ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆಗಳು ಹೆಚ್ಚುತ್ತಲೆ ಇವೆ. ಎಲ್ಲಾ ಕ್ಷೇತ್ರಗಳಲ್ಲಿ ಡಿಜಿಟಲ್ ಸೇವೆಗಳು ಲಭ್ಯವಾದ ನಂತರ ಕೆಲವರು ತಮ್ಮ ಲಾಭಕ್ಕಾಗಿ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನ ದುರುಪಯೋಗಪಡಿಸಿಕೊಳ್ಳಲು ಶುರು ಮಾಡಿದ್ದಾರೆ. ಹಲವೆಡೆ ನಾವು ಸೈಬರ್ ವಂಚನೆ ಪ್ರಕರಣಗಳ ಬಗ್ಗೆ ಸಾಕಷ್ಟು ಕೇಳಿದ್ದೀವಿ. ಎಷ್ಟೋ ಅಮಾಯಕ ಜನರು ಈ ಸೈಬರ್ ವಂಚನೆಗೆ ಬಲಿಯಾಗಿ ತಮ್ಮ ಹಣವನ್ನ ಕಳೆದುಕೊಂಡಿದ್ದಾರೆ.
ಇದೇ ರೀತಿಯ ಒಂದು ಪ್ರಕರಣ ಬೆಂಗಳೂರಿನಲ್ಲೂ ನೆಡೆದಿದೆ. ಬೆಂಗಳೂರಿನ ಹಿರಿಯ ನಾಗರಿಕರೊಬ್ಬರು ಸೈಬರ್ ವಂಚನೆಗೆ ಬಲಿಯಾಗಿ 1.94 ಕೋಟಿ ರೂಪಾಯಿ ಹಣವನ್ನ ಕಳೆದುಕೊಂಡಿದ್ದಾರೆ. ವಾಟ್ಸಾಪ್ ವಿಡಿಯೋ ಕಾಲ್ ಮೂಲಕ ಪೊಲೀಸ್ ಅಧಿಕಾರಿಗಳಂತೆ ನಟಿಸಿ ವಂಚನೆ ಮಾಡಿ ಹಣವನ್ನ ದೋಚಿದ್ದಾರೆ.

ಡೆಕ್ಕನ್ ಹೆರಾಲ್ಡ್ ವರದಿಯ ಪ್ರಕಾರ, ನವೆಂಬರ್ 30 ರಂದು ಬೆಂಗಳೂರಿನ ಹಿರಿಯ ನಾಗರಿಕರೊಬ್ಬರಿಗೆ ಅಪರಿಚಿತ ವ್ಯಕ್ತಿ ವಾಟ್ಸಪ್ ವಿಡಿಯೋ ಕರೆಯನ್ನ ಮಾಡಿದ್ದಾರೆ. ಹೀಗೆ ಶುರುವಾಗಿದ್ದು, ನಂತರ ಕರೆ ಮಾಡಿದವರು ತಾವು ಮುಂಬೈ ಅಪರಾಧ ವಿಭಾಗದ ಅಧಿಕಾರಿ ಎಂದು ಹೇಳಿಕೊಂಡಿದ್ದಾರೆ. ಹಾಗೆ ವಿಡಿಯೋ ಕಾಲ್‌ನಲ್ಲಿ ಪೊಲೀಸ್ ಠಾಣೆಯನ್ನ ಹೋಲುವಂತೆ ಎಲ್ಲಾ ರೀತಿಯ ತಯಾರಿಗಳನ್ನಅವರು ಮಾಡಿಕೊಡಿದ್ದಾರೆ. ಹಾಗೆ ನೀವು ಭಾರತೀಯ ಉದ್ಯಮಿ ನರೇಶ್ ಗೋಯಲ್ ಒಳಗೊಂಡಿರುವ ಹೈ-ಪ್ರೊಫೈಲ್ ಮನಿ ಲಾಂಡರಿಂಗ್ ಪ್ರಕರಣದಲ್ಲಿ ನೀವು ಒಳಗೊಂಡರುವ ಆರೋಪ ಇದೆ ಎಂದು ವಂಚಕರು ಸಂತ್ರಸ್ತರಿಗೆ ಆರೋಪಿಸಿದ್ದಾರೆ.
ಕರೆ ಮಾಡಿದ ವಂಚಕರ ಧ್ವನಿ ಹಾಗು ಅವರ ಎಲ್ಲಾ ಮೋಸದ ತಯಾರಿಗಳನ್ನ ಕಂಡು ಸಂತ್ರಸ್ಥರು ಬಲಿಪಶು ಆಗಿದ್ದಾರೆ. ಇವರು ನಿಜವಾದ ಪೊಲೀಸರು, ಅಧಿಕಾರಿಗಳೇ ಕರೆ ಮಾಡಿರುವುದು ಎಂದು ತಿಳಿದು ಆರೋಪಗಳಿಗೆ ಹೆದರಿ ಮೋಸ ಹೋಗಿದ್ದಾರೆ.
ಇದರ ಮಧ್ಯೆ ಪರಸ್ಥಿತಿನ್ನು ಮತ್ತಷ್ಟು ತೀವ್ರಗೊಳಿಸಲು, ವಂಚಕರು ತಾವು ತನಿಖೆ ವೇಳೆ ವಶಪಡಿಸಿಕೊಂಡಿರುವ 247 ಎಟಿಎಂ ಕಾರ್ಡ್‌ಗಳಲ್ಲಿ ನಿಮ್ಮ ಕಾರ್ಡ್ ಕೂಡ ಇದೆ ಎಂದು ಸುಳ್ಳು ಹೇಳಿದ್ದಾರೆ. ಹಗೆ ನೀವು ನರೇಶ್ ಗೋಯಲ್ ಅವರಿಂದ ಕಮಿಷನ್ ಪಡೆದಿದ್ದೀರಾ ಎಂದು ಆರೋಪಿಸಿದ್ದಾರೆ. ಹಾಗೆ ಆಪಾದಿತ ಅಪರಾಧಕ್ಕೆ ನೀವು ನೇರಾಗಿ ಸಂಬಂಧಿಸಿದ್ದೀರ ಎಂದು ಸುಳ್ಳು ಹೇಳೀದ್ದಾರೆ. ಜೊತೆಗೆ ಇದು ಡಿಜಿಟಲ್ ಬಂಧನ ಪ್ರಕರಣಕ್ಕೆ ಸೇರಿದೆ. ಹೀಗಾಗಿ ನೀವು ಇದರ ಬಗ್ಗೆ ಯಾರ ಬಳಿಯೂ ಹೇಳಬಾರದು, ಹಾಗೆಮನೆಯಲ್ಲೇ ಇರಬೇಕು ಎಂದು ಸಂತ್ರಸ್ತರಿಗೆ ಹೇಳಿದ್ದಾರೆ.
ಈ ನಕಲಿ ತನಿಖೆ ನೆಪದಲ್ಲಿ ವಂಚಕರು ಸಂತ್ರಸ್ತರ ಬ್ಯಾಂಕ್ ವಿವರಗಳನ್ನ ನೀಡುವಂತೆ ಹೇಳಿದ್ದಾರೆ. ಏಳು ದಿನಗಳಲ್ಲಿ 1.94 ಕೋಟಿ ರೂಪಾಯಿಗಳನ್ನು ಬಹು ಕಂತುಗಳಲ್ಲಿ ವರ್ಗಾಯಿಸುವಂತೆ ಒತ್ತಾಯಿಸಿದ್ದಾರೆ. ಹಾಗೆ ಯಾರ ಬಳಿಯೂ ಹೇಳದಂತೆ ಮೌನವಾಗಿರುವಂತೆ ಹೆದರಿಸಿದ್ದಾರೆ.
ಈ ಎಲ್ಲಾ ಘಟನೆಗಳು ನಡದ ನಂತರ ಮೋಸ ಹೋಗಿರುವುದು ಅರಿವಾಗಿ ಸಂತ್ರಸ್ತರು ತಮ್ಮ ಮಗಳ ಬಳಿ ಎ್ಲಾ ವಿಚಾರವನ್ನ ಹೇಳಿದ್ದಾರೆ. ಕೂಡಲೇ ಅವರ ಮಗಳು ಪೊಲೀಸರ ಬಳಿ ಕರೆದೊಯ್ದು ದೂರು ದಾಖಲಿಸಿದ್ದಾರೆ.ಆಗ್ನೇಯ ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದೊಂದೆ ಪ್ರಕರಣವಲ್ಲ ಇತ್ತೀಚೆಗೆ ಡಿಜಿಟಲ್ ಬಂಧನ ತಂತ್ರವನ್ನ ಇಟ್ಟುಕೊಂಡು ಜನರನ್ನ ಮೋಸ ಮಾಡುತ್ತಿದ್ದಾರೆ. ಹೀಗಾಗಿ ಇಂತಹ ಪ್ರಕರಣಗಳಿಂದ ನಮ್ಮನ್ನ ನವು ರಕ್ಷಿಸಿಕೊಳ್ಳಲು ನಾವು ಸಾಕಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ.
ಇಂತಹ ವಂಚನೆಗಳಿಂದ ಸುರಕ್ಷಿತವಾಗಿರುವುದು ಹೇಗೆ?
ಇಂತಹ ವಂಚನೆಗಳನ್ನು ತಪ್ಪಿಸಲು ಜಾಗರೂಕತೆ ಮುಖ್ಯವಾಗಿದೆ. ಹಾಗೆ ಪೊಲೀಸ್ ಅಧಿಕಾರಿಗಳು ಎಂದಿಗೂ ಆನ್‌ಲೈನ್‌ನಲ್ಲಿ ಪ್ರಕರಣಗಳ ಬಗ್ಗೆ ತನಖೆ ಮಡುವುದಿಲ್ಲ ಹಾಗೆ ಹಣವನ್ನು ಕೇಳುವುದಿಲ್ಲ.
ಬಹಳ ಮುಖ್ಯವಾಗಿ, "ಡಿಜಿಟಲ್ ಬಂಧನ" ಎಂಬ ಪದವು ವಂಚಕರಿಂದ ಬಂದರೆ ಅದು ಭಾರತೀಯ ಕಾನೂನಿನಲ್ಲಿ ಅಸ್ತಿತ್ವದಲ್ಲಿಲ್ಲ. ಯಾರಾದರೂ ನಿಮಗೆ ಬೆದರಿಕೆ ಹಾಕಿದರೆ, ಅದು ಸೈರ್ ವಂಚನೆ ಎಂದು ಪರಿಗಣಿಸಿ ದೂರು ದಾಖಲಸಿ.
ಹಾಗೆ ಯಾರೆ ಕರ ಮಾಡಿದರೂ ಕೂಡ ಅವರಿಗೆ ನಿಮ್ಮ ಬ್ಯಾಂಕ್ ವಿವರಗಳನ್ನ ನೀಡಬೇಡಿ. ಹಾಗೆ ಯಾವುದೇ OTP ಅಥವಾ ಇತರೆ ಮಾಹಿತಿಗಳನ್ನ ಯಾರ ಬಳಿ ಕೂಡ ಹಂಚಿಕೊಳ್ಳಬೇಡಿ. ನಿಮಗೆ ಇಂತಹ ಹಗರಣಗಳ ಕುರಿತು ಅನುಮಾನ ಉಂಟಾದರೆ ತಕ್ಷಣವೇ ಅಧಿಕಾರಿಗಳು ಮತ್ತು ನಿಮ್ಮ ಬ್ಯಾಂಕ್‌ಗೆ ವರದಿ ಮಾಡಿ. ಇದರಿಂದ ನೀವು ಹೆಚ್ಚಿನ ನಷ್ಟವನ್ನು ತಡೆಯಬುದು.
ಸೈಬರ್ ಅಪರಾಧಗಳಿಂದ ಸುರಕ್ಷಿತವಾಗಿರಲು, ಆನ್‌ಲೈನ್‌ನಲ್ಲಿ ಜಾಗರೂಕರಾಗಿರಬೇಕು. ನಿಮ್ಮ ಪ್ರತಿಯೊಂದು ಖಾತೆಗೆ ಬಲವಾದ ಪಾಸ್‌ವರ್ಡ್‌ಗಳನ್ನು ಬಳಸಿ. ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವಾಗ ಜಾಗರೂಕರಾಗಿರಿ ಮತ್ತು ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡುವುದನ್ನು ಅಥವಾ ಗೊತ್ತಿಲ್ಲದ ಡಾಕ್ಯುಮೆಂಟ್‌ಗಳನ್ನ ಡೌನ್‌ಲೋಡ್ ಮಾಡುವುದನ್ನು ತಪ್ಪಿಸಿ. ಏಕೆಂದರೆ ಅವುಗಳು ಮಾಲ್‌ವೇರ್ ಅಥವಾ ಫಿಶಿಂಗ್ ಪ್ರಯತ್ನಗಳನ್ನು ಹೊಂದಿರಬಹುದು.
ದುರ್ಬಲತೆಗಳಿಂದ ರಕ್ಷಿಸಲು ನಿಮ್ಮ ಸಾಫ್ಟ್‌ವೇರ್, ಆಂಟಿವೈರಸ್ ಮತ್ತು ಆಪರೇಟಿಂಗ್ ಸಿಸ್ಟಮ್‌ಗಳನ್ನು ನಿಯಮಿತವಾಗಿ ನವೀಕರಿಸಿ. ಹೆಚ್ಚುವರಿಯಾಗಿ, ಸಾಮಾಜಿಕ ಮಾಧ್ಯಮದಲ್ಲಿ ಅತಿಯಾಗಿ ಹಂಚಿಕೊಳ್ಳುವುದರಿಂದ ದೂರವಿರಿ, ಏಕೆಂದರೆ ಸೈಬರ್ ಅಪರಾಧಿಗಳು ಅಂತಹ ಮಾಹಿತಿಯನ್ನು ಗುರುತಿನ ಕಳ್ಳತನ ಅಥವಾ ಸಾಮಾಜಿಕ ಎಂಜಿನಿಯರಿಂಗ್ ದಾಳಿಗಳಿಗೆ ಬಳಸುತ್ತಾರೆ. ಕೊನೆಯದಾಗಿ, ಎಚ್ಚರಿಕೆ ಚಿಹ್ನೆಗಳನ್ನು ಮೊದಲೇ ಗುರುತಿಸಲು ಮತ್ತು ಅಗತ್ಯವಿದ್ದರೆ ತ್ವರಿತ ಕ್ರಮ ತೆಗೆದುಕೊಳ್ಳಲು ಇತ್ತೀಚಿನ ಸೈಬರ್ ಬೆದರಿಕೆಗಳು ಮತ್ತು ಹಗರಣಗಳ ಬಗ್ಗೆ ಮಾಹಿತಿ ನೀಡಿ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Bengaluru: ಬೆಂಗಳೂರಿಗೆ 5,000 ರೂ. ಕೋಟಿ ಪ್ರವಾಹ ಯೋಜನೆ, 41 ಕಿ.ಮೀ ಮೆಟ್ರೋ, 450 ಕಿ.ಮೀ ರಸ್ತೆ ಅಭಿವೃದ್ಧಿ!

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?

Bengaluru Airport: ಬೆಂಗಳೂರು ಏರ್ಪೋರ್ಟ್ಗೆ 2025ರ ACI ಪ್ರಶಸ್ತಿ... ಪ್ರಯಾಣಿಕರ ಹೃದಯ ಗೆದ್ದ ವಿಮಾನ ನಿಲ್ದಾಣ!

Rapido Ownly: ರ್ಯಾಪಿಡೋದಿಂದ ಹೊಸ ಫುಡ್ ಡೆಲಿವರಿ ಆಪ್ ಲಾಂಚ್! ಏನಿದರ ವಿಶೇಷತೆ?

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?



Click it and Unblock the Notifications