ಬೆಂಗಳೂರು, ಫೆಬ್ರವರಿ 7: ಮ್ಯಾನ್‌ಕೈಂಡ್ ಫಾರ್ಮಾ ಇಂದು 81,600 ಕೋ. ರೂ. ಮಾರುಕಟ್ಟೆ ಕ್ಯಾಪ್ ನೊಂದಿಗೆ ಭಾರತದ ಅತಿದೊಡ್ಡ ಔಷಧೀಯ ಕಂಪನಿಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಇದನ್ನು ಫಾರ್ಮಾ ಕ್ಶೇತ್ರದ ಪ್ರಸಿದ್ಧ ಉದ್ಯಮಿ, ಭಾರತೀಯ ಬಿಲಿಯನೇರ್ ರಾಜೀವ್ ಜುನೇಜಾ ಮತ್ತು ಅವರ ಹಿರಿಯ ಸಹೋದರ ರಮೇಶ್ ಜುನೇಜಾ ಸ್ಥಾಪಿಸಿದ್ದಾರೆ.
ಮ್ಯಾನ್‌ಕೈಂಡ್ ಫಾರ್ಮಾ ದೆಹಲಿಯಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ. ತನ್ನದೇ ಆಗಿರುವ ವಿಜ್ಞಾನಿಗಳ ಬೃಹತ್ ತಂಡದ, ಜೊತೆಗೆ ದೇಶದಾದ್ಯಂತ 25 ಉತ್ಪಾದನಾ ಯುನಿಟ್ ಗಳನ್ನು ಹೊಂದಿರುವ ಮ್ಯಾನ್‌ಕೈಂಡ್ ಈಗ ಮನೆಮಾತಾಗಿದೆ. ಕೇವಲ 50 ಲಕ್ಷ ರೂಪಾಯಿ ಮೂಲ ಬಂಡವಾಳದೊಂದಿಗೆ ಪ್ರಾರಂಭವಾದ ಮ್ಯಾನ್‌ಕೈಂಡ್ ಫಾರ್ಮಾ ಇಂದು ಬೃಹತ್ ಆಕಾರವಾಗಿ ಬೆಳೆದುನಿಂತು, ಕಾಲೇಜು ಡ್ರಾಪ್ಔಟ್ ಆಗಿರುವ ರಾಜೀವ್ ಜುನೇಜಾ ಅವರ ಸ್ಪೂರ್ತಿದಾಯಕ ಪ್ರಯಾಣವನ್ನು ವಿವರಿಸುತ್ತದೆ. ರಾಜೀವ್ ಅವರು ಈಗ ರೂ 81600 ಕೋಟಿ ರೂ. ಮಾರುಕಟ್ಟೆ ಕ್ಯಾಪ್ ಹೊಂದಿರುವ ಬ್ರ್ಯಾಂಡ್‌ನ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

ಇನ್ನು ರಮೇಶ್ ಜುನೇಜಾ ಅವರು ವಿಜ್ಞಾನ ಪದವೀಧರರಾಗಿದ್ದರೆ, ಅವರ ಸಹೋದರ ರಾಜೀವ್ ಬಜಾಜ್ ಕಾಲೇಜು ಡ್ರಾಪ್ ಔಟ್ ಆಗಿದ್ದಾರೆ. ರಮೇಶ್ ಜುನೇಜಾ ಸ್ವಂತ ಕಂಪನಿ ಆರಂಭಿಸುವ ಮೊದಲು ಕೀ ಫಾರ್ಮಾ ಎಂಬ ಕಂಪನಿಯಲ್ಲಿ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಕೆಲಸ ಮಾಡುತ್ತಿದ್ದರು. ಅವರು ತಮ್ಮ ಸ್ವಂತ ವ್ಯವಹಾರವನ್ನು ಆರಂಭಿಸುವ ಮೊದಲು ಎಂಟು ವರ್ಷಗಳ ಕಾಲ ಲುಪಿನ್ ಸಂಸ್ಥೆಯಲ್ಲಿ ಕೆಲಸ ಮಾಡಿದ್ದರು.
1994ರಲ್ಲಿ, ರಾಜೀವ್ ಬಜಾಜ್ ಮತ್ತು ರಮೇಶ್ ಬಜಾಜ್ ತಮ್ಮ ಸ್ವಂತ ಕಂಪನಿಯನ್ನು ಪ್ರಾರಂಭಿಸಲು ಪಾಲುದಾರರಾದರು. ಇದಾದ ಒಂದು ವರ್ಷ ಬಳಿಕ ಮ್ಯಾನ್‌ಕೈಂಡ್ ಸಂಸ್ಥೆ ಪ್ರಾರಂಭಿಸಿದರು. ಸಹೋದರರು ಕೇವಲ 50 ಲಕ್ಷ ರೂಪಾಯಿಗಳ ಆರಂಭಿಕ ಹೂಡಿಕೆಯನ್ನು ಹೊಂದಿದ್ದು, ಮೊದಲು ಸಂಸ್ಥೆ ಆರಂಭಿಸಿದಾಗ ಅವರ ಬಳಿ 25 ಮಂದಿ ಮೆಡಿಕಲ್ ರೆಪ್ರೆಸೆಂಟೇಟಿವ್ ಹೊಂದಿದ್ದರು.
ಆದರೆ ಈಗ ಮ್ಯಾನ್‌ಕೈಂಡ್ ಭಾರತದಲ್ಲಿ ವೈದ್ಯಕೀಯ ಪ್ರತಿನಿಧಿಗಳ ಅತಿದೊಡ್ಡ ನೆಟ್‌ವರ್ಕ್ ಅನ್ನು ಹೊಂದಿದ್ದು, ಈ ಯಶಸ್ಸು ರಾಜೀವ್ ಜುನೇಜಾ ಅವರಿಗೆ ಸಲ್ಲುತ್ತದೆ. ಅವರು ತಮ್ಮ ತಂಡದೊಂದಿಗೆ ಸಾಕಷ್ಟು ಸಮಯ ಚರ್ಚಿಸುವುದರಲ್ಲೇ ಕಳೆಯುತ್ತಾರೆ. ಅವರ ಸೋದರಳಿಯ ಅರ್ಜುನ್ ಅವರು ಉತ್ಪಾದನೆ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ(manufacturing and research and development)ಯನ್ನು ನೋಡಿಕೊಳ್ಳುತ್ತಾರೆ. ಮತ್ತೊರ್ವ ಸೋದರಳಿಯ ಶೀತಲ್ ಅರೋರಾ, ಸ್ತ್ರೀರೋಗ, ಚರ್ಮರೋಗ ಔಷಧಗಳ ಮಾರ್ಕೆಟಿಂಗ್ ಅಂಗವಾಗಿರುವ ಲೈಫ್‌ಸ್ಟಾರ್ ಅನ್ನು ನೋಡಿಕೊಳ್ಳುತ್ತಾರೆ. ಫೋರ್ಬ್ಸ್ ಪ್ರಕಾರ, ರಾಜೀವ್ ಬಜಾಜ್ ಪ್ರಸ್ತುತ ನಿವ್ವಳ ಮೌಲ್ಯವು 23255 ಕೋಟಿ ರೂ. ಆಗಿದೆ.
ಕಂಪನಿಯು 36 ವಿಶಿಷ್ಟ ಬ್ರಾಂಡ್‌ಗಳಲ್ಲಿ ಸಾವಿರಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸುತ್ತದೆ. ಈ ಮೂಲಕ ನೋವು ನಿವಾರಣೆ, ಸೋಂಕು ನಿಯಂತ್ರಣ, ಹೃದಯ ಕಾಯಿಲೆಗಳು ಮತ್ತು ಮಧುಮೇಹ ನಿರ್ವಹಣೆಯಂತಹ ವಿವಿಧ ವೈದ್ಯಕೀಯಕ್ಕೆ ಸಂಬಂಧಿಸಿದ ಅಗತ್ಯಗಳನ್ನು ಪರಿಹರಿಸುತ್ತದೆ.
2017 ರಲ್ಲಿ, ಮ್ಯಾನ್‌ಕೈಂಡ್ ಫಾರ್ಮಾಸಂಸ್ಥೆಯೂ ಡಯಾಗ್ನೋಸ್ಟಿಕ್ಸ್ ಮತ್ತು ಹೆಲ್ತ್‌ಕೇರ್ ಪರೀಕ್ಷೆಗಳನ್ನು ಒದಗಿಸುವ ಪಾತ್‌ಕೈಂಡ್ ಲ್ಯಾಬ್‌ಗಳನ್ನು ಸ್ಥಾಪಿಸಿದೆ. ಇದಲ್ಲದೇ 2022 ರಲ್ಲಿ, ಕಂಪನಿಯು ಅಗ್ರಿಟೆಕ್ ಮತ್ತು ಪೆಟ್ ಕೇರ್ ವಿಭಾಗಗಳನ್ನು ಪ್ರವೇಶಿಸಿದೆ.


Click it and Unblock the Notifications