ಅದಾನಿ ಗ್ರೂಪ್ ಷೇರು ಮಾರುಕಟ್ಟೆಯಲ್ಲಿ ವಂಚನೆ ಮಾಡಿದೆ ಎಂದು ಆರೋಪಿಸಿ ಹಿಂಡನ್‌ಬರ್ಗ್ ವರದಿ ಮಾಡಿದ ಬಳಿಕ ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆಯಲ್ಲಿ ಭಾರೀ ನಷ್ಟವನ್ನು ಕಂಡಿದೆ. ಈ ನಡುವೆ ಹೂಡಿಕೆದಾರರ ವಿಶ್ವಾಸ ಗಳಿಸುವ ಭಾಗವಾಗಿ ಅದಾನಿ ಗ್ರೂಪ್ ಸಾಲ ಮರುಪಾವತಿ, ಪೂರ್ವಪಾವತಿಯ ಕ್ರಮವನ್ನು ಕೈಗೊಂಡಿದೆ. ಆ ಕ್ರಮದ ಭಾಗವಾಗಿ ಈಗ ಅದಾನಿ ಗ್ರೂಪ್ 2.65 ಬಿಲಿಯನ್ ಡಾಲರ್ ಮೌಲ್ಯದ ಸಾಲ ಮರುಪಾವತಿ ಮಾಡಿದೆ ಎಂದು ವರದಿಯಾಗಿದೆ.
ಅದಾನಿ ಗ್ರೂಪ್ ಪೂರ್ವಪಾವತಿ ಕಾರ್ಯಕ್ರಮವನ್ನು ಪೂರ್ಣಗೊಳಿಸುತ್ತಿದೆ. ಈ ಭಾಗವಾಗಿ 2.65 ಬಿಲಿಯನ್ ಡಾಲರ್ ಮೊತ್ತದ ಸಾಲವನ್ನು ಮರುಪಾವತಿಸಿರುವುದಾಗಿ ಅದಾನಿ ಗ್ರೂಪ್ ಸೋಮವಾರ ಹೇಳಿದೆ. ಷೇರುಗಳನ್ನು ಆಧಾರವಾಗಿ ಇರಿಸಿಕೊಂಡು ಪಡೆದಿದ್ದ ಸುಮಾರು 2.15 ಬಲಿಯನ್ ಡಾಲರ್ ಸಾಲವನ್ನು ಸಂಪೂರ್ಣವಾಗಿ ಪೂರ್ವಪಾವತಿ ಮಾಡಲಾಗಿದೆ. ಹಾಗೆಯೇ ಅಂಬುಜಾ ಸಿಮೆಂಟ್ ಖರೀದಿಗಾಗಿ ಪಡೆದಿದ್ದ 700 ಮಿಲಿಯನ್ ಡಾಲರ್ ಸಾಲವನ್ನು ಕೂಡಾ ಮರುಪಾವತಿ ಮಾಡಲಾಗಿದೆ ಎಂದು ಸೋಮವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಅದಾನಿ ಗ್ರೂಪ್ ಮಾಹಿತಿ ನೀಡಿದೆ.

"203 ಮಿಲಿಯನ್ ಡಾಲರ್ ಬಡ್ಡಿದರ ಪಾವತಿಯೊಂದಿಗೆ ಸಂಪೂರ್ಣವಾಗಿ ಪೂರ್ವಪಾವತಿ ಮಾಡಲಾಗಿದೆ," ಎಂದು ಅದಾನಿ ಗ್ರೂಪ್ ಸ್ಪಷ್ಟಪಡಿಸಿದೆ. ಇನ್ನು ಸಂಸ್ಥೆಯು ನಾಲ್ಕು ಪ್ರಮುಖವಾದ ಷೇರುಗಳನ್ನು ಹೂಡಿಕೆ ಸಂಸ್ಥೆಯಾದ ಜಿಕ್ಯೂಜಿ ಪಾಲುದಾರರಿಗೆ 1.87 ಬಿಲಿಯನ್ ಡಾಲರ್‌ಗೆ (15,446 ಕೋಟಿ ರೂಪಾಯಿ) ಮಾರಾಟ ಮಾಡಿದ್ದಾರೆ ಎಂದು ಕ್ರೆಡಿಟ್ ಅಪ್‌ಡೇಟ್ ಹೇಳುತ್ತದೆ.
ಹಿಂಡನ್‌ಬರ್ಗ್ ವರದಿ ಏನು ಹೇಳಿದೆ?
ಹಿಂಡನ್‌ಬರ್ಗ್ ತನಿಖಾ ವರದಿಯು ಅದಾನಿ ಗ್ರೂಪ್ ವಂಚನೆಯನ್ನು ಭಾಗಿಯಾಗಿದೆ. ದಶಕಗಳಿಂದ ವಂಚನೆ ನಡೆಸುತ್ತಿದೆ. ಅದಾನಿ ಗ್ರೂಪ್ ಬಗ್ಗೆ ಸುಮಾರು ಎರಡು ವರ್ಷಗಳ ಕಾಲ ತನಿಖೆಯನ್ನು ನಡೆಸಿ ವರದಿ ನೀಡಲಾಗಿದೆ. ಅದಾನಿ ಗ್ರೂಪ್‌ನ ಹಲವಾರು ವ್ಯಕ್ತಿಗಳ ಸಂದರ್ಶನ ಮಾಡಲಾಗಿದೆ. ಮಾಜಿ ಹಿರಿಯ ಅಧಿಕಾರಿಗಳ ಸಂದರ್ಶನವನ್ನು ಕೂಡಾ ಮಾಡಲಾಗಿದೆ. ದಾಖಲೆಗಳು ನಮ್ಮಲ್ಲಿದೆ ಎಂದು ಹಿಂಡನ್‌ಬರ್ಗ್ ಮಾಹಿತಿ ನೀಡಿದೆ.
ಜನವರಿ 24ರಂದು ವರದಿ ಬಿಡುಗಡೆ ಮಾಡಿರುವ ಹಿಂಡನ್‌ಬರ್ಗ್, ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆಯಲ್ಲಿ ವಂಚನೆ ಮಾಡಿರುವ ಬಗ್ಗೆ ನಾವು ಹಲವಾರು ದಾಖಲೆಗಳನ್ನು ಪರಿಶೀಲನೆ ಮಾಡಿದ್ದೇವೆ. 12ರಷ್ಟು ದೇಶಗಳಿಗೆ ಭೇಟಿ ನೀಡಿ ಸ್ವತಃ ಸ್ಥಳ ಪರಿಶೀಲನೆ ಮಾಡಿದ್ದೇವೆ. ಇದರಿಂದಾಗಿ ಅದಾನಿ ಗ್ರೂಪ್‌ಯು ವಂಚನೆಯನ್ನು ನಡೆಸುತ್ತಿದೆ ಎಂದು ತಿಳಿದುಬಂದಿದೆ ಎಂದು ವರದಿ ಹೇಳಿದೆ.
ಅದಾನಿ ಕುಟುಂಬದ ಸದಸ್ಯರು ಹಾಗೂ ಕಂಪನಿಗೆ ಸಂಬಂಧಿಸಿದ ಅಧಿಕಾರಿಗಳು ಮಾರಿಷಸ್, ಯುಎಇ ಮತ್ತು ಕೆರಿಬಿಯನ್ ದ್ವೀಪಗಳಲ್ಲಿ ಕಡಲಾಚೆಯ ಶೆಲ್ ಘಟಕಗಳನ್ನು ರಚಿಸಲು ಸಹಕರಿಸಿದ್ದಾರೆ. ನಕಲಿ ಅಥವಾ ಕಾನೂನುಬಾಹಿರ ವಹಿವಾಟು ಮತ್ತು ಲಿಸ್ಟೆಡ್ ಕಂಪನಿಗಳಿಂದ ಹಣವನ್ನು ಪಡೆಯುವ ಪ್ರಯತ್ನ ಮಾಡಿದ್ದಾರೆ. ನಕಲಿ ಆಮದು/ರಫ್ತು ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ಹಿಂಡೆನ್‌ಬರ್ಗ್ ತನ್ನ ತನಿಖಾ ವರದಿಯಲ್ಲಿ ತಿಳಿಸಿದೆ.
ಈ ವರದಿಯನ್ನು ಅದಾನಿ ಗ್ರೂಪ್ ತಳ್ಳಿಹಾಕಿದೆ, ಹಾಗೆಯೇ ಹೂಡಿಕೆದಾರರ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಸಾಲ ಮರುಪಾವತಿ, ಪೂರ್ವಪಾವತಿಯ ಕ್ರಮವನ್ನು ಕೈಗೊಂಡಿದೆ. ಪ್ರಸ್ತುತ ಷೇರು ಮಾರುಕಟ್ಟೆಯಲ್ಲಿಯೂ ಕೂಡಾ ಅದಾನಿ ಗ್ರೂಪ್‌ಗಳ ಷೇರು ಏರಿಕೆಯನ್ನು ಕಾಣುತ್ತಿದೆ. ಅದಾನಿ ಗ್ರೂಪ್ ಕೊಂಚ ಲಾಭದತ್ತ ಮತ್ತೆ ಮುಖ ಮಾಡಿದೆ.
ಇನ್ನು ಬ್ಯಾಂಕಿಂಗ್ ವಲಯವು ಕೂಡಾ ಅದಾನಿ ಗ್ರೂಪ್‌ಗೆ ಸಾಲ ನೀಡುವುದಕ್ಕೆ ತಡೆಯೊಡ್ಡಿತ್ತು. ಆದರೆ ಈಗ ಸಾಲ ಮಂಜೂರಾತಿ ಮಾಡುವ ಮೂಲಕ ಸಂಸ್ಥೆಯ ಮೇಲೆ ಬ್ಯಾಂಕಿಂಗ್ ವಲಯಕ್ಕೆ ಇರುವ ವಿಶ್ವಾಸವನ್ನು ಖಚಿತಪಡಿಸಿದೆ ಎಂದು ಅದಾನಿ ಗ್ರೂಪ್ ಹೇಳಿದೆ. ಈ ನಡುವೆ ಡೆಬ್ಟ್ ಸರ್ವಿಸ್ ಕವರ್ ರೆಷಿಯೋ (ಡಿಎಸ್‌ಸಿಆರ್) ಹಣಕಾಸು ವರ್ಷ 2022ರಲ್ಲಿ 1.47x ಇದ್ದು ಹಣಕಾಸು ವರ್ಷ 2023ಕ್ಕೆ 2.02x ಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.


Click it and Unblock the Notifications