ನವದೆಹಲಿ, ಏಪ್ರಿಲ್ 1: ಅಧಿಕ ವೇತನದ ಉದ್ಯೋಗ ಪಡೆಯುವುದು ಎಲ್ಲರಿಂದಲೂ ಆಗುವುದಿಲ್ಲ. ಆದರೆ ಐಐಎಂ, ಐಐಟಿಗಳಿಂದ ಪದವಿ ಪಡೆದ ಜನರು ಸಾಮಾನ್ಯವಾಗಿ ಉತ್ತಮ ಸಂಬಳದ ನೌಕರಿಗಳನ್ನು ಪಡೆಯುತ್ತಾರೆ. ಆದರೆ ಇಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಓದದಿದ್ದರೂ ಕೆಲವರು ಕೋಟಿಗಟ್ಟಲೆ ವೇತನದ ಉದ್ಯೋಗಾವಕಾಶಗಳನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ.
ಅಂತಹ ವ್ಯಕ್ತಿಗಳಲ್ಲಿ ಒಬ್ಬರು ಟ್ಯಾಲೆಂಟ್ ಡಿಕ್ರಿಪ್ಟ್‌ನ ಸಂಸ್ಥಾಪಕಿ ಮತ್ತು ಸಿಇಒ ಅರುಷಿ ಅಗರ್ವಾಲ್. ಅವರು ತನ್ನ ಸ್ವಂತ ಸಂಸ್ಥೆಯನ್ನು ಪ್ರಾರಂಭಿಸಲು 1 ಕೋಟಿ ರೂಪಾಯಿ ಆಫರ್‌ನ ಉದ್ಯೋಗವನ್ನು ತಿರಸ್ಕರಿಸಿದವರು.

2020 ರಲ್ಲಿ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಅರುಷಿ ಅವರು ಕೇವಲ 1 ಲಕ್ಷ ರೂಪಾಯಿಯೊಂದಿಗೆ ತನ್ನ ಉದ್ಯಮ ಪ್ರಯಾಣವನ್ನು ಪ್ರಾರಂಭಿಸಿದರು. ಅರುಷಿ ಅಗರ್ವಾಲ್ ಅವರು ಜೇಪೀ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫರ್ಮೇಷನ್ ಟೆಕ್ನಾಲಜಿಯಿಂದ ಬಿಟೆಕ್ ಹಾಗೂ ಎಂಟೆಕ್ ಪದವಿ ಪಡೆದಿದ್ದಾರೆ. ಅವರು ಕಾಲೇಜಿನಲ್ಲಿ ಓದುತ್ತಲೇ ಐಐಟಿ ದೆಹಲಿಯಿಂದ 3 ತಿಂಗಳ ಇಂಟರ್ನ್‌ಶಿಪ್ ಕೂಡ ಮಾಡಿದರು.
2021 ರಲ್ಲಿ ಅವರು ಐಐಎಂ ಬೆಂಗಳೂರಿನಿಂದ ತಮ್ಮ ಕಾರ್ಯನಿರ್ವಾಹಕ ಕಾರ್ಯಕ್ರಮವನ್ನು ಪೂರ್ಣಗೊಳಿಸಿದರು. ಕ್ಯಾಂಪಸ್ ಪ್ಲೇಸ್‌ಮೆಂಟ್ ಪಡೆಯದವರಿಗೆ ಸಹಾಯ ಮಾಡಲು ಅವಳು ಸಾಫ್ಟ್‌ವೇರ್ ಅನ್ನು ಅಭಿವೃದ್ಧಿಪಡಿಸಿ ತನ್ನದೇ ಆದ ಟ್ಯಾಲೆಂಟ್ ಡೀಕ್ರಿಪ್ಟ್ ಅನ್ನು ಪ್ರಾರಂಭಿಸಿದರು. ವರದಿ ಪ್ರಕಾರ ಆಕೆಯ ಸಂಸ್ಥೆಯು 50 ಕೋಟಿ ರೂ. ಮೌಲ್ಯದ್ದಾಗಿದೆ ಎಂದು ತಿಳಿದು ಬಂದಿದೆ.
ಟ್ಯಾಲೆಂಟ್ ಡೀಕ್ರಿಪ್ಟ್ ಅಡಿಯಲ್ಲಿ ಉದ್ಯೋಗಾಕಾಂಕ್ಷಿಗಳು ಹ್ಯಾಕಥಾನ್ ಮೂಲಕ ವರ್ಚುವಲ್ ಸ್ಕಿಲ್ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಾರೆ. ಇದರ ನಂತರ ಅವರು ನೇರವಾಗಿ ಉದ್ಯೋಗಕ್ಕಾಗಿ ಸಂದರ್ಶನಗಳಲ್ಲಿ ಪಾಲ್ಗೊಳ್ಳಬಹುದು. ಸಂಸ್ಥೆಯು ಈಗ ವಿಶ್ವದಾದ್ಯಂತ 10 ಲಕ್ಷ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸಿದೆ.
ಅರುಷಿ ಅಗರ್ವಾಲ್ ಸದ್ಯ ಘಾಜಿಯಾಬಾದ್‌ನ ನೆಹರು ನಗರದಲ್ಲಿ ನೆಲೆಸಿದ್ದಾರೆ. ಮೂಲತಃ ಅವರು ಮೊರಾದಾಬಾದ್‌ಗೆ ಸೇರಿದವರು. ಅರುಷಿ 28 ವರ್ಷ ವಯಸ್ಸಿನ ಯುವ ಉದ್ಯಮಿಯಾಗಿದ್ದು, ತನ್ನ ಅಜ್ಜನನ್ನು ತನ್ನ ಆರಾಧ್ಯ ದೈವವೆಂದು ಪರಿಗಣಿಸಿದ್ದಾರೆ. ಅರುಷಿ ತಂದೆ ಅಜಯ್ ಗುಪ್ತಾ ಉದ್ಯಮಿ ಮತ್ತು ತಾಯಿ ಗೃಹಿಣಿ.


Click it and Unblock the Notifications