ಬೆಂಗಳೂರು, ಮಾರ್ಚ್ 13: ವಿದ್ಯುಚ್ಛಕ್ತಿಯ ಅವಿಷ್ಕಾರವು ಹಲವು ದಶಕಗಳಿಂದ ನಮ್ಮೆಲ್ಲರ ಜೀವನ ವಿಧಾನವನ್ನು ಪರಿವರ್ತಿಸಿದೆ. ಆದರೆ ಕಾಲಕಳೆದಂತೆ ವಿದ್ಯುತ್ ನ ಕೊರತೆಯ ಮತ್ತೊಂದು ಆವಿಷ್ಕಾರವನ್ನು ಹುಟ್ಟುಹಾಕಿದೆ.
ವಿದ್ಯುತ್ ನ ಕೊರತೆಯ ಸಂದರ್ಭದಲ್ಲಿ ಗೇಮ್ ಚೇಂಜರ್ ನಂತೆ ಕಂಡುಬಂದಿರುವ "ಪವರ್ ಬ್ಯಾಕಪ್" ಇಂದು ಸಾಮಾನ್ಯದಂತೆ ಕಂಡುಬಂದರೂ, "ಒಂದು ಆಲೋಚನೆಯು ಇಡೀ ಜೀವನವನ್ನು ಬದಲಾಯಿಸಬಹುದು" ಎಂಬಂತೆ ಕುನ್ವರ್ ಸಚ್‌ದೇವ್ ಇದೇ ಆಲೋಚನೆಯ ಮೂಲಕ ಬಡತನದಿಂದ ಸಿರಿತನಕ್ಕೆ ಕಾಲಿಟ್ಟರು. ಕುನ್ವರ್ ಸಚ್‌ದೇವ್ ಅವರು ಭಾರತದಲ್ಲಿ " ಪವರ್ ಬ್ಯಾಕಪ್ ಕ್ಷೇತ್ರ"ದಲ್ಲಿ ಕ್ರಾಂತಿಯನ್ನು ಮಾಡುವ ಮೂಲಕ ಇತಿಹಾಸದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವಲ್ಲಿ ಯಶಸ್ವಿಯಾದವರು.

ರೈಲ್ವೆ ಕ್ಲರ್ಕ್ ಆಗಿದ್ದ ಕುಟುಂಬದಲ್ಲಿ ಬೆಳೆದ ಕುನ್ವರ್ ಸಚ್‌ದೇವ್, ಇಂದು ಭಾರತದ ಪವರ್ ಬ್ಯಾಕಪ್ ಉದ್ಯಮದಲ್ಲಿ ಕಾಂತ್ರಿಯನ್ನು ಮಾಡಿದ್ದಾರೆ. ಕುನ್ವರ್ ಅವರಿಗೆ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಸಾಧ್ಯವಾಗದೆ ಮತ್ತು ವೈದ್ಯನಾಗುವ ಕನಸನ್ನು ತ್ಯಜಿಸಬೇಕಾಗಿದ್ದರಿಂದ ಮನೆ-ಮನೆಗೆ ಪೆನ್ನುಗಳನ್ನು ಮಾರಾಟ ಮಾಡುವ ಮೂಲಕ ತಮ್ಮ ಶಿಕ್ಷಣ ಮುಂದುವರಿಸಲು ಹಣವನ್ನು ಒಟ್ಟುಗೂಡಿಸಿದರು. ಸಣ್ಣ ಆದಾಯಕ್ಕಾಗಿ ಅವರು ಮನೆ-ಮನೆಗೆ ಪೆನ್ನುಗಳನ್ನು ಮಾರಾಟ ಮಾಡುತ್ತಿದ್ದರು.
ಚಿಕ್ಕ ವಯಸ್ಸಿನಿಂದಲೂ ಸಚ್‌ದೇವ್ ದೂರದೃಷ್ಟಿ ಹೊಂದಿದ್ದರಿಂದ ಪವರ್ ಬ್ಯಾಕಪ್ ಕ್ಷೇತ್ರದಲ್ಲಿನ ಸಾಮರ್ಥ್ಯವನ್ನು ಅವರು ಗುರುತಿಸಿದರು. ತೀವ್ರ ವಿದ್ಯುತ್ ಕೊರತೆಯ ಸವಾಲುಗಳಿಂದಾಗಿ, ಇದೇ ವೇಳೇ ಅವರು ತಾವು ಆರಂಭಿಸಿದ ಕೇಬಲ್ ಟಿವಿ ವ್ಯಾಪಾರವನ್ನು ಮುಚ್ಚುವ ನಿರ್ಧಾರವನ್ನು ಮಾಡಿ ,1998 ರಲ್ಲಿ ಸು-ಕಾಮ್ ಇನ್ವರ್ಟರ್ ಅನ್ನು ಪ್ರಾರಂಭಿಸಿದರು.
ಉದ್ಯಮ ಆರಂಭಿಸಿ ಬಂಡವಾಳ ಹೂಡಲು ಹಣಕ್ಕಾಗಿ ಬಹಳ ಕಷ್ಟಪಟ್ಟಿದ್ದರು. ಜೊತೆಗೆ ತಾಂತ್ರಿಕ ಸಮಸ್ಯೆಗಳ ಕಾರಣದಿಂದಾಗಿ ಗ್ರಾಹಕರು ಅವರ ಮೊದಲ 100 ಇನ್ವರ್ಟರ್‌ಗಳನ್ನು ಹಿಂದಿರುಗಿಸಿದಾಗ ಅವರ ಉದ್ಯಮದಲ್ಲಿ ಬಹುದೊಡ್ಡ ನಷ್ಟವಾಗಿತ್ತು. ಆದರೆ ಎದೆಗುಂದದೆ ಅವರು ತಮ್ಮ ಆವಿಷ್ಕಾರವನ್ನು ಸುಧಾರಿಸಿಕೊಂಡು ಮಾರುಕಟ್ಟೆಯಲ್ಲಿ ಎಲ್ಲಕ್ಕಿಂತ ಉತ್ತಮವಾಗಿ ಮಾಡಲು ಪವರ್ ಬ್ಯಾಕಪ್ ನಲ್ಲಿಎಲ್ಲಾ ನ್ಯೂನತೆಗಳನ್ನು ಸರಿಪಡಿಸಿದರು.
ಜನರಿಗೆ ನೇರವಾಗಿ ಮಾರಾಟ ಮಾಡುವುದರಿಂದ ವ್ಯಾಪಾರ ವೃದ್ಧಿಯಾಗುವುದಿಲ್ಲ ಎಂದು ಅರಿತು ಡೀಲರ್‌ಗಳು ಮತ್ತು ಸಗಟು ವ್ಯಾಪಾರಿಗಳನ್ನು ಸಂಪರ್ಕಿಸಲು ಪ್ರಾರಂಭಿಸಿದರು. ಆ ಸಮಯದಲ್ಲಿ ಮಾರುಕಟ್ಟೆಯುಲ್ಲಿ ಬಹುದೊಡ್ದ ಕಂಪನಿಗಳೂ ಲಗ್ಗೆ ಇಟ್ಟಿದ್ದರೂ, ಉತ್ಪನ್ನದ ಗುಣಮಟ್ಟ ಮತ್ತು ಬೆಲೆಯ ವಿಷಯದಲ್ಲಿ ಸು-ಕಾಮ್ ಸಾಟಿಯಿಲ್ಲ ಎಂದು ಜನರಿಗೆ ಬಹುಬೇಗ ಅರ್ಥವಾಯಿತು. ಇದರೊಂದಿಗೆ ಸೌರ ವಿದ್ಯುತ್ ಆಧಾರಿತ ಉತ್ಪನ್ನ ತಯಾರಿಕೆಯ ಮೇಲೆ ಸಂಪೂರ್ಣವಾಗಿ ಗಮನಹರಿಸಿದರು.
ಶೀಘ್ರದಲ್ಲೇ, ಸು-ಕಾಮ್ ತನ್ನ ಉತ್ಪನ್ನಗಳನ್ನು ರಫ್ತು ಮಾಡಲು ಪ್ರಾರಂಭಿಸುವ ಮೂಲಕತಮ್ಮ ಉದ್ಯಮದಲ್ಲಿ ಮೊದಲ ಕಂಪನಿಯಾಯಿತು. ಕುನ್ವರ್ ಈ ಸಮಯದಲ್ಲಿ ಇತರ ರಾಷ್ಟ್ರಗಳಿಗೆ ಭೇಟಿ ನೀಡುವ ಮೂಲಕ ತನ್ನ ವ್ಯಾಪಾರವನ್ನು ವಿಸ್ತರಿಸಲು ಆರಂಭಿಸಿದರು. ಕುನ್ವರ್ ಅವರು ಸರ್ಕಾರದ ನಿರ್ಬಂಧಗಳು, ಕಾರ್ಪೊರೇಟ್ ಸಂಪ್ರದಾಯಗಳು, ಕಾನೂನು ಚೌಕಟ್ಟುಗಳು ಮತ್ತು ಪೈಪೋಟಿಗಳಿಂದ ತಂದ ಹೊಸ ಅಡೆತಡೆಗಳನ್ನು ಮೀರಿ ವಿದೇಶಗಳಲ್ಲೂ ಸು-ಕಾಮ್ ಅಲ್ಲೂ ಚಿರಪರಿಚಿತರಾಗಿಸಿದರು. . ಅವರ ಸಾಧನೆಗಳಿಗಾಗಿ, ಕುನ್ವರ್ ಸಚ್‌ದೇವ್ ಅವರಿಗೆ "ಭಾರತ್ ಶಿರೋಮಣಿ" ಮತ್ತು Ernst and Young "Entrepreneur of the Year" "ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ನೀಡಲಾಗಿದೆ.
ಕುನ್ವರ್ ಸಚ್‌ದೇವ್ ಅವರ ಕಂಪನಿಯು ದೇಶೀಯವಾಗಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಬೇಡಿಕೆಯಿರುವ ಸೌರ ಉತ್ಪನ್ನಗಳನ್ನು ಉತ್ಪಾದಿಸುತ್ತದೆ. ವರದಿಗಳ ಪ್ರಕಾರ, ಕುನ್ವರ್ ಸಚ್‌ದೇವ್ 2300 ಕೋಟಿ ಮೌಲ್ಯದ ಕಂಪನಿಗಳನ್ನು ಹೊಂದಿದ್ದಾರೆ.


Click it and Unblock the Notifications