ಬೆಂಗಳೂರು, ಸೆಪ್ಟೆಂಬರ್ 14: ಯುಐಡಿಎಐ ಆಧಾರ್ (Aadhaar) ಕಾರ್ಡ್ ಉಚಿತ ಅಪ್‌ಡೇಟ್ ಗಡುವನ್ನು ಸೆಪ್ಟೆಂಬರ್ 15, 2024 ರಿಂದ ಡಿಸೆಂಬರ್ 14, 2024 ರವರೆಗೆ ವಿಸ್ತರಿಸಿದೆ. ಈ ಹಿಂದೆ ಸೆಪ್ಟೆಂಬರ್ 14, 2024 ರ ಮೊದಲು ಆಧಾರ್ ಅನ್ನು ಅಪ್‌ಡೇಟ್ ಮಾಡಲು ವಿಫಲವಾದರೆ, ಈ ದಿನಾಂಕದ ನಂತರ ಪ್ರತಿ ಸೇವಾ ಶುಲ್ಕಕ್ಕೆ 50 ರೂ. ವಿಧಿಸಲಾಗುತ್ತದೆ ಎಂದು ತಿಳಿಸಲಾಗಿತ್ತು.
ಯುಐಡಿಎಐ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿನ ಅಪ್‌ಡೇಟ್‌ನಲ್ಲಿ ಉಚಿತ ಆನ್‌ಲೈನ್ ಡಾಕ್ಯುಮೆಂಟ್ ಅಪ್‌ಲೋಡ್ ಸೌಲಭ್ಯವನ್ನು ಡಿಸೆಂಬರ್ 14, 2024 ರವರೆಗೆ ವಿಸ್ತರಿಸಲಾಗಿದೆ ಎಂದು ಹೇಳಿದೆ. ಈ ಕ್ರಮವು ಲಕ್ಷಾಂತರ ಆಧಾರ್ ಸಂಖ್ಯೆ ಹೊಂದಿರುವವರಿಗೆ ಪ್ರಯೋಜನವನ್ನು ನೀಡುವ ಸಾಧ್ಯತೆಯಿದೆ ಎಂದು ಯುಐಡಿಎಐ ಹೇಳಿದೆ.

ಉಚಿತ ಸೇವೆಯನ್ನು ಮೈಆಧಾರ್ ಪೋರ್ಟಲ್‌ನಲ್ಲಿ ಮಾತ್ರ ಪ್ರವೇಶಿಸಬಹುದು ಎಂದು ಆಧಾರ್‌ನ ನೋಡಲ್ ಏಜೆನ್ಸಿ ತಿಳಿಸಿದೆ. ತಮ್ಮ ದಾಖಲೆಗಳನ್ನು ಆಧಾರ್‌ನಲ್ಲಿ ನವೀಕರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಯುಐಡಿಎಐ ಸಾರ್ವಜನಿಕರನ್ನು ಕೋರಿದೆ.
ಆನ್‌ಲೈನ್‌ನಲ್ಲಿ ಆಧಾರ್ ಉಚಿತ ಅಪ್‌ಡೇಟ್ ಹಂತಗಳು
ಮೈ ಆಧಾರ್ ಪೋರ್ಟಲ್‌ಗೆ ಭೇಟಿ ನೀಡಿ: myAadhaar.uidai.gov.in
ಡಾಕ್ಯುಮೆಂಟ್‌ಗಳ ಅಪಡೇಟ್ ವಿಭಾಗದ ಮೇಲೆ ಕ್ಲಿಕ್ ಮಾಡಿ
ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆಗಳನ್ನು ಉಚಿತವಾಗಿ ಅಪ್‌ಲೋಡ್ ಮಾಡಲು ಇದು ನಿಮ್ಮನ್ನು ಅನುಮತಿಸುತ್ತದೆ
ಏನು ಸಲ್ಲಿಸಬೇಕು ಮತ್ತು ಹೇಗೆ ಸಲ್ಲಿಸಬೇಕು ಎಂಬುದರ ಮೇಲೆ ಕ್ಲಿಕ್ ಮಾಡಿ
ನೆಕ್ಟ್ಸ್, ಸಮ್ಮಿಟ್ ಕ್ಲಿಕ್ ಮಾಡಿ
ನಿಮ್ಮ ಆಧಾರ್ ಸಂಖ್ಯೆ ಮತ್ತು ಭದ್ರತಾ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.
OTP ಯೊಂದಿಗೆ ಲಾಗಿನ್ ಆಯ್ಕೆಮಾಡಿ.
ನಿಮ್ಮ OTP ಅನ್ನು ನಮೂದಿಸುವ ಮೂಲಕ ಲಾಗ್ ಇನ್ ಮಾಡಿ.
ಮುಂದೆ, ನಿಮ್ಮ ಹೆಸರು, ಫೋನ್ ಸಂಖ್ಯೆ ಮತ್ತು ವಿಳಾಸವನ್ನು ನೀವು ನವೀಕರಿಸಬೇಕಾಗುತ್ತದೆ ಮತ್ತು ಗುರುತು ಮತ್ತು ವಿಳಾಸದ ಪುರಾವೆಯನ್ನು ಲಗತ್ತಿಸಬೇಕು.
ಪೋರ್ಟಲ್‌ನಲ್ಲಿ ನಿಮ್ಮ ಜನಸಂಖ್ಯಾ ವಿವರಗಳನ್ನು ನವೀಕರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.
ಇಲ್ಲದಿದ್ದರೆ, ನಿಮ್ಮ ಹೆಸರು, ಲಿಂಗ, ವಿಳಾಸ, ಜನ್ಮ ದಿನಾಂಕವನ್ನು ನವೀಕರಿಸಲು ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ.
ವಿಳಾಸಕ್ಕಾಗಿ ಕೆಳಗಿನ ಬಾಕ್ಸ್ ಅನ್ನು ಮಾತ್ರ ಕ್ಲಿಕ್ ಮಾಡಿ.
ಮುಂದೆ ಮುಂದುವರೆಯಲು ಕ್ಲಿಕ್ ಮಾಡಿ.
ಈಗ ನಿಮ್ಮ ಗುರುತು ಮತ್ತು ವಿಳಾಸದ ಪುರಾವೆಗಳನ್ನು ನಿಗದಿತ ನಮೂನೆಯಲ್ಲಿ ಅಪ್‌ಲೋಡ್ ಮಾಡಿ.
ಮುಂದಿನ ಹಂತಕ್ಕೆ ಮುಂದುವರಿಯಲು ಒಪ್ಪಿಗೆಯನ್ನು ಒತ್ತಿ.
ಸಂಪೂರ್ಣ ಆಧಾರ್ ನವೀಕರಣ ಆಗಿರುತ್ತದೆ.
ಭವಿಷ್ಯದ ಉಲ್ಲೇಖಕ್ಕಾಗಿ ರಶೀದಿಯನ್ನು ಡೌನ್‌ಲೋಡ್ ಮಾಡಿಕೊಳ್ಳಿ.


Click it and Unblock the Notifications