಚಣಿದಾರರು ಈ ವೇತನ ಆಯೋಗದ ಜಾರಿಗಾಗಿ ಕಾಯುತ್ತಿದ್ದಾರೆ. ಇದೀಗ ಮತ್ತೆ ಕೇಂದ್ರ ಸರ್ಕಾರಿ ನೌಕರರಲ್ಲಿ 8ನೇ ವೇತನ ಆಯೋಗದ (8th Pay Commission) ಬಗ್ಗೆ ಚರ್ಚೆ ಮುಂದುವರಿದಿದೆ. ಹೊಸ ವೇತನ ರಚನೆ ಅಂತಿಮವಾಗಿ ಜಾರಿಯಾದಾಗ ಕನಿಷ್ಠ ಫಿಟ್‌ಮೆಂಟ್ ಅಂಶ ಎಷ್ಟಿರಬಹುದು ಎಂಬ ಪ್ರಶ್ನೆಗೆ ಈಗೀಗ ಸ್ಪಷ್ಟನೆ ಸಿಗುತ್ತಿದೆ.
ಸರ್ಕಾರವು 8ನೇ ವೇತನ ಆಯೋಗದ ಪ್ರಾರಂಭದ ದಿನಾಂಕ ಅಥವಾ ನಿಯಮಗಳನ್ನು ಅಧಿಕೃತವಾಗಿ ಘೋಷಿಸದಿದ್ದರೂ, ಇತ್ತೀಚಿನ ಬೆಳವಣಿಗೆ ತುಟ್ಟಿಭತ್ಯೆ (DA) ಹೆಚ್ಚಳದ ಬಗ್ಗೆ ಸುಳಿವು ಸಿಗುತ್ತಿದೆ. ಅಲ್ಲದೇ ಹಣದುಬ್ಬರ ದತ್ತಾಂಶದ ಅಂದಾಜಿನ ಪ್ರಕಾರ, ಕನಿಷ್ಠ ಫಿಟ್‌ಮೆಂಟ್ (Fitment Factor) ಅಂಶ ಈ ಬಾರಿ 1.60 ಆಗಬಹುದು ಎಂದು ಹೇಳಲಾಗಿದ್ದು, ಅಂತಿಮ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗುವ ಸಾಧ್ಯತೆ ಇದೆ.

ವರದಿಗಳ ಪ್ರಕಾರ, 8ನೇ ವೇತನ ಆಯೋಗದ ಕನಿಷ್ಠ ಫಿಟ್‌ಮೆಂಟ್ ಫ್ಯಾಕ್ಟರ್ (Fitment Factor) 1.60 ನಿಗದಿಯಾಗುವ ಸಾಧ್ಯತೆ ಇದೆ. ಆದರೆ ಇದು ಸರ್ಕಾರದಿಂದ ಬಂದ ಅಧಿಕೃತ ಮಾಹಿತಿಯಲ್ಲ. ಪ್ರಸ್ತುತ ಇರುವ ಡಿಎ ಆಧಾರವಾಗಿ ಇದನ್ನು ಲೆಕ್ಕಾಚಾರ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಘೋಷಣೆಯಾಗಲಿದೆ.
ಪ್ರಸ್ತುತ ಚರ್ಚೆಗೆ ಇತ್ತೀಚಿನ ಹಣದುಬ್ಬರ ಅಂಕಿಅಂಶಗಳು ಮುಖ್ಯ ಕಾರಣ. ಕಾರ್ಮಿಕ ಬ್ಯೂರೋ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ, 2025ರ ಡಿಸೆಂಬರ್‌ನಲ್ಲಿ ಅಖಿಲ ಭಾರತ CPI-IW ಸೂಚ್ಯಂಕ 148.2 ಅಂಕಗಳಿಗೆ ತಲುಪಿದೆ. ಈ ದತ್ತಾಂಶದ ಆಧಾರದ ಮೇಲೆ, 2026ರ ಜನವರಿ-ಜೂನ್ ಅವಧಿಗೆ ಶೇ. 2ರಷ್ಟು ಡಿಎ ಹೆಚ್ಚಳವಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಯಾವಾಗ ಹೆಚ್ಚಳವಾಗುತ್ತೆ ಡಿಎ?
ಬಹುಶಃ 2026ರ ಮಾರ್ಚ್‌ನಲ್ಲಿ ಕೇಂದ್ರ ಸಚಿವ ಸಂಪುಟದಿಂದ ಅನುಮೋದನೆಗೊಂಡ ನಂತರ, ಇದು 8ನೇ ವೇತನ ಆಯೋಗದ ಅವಧಿಯ ಮೊದಲ ಡಿಎ ಹೆಚ್ಚಳವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಫಿಟ್‌ಮೆಂಟ್ ಫ್ಯಾಕ್ಟರ್ ಎಂದರೇನು?
ಫಿಟ್‌ಮೆಂಟ್ ಫ್ಯಾಕ್ಟರ್ ಎಂದರೆ ವೇತನ ಆಯೋಗದಲ್ಲಿ ಬಳಸುವ ಒಂದು ಲೆಕ್ಕ. ಇದು ಹಳೆಯ ಮೂಲ ವೇತನವನ್ನು ಹೊಸ ವೇತನ ರಚನೆಗೆ ಹೊಂದಿಸುವಲ್ಲಿ ಸಹಾಯ ಮಾಡುತ್ತದೆ. ಪ್ರಸ್ತುತ 7ನೇ ವೇತನ ಆಯೋಗದಲ್ಲಿ ಫಿಟ್‌ಮೆಂಟ್ ಫ್ಯಾಕ್ಟರ್ 2.57 ಆಗಿತ್ತು. ಇದರ ಮೂಲಕ ತುಟ್ಟಿ ಭತ್ಯೆಯನ್ನು ಮೂಲ ವೇತನದೊಂದಿಗೆ ಸೇರಿಸಿ ಹೊಸ ಮೂಲ ವೇತನವನ್ನು ನಿರ್ಧರಿಸಲಾಗುತ್ತದೆ.
ಆದ್ದರಿಂದ ಇತ್ತೀಚಿನ ವರದಿಗಳ ಪ್ರಕಾರ, ಡಿಎ ಶೇ.60%ಕ್ಕೆ ಏರಿಕೆ ಕಂಡಿದ್ದರಿಂದ ಕನಿಷ್ಠ ಫಿಟ್‌ಮೆಂಟ್ ಫ್ಯಾಕ್ಟರ್ 1.60 ಆಗಬಹುದು ಎನ್ನಲಾಗಿದೆ. ಆದರೂ ಕೆಲವು ವರದಿಗಳು ಫಿಟ್‌ಮೆಂಟ್ ಫ್ಯಾಕ್ಟರ್ 1.83 ರಿಂದ 2.46 ಅಥವಾ 2.13ಕ್ಕೆ ತಲುಪಬಹುದು ಎಂದು ಅಂದಾಜಿಸಲಾಗಿದೆ.
ವೇತನದ ಮೇಲೆ ಫಿಟ್‌ಮೆಂಟ್ ಫ್ಯಾಕ್ಟರ್ ಪರಿಣಾಮವೇನು?
ಫಿಟ್‌ಮೆಂಟ್ ಫ್ಯಾಕ್ಟರ್ ಒಂದು ವೇಲೆ ಅಂತಿಮಗೊಂಡರೆ, ಸರ್ಕಾರಿ ನೌಕರರ ಮೂಲ ವೇತನದಲ್ಲೂ ಗಣನೀಯ ಏರಿಕೆಯಾಗುತ್ತದೆ.
- ಉದಾಹರಣೆಗೆ, ಮೂಲ ವೇತ 18,000 ಇದ್ದರೆ, ಫಿಟ್‌ಮೆಂಟ್ ಫ್ಯಾಕ್ಟರ್ 1.60 ಎಂದು ಭಾವಿಸಿದರೆ, ಹೊಸ ಮೂಲ ವೇತನ 28.800 ರೂ. ಆಗಬಹುದು. (ಲೆಕ್ಕ: ಹಳೆಯ ಮೂಲ ವೇತನ x 1.60)
- ಇದರಿಂದ ಒಟ್ಟಾರೆ ವೇತನದಲ್ಲಿ ಶೇ.60 ರಷ್ಟು ಏರಿಕೆ ಕಾಣಬಹುದು.
ಪಿಂಚಣಿದಾರರ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಪಿಂಚಣಿದಾರರಿಗೂ ಇದೇ ಫಿಟ್‌ಮೆಂಟ್ ಫ್ಯಾಕ್ಟರ್ ಅನ್ವಯವಾಗುತ್ತದೆ. ಹಳೆಯ ಪಿಂಚಣಿ ಮೊತ್ತವನ್ನು ಹೊಸ ಫಿಟ್‌ಮೆಂಟ್ ಫ್ಯಾಕ್ಟರ್‌ನೊಂದಿಗೆ ಹೊಂದಿಸಲಾಗುತ್ತದೆ.
- ಪ್ರಸ್ತುತ ಪಿಂಚಣಿ 9,000 ರೂ. ಆಗಿದ್ದು, 1.60 ಫಿಟ್‌ಮೆಂಟ್ ಫ್ಯಾಕ್ಟರ್‌ನೊಂದಿಗೆ ಹೊಸ ಪಿಂಚಣಿ ಹಣ 14,400 ಆಗಬಹುದು.
- ಇದರಿಂದ ಪಿಂಚಣಿದಾರರ ಆರ್ಥಿಕ ಸ್ಥಿತಿ ಸುಧಾರಿಸಲಿದೆ.


Click it and Unblock the Notifications