ನವದೆಹಲಿ, ಜುಲೈ 12: ಬಜೆಟ್ ಮುಂಡನೆಗೆ ಕೇಂದ್ರ ಹಣಕಾಸು ಸಚಿವರು ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ ಹೂಡಿಕೆದಾರರು ಮತ್ತು ಸಣ್ಣ ಹೂಡಿಕೆದಾರರಿಗೂ ಸಾಕಷ್ಟು ನಿರೀಕ್ಷೆಗಳು ಮೂಡಿವೆ. ತೆರಿಗೆ ಉಳಿತಾಯ ಮಾಡಲು ಪಿಪಿಎಫ್ ನಲ್ಲಿ ಹೂಡಿಕೆ ಮಾಡುತ್ತಿದ್ದವರಿಗೆ ಪಿಎಫ್ ಮೇಲೆ ಆಸಕ್ತಿ ಕಡಿಮೆಯಾಗುತ್ತಿದೆ. ಒಂದು ಕಡೆ, ಹೊಸ ತೆರಿಗೆ ವ್ಯವಸ್ಥೆಯಲ್ಲಿ ಇಂತಹ ಹೂಡಿಕೆಗೆ ಯಾವುದೇ ತೆರಿಗೆ ರಿಯಾಯಿತಿ ಸಿಗುವುದಿಲ್ಲ.
ಇನ್ನೊಂದು ಕಡೆ, ಕಳೆದ 4 ವರ್ಷಗಳಿಂದಲೂ ಸರ್ಕಾರ ಪಿಪಿಎಫ್‌ಗೆ ಕೊಡುವ ಬಡ್ಡಿ ದರದಲ್ಲಿ ಏರಿಕೆ ಮಾಡಿಲ್ಲ. 2020 ರಿಂದಲೂ ಬಡ್ಡಿ ದರದಲ್ಲಿ ಯಾವ ಬದಲಾವಣೆಯೂ ಮಹತ್ವದ ಬದಲಾವಣೆ ಆಗಿಲ್ಲ. ಈಗ ಬ್ಯಾಂಕ್‌ಗಳೇ ಎಫ್‌ಡಿ ಮೇಲೆ ಹೆಚ್ಚು ಬಡ್ಡಿ ಕೊಡುತ್ತವೆ. ಚಿನ್ನ, ಷೇರುಗಳು, ಮ್ಯೂಚುವಲ್ ಫಂಡ್‌ಗಳು ಅದಕ್ಕೂ ಹೆಚ್ಚು ರಿಟರ್ನ್ಸ್ ನೀಡುತ್ತಿವೆ.

ಸಣ್ಣ ಉಳಿತಾಯ ಸ್ಕೀಮ್‌ಗಳ ಬಗ್ಗೆ ಆಸಕ್ತಿ ಕಳೆದುಕೊಂಡಿರುವ ಮನಸ್ಥಿತಿ ಈಗ ಲಕ್ಷಗಟ್ಟಲೆ ಹೂಡಿಕೆದಾರರಲ್ಲೂ ಮೂಡಿದೆ. ಹೀಗಾಗಿ, ಅವರು ನಿಧಾನವಾಗಿ ಇಂತಹ ಹೂಡಿಕೆಗಳಿಂದ ದೂರ ಸರಿಯುತ್ತಿದ್ದಾರೆ. ಜಿಡಿಪಿ ಅನುಪಾತಕ್ಕೆ ಹೋಲಿಸಿದರೆ ಸಣ್ಣ ಉಳಿತಾಯ ಸ್ಕೀಮ್‌ಗಳಲ್ಲಿ ನಿರಂತರವಾಗಿ ಕಡಿಮೆ ಆಗುತ್ತಿರುವುದಕ್ಕೆ ಇದೇ ಕಾರಣ.
2020-11 ರ ಹಣಕಾಸು ವರ್ಷದ ಅವಧಿಯಲ್ಲಿ ಸಣ್ಣ ಉಳಿತಾಯ ಸ್ಕೀಮ್‌ಗಳಲ್ಲಿ ಹೂಡಿಕೆ ಮಾಡಿದ ಮೊತ್ತವು ಜಿಡಿಪಿಯ 1.54 ಶೇಕಡಾಗೆ ಸಮಾನವಾಗಿತ್ತು.. ಇದು 2021-22 ರಲ್ಲಿ 1.42 ಪರ್ಸೆಂಟ್‌ಗೆ ಕುಸಿಯಿತು. 2022-23 ರ ಲ್ಲಿ ಇದು 1.12 ಪರ್ಸೆಂಟ್‌ಗೆ ಕುಸಿತ ಕಂಡಿದೆ. ಸರ್ಕಾರವೇ ಈ ಸಣ್ಣ ಉಳಿತಾಯ ಸ್ಕೀಮ್‌ಗಳಲ್ಲಿನ ಹೂಡಿಕೆ ಹಣವನ್ನು ಬಳಸುತ್ತಿದ್ದರೂ, ಇದರಲ್ಲಿ ಹೂಡಿಕೆ ಮೊತ್ತ ಕುಸಿಯುತ್ತಿದೆ.
ಆದರೆ, ತೆರಿಗೆ ರಿಯಾಯಿತಿ ಇಲ್ಲದ್ದರಿಂದ ಈ ಸಣ್ಣ ಉಳಿತಾಯ ಸ್ಕೀಮ್‌ಗಳಲ್ಲಿನ ಹೂಡಿಕೆ ಕಡಿಮೆಯಾಗುತ್ತಿರುವುದರ ಜೊತೆಗೆ ಹೂಡಿಕೆದಾರರಿಗೆ ಒಂದು ಗೊಂದಲವೂ ಕಾಡುತ್ತಿದೆ. ಈ ಹೂಡಿಕೆ ಸ್ಕೀಮ್‌ಗಳಲ್ಲಿ ಇರುವ ಹಣವನ್ನು ಹಾಗೆಯೇ ಮುಂದುವರಿಸಬೇಕೆ ಅಥವಾ ಚೆನ್ನಾಗಿ ರಿಟರ್ನ್ಸ್ ಇರುವ ಸ್ಕೀಮ್‌ಗಳಿಗೆ ಶಿಫ್ಟ್ ಮಾಡಬೇಕೆ ಎಂಬ ಗೊಂದಲವನ್ನು ಅವರು ಎದುರಿಸುತ್ತಿದ್ದಾರೆ. ಚಿನ್ನ, ಷೇರುಗಳು ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿ ಹೆಚ್ಚು ರಿಟರ್ನ್ಸ್ ಇದ್ದರೂ, ಇವು ಆದಾಯ ತೆರಿಗೆ ವ್ಯಾಪ್ತಿಗೆ ಬರುತ್ತವೆ. ಬ್ಯಾಂಕ್‌ನಲ್ಲಿ ಇಟ್ಟಿರುವ ಫಿಕ್ಸೆಡ್ ಡೆಪಾಸಿಟ್‌ಗಳೂ ಕೂಡಾ ತೆರಿಗೆ ವ್ಯಾಪ್ತಿಗೆ ಒಳಪಡುತ್ತವೆ.
ಹೀಗಾಗಿ, ಹಣಕಾಸು ಉಳಿತಾಯ ಮಾಡುವವರ ಮೇಲೆ ಬೀಳುವ ಆದಾಯ ತೆರಿಗೆ ಹೊರೆಯನ್ನು ಕೇಂದ್ರ ಹಣಕಾಸು ಸಚಿವರು ಕಡಿಮೆ ಮಾಡುತ್ತಾರಾ? ಎನ್ನುವ ಪ್ರಶ್ನೆ ಮೂಡಿದೆ. ಹೀಗೆ ಮಾಡಿದರೆ, ಉಳಿತಾಯಕ್ಕೆ ಸಿಗುವ ಪ್ರೋತ್ಸಾಹ ಹೆಚ್ಚುವುದಷ್ಟೇ ಅಲ್ಲ, ಸಣ್ಣ ಉಳಿತಾಯ ಸ್ಕೀಮ್‌ಗಳ ಮೂಲಕ ಸರ್ಕಾರದ ಬಳಿ ಸಂಗ್ರಹವಾಗುವ ಬಂಡವಾಳವೂ ಹೆಚ್ಚುತ್ತದೆ.


Click it and Unblock the Notifications