ಬೆಂಗಳೂರು, ಫೆಬ್ರವರಿ 13: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರ 14 ವರ್ಷಗಳ ದಾಂಪತ್ಯ ಜೀವನಕ್ಕೆ ತೆರೆಬಿದ್ದಿದೆ. ಸಾನಿಯಾ ಅವರ ಮಾಜಿ ಪತಿ, ಕ್ರಿಕೆಟಿಗ ಶೋಯೆಬ್ ಮಲಿಕ್ ನಟಿ ಸನಾ ಜಾವೇದ್ ಅವರನ್ನು ಮೂರನೇ ಬಾರಿಗೆ ವಿವಾಹವಾಗಿದ್ದಾರೆ. ಮುರಿದುಬಿದ್ದ ದಾಂಪತ್ಯ ಜೀವನದಿಂದ ಸಾನಿಯಾ ಸುದ್ದಿಯಾಗಿದ್ದರು.
ಸಾನಿಯಾ ಮಿರ್ಜಾ ಅವರು ಅತ್ಯುತ್ತಮ ಮಹಿಳಾ ಟೆನಿಸ್ ಆಟಗಾರ್ತಿಯಾಗಿದ್ದಾರೆ. ಆರು ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಚಾಂಪಿಯನ್, ಡಬಲ್ಸ್‌ನಲ್ಲಿ ಮಾಜಿ ವಿಶ್ವ ನಂ. 1ಆಟಗಾರ್ತಿ ಮತ್ತು ನಾಲ್ಕು ಬಾರಿ ಒಲಿಂಪಿಯನ್ ಹೀಗೆ ತಮ್ಮ ವೃತ್ತಿಜೀವನದಲ್ಲಿ ಬಹಳಷ್ಟು ಸಾಧನೆ ಮಾಡಿದ ಸಾಧಕಿಯಾಗಿದ್ದಾರೆ. ಆದರೆ ಸಾನಿಯಾ ಮಿರ್ಜಾ ಅವರ ಸಹೋದರಿ ಅನಮ್ ಮಿರ್ಜಾ ಕೂಡಾ ಓರ್ವ ಸಾಧಕಿಯಾಗಿದ್ದು, ಯಶಸ್ವಿ ಉದ್ಯಮಿ ಎಂಬುದು ಅನೇಕರಿಗೆ ತಿಳಿದಿಲ್ಲ.

ಅನಮ್ ಮಿರ್ಜಾ ಅವರು ನಾಸರ್ ಸ್ಕೂಲ್ ನಿಂದ ಮಾಸ್ ಕಮ್ಯುನಿಕೇಷನ್ ಅಂಡ್ ಮೀಡಿಯಾ ಸ್ಟಡೀಸ್ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಸ್ನಾತಕೋತ್ತರ ಪದವಿಯ ಬಳಿಕ ಅನಮ್ ಅವರು ವಿವಿಧ ರಾಷ್ಟ್ರೀಯ ಚಾನೆಲ್‌ಗಳಲ್ಲಿ ಇಂಟರ್ನ್ ಆಗಿ ಪತ್ರಿಕೋದ್ಯಮದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.
ಆದರೆ ಕೊನೆಗೆ ಅವರು ಉದ್ಯಮಶೀಲತೆಯು ಕಡೆ ವಾಲಿದ್ದು, 2013 ರಲ್ಲಿ, ಅನಮ್ ತನ್ನ ಕಂಪನಿಯಾದ 'ಇಂಕ್ ಟು ಚೇಂಜ್' ಅನ್ನು ಮಹತ್ವಾಕಾಂಕ್ಷಿ ಪತ್ರಕರ್ತರಿಗಾಗಿ ವೆಬ್‌ಸೈಟ್ ಅನ್ನು ಪ್ರಾರಂಭಿಸಿದರು. ಅನಮ್ ಅವರು 2014 ರಲ್ಲಿ, ಅವರು ಅಕ್ಬರ್ ರಶೀದ್ ಅವರನ್ನು ಡೇಟಿಂಗ್ ಮಾಡಲಾರಂಭಿಸಿದ ವೇಳೆ ತಮ್ಮ ಫ್ಯಾಶನ್ ಲೇಬಲ್ 'ದಿ ಲೇಬಲ್ ಬಜಾರ್' ಅನ್ನು ಪ್ರಾರಂಭಿಸಿದರು. 2022 ರಲ್ಲಿ, ಅನಮ್ ಭಾರತದ ಅತಿದೊಡ್ಡ ರಂಜಾನ್ ಎಕ್ಸ್‌ಪೋ ಆದ ದಾವತ್-ಎ-ರಂಜಾನ್ ಅನ್ನು ಸಹ-ಸ್ಥಾಪಿಸಿದರು. ಕಂಪನಿಯು ಪ್ರತಿ ವರ್ಷ ಸರಾಸರಿ 150k ವಾಕ್-ಇನ್‌ಗಳನ್ನು ಹೊಂದಿದ್ದು ಕೇವಲ ಎರಡು ವರ್ಷಗಳಲ್ಲಿ, ವ್ಯವಹಾರವು ಗಮನಾರ್ಹವಾಗಿ ವಿಸ್ತರಿಸುವಲ್ಲಿ ಯಶಸ್ವಿಯಾಯಿತು.
ದೀರ್ಘಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ, ಅನಮ್ ನವೆಂಬರ್ 18, 2016 ರಂದು ಅಕ್ಬರ್ ರಶೀದ್ ಅವರೊಂದಿಗೆ ವಿವಾಹವಾದರು. ಆದರೆ ಇವರಿಬ್ಬರು 2018 ರಲ್ಲಿ ಬೇರೆಯಾಗಲು ನಿರ್ಧರಿಸಿ ವಿಚ್ಚೇದನ ಪಡೆದರು. 2019 ರಲ್ಲಿ, ಅನಮ್ ಕ್ರಿಕೆಟಿಗ ಮೊಹಮ್ಮದ್ ಅಸಾದುದ್ದೀನ್ ಅವರನ್ನು ಎರಡನೇ ಬಾರಿಗೆ ವಿವಾಹವಾದರು. ಮೊಹಮ್ಮದ್ ಅಸಾದುದ್ದೀನ್ ಜನಪ್ರಿಯ ಮಾಜಿ ಕ್ರಿಕೆಟಿಗ ಮತ್ತು ರಾಜಕಾರಣಿ ಮೊಹಮ್ಮದ್ ಅಜರುದ್ದೀನ್ ಅವರ ಪುತ್ರ. ಅಸಾದುದ್ದೀನ್ ಮತ್ತು ಅನಮ್ ದಂಪತಿಗಳಿಗೆ 'ದುವಾ' ಎಂಬ ಓರ್ವ ಮಗಳಿದ್ದಾಳೆ.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications