ಬೆಂಗಳೂರು: ಬೆಂಗಳೂರು (Bengaluru) ಅಭಿವೃದ್ಧಿಗಾಗಿ ಸರ್ಕಾರ ನಿರಂತರ ಶ್ರಮ ಪಡುತ್ತಲೇ ಇದೆ. ರಾಜಧಾನಿ ಬೆಂಗಳೂರಿನಲ್ಲಿ ದಿನನಿತ್ಯ ಎದುರಾಗುವ ದೊಡ್ಡ ಸಮಸ್ಯೆಯೆಂದರೆ, ಅದು ಟ್ರಾಫಿಕ್ ಸಮಸ್ಯೆ. ಇದೀಗ, ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಬರೋಬ್ಬರಿ 40 ಕಿಲೋ ಮೀಟರ್ ಮೆಟ್ರೋ ಜೊತೆಗೆ ಡಬಲ್ ಡೆಕ್ಕರ್ ಫ್ಲೈಓವರ್ (Double Decker Flyover) ನಿರ್ಮಾಣವಾಗಲಿದೆ. ಇನ್ನು ಇದಕ್ಕಾಗಿ ವಿಸ್ತೃತ ಯೋಜನಾ ವರದಿ (DPR) ತಯಾರಿಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shiva Kumar) ಗುರುವಾರ (ಜ.08) ಹೇಳಿದ್ದಾರೆ. ಈ ಮೂಲಕ ಬೆಂಗಳೂರು ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಮೆಟ್ರೋ ಯೋಜನೆಗೆ ಸುಗಮ ಹಾದಿ!
ಈಗಾಗಲೇ ಡಬಲ್ ಡೆಕ್ಕರ್ ನಿರ್ಮಾಣದ ಚರ್ಚೆಗಳು ನಡೆಯುತ್ತಿದ್ದು, ಡಿಪಿಆರ್ ಬಗ್ಗೆ ಯಾವುದೇ ಮಾಹಿತಿ ಹೊರಬಂದಿರಲಿಲ್ಲ. ಆದ್ರೆ ಇದೀಗ ಡಿಕೆಶಿ ಘೋಷಣೆಯಿಂದಾಗಿ ವಿಳಂಬವಾಗುತ್ತಿದ್ದ ಮೆಟ್ರೋ ಯೋಜನೆಗಳಿಗೂ ಶೀಘ್ರವೇ ವೇಗ ಸಿಗಲಿದೆ.
ಸಾವಿರಾರು ಕೋಟಿ ವೆಚ್ಚದಲ್ಲಿ ಬೆಂಗಳೂರಿನ ಅಭಿವೃದ್ಧಿಯ ದೃಷ್ಟಿಯಿಂದ 2025ರ ಮಾರ್ಚ್‌ನಲ್ಲಿ ಸಾರಿಗೆ ವ್ಯವಸ್ಥೆಯನ್ನು ಉತ್ತಮ ಗೊಳಿಸುವ ಉದ್ದೇಶದಿಂದ ನಮ್ಮ ಮೆಟ್ರೋ ಹಂತ 3ರಲ್ಲಿ ಎರಡು ಎತ್ತರದ ಕಾರಿಡಾರ್ ಜೊತೆಗೆ ನಿರ್ಮಾಣವಾಗಲಿದೆ. ಇನ್ನು ಈ ಯೋಜನೆ ರಾಗಿಗುಡ್ಡ ಪ್ರಸನ್ನಾಂಜನೇಯ ಸ್ವಾಮಿ ಮೆಟ್ರೋ ನಿಲ್ದಾಣದಿಂದ (ಯೆಲ್ಲೋ ಲೈನ್) ಸಿಲ್ಕ್ ಬೋರ್ಡ್‌ವರೆಗಿನ ಡಬಲ್ ಡೆಕ್ಕರ್ ಫ್ಲೈ ಓವರ್‌ನಂತೆಯೇ ನಿರ್ಮಾಣವಾಗಲಿದೆ.
9000 ಕೋಟಿ ವೆಚ್ಚ, 40 ಕಿ.ಮೀ ಉದ್ದ!
ಇನ್ನು ಈ ಡಬಲ್ ಡೆಕ್ಕರ್ ಫ್ಲೈಓವರ್ 9 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಇನ್ನು 40 ಕಿಲೋ ಮೀಟರ್ ಮಾರ್ಗದೊಂದಿಗೆ, ಮೆಟ್ರೋ ಮಾರ್ಗ ಕೂಡಾ ಇರಲಿದೆ. ಸದ್ಯ ಈ ಯೋಜನೆಯ ಡಿಪಿಆರ್ (Detailed Project Report) ಸಿದ್ಧವಾಗುತ್ತಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ಎಲ್ಲಿಂದ ಎಲ್ಲಿಗೆ ನಿರ್ಮಾಣ?
ಬೆಂಗಳೂರು ನಮ್ಮ ಮೆಟ್ರೋ 3ನೇ ಹಂತದಲ್ಲಿ ನಿರ್ಮಿಸಲು ಸಜ್ಜಗಿರುವ 44 ಕಿ.ಮೀ ಉದ್ದದ ಎರಡು ಮೆಟ್ರೋ ಕಾರಿಡಾರ್‌ಗಳ ಜೊತೆಯಲ್ಲೇ ಈ ಡಬಲ್ ಡೆಕ್ಕರ್ ಫ್ಲೈಓವರ್ ಕೂಡಾ ನಿರ್ಮಾಣವಾಗಲಿದೆ. ಜೆಪಿ ನಗರ 4ನೇ ಫೇಸ್‌ನಿಂದ ಹೆಬ್ಬಾಳದವರೆಗೆ ಹಾಗೂ ಹೊಸಹಳ್ಳಿಯಿಂದ ಕಡಬಗೆರೆವರೆಗಿನ ಮೆಟ್ರೋ ಮಾರ್ಗದಲ್ಲಿ ಈ ಫ್ಲೈಓವರ್ ನಿರ್ಮಾಣವಾಗುವ ಸಾಧ್ಯತೆ ಇದೆ. ಇದೀಗ ಈ ಫ್ಲೈಓವರ್ ಕಾರ್ಯಾಚರಣೆ ಆರಂಭವಾದ್ರೆ ಮೆಟ್ರೋ ಕಾಮಗಾರಿ ಕೂಡಾ ವೇಗ ಪಡೆದುಕೊಳ್ಳಲಿದೆ ಎಂಬುದು ಸರ್ಕಾರದ ಅಭಿಪ್ರಾಯ.
ನಮ್ಮ ಮೆಟ್ರೋದಿಂದ ಆರೆಂಜ್ ಲೈನ್ ಕಾರಿಡಾರ್ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ 2024ರಲ್ಲಿ ಅನುಮೋದನೆ ನೀಡಿತ್ತು. ಅಲ್ಲಿಂದ ಇಲ್ಲಿಯವರೆಗೂ ಯಾವುದೇ ಕಾರಿಡಾರ್ ಕರೆದಿಲ್ಲ. ಇನ್ನು ಈ ಕಾಮಗಾರಿ ಆರಂಭಕ್ಕೆ ಮೊದಲ ಅಡಚಣೆಯೇ ಈ ಡಬಲ್ ಡೆಕ್ಕರ್ ಫ್ಲೈಓವರ್. ಆದ್ದರಿಂದ ಈ ಡಬಲ್ ಡೆಕ್ಕರ್ ಫ್ಲೈಓವರ್ ಕೆಲಸ ಆರಂಭವಾದ್ರೆ ಮೆಟ್ರೋ ಕಾಮಗಾರಿಯೂ ಆರಂಭವಾಗಲಿದೆ. ಅಂತೂ ಹೊಸ ಮೆಟ್ರೋ ಲೈನ್ ಆರಂಭವಾಗುವುದು ಪಕ್ಕಾ.


Click it and Unblock the Notifications