ಬೆಂಗಳೂರು, ಮಾರ್ಚ್ 28: ಕೇಂದ್ರ ಸರ್ಕಾರದ ಸಾಕಷ್ಟು ಯೋಜನೆಗಳ ಲಾಭ ಪಡೆಯಲು ನಾವು ನೀವವು ಕೆಲ ರಾಷ್ಟೀಕೃತ ಬ್ಯಾಂಕ್‌ಗಳಲ್ಲಿ ನಮ್ಮ ಖಾತೆಗಳನ್ನ ಹೊಂದಿರಬೇಕಾಗುತ್ತದೆ. ಉದಾಹರಣೆಗೆ ರೈತರಿಗೆ ಕೇಂದ್ರ ಸರ್ಕಾರ ಹಣ ನೀಡಲು ಮಾಡಿರುವ ಯೋಜನೆ ಕಿಸಾನ್ ಸನ್ಮಾನ್ ಯೋಜನೆ, ಇದಕ್ಕಾಗಿ ನೀವು ಬ್ಯಾಂಕ್ ಖಾತೆ ಹೊಂದಿರಲೇಬೇಕು.
ಆ ಮೂಲಕ ಯಾವುದೇ ದಲ್ಲಾಳಿಗಳ ತೊಂದರೆ ಇಲ್ಲದೇ ನೀವು ನಿಮ್ಮ ಹಣವನ್ನ ನೇರ ಖಾತೆಗೆ ಪಡೆದುಕೊಳ್ಳಬಹುದು. ಈ ರೀತಿಯ ಸಾಕಷ್ಟು ಯೋಜನೆಗಳಿಗೆ ಖಾತೆಯ ಅಚಶ್ಯಕತೆ ಇರುತ್ತದೆ. ಅದೇ ರೀತಿಯ ಮತ್ತೊಂದು ಯೋಜನೆ ಅಂದ್ರೆ ಅಟಲ್ ಪಿಂಚಣಿ ಯೋಜನೆ.

ಅಟಲ್ ಪಿಂಚಣಿ ಯೋಜನೆ ಎಂಬುದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಅಸಂಘಟಿತ ವಲಯಗಳಿಗೆ ಉಪಯುಕ್ತವಾಗಲಿ ಎಂದು ಈ ಯೋಜನೆಯನ್ನ ತರಲಾಗಿದೆ. ಯಾರಿಗೆ ಸಂಘಟಿತ ನೌಕರ ವರ್ಗಗ ಲಾಭ ಸಿಗುವುದಿಲ್ಲವೋ ಅಂಥವರಿಗೆ ಸಹಾಯವಾಗಲೆಂದು ಈ ಯೋಜನೆಯಿದೆ, ಇದಕ್ಕಾಗಿ ನೀವು ಖಾತೆ ಹೊಂದಿರಬೇಕು ಮತ್ತು ಈ ಯೋಜನೆಗೆ ಪೂರ್ಣ ಸಮ್ಮತಿಯೊಂದಿಗೆ ಸೇರ್ಪಡೆಯಾಗಬೇಕು.
ನೀವು ನಿವೃತ್ತಿ ನಂತರದಲ್ಲಿ ಪಿಂಚಣಿ ಪಡೆಯಲು ಈಗಿಂದಲೇ ಪ್ರತಿ ತಿಂಗಳು ನಿಮ್ಮ ಖಾತೆಯಿಂದ ಹಣ ಕಡಿತವಾಗುವ ಯೋಜನೆ ಇದು. ಆದ್ರೆ ನಿಮ್ಮ ಅನುಮತಿ ಇಲ್ಲದೆಯೂ ಬ್ಯಾಂಕ್ ಸಿಬ್ಬಂಧಿ ನಿಮಗೆ ತಿಳಿಯಸ ಹಾಗೆಯೂ ನಿಮ್ಮ ಹೆಸರಿನ ಖಾತೆಯನ್ನ ತೆರೆಯಬಹುದು . ಹಾಗಾಗಿ ಈ ಬಗ್ಗೆ ನೀವು ನಿಗಾ ವಹಿಸುವುಸು ಸೂಕ್ತ.
ಈ ಬಗ್ಗೆ ಇಂಡಿಯನ್ ಕೌನ್ಸಿಲ್ ಆಫ್ ಸೋಷಿಯಲ್ ಸೈನ್ಸ್ ರೀಸರ್ಚ್ ಇತ್ತೀಚೆಗೆ ಸರ್ವೆಯೊಂದನ್ನ ನಡೆಸಿದ್ದು, ಈ ಅಟಲ್ ಪಿಂಚಣಿ ಯೋಜನೆಯ ಶೇಕಡಾ ೩೨ರಷ್ಟು ಚಂದಾದಾರರು ಈ ಯೋಜನೆಯಿಂದ ಹೊರಗುಳಿದಿದ್ದಾರೆ, ನಮಗೆ ಈ ಖಾತೆ ಬೇಡ್ವೇ ಬೇಡ ಎಂದು ಖಾತೆಯನ್ನ ಬಂದ್ ಮಾಡಿಸಿದ್ದಾರೆ. ಇದಕ್ಕೆ ಕಾರಣ ಬ್ಯಾಂಕ್ ಸಿಬ್ಬಂದಿ. ಹೌದು ಗ್ರಾಹಕರ ಅನುಮತಿಯೇ ಇಲ್ಲದೇ ಬ್ಯಾಂಕ್ ಸಿಬ್ಬಂದಿ ಈ ರೀತಿ ಬಹಳಷ್ಟು ಜನರ ಖಾತೆ ತೆರದಿದ್ದು, ಇದು ಗಮನಕ್ಕೆ ಬರ್ತಿದ್ದ ಹಾಗೇ ಜನ ತಮ್ಮ ಖಾತೆ ಕ್ಲೋಸ್ ಮಾಡಿಸಿದ್ದಾರೆ.
ಟಾರ್ಗೆಟ್ ರೀಚ್ ಮಾಡೋದಷ್ಟೆ ಬ್ಯಾಂಕ್‌ನವರ ಉದ್ದೇಶ
ಈ ಬ್ಯಾಂಕ್ ನೌಕರರಿಗೆ ಬ್ಯಾಂಕ್ ವತಿಯಿಂದ ಇಂತಿಷ್ಟು ಟಾರ್ಗೆಟ್ ಎಂದು ನೀಡಲಾಗಿರುತ್ತೆ. ಆ ಪ್ರಕಾರವಾಗಿ ಇಷ್ಟು ಸಾವಿರ ಮಂದಿಯ ಅಟಲ್ ಪಿಂಚಣಿ ಯೋಜನೆಯ ಖಾತೆ ತರೆಸಬೇಕು ಅಂತ. ಅದರ ಗುರಿ ಸಾಧನೆಗಾಗಿ ಬ್ಯಾಂಕ್ ಸಿಬ್ಬಂಧಿ ನಿಮಗೆ ತಿಳಿಸದೇ ಅಥವಾ ಸಂಪೂರ್ಣ ಮಾಹಿತಿ ನೀಡದೆ ನಿಮ್ಮ ಕಾತೆ ತೆರೆದಿರುತ್ತಾರೆ. ಇದಕ್ಕಾಗಿ ನಿಮ್ಮ ಖಾತೆಯಿಂದ ಹಣ ಕಡಿತವಾಗುತ್ತದೆ ಜೊತೆಗೆ ತಿಂಗಳಿಗೆ ನೀವು ಎಷ್ಟು ಮೊತ್ತ ಪಾವತಿ ಮಾಡಲು ಬಯಸುತ್ತೀರಿ ಅದು ಆಟೋ ಡೆಬಿಟ್ ಆಗಿರತ್ತೆ. ಹಾಗೇ ಪ್ರತೀ ತಿಂಗಳು ಇಂತಿಷ್ಟು ಮೊತ್ತ ಅಂತ ನಿಮ್ಮ ಕಾತೆಯಿಂದ ಹಣ ಕಟ್ ಆದ ಹಣ ಯೋಜನೆಗೆ ಸೇರ್ಪಡೆಯಾಗಿರುತ್ತದೆ.
ಆದ್ರೆ ಕೆಲವರಿಗೆ ಇದು ಗಮನಕ್ಕೆ ಬರೋದೆ ತಡವಾಗಿರುತ್ತದೆ. ಗೊತಾಗ್ತಿದ್ದ ಹಾಗೇ ಜನ ಬ್ಯಾಂಕ್ ಸಿಬ್ಬಂಧಿ ಮೇಲೆ ಗರಂ ಆಗಿ ಈ ತಮ್ಮ ಖಾತೆಯನ್ನ ಕ್ಲೋಸ್ ಮಾಡಿಸಿ ಈ ಯೋಜನೆಯಿಂದ ಹೊರನಡೆಯುತ್ತಿದ್ದಾರೆ. ಸೋ ನೀವು ಕೂಡ ನಿಮ್ಮ ಖಾತೆಯಿಂದ ಕಟ್ ಆಗುವ ಹಣದ ಬಗ್ಗೆ, ವಹಿವಾಟುಗಳ ಬಗ್ಗೆ ಸಂಪೂರ್ಣ ಗಮನ ಇರಿಸಬೇಕು. ಇಲ್ಲವಾದ್ರೆ ನಿಮಗೇ ತಿಳಿಯದ ಹಾಗೇ ನಿಮ್ಮನ್ನ ಯಾವುದೋ ಯೋಜನೆಯ ಚಂದಾದಾರರನ್ನಾಗಿ ಈ ಬ್ಯಾಂಕ್ ಸಿಬ್ಬಂಧಿ ಮಾಡಿಬಿಡುತ್ತಾರೆ - ಜಾಗರೂಕರಾಗಿರಿ !


Click it and Unblock the Notifications