Flip Mobile: ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಅಗ್ಗದ ಫ್ಲಿಪ್ ಫೋನ್‌: ಈ ಫೋನ್‌ ಬೆಲೆ ತಿಳಿದರೆ ಅಚ್ಚರಿ ಪಡುವುದು ಫಿಕ್ಸ್‌

ಮಾರುಕಟ್ಟೆಯಲ್ಲಿ ದಿನವೂ ಹೊಸ ಹೊಸ ಮೊಬೈಲ್‌ ಫೋನ್‌ಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಗ್ರಾಹಕ ಇವುಗಳನ್ನು ಕೊಳ್ಳುವಾಗ, ಅದರ ಫೀಚರ್ ಹಾಗೂ ವಿನ್ಯಾಸವನ್ನು ನೋಡಿ ಸ್ಮಾರ್ಟ್‌ ಫೋನ್‌ ತೆಗೆದುಕೊಳ್ಳುತ್ತಾನೆ. ಅಂದಹಾಗೆ ಈಗ ಕಂಪನಿಗಳು ಫ್ಲಿಪ್‌ ಮೊಬೈಲ್‌ಗಳನ್ನು ನಿರ್ಮಿಸಿ ಗ್ರಾಹಕರನ್ನು ಸೆಳೆಯುತ್ತಿವೆ.

ನಿಮ್ಮ ಬಜೆಟ್‌ಗೆ ವಿವಿಧ ಫೋನ್‌ಗಳನ್ನು ಕಾಣಬಹುದು, ವಿವಿಧ ವೈಶಿಷ್ಟ್ಯಗಳು, ವಿನ್ಯಾಸ ಮತ್ತು ನೋಟವನ್ನು ನೋಡುತ್ತೇವೆ. ನಿಮ್ಮ ಜೇಬಿಗೆ ಹೆಚ್ಚಿನ ಹೊರೆ ಆಗದಂತೆ ನೋಡಿಕೊಳ್ಳುವ ಫೋನ್‌ಗಳು ಬಂದಿವೆ. ಇನ್ನು ಕೆಲವು ಕಂಪನಿಯ ಫೋನ್‌ಗಳು ಕಾಣಲು ಅಂದವಾಗಿದ್ದು, ನಿಮ್ಮ ಜೇಬಿಗೆ ಭಾರವನ್ನು ಸಹ ಮಾಡುವುದಿಲ್ಲ. ಫ್ಲಿಪ್ ಫೋನ್‌ಗಳು ಮೊದಲಿಗೆ ನಮಗೆ ಸ್ಯಾಮ್‌ಸಂಗ್ ಮತ್ತು ಒಪ್ಪೋ ಕಂಪನಿಗಳನ್ನು ನೆನಪಿಸುತ್ತವೆ.

 ಈ ಮೊಬೈಲ್‌ ಒಮ್ಮೆ ನೋಡಿದರೆ ಬೆರಗಾಗುವುದು ಗ್ಯಾರಂಟಿ

ಇಲ್ಲಿ ಒಂದು ಫ್ಲಿಪ್ ಫೋನ್‌ ಇದೆ ನೋಡಿ. ಇದರ ಅಂದ ಬೇರೆ ಕಂಪನಿಗಳ ಫೋನ್ ಅಂದಕ್ಕೆ ಸಮ. ನೀವು ಫೋನ್ ಅನ್ನು ಫ್ಲಿಪ್ ಮಾಡಿದರೆ, ಹಿಂದಿನ ಕಾಲದಲ್ಲಿ ಲಭ್ಯವಿರುವ ಕೀಪ್ಯಾಡ್ ಫೋನ್‌ಗಳು ನಿಮಗೆ ನೆನಪಿರಬಹುದು.

ಈ ಫೋನ್‌ ಬೆಲೆ ಎಷ್ಟು?

ನೀವು ಸ್ಟೈಲಿಶ್ ಆಗಿ ಕಾಣಲು ಫೋನ್ ಖರೀದಿಸಿದರೆ ಅದು ನಿಮ್ಮ ಅಂದವನ್ನು ಇನ್ನಷ್ಟು ಹೆಚ್ಚಿಸಲು ಸಹಾಯ ಮಾಡುತ್ತದೆ. ಇನ್ನು ದುಬಾರಿ ಕಾಣುವ ಆದರೆ ಕಡಿಮೆ ಬೆಲೆಯ ಫೋನ್‌ಗಾಗಿ ಹುಡುಕುತ್ತಿದ್ದೀರಾ? ನೀವು 2,500 ರೂ.ಗೆ ಬರುವ ಫ್ಲಿಪ್ ಫೋನ್ ಅನ್ನು ಖರೀದಿಸಬಹುದು.

Snexion Rock ಹೆಸರಿನ ಫ್ಲಿಪ್ ಫೋನ್ ಮೂರು ಕ್ಯಾಮೆರಾಗಳನ್ನು ಹೊಂದಿದೆ ಮತ್ತು ಬಣ್ಣ ಆಯ್ಕೆಗಳು ಈ ದಿನಗಳಲ್ಲಿ ಲಭ್ಯವಿರುವ ಪ್ರಮುಖ ಫೋನ್‌ಗಳಿಗೆ ಹೋಲುತ್ತವೆ.

 ಈ ಮೊಬೈಲ್‌ ಒಮ್ಮೆ ನೋಡಿದರೆ ಬೆರಗಾಗುವುದು ಗ್ಯಾರಂಟಿ

Snexion Rock X Flip ಫೋನ್ ಆನ್‌ಲೈನ್ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯ. ಫೋನ್ ಅನ್ನು ಅಮೆಜಾನ್‌ನಲ್ಲಿ 2,500 ರೂ.ಗೆ ಖರೀದಿಸಬಹುದು. ಫೋನ್ ತೆರೆದಾಗ ಹೊರಗಿನಿಂದ ಮೂರು ಕ್ಯಾಮೆರಾಗಳು ಮತ್ತು ಕೀಪ್ಯಾಡ್ ಗೋಚರಿಸುತ್ತದೆ. ಈ ಫೋನ್ ಅನ್ನು ಐಫೋನ್ ಫ್ಲಿಪ್ ರೀತಿ ಕಾಣುತ್ತದೆ. ಇದನ್ನು ಫೀಚರ್ ಫೋನ್ ಎಂದು ಕರೆಯಬಹುದು. ಕ್ಯಾಮೆರಾ ಸೇರಿದಂತೆ ಹಲವು ವೈಶಿಷ್ಟ್ಯಗಳು ಲಭ್ಯವಿದೆ.

3000 ರೂ.ಗಿಂತ ಕಡಿಮೆ ಬೆಲೆಗೆ ಫೀಚರ್ ಫೋನ್ ಖರೀದಿಸುವ ವಿಷಯ ಬಂದಾಗ, ಹೆಚ್ಚಿನ ಜನರು JioPhone ಅಥವಾ Nokia ಫೀಚರ್ ಫೋನ್ ಖರೀದಿಸಲು ಯೋಚಿಸುತ್ತಾರೆ. ಅದೇ ಸಮಯದಲ್ಲಿ, ಈಗ ನೀವು ಕೈಗೆಟುಕುವ ಬೆಲೆಯ ಕೀಪ್ಯಾಡ್ ಫೋನ್ ಅನ್ನು ಕ್ಯಾಮೆರಾದೊಂದಿಗೆ ಖರೀದಿಸಬಹುದು.

ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ

ಇದು 1.8 ಇಂಚಿನ VGA ಡಿಸ್ಪ್ಲೇ ಹೊಂದಿದೆ. ಫೋನ್ ಕ್ಯಾಮೆರಾ, 3000 mAh ಬ್ಯಾಟರಿ, 3.5mm ಹೆಡ್‌ಫೋನ್ ಜ್ಯಾಕ್, ವೈರ್‌ಲೆಸ್ FM ರೇಡಿಯೋ, ಡ್ಯುಯಲ್ ಸಿಮ್ ಬೆಂಬಲ ಮತ್ತು MP3 ಪ್ಲೇಯರ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+