ಉತ್ತಮ ಗುಣಮಟ್ಟದ ಶಾಲಾ ಶಿಕ್ಷಣದಲ್ಲಿ ಕ್ರಾಂತಿಯನ್ನುಂಟುಮಾಡಲು ಅದಾನಿ ಫೌಂಡೇಶನ್ ಭಾರತದಾದ್ಯಂತ ವಿಶ್ವದರ್ಜೆಯ ಶ್ರೇಷ್ಟ ಶಾಲೆಗಳನ್ನು ನಿರ್ಮಿಸುವುದಾಗಿ ಅದಾನಿ ಗ್ರೂಪ್ ನ ಅಧ್ಯಕ್ಷ ಗೌತಮ್ ಅದಾನಿ ಘೋಷಿಸಿದ್ದು, ಇದು ಕೈಗೆಟಕುವ ಉತ್ತಮ ಗುಣಮಟ್ಟದ ಶಿಕ್ಷಣದ ಪ್ರವೇಶದಲ್ಲಿ ಕ್ರಾಂತಿಯನ್ನುಂಟು ಮಾಡಲಿದೆ ಎನ್ನಲಾಗಿದೆ. ಇದಕ್ಕಾಗಿ ಅದಾನಿ ಫೌಂಡೇಶನ್ ಖಾಸಗಿ ಕೆ -12 ಶಿಕ್ಷಣದಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಜಿಇಎಂಎಸ್ ಎಜುಕೇಶನ್ ನೊಂದಿಗೆ ಕೈಜೋಡಿಸಿದೆ.
ಉದ್ಯಮಿ ಗೌತಮ್ ಅದಾನಿ ಅವರು ತಮ್ಮ ಕಿರಿಯ ಪುತ್ರ ಜೀತ್ ಅದಾನಿ ಅವರ ಮದುವೆ ಸಮಾರಂಭದಲ್ಲಿ 10,000 ಕೋಟಿ ರೂ.ಗಳನ್ನು ಸಾಮಾಜಿಕ ದತ್ತಿ ಕಾರ್ಯಕ್ಕೆ ಬಳಸಲಾಗುತ್ತದೆ ಎಂದು ಹೇಳಿದ್ದರು. ಇದರ ಭಾಗವಾಗಿ ಈ ಹಿಂದೆ ಆಸ್ಪತ್ರೆಗಳ ನಿರ್ಮಾಣಕ್ಕಾಗಿ 6 ಸಾವಿರ ಕೋಟಿ ರೂ ಮತ್ತು ಕೌಶಲ ಅಭಿವೃದ್ದಿಗಾಗಿ 2 ಸಾವಿರ ಕೋಟಿ ರೂ. ದೇಣಿಗೆಯನ್ನು ಘೋಷಿಸಿತ್ತು.

ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ನ ಲೋಕೋಪಕಾರಿ ಅಂಗವಾದ ಅದಾನಿ ಫೌಂಡೇಶನ್ ದೇಶಾದ್ಯಂತ ಶಿಕ್ಷಣದ ಸಂಸ್ಥೆಗಳನ್ನು ಜಾಗತಿಕವಾಗಿ ಮುಂಚೂಣಿಯಲ್ಲಿರುವ " ಜಿಇಎಂಎಸ್ ಎಜುಕೇಶನ್" ನೊಂದಿಗೆ ಸಹಯೋಗ ಹೊಂದಿದ್ದು ಮುಂದಿನ ಮೂರು ವರ್ಷಗಳ ಒಳಗಾಗಿ ಕೆ -12 ವಿಭಾಗದ್ಲಲಿ ಕನಿಷ್ಟ 20 ಶಾಲೆಗಳನ್ನು ಪ್ರಾರಂಭಿಸಲಾಗುವುದು ಎಂದು ಸಮೂಹ ತಿಳಿಸಿದೆ.
"ಅದಾನಿ ಕುಟುಂಬದಿಂದ 2,000 ಕೋಟಿ ರೂಪಾಯಿಗಳ ಆರಂಭಿಕ ದೇಣಿಗೆಯೊಂದಿಗೆ, ಪಾಲುದಾರಿಕೆಯು ವಿಶ್ವದರ್ಜೆಯ ಶಿಕ್ಷಣ ಮತ್ತು ಕಲಿಕೆಯ ಮೂಲಸೌಕರ್ಯವನ್ನು ಸಮಾಜದ ಎಲ್ಲಾ ಸ್ತರಗಳ ಜನರಿಗೆ ಕೈಗೆಟುಕುವಂತೆ ಮಾಡಲು ಆದ್ಯತೆ ನೀಡುತ್ತದೆ" ಎಂದು ಅದಾನಿ ಗ್ರೂಪ್ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಈ ಸಹಯೋಗವು 2025-26ರ ಶೈಕ್ಷಣಿಕ ವರ್ಷದಲ್ಲಿ ಲಕ್ನೋದಲ್ಲಿ ಮೊದಲ 'ಅದಾನಿ ಜೆಇಎಂಎಸ್ ಸ್ಕೂಲ್ ಆಫ್ ಎಕ್ಸಲೆನ್ಸ್' ಸ್ಥಾಪನೆಯೊಂದಿಗೆ ಪ್ರಾರಂಭವಾಗಲಿದೆ. ಇದರ ಮೊದಲ ಹೆಜ್ಜೆಯಾಗಿ, 2025-26ರ ಶೈಕ್ಷಣಿಕ ವರ್ಷದಲ್ಲಿ ಲಕ್ನೋದಲ್ಲಿ ಮೊದಲ "ಅದಾನಿ ಜೆಇಎಂಎಸ್ ಸ್ಕೂಲ್ ಆಫ್ ಎಕ್ಸಲೆನ್ಸ್" ಶಾಲೆಯನ್ನು ಸ್ಥಾಪಿಸಲಾಗುವುದು. ಮುಂದಿನ ಮೂರು ವರ್ಷಗಳಲ್ಲಿ, ಇಂತಹ 20 ಶಾಲೆಗಳನ್ನು ಪ್ರಾರಂಭಿಸುವ ಯೋಜನೆಯಿದೆ. ಈ ಶಾಲೆಗಳು ವಿದ್ಯಾರ್ಥಿಗಳಿಗೆ ಜಾಗತಿಕವಾಗಿ ಗುರುತಿಸಲ್ಪಟ್ಟ ಶಿಕ್ಷಣ ಮಾನದಂಡಗಳನ್ನು ಮತ್ತು ಭಾರತೀಯ ಪಠ್ಯಕ್ರಮದ ಅತ್ಯುತ್ತಮ ಸಂಯೋಜನೆಯನ್ನು ಒದಗಿಸುತ್ತವೆ.
ಈ ಘೋಷಣೆಯೂ ಅದಾನಿ ಗ್ರೂಪ್ ಅಧ್ಯಕ್ಷರಾದ ಗೌತಮ್ ಅದಾನಿಯವರ ಸಾಮಾಜಿಕ ತತ್ವ "ಸೇವೆಯೇ ಸಾಧನೆ, ಸೇವೆಯೇ ಪ್ರಾರ್ಥನೆ ಮತ್ತು ಸೇವೆಯೇ ಪರಮಾತ್ಮ" (ಸೇವಾ ಸಾಧನಾ ಹೈ, ಸೇವಾ ಪ್ರಾರ್ಥನಾ ಹೈ ಔರ್ ಸೇವಾ ಹೈ ಪರಮಾತ್ಮ ಹೈ) ಎಂಬುವುದನ್ನು ಎತ್ತಿ ತೋರಿಸುತ್ತದೆ. ಈ ತತ್ವದ ಆಧಾರದ ಮೇಲೆ, ಶಾಲೆಗಳು ಸಂಶೋಧನೆ-ಚಾಲಿತ ಬೋಧನಾ ವಿಧಾನಗಳು ಮತ್ತು ಡಿಜಿಟಲ್ ಕಲಿಕಾ ಸಾಧನಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತವೆ. ಇದು ವಿದ್ಯಾರ್ಥಿಗಳು ಭವಿಷ್ಯಕ್ಕಾಗಿ ಸಿದ್ಧರಾಗಲು ಸಹಾಯ ಮಾಡುತ್ತದೆ.
ಅದಾನಿ ಗ್ರೂಪ್‌ನ ವಿಸ್ತಾರವಾದ ಮೂಲಸೌಕರ್ಯ ಮತ್ತು GEMS ಶಿಕ್ಷಣದ ಶೈಕ್ಷಣಿಕ ಪರಿಣತಿಯನ್ನು ಬಳಸಿಕೊಂಡು, ಈ ಪಾಲುದಾರಿಕೆಯು ಸುಸ್ಥಿರ ಮತ್ತು ವಿಸ್ತರಿಸಬಹುದಾದ ಶೈಕ್ಷಣಿಕ ಮಾದರಿಯನ್ನು ರಚಿಸುವ ಗುರಿಯನ್ನು ಹೊಂದಿದೆ. ಇದರಲ್ಲಿ ಅತ್ಯಾಧುನಿಕ ಸೌಲಭ್ಯಗಳು, ಸಂಶೋಧನೆ-ಬೆಂಬಲಿತ ಬೋಧನಾ ಸಾಮರ್ಥ್ಯಗಳು ಮತ್ತು ಮೌಲ್ಯಾಧಾರಿತ ಕಲಿಕಾ ವಿಧಾನಗಳನ್ನು ಸಂಯೋಜಿಸುವುದು ಸೇರಿದೆ.
ಅದಾನಿ ಫೌಂಡೇಶನ್ ನ ಈ ಉಪಕ್ರಮವು ಶೈಕ್ಷಣಿಕ ಪ್ರವೇಶ ಮತ್ತು ಗುಣಮಟ್ಟವನ್ನು ಹೆಚ್ಚಿಸುವ ಭಾರತದ ವಿಶಾಲ ಗುರಿಯೊಂದಿಗೆ ಹೊಂದಿಕೆಯಾಗುತ್ತದೆ. ಪ್ರಸ್ತುತ ಅದಾನಿ ಫೌಂಡೇಶನ್ 19 ರಾಜ್ಯಗಳಲ್ಲಿ 6,769 ಹಳ್ಳಿಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.


Click it and Unblock the Notifications