ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎಷ್ಟೇ ಬಾರಿ ರಸ್ತೆ ಕಾಮಗಾರಿ ಮಾಡಿದ್ರು ಕೂಡ ಗುಂಡಿಗಳ ಸಮಸ್ಯೆಗೆ ಮಾತ್ರ ಇನ್ನೂ ಪರಿಹಾರ ಸಿಗ್ತಿಲ್ಲ. ದಿನನಿತ್ಯ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಗುಂಡಿ ಸಮಸ್ಯೆಗಳು ಸಾಮಾನ್ಯವಾಗಿಬಿಟ್ಟಿದೆ. ಇನ್ನು ಇಂತಹ ಸಮಸ್ಯೆಗಳನ್ನ ಪರಿಹರಿಸಲು ಬೆಂಗಳೂರಿನ ಟೆಕ್ ವೃತ್ತಿಪರರರು ವಿಸಿಪೋಲ್ ಎನ್ನುವ ಹೊಸ ಆ್ಯಪ್‌ವೊಂದನ್ನ ಅಭಿವೃದ್ಧಿಪಡಿಸಿದ್ದಾರೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಕೆ ಮಾಡಿಕೊಂಡು ಈ ಆ್ಯಪ್ ಅನ್ನು ಅಭಿವೃದ್ಧಿ ಪಡಿಸಲಾಗಿದೆ.
AI ಪ್ರಡಕ್ಟ್ ಲೀಡ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಭಾರತಿ ಅಥಿನಾರಾಯಣ್ ಅವರು ಮತ್ತು ಇತರರು ಸೇರಿ ಗುಂಡಿ ಸಂಬಂಧಿತ ಅಪಾಯಗಳನ್ನ ಎದುರಿಸಲು ಈ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.

ಜನರ ದಿನನಿತ್ಯದ ಪ್ರಯಾಣಕ್ಕೆ ಗುಂಡಿಗಳು ಸಾವಾಲಾಗಿ ಮಾರ್ಪಟ್ಟಿವೆ. ರಸ್ತೆಯಲ್ಲಿ ಸಂಚರಿರಸುವ ವೇಳೆ ಒಂದಿಷ್ಟು ಅಡಚಣೆಗಳ ಜೊತೆಗೆ ಈ ಗುಂಡಿಗಳು ಆರೋಗ್ಯದ ಮೇಲೂ ಕೂಡ ಪರಿಣಾಮವನ್ನ ಬೀರುತ್ತಿವೆ. ಏಕೆಂದ್ರೆ ರಸ್ತೆಗುಂಡಿಗಳಲ್ಲಿ ನೀರು ನಿಲ್ಲುತ್ತಿರುವುದರಿಂದ ಅದರ ಮೂಲಕ ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು, ಇದರಿಂದಾಗಿ ಜನರು ಡೆಂಘೀ, ಮಲೇರಿಯಾದಂತಹ ಕಾಯಿಲೆಗಳನ್ನ ಕೂಡ ಎದುರಿಸಬೇಕಾಗುತ್ತದೆ.
ಹೀಗಾಗಿ ಗುಂಡಿಗಳನ್ನು ಪತ್ತೆಹಚ್ಚಲು ಮತ್ತು ಮೇಲ್ವಿಚಾರಣೆ ಮಾಡಲು ಸಮರ್ಥ ಮಾರ್ಗವನ್ನು ಒದಗಿಸುವ ಮೂಲಕ ರಸ್ತೆ ಸುರಕ್ಷತೆಯನ್ನು ಸುಧಾರಿಸಲು VisiPol ಅಪ್ಲಿಕೇಶನ್ ಜನರಿಗೆ ಸಹಾಯ ಮಾಡಲಿದೆ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿಕೊಂಡು, VisiPol ಮೂಲಕ ಬಳಕೆದಾರರು ರಸ್ತೆಗಳ ಚಿತ್ರಗಳನ್ನು ಅಪ್‌ಲೋಡ್ ಮಾಡಲು ಅವಕಾಶವಿರುತ್ತದೆ. ಇದು ಗುಂಡಿಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಅಲ್ಲದೆ ಈ ಅಪ್ಲಿಕೇಶನ್ ಪ್ರತಿ ಗುಂಡಿಯ ಸ್ಥಳವನ್ನು ಸಹ ಟ್ರ್ಯಾಕ್ ಮಾಡುತ್ತದೆ. ನಗರ ಅಧಿಕಾರಿಗಳಿಗೆ ರಸ್ತೆಯ ದುರಸ್ತಿ ಕುರಿತು ನಿಖರವಾದ ನಕ್ಷೆಯನ್ನು ನೀಡಲು ಈ ಅಪ್ಲಿಕೇಶನ್ ಸಹಾಯ ಮಾಡುತ್ತದೆ. ಹಾಗೆ ಈ ಮಾಹಿತಿಯಿಂದ ಅಧಿಕಾರಿಳಿಗೆ ಬೇಕಾಗುವ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ನಿಯೋಜಿಸಲು ಅವರಿಗೆ ಸುಲಭಗೊಳಿಸುತ್ತದೆ, ಮೊದಲು ಅತ್ಯಂತ ಅಪಾಯಕಾರಿ ಗುಂಡಿಗಳ ದುರಸ್ತಿ ಕಾರ್ಯವನ್ನ ಈ ಮಾಹಿತಿಯಿಂದ ಮಾಡಬಹುದು ಎಂದು ಭಾರತಿ ಅಥಿನಾರಾಯಣ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನೋರ್ವ ವೃತ್ತಿಪರ ಪ್ರಶಾಂತ್ ಪಾರ್ಥಸಾರಥಿ ಕೂಡ ಈ ಅಪ್ಲಿಕೇಶನ್ ಬಗ್ಗೆ ಒಂದಿಷ್ಟು ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಅಸ್ತಿತ್ವದಲ್ಲಿರುವ ಬಿಬಿಎಂಪಿ ಪೊಟೋಲ್-ರಿಪೋರ್ಟಿಂಗ್ ಅಪ್ಲಿಕೇಶನ್‌ಗಳಿಗೆ ಹೋಲಿಸಿದರೆ, ವಿಸಿಪೋಲ್ ಹೆಚ್ಚು ವಿವರವಾದ ವಿಧಾನವನ್ನು ಜನರಿಗೆ ನೀಡುತ್ತದೆ.
ಈ ಆ್ಯಪ್ ಗುಂಡಿಗಳ ಸ್ಥಳವನ್ನು ಗುರುತಿಸುವುದಲ್ಲದೇ ಅವುಗಳ ತೀವ್ರತೆಯನ್ನು ಕೂಡ ಗುರುತಿಸುತ್ತದೆ. ಜೊತೆಗೆ ಆ ರಸ್ತೆ ಎಷ್ಟು ದುರಸ್ತಿ ಸಮಯವನ್ನು ತೆಗೆದುಕೊಳ್ಳಬಹುದು ಎಂದು ಅಂದಾಜು ಮಾಡುತ್ತದೆ.
ಇದು ಸರ್ಕಾರ ಸ್ಥಳೀಯ ರಸ್ತೆ ನಿರ್ವಹಣೆಯ ಪ್ರಯತ್ನಗಳನ್ನು ಉತ್ತಮವಾಗಿ ಯೋಜಿಸಲು ಸಹಾಯ ಮಾಡುತ್ತದೆ. ಬಳಕೆದಾರರು ರಸ್ತೆಗುಂಡಿಗಳ ಚಿತ್ರಗಳನ್ನು ಸುಲಭವಾಗಿ ಅಪ್‌ಲೋಡ್ ಮಾಡಬಹುದು. ನಂತರ ಈ ಅಪ್ಲಿಕೇಶನ್‌ನ AI ಮಾದರಿ ಆ ರಸ್ತೆಯ ತೀವ್ರತೆಯನ್ನ ಮತ್ತು ನಕ್ಷೆಯಲ್ಲಿ ಗುರುತಿಸಿದ ಪ್ರತಿ ಗುಂಡಿಯ ನಿಖರವಾದ ಸ್ಥಳವನ್ನು ಗುರುತಿಸುತ್ತದೆ.
ಹಾಗೆ ಈ ಅಪ್ಲಿಕೇಶನ್ ನಗರದಾದ್ಯಂತ ಇರುವ ಗುಂಡಿಗಳ ತೀವ್ರತೆಯನ್ನ ಅವಲೋಕನ ಮಾಡುತ್ತದೆ. ಹಾಗೆ ನಗರ ಅಧಿಕಾರಿಗಳು ಮತ್ತು ನಾಗರಿಕರು ಯವ ಸಮಸ್ಯೆಗಳಿಗೆ ಹೆಚ್ಚು ಒತ್ತು ನೀಡಬೇಕು ಜೊತೆಗೆ ಈ ರಸ್ತೆಗುಂಡಿಗಳು ಎಲ್ಲಿವೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಗರ ಅಧಿಕಾರಿಗಳಿಗೆ ಸಹಾಯ ಮಾಡುತ್ತದೆ.
ವಿಸಿಪೋಲ್ ಅಪ್ಲಿಕೇಶನ್ ರಸ್ತೆಗುಂಡಿಗಳ ತೀವ್ರತೆ ಮತ್ತು ಇದಕ್ಕೆ ಬೇಕಾಗುವ ಅಂದಾಜು ರಿಪೇರಿ ಸಮಯದ ಕುರಿತು ನಿಖರವಾದ ಮಾಹಿತಿಯನ್ನ ನೀಡುತ್ತದೆ.
ಇನ್ನು ಫುಲ್ ಸ್ಟಾಕ್ ಸ್ಪೆಷಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಸುನೀತಾ ಬಿ ಅವರು ಆ್ಯಪ್ ಬಗ್ಗೆ ಮತ್ತಷ್ಟು ವಿವರಿಸಿದರು. ಈ ಅಪ್ಲಿಕೇಶನ್ ಬಳಕೆದಾರ ಸ್ನೇಹಿ ಇಂಟರ್ಫೇಸ್ ಅನ್ನು ಹೊಂದಿದೆ, ಇದು ನಾಗರಿಕರಿಗೆ ತೀವ್ರತೆಯ ಮೂಲಕ ಗುಂಡಿಗಳನ್ನು ಫಿಲ್ಟರ್ ಮಾಡಲು ಸಹಾಯ ಮಾಡಿಕೊಡುತ್ತದೆ, ಅಲ್ಲದೆ ತಕ್ಷಣ ಅಗತ್ಯವಿರುವವರಿಗೆ ಆದ್ಯತೆ ನೀಡಲು ಸಹಾಯ ಮಾಡುತ್ತದೆ ಎಂದು ಸುನೀತಾ ಹೇಳಿದರು.
ಈ ಹಿಂದೆಯೆ ಈ ಕುರಿತು ಹಲವು ಟೆಕ್ಕಿಗಳು ಟ್ವೀಟ್ ಮೂಲಕ ಚರ್ಚೆಯನ್ನ ಮಾಡಿದ್ರು. ರಸ್ತೆಗುಂಡಿಗಳಿಂದ ಮುಕ್ತಿಗಾಗಿ ಆಗಲೇ ಒಂದಿಷ್ಟು ಕಾರ್ಯಗಳನ್ನ ಮಾಡುವ ಬಗ್ಗೆ ಎಕ್ಸ್ ಖಾತೆ ಮೂಲಕ ತಮ್ಮ ಅಭಿಪ್ರಾಯಗಳನ್ನ ಹಂಚಿಕೊಂಡಿದ್ರು.
ಅಲ್ಲದೆ ಈ ಪರಿಕಲ್ಪನೆಯು ಸಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪ್ರತಿಕ್ರಿಯೆಗಳನ್ನ ಗಳಿಸಿತು. ಆ ವೇಳೆ ಕೆಲವು ಬಳಕೆದಾರರು ಇರುವ ಅಪ್ಲಿಕೇಶನ್‌ಗೆ ಒಂದಿಷ್ಟು ಅಪ್‌ಡೇಟ್‌ಳನ್ನ ಮಾಡುವಂತೆ ಸೂಚನೆ ನೀಡಿದ್ರು. ರಸ್ತೆಗಳ ಗುಂಡಿಗಳ ಆಧಾರದ ಮೇಲೆ ರೇಟ್ ಮಾಡಬೇಕು ಮತ್ತು ಹೆಚ್ಚು ಮತ್ತು ಕೆಟ್ಟ ಹೊಂಡಗಳನ್ನು ಹೊಂದಿರುವ ರಸ್ತೆಗಳನ್ನು ಮೊದಲು ಪಟ್ಟಿ ಮಾಡಬೇಕು ಎಂದು ಮತ್ತೊಬ್ಬ ನೆಟ್ಟಿಗರು ಸಲಹೆ ನೀಡಿದ್ರು.
ಈ ನಿಟ್ಟಿನಲ್ಲಿ ಈ ಎಲ್ಲಾ ಸಲಹೆಗಳನ್ನ ಆಯ್ದು ಬೆಂಗಳೂರಿನ ಗುಂಡಿಗಳ ನಿರ್ವಹಣೆಗಾಗಿ ಅಪ್ಲಿಕೇಶನ್ ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಈ ಅಪ್ಲಿಕೇಶನ್‌ಗೆ ಈಗಾಗಲೇ ಸಾಕಷ್ಟು ಪ್ರತಿಕ್ರಿಯೆ ಬರುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಗಮನಾರ್ಹ ಚರ್ಚೆಗೆ ಕಾರಣವಾಗಿದೆ.


Click it and Unblock the Notifications