ಪ್ರತಿಷ್ಠಿತ ಬಿಲ್ಡರ್ ಸಂಸ್ಥೆಯಾದ ಬಿರ್ಲಾ ಎಸ್ಟೇಟ್ಸ್ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತನ್ನ ಯೋಜನೆಯ ಮೊದಲ ಹಂತದಲ್ಲಿ ಸುಮಾರು 600 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಮಾರಾಟ ಮಾಡಿದೆ ಎಂದು ವರದಿಯಾಗಿದೆ.
ಬಿರ್ಲಾ ಎಸ್ಟೇಟ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಅಕ್ಟೋಬರ್ 1ರಂದು (ನಿನ್ನೆ) ಘೋಷಿಸಿರುವಂತೆ, ತನ್ನ ಬೆಂಗಳೂರಿನ ಯೋಜನೆಯಾದ ಬಿರ್ಲಾ ತ್ರಿಮಯ ಎರಡನೇ ಹಂತ-ದಿ ಪಾರ್ಕ್‌ನಲ್ಲಿ ತನ್ನ ಆಸ್ತಿ ಮಾರಾಟ ಮಾಡಿದ್ದು, ಇದರ ಬುಕಿಂಗ್ ಮೌಲ್ಯ ಸುಮಾರು 600 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಒಟ್ಟಾರೆ ಬಿರ್ಲಾ ಎಸ್ಟೇಟ್ಸ್ ಬೆಂಗಳೂರು ಯೋಜನೆಯ ಶೇ.95ರಷ್ಟು ಭಾಗವನ್ನು 24 ಗಂಟೆಗಳಲ್ಲಿ 600 ಕೋಟಿ ರೂಪಾಯಿ ಬುಕಿಂಗ್ ಮೌಲ್ಯದಲ್ಲಿ ಮಾರಾಟ ಮಾಡಿದೆ ಎನ್ನಲಾಗಿದೆ.

ಒಟ್ಟಾರೆಯಾಗಿ, ಇಲ್ಲಿಯವರೆಗೆ ಸಾಧಿಸಿರುವ ಬುಕಿಂಗ್ ಮೌಲ್ಯವು ಸರಿಸುಮಾರು 1,100 ಕೋಟಿ ರೂ. ಎನ್ನಲಾಗಿದೆ. ಈ ಯೋಜನೆಯು ಸುಮಾರು 3,000 ಕೋಟಿಗಳಷ್ಟು ಒಟ್ಟು ಆದಾಯದ ಸಾಮರ್ಥ್ಯವನ್ನು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ರಿಯಲ್ ಎಸ್ಟೇಟ್‌ನಲ್ಲಿ ದಾಪುಗಾಲಿಡುತ್ತಿರುವ ಬೆಂಗಳೂರು ಉತ್ತರ ಭಾಗದ ದೇವನಹಳ್ಳಿಯ ಶೆಟ್ಟಿಗೆರೆ ರಸ್ತೆಯಲ್ಲಿ ಬಿರ್ಲಾ ಎಸ್ಟೇಟ್ಸ್ ಈ ಯೋಜನೆ ವಿಸ್ತರಿಸಿದೆ. ಈ ಯೋಜನೆಯು ಅಪಾರ್ಟ್‌ಮೆಂಟ್‌ಗಳು, ಮನೆಗಳು ಮತ್ತು ಡ್ಯುಪ್ಲೆಕ್ಸ್ ಮನೆಗಳನ್ನು ಒಳಗೊಂಡಿರುವ 52 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ ಎಂದು ಹೇಳಿದೆ.

ಈ ಬಗ್ಗೆ ಮಾತನಾಡಿರುವ ಬಿರ್ಲಾ ಎಸ್ಟೇಟ್ಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿಇಒ ಕೆ.ಟಿ.ಜಿತೇಂದ್ರನ್, ವಿನ್ಯಾಸಗಳಲ್ಲಿನ ವ್ಯತ್ಯಾಸ ಹಾಗೂ ಮಾರುಕಟ್ಟೆಯ ಆಳವಾದ ತಿಳುವಳಿಕೆಯ ಮೇಲೆ ನಮ್ಮ ಗಮನ ಹೆಚ್ಚಾಗಿತ್ತು. ಇದರಿಂದ ನಾವು ಹೊಸ ಮೈಲಿಗಲ್ಲನ್ನು ಸಾಧಿಸಿದ್ದೇವೆ. ನಮ್ಮ ಈ ಬೆಳವಣಿಗೆಯ ಯೋಜನೆಗಳಲ್ಲಿ ಬೆಂಗಳೂರು ಪ್ರಮುಖ ಕೇಂದ್ರೀಕೃತ ಮಾರುಕಟ್ಟೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಮುಂಬೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಬಿರ್ಲಾ ಎಸ್ಟೇಟ್ಸ್ ಪ್ರೈವೇಟ್ ಲಿಮಿಟೆಡ್, ಆದಿತ್ಯ ಬಿರ್ಲಾ ರಿಯಲ್ ಎಸ್ಟೇಟ್ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದ್ದು, ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರೀಮಿಯಂ ವಸತಿ ವಸತಿಗಳನ್ನು ಅಭಿವೃದ್ಧಿಪಡಿಸುವುದರ ಮೇಲೆ ಕೇಂದ್ರೀಕರಿಸಿದೆ.
ಕಂಪನಿಯು ಒಟ್ಟು ಅಭಿವೃದ್ಧಿ ಮೌಲ್ಯದಲ್ಲಿ 45,000 ಕೋಟಿ ರೂ. ಮೌಲ್ಯದ ಯೋಜನೆಯನ್ನು ಹೊಂದಿದೆ ಎಂದು ಜಿತೇಂದ್ರನ್ 2023ರ ನವೆಂಬರ್‌ನಲ್ಲೇ ಹೇಳಿದ್ದರು.
ಕಂಪನಿಯು ಎನ್‌ಸಿಆರ್ ಪ್ರದೇಶ, ಬೆಂಗಳೂರು ಮತ್ತು ಪುಣೆಯಲ್ಲಿ ಪ್ರಾದೇಶಿಕ ಕಚೇರಿಗಳನ್ನು ಹೊಂದಿದೆ. ಇದರ ವಾಣಿಜ್ಯ ಬಂಡವಾಳವು ಮುಂಬೈನ ವರ್ಲಿಯಲ್ಲಿ ನೆಲೆಗೊಂಡಿರುವ ಎರಡು ಗ್ರೇಡ್-ಎ ವಾಣಿಜ್ಯ ಕಟ್ಟಡಗಳನ್ನು, ಸುಮಾರು 6 ಲಕ್ಷ ಚದರ ಅಡಿ ಗುತ್ತಿಗೆ ಪ್ರದೇಶವನ್ನು ಒಳಗೊಂಡಿದೆ.
ಈ ಹಿಂದೆ ಬಿರ್ಲಾ ಎಸ್ಟೇಟ್‌ನ ಅಂಗಸಂಸ್ಥೆಯು ಹಿಂಡಾಲ್ಕೊ ಇಂಡಸ್ಟ್ರೀಸ್‌ನ ಕಲ್ವಾ ಕಾರ್ಖಾನೆಯನ್ನು 24.5 ಎಕರೆ ಪ್ರದೇಶದಲ್ಲಿ 537.42 ಕೋಟಿ ರೂಪಾಯಿಗೆ ಖರೀದಿಸಿತ್ತು. 2023ರ ಜುಲೈನಲ್ಲಿ ಹಿಂಡಾಲ್ಕೊ ಇಂಡಸ್ಟ್ರೀಸ್ ತನ್ನ ನಿರ್ದೇಶಕರ ಮಂಡಳಿಯು ಬಿರ್ಲಾ ಎಸ್ಟೇಟ್‌ನ ಅಂಗವಾದ ಏಕಮಯ ಪ್ರಾಪರ್ಟೀಸ್‌ಗೆ ಭೂಮಿ ಮಾರಾಟಕ್ಕೆ ಅನುಮತಿ ನೀಡಿದೆ ಎಂದು ಘೋಷಿಸಿತ್ತು.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ



Click it and Unblock the Notifications