ಭಾರತದ ಹೆಸರಾಂತ ಉದ್ಯಮಿ ಗೌತ್ ಅದಾನಿ..ಬಂದರಿನಿಂದ ಹಿಡಿದು ವಿದ್ಯುತ್ ಸ್ಥಾವರದವರೆಗೆ ಉದ್ಯಮ ಹೊಂದಿರುವ ಅದಾನಿ ಗ್ರೂಪ್ ಭಾರತದ ಪ್ರತಿಷ್ಠೆ ಎಂದರೂ ತಪ್ಪಾಗಲ್ಲ. ಅತಿದೊಡ್ಡ ಮಾರ್ಕೆಟಿಂಗ್ ಗ್ರೂಪ್ ಹೊಂದಿರುವ ಅದಾನಿ ಸಂಸ್ಥೆ ವರ್ಷಕ್ಕೆ ಪಾವತಿಸುವ ತೆರಿಗೆ ಎಷ್ಟು ಎಂದು ಕೇಳಿದ್ರೆ ಕಣ್ಣು ಹುಬ್ಬೇರಿಸುತ್ತದೆ. ಹಾಗೆಯೇ 2023-24ರಲ್ಲಿ ಅದಾನಿ ಗ್ರೂಪ್ಸ್ ಪಾವತಿಸಿರುವ ತೆರಿಗೆ ಎಷ್ಟು ಗೊತ್ತಾ..? ಬರೋಬ್ಬರಿ 58,104 ಕೋಟಿ ರೂ.ನಷ್ಟು ಅದಾನಿ ಗ್ರೂಪ್ಸ್ ಕಡೆಯಿಂದ ತೆರಿಗೆ ಪಾವತಿಯಾಗಿದೆ.
ಹೌದು, ಉದ್ಯಮಿ ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ಸ್ 2023-24ರ ಹಣಕಾಸು ವರ್ಷ..ಅಂದರೆ ಏಪ್ರಿಲ್ 2023 ರಿಂದ ಮಾರ್ಚ್ 2024ರವರೆಗೆ ಪಾವತಿಸಿರುವ ತೆರಿಗೆ ಇದಾಗಿದೆ. ತಾವು ಪಾವತಿ ಮಾಡಿರುವ ತೆರಿಗೆಗಳಲ್ಲಿ ಅದಾನಿ ಗ್ರೂಪ್ ಕಂಪನಿಗಳು ಭರಿಸುವ ಇತರ ಶುಲ್ಕಗಳು, ಜಾಗತಿಕ ತೆರಿಗೆಗಳು, ಪರೋಕ್ಷ ತೆರಿಗೆ ಕೊಡುಗೆಗಳು ಮತ್ತು ಇತರ ಪಾಲುದಾರರ ಪರವಾಗಿ ಸಂಗ್ರಹಿಸಿ ಪಾವತಿಸಿರುವ ಸುಂಕ ಹಾಗೂ ತನ್ನ ಸಂಸ್ಥೆಯ ಉದ್ಯೋಗಿಗಳ ಪ್ರಯೋಜನಕ್ಕಾಗಿ ನೀಡಿದ ಕೊಡುಗೆ ಎಲ್ಲವೂ ಸೇರಿದೆ.

ಇನ್ನು ಹಿಂದಿನ ಹಣಕಾಸು ವರ್ಷದಲ್ಲಿ..ಅಂದರೆ, 2023ರಲ್ಲಿ ಸುಮಾರು ₹46,610.2 ಕೋಟಿ ತೆರಿಗೆ ಪಾವತಿಸಿತ್ತು. 2024ರ ವರ್ಷದಲ್ಲಿ ಈ ಅಂಕಿ ಅಂಶ ಗಮನಾರ್ಹವಾಗಿ ಏರಿಕೆಯಾಗಿದೆ. ಈ ಕುರಿತ ಮಾಹಿತಿಯನ್ನು ಅದಾನಿ ಗ್ರೂಪ್ ಹಂಚಿಕೊಂಡಿದೆ. ಅದಾನಿ ಎಂಟರ್‌ಪ್ರೈಸಸ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಪೋರ್ಟ್ಸ್ ಮತ್ತು ವಿಶೇಷ ಆರ್ಥಿಕ ವಲಯ (SEZ), ಅದಾನಿ ಎನರ್ಜಿ ಸೊಲ್ಯೂಷನ್ಸ್, ಅದಾನಿ ಟೋಟಲ್ ಗ್ಯಾಸ್, ಅದಾನಿ ಪವರ್, ಅಂಬುಜಾ ಸಿಮೆಂಟ್ಸ್ ಹಾಘೂ ಇತರ ಮೂರು ಕಂಪನಿಗಳಾದ NDTV, ACC, ಮತ್ತು ಸಂಘಿ ಇಂಡಸ್ಟ್ರೀಸ್ ಕೂಡ ಸೇರಿವೆ.
ಇನ್ನು ಗೌತಮ್ ಅದಾನಿ ಅವರು ಭಾರತದ ಬೊಕ್ಕಸ ತುಂಬಿಸಲು ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರೆ ತಪ್ಪಾಗಲ್ಲ. ಅಂದರೆ ತೆರಿಗೆ ಪಾವತಿಯಲ್ಲಿ ಪಾರದರ್ಶಕವಾಗಿ ಉತ್ತಮ ಆಡಳಿತದ ಜವಾಬ್ದಾರಿಯನ್ನು ಅನುಸರಿಸುತ್ತಿರುವುದು ಈ ಮೂಲಕ ಕಾಣಬಹುದಾಗಿದೆ. ಇನ್ನು ಅದಾನಿ ಗ್ರೂಪ್ ಅಭಿಪ್ರಾಯಪಟ್ಟಿರುವ ಪ್ರಕಾರ, ಇದು ಕೇವಲ ತೆರಿಗೆ ಪಾವತಿಯಲ್ಲ. ದೇಶದ ಸಮಗ್ರತೆ ಮತ್ತು ಹೊಣೆಗಾರಿಕೆಯೊಂದಿಗೆ ಕಾರ್ಯ ನಿರ್ವಹಿಸುವ ಪ್ರತಿಜ್ಞೆ ಎನ್ನಲಾಗಿದೆ. ಅಲ್ಲದೇ ನಮ್ಮ ದೇಶದ ಹಣಕಾಸುಗಳಿಗೆ ನಾವು ನೀಡುವ ಒಂದೊಂದು ರುಪಾಯಿಯೂ ಪಾರದರ್ಶಕ ಮತ್ತು, ಆಡಳಿತದ ಮೇಲೆ ನಮ್ಮ ಬದ್ಧತೆಯನ್ನು ತೋರಿಸುತ್ತದೆ ಎಂದು ತಿಳಿಸಿದೆ.
ತೆರಿಗೆ ಪಾವತಿಸುವ ಈ ಬೆಳವಣಿಗೆಯನ್ನು ಅದಾನಿ ಗ್ರೂಪ್, ಸಾಮಾಜಿಕ ಜವಾಬ್ದಾರಿಯೊಂದಿಗೆ ಸಮನ್ವಯಗೊಳಿಸಲು ಶ್ರಮಿಸುತ್ತದೆ. ಭಾರತದ ಮೂಲ ಸೌಕರ್ಯ ಭೂದೃಶ್ಯವನ್ನು ಪರಿವರ್ತಿಸುವ ಗುರಿ ಹೊಂದಿದೆ. ಮತ್ತು ಹೊಸತನವನ್ನು ಉತ್ತೇಜಿಸುವುದಲ್ಲದೇ, ಪಾಲುದಾರರಿಗೆ ದೀರ್ಘಾವಧಿಯ ಮೌಲ್ಯವನ್ನು ಸೃಷ್ಟಿಸುತ್ತಿದೆ. ಈ ತೆರಿಗೆ ವಿಧಾನಗಳು ಹೊಸ ಯುಗವನ್ನು ಪ್ರವೇಶಿಸಿದಂತೆಲ್ಲ, ದೂರದೃಷ್ಟಿಯ ಕಂಪನಿಗಳು ತೆರಿಗೆ ಪಾರದರ್ಶಕತೆಯ ವರದಿಯನ್ನು ಪ್ರೇರೇಪಿಸುತ್ತವೆ. ಅಂತಹ ಕಂಪನಿಗಳು ಹೆಚ್ಚು ಹೆಚ್ಚು ಪಾಲುದಾರರ ಗಮನವನ್ನು ಸೆಳೆಯಲು ಮತ್ತು ಹೆಚ್ಚಿನ ವಿಶ್ವಾಸಾರ್ಹತೆಯನ್ನು ಪಡೆಯಲು ಪ್ರಯತ್ನಿಸುತ್ತವೆ. ಇದು ಕಂಪನಿಯ ಪಾರದರ್ಶಕ ಆಡಳಿತ ಮತ್ತು ಹೊಣೆಗಾರಿಕೆ ಮೇಲಿನ ನಿರಂತರ ಪ್ರಯತ್ನವನ್ನು ತೋರಿಸುತ್ತದೆ. ಹಾಗೂ ಭಾರತದ ಆರ್ಥಿಕ ವ್ಯವಸ್ಥೆಗೆ ದೀರ್ಘಕಾಲಿಕ ವೃದ್ಧಿಯನ್ನು ತಲುಪಿಸಲು ಮಾಡಿದ ಬದ್ಧತೆಯನ್ನೂ ಪ್ರತಿಬಿಂಬಿಸುತ್ತದೆ ಎನ್ನಲಾಗಿದೆ.
ಹೀಗೆ ತನ್ನ ದೇಶದ ಬೊಕ್ಕಸಕ್ಕೆ ತಾನು ನೀಡುತ್ತಿರುವ ಕೊಡುಗೆಗಳ ಬಗ್ಗೆ, ಸ್ವಯಂಪ್ರೇರಣೆಯಿಂದ ಮಾಹಿತಿ ತಿಳಿಸುವ ಮೂಲಕ ಅದಾನಿ ಗ್ರೂಪ್ ಭಾರತದ ಆರ್ಥಿಕ ಅಭಿವೃದ್ಧಿಯನ್ನು ಬಲಪಡಿಸುತ್ತಿದೆ. ಅಲ್ಲದೇ ಅದರ ಪಾಲುದಾರರೂ ಕೂಡ ತಿಳುವಳಿಕೆಯಿಂದ ಪಾರದರ್ಶಕವಾದ ತೆರಿಗೆ ಪಾವತಿಸಲು ಪ್ರೇರೇಪಿಸುತ್ತಿದೆ ಎನ್ನಲಾಗಿದೆ.


Click it and Unblock the Notifications