ಮಾರ್ಚ್ ತಿಂಗಳಿನಲ್ಲಿ ಆಧಾರ್ ದೃಢೀಕರಣ ವಹಿವಾಟು 2.31 ಬಿಲಿಯನ್‌ಗೆ ಏರಿಕೆಯಾಗಿದೆ. ಫೆಬ್ರವರಿಯಲ್ಲಿ ಆಧಾರ್ ದೃಢೀಕರಣ ವಹಿವಾಟು 2.26 ಬಿಲಿಯನ್ ಆಗಿತ್ತು. ಆದರೆ ಮಾರ್ಚ್‌ನಲ್ಲಿ ಹೆಚ್ಚಳವಾಗಿದೆ ಎಂದು ಐಟಿ ಸಚಿವಾಲಯದ ಡೇಟಾ ತಿಳಿಸಿದೆ. ಇನ್ನು ಆಧಾರ್ ಇ-ಕೆವೈಸಿ ಕೂಡಾ ಶೇಕಡ 16ರಷ್ಟು ಏರಿಕೆಯಾಗಿದೆ. ಆಧಾರ್ ಕಾರ್ಡ್ ಮೂಲಕ 21.47 ಮಿಲಿಯನ್ ಮಾರ್ಚ್ 2023ರಲ್ಲಿ ಇ-ಕೆವೈಸಿ ಮಾಡಿಸಲಾಗಿದೆ.
ಬಹುಪಾಲು ದೃಢೀಕರಣ ವಹಿವಾಟುಗಳು ಬಯೋಮೆಟ್ರಿಕ್ ಫಿಂಗರ್‌ಪ್ರಿಂಟ್ ಬಳಸಿ ನಡೆಸಲಾಗಿದೆ. ಡೆಮಾಗ್ರಾಫಿಕ್ ಮಾಹಿತಿ (ಮೂಲ ಮಾಹಿತಿ) ಮತ್ತು ಒಟಿಪಿ ವೆರಿಫಿಕೇಷನ್ ಅನ್ನು ಕೂಡಾ ಬಳಕೆ ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇನ್ನು ಇ-ಕೆವೈಸಿಯಿಂದಾಗಿ ಗ್ರಾಹಕರಿಗೆ ಹಲವಾರು ಪ್ರಯೋಜನಗಳು ಉಂಟಾಗಿದೆ. ಗ್ರಾಹಕರು ಮನೆಯಲ್ಲೇ ಕುಳಿತು ಕೆವೈಸಿ ಮಾಡಿಸಿಕೊಳ್ಳಬಹುದಾಗಿದೆ ಎಂದು ಕೂಡಾ ಡೇಟಾ ಉಲ್ಲೆಖಿಸಿದೆ.

ಇ-ಕೆವೈಸಿ ಮಾಡಿಕೊಳ್ಳುವ ಅವಕಾಶವಿರುವ ಕಾರಣದಿಂದಾಗಿ ಜನರು ಹಣಕಾಸು ಸಂಸ್ಥೆಗಳಿಗೆ, ಟೆಲಿಕಾಂ ಸೇವಾದಾರರ ಕಚೇರಿಗೆ, ಇತರೆಡೆ ಪ್ರಯಾಣ ಮಾಡುವ ವೆಚ್ಚ ಹಾಗೂ ಸಮಯ ಉಳಿತಾಯವಾಗುತ್ತಿದೆ ಎಂದು ಐಟಿ ಸಚಿವಾಲಯದ ಡೇಟಾ ಹೇಳಿದೆ. ಈವರೆಗೆ ಅಂದರೆ ಮಾರ್ಚ್ 2023 ರ ಅಂತ್ಯದವರೆಗೆ ಆಧಾರ್ ಇ-ಕೆವೈಸಿ ವಹಿವಾಟು 14.7 ಬಿಲಿಯನ್ ದಾಟಿದೆ.
ಆಧಾರ್ ಮಾಡಿಸಿಕೊಂಡು 10 ವರ್ಷವಾಗಿದ್ದರೆ ಅಪ್‌ಡೇಟ್ ಮಾಡಿ
ಆಧಾರ್ ಮಾಡಿಸಿಕೊಂಡು 10 ವರ್ಷವಾಗಿದ್ದರೆ ಅಪ್‌ಡೇಟ್ ಮಾಡಿಸಿಕೊಳ್ಳುವಂತೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಈ ಹಿಂದೆ ಸೂಚನೆ ನೀಡಿದೆ. ಇದಾದ ಬೆನ್ನಲ್ಲೇ ಹವಲಾರು ಮಂದಿ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಿಕೊಳ್ಳುತ್ತಿದ್ದಾರೆ. ಮಾರ್ಚ್ ತಿಂಗಳಿನಲ್ಲಿ 21.47 ಮಿಲಿಯನ್ ಆಧಾರ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡಲಾಗಿದೆ. ಇನ್ನು ಫೆಬ್ರವರಿಯಲ್ಲಿ 16.8 ಮಿಲಿಯನ್ ಆಧಾರ್ ಅನ್ನು ಅಪ್‌ಡೇಟ್ ಮಾಡಲಾಗಿದೆ.
ಆಧಾರ್ ಪ್ಯಾನ್ ಕಾರ್ಡ್ ಅಪ್‌ಡೇಟ್ ಮಾಡಿಕೊಳ್ಳಿ
ಪ್ರಸ್ತುತ ದೇಶದಲ್ಲಿ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಅತೀ ಪ್ರಮುಖವಾದ ದಾಖಲೆಯಾಗಿದೆ. ಯಾವುದೇ ಹಣಕಾಸು ವಹಿವಾಟಿಗಾಗಲಿ ಅಥವಾ ಯಾವುದೇ ಸರ್ಕಾರಿ ಯೋಜನೆಗಳ ಪ್ರಯೋಜನವನ್ನು ನಾವು ಪಡೆಯುವಾಗ ಆಗಲಿ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಅನ್ನು ಹೊಂದಿರುವುದು ಅತೀ ಮುಖ್ಯವಾಗುತ್ತದೆ. ಪ್ರಸ್ತುತ ಈ ಎರಡು ಪ್ರಮುಖ ದಾಖಲೆಗಳ ಲಿಂಕಿಂಗ್ ಪ್ರಕ್ರಿಯೆಗೆ ಜೂನ್ 30, 2023 ಕೊನೆಯ ದಿನಾಂಕವಾಗಿದೆ.
ದಂಡ ಪಾವತಿ ಮಾಡಿ ಪ್ಯಾನ್ ಆಧಾರ್ ಲಿಂಕ್ ಮಾಡಿ
ಹಂತ 1: ಭಾರತದ ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ (https://www.incometaxindiaefiling.gov.in/)
ಹಂತ 2: ಹೋಮ್ ಪೇಜ್‌ನಲ್ಲಿ 'Quick Links' ನಲ್ಲಿ ಇರುವ Link Aadhaar ಮೇಲೆ ಕ್ಲಿಕ್ ಮಾಡಿ,
ಹಂತ 3: ಹೊಸ ಪೇಜ್ ತೆರೆಯಲಿದೆ, ಇಲ್ಲಿ ನಿಮ್ಮ ಆಧಾರ್ ಸಂಖ್ಯೆ, ಪ್ಯಾನ್ ಸಂಖ್ಯೆ, ಆಧಾರ್‌ನಲ್ಲಿ ಇರುವಂತೆ ನಿಮ್ಮ ಹೆಸರನ್ನು ನಮೂದಿಸಿ, Validate ಮೇಲೆ ಕ್ಲಿಕ್ ಮಾಡಿ
ಹಂತ 4: ನಿಮ್ಮ ಪಾವತಿ ವಿಧಾನ ವೆರಿಫೈ ಆದ ಬಳಿಕ Your payment details are verified ಎಂದು ಬರಲಿದೆ. ಇಲ್ಲಿ Continue ಬಟನ್ ಅನ್ನು ಕ್ಲಿಕ್ ಮಾಡಿ
ಹಂತ 5: ಕೇಳಲಾಗಿರುವ ಮಾಹಿತಿಗಳನ್ನು ಭರ್ತಿ ಮಾಡಿ, Link Aadhaar ಕ್ಲಿಕ್ ಮಾಡಿ
ಹಂತ 6: ಮೊಬೈಲ್‌ಗೆ ಬಂದ ಒಟಿಪಿಯನ್ನು ನಮೂದಿಸಿ
ಹಂತ 7: ಪ್ಯಾನ್ ಆಧಾರ್ ಲಿಂಕ್ ಮಾಡಲು ಮನವಿ ಸಲ್ಲಿಕೆ ಪ್ರಕ್ರಿಯೆ ಇಲ್ಲಿಗೆ ಕೊನೆಯಾಗಲಿದೆ.


Click it and Unblock the Notifications