ಅದಾನಿ - ಹಿಂಡನ್‌ಬರ್ಗ್ ಪ್ರಕರಣದ ವಿಚಾರಣೆಯನ್ನು ಭಾರತದ ಸುಪ್ರೀಂ ಕೋರ್ಟ್ ಶುಕ್ರವಾರ ಮುಂದೂಡಿದೆ. ವರದಿ ಪ್ರಕಾರ ಸುಪ್ರೀಂ ಕೋರ್ಟ್ ಈಗ ಅಕ್ಟೋಬರ್ 20 ರಂದು ಪ್ರಕರಣದ ವಿಚಾರಣೆ ನಡೆಸಲಿದೆ. ಈ ಪ್ರಕರಣದ ತನಿಖೆ ಸುದ್ದಿ ಪ್ರಕಟವಾಗುತ್ತಿದ್ದಂತೆ ಅದಾನಿ ಗ್ರೂಪ್‌ನ ಬಹುತೇಕ ಎಲ್ಲ ಸ್ಟಾಕ್‌ಗಳು ಕುಸಿತವಾಗಿದೆ.
ಅದಾನಿ ಎಂಟರ್‌ಪ್ರೈಸಸ್, ಅದಾನಿ ಪೋರ್ಟ್ಸ್ & ಎಸ್‌ಇಜೆಡ್, ಅದಾನಿ ಪವರ್ ಸೇರಿದಂತೆ ಅದಾನಿ ಗ್ರೂಪ್ ಷೇರುಗಳು ಇಂದು ಸುಪ್ರೀಂ ಕೋರ್ಟ್‌ನಲ್ಲಿ ಅದಾನಿ-ಹಿಂಡೆನ್‌ಬರ್ಗ್ ಪ್ರಕರಣದ ವಿಚಾರಣೆಯ ನಡುವೆ ಭಾರೀ ಇಳಿಕೆಯಾಗಿದೆ. ಅದಾನಿ ಎಂಟರ್‌ಪ್ರೈಸಸ್ ಷೇರುಗಳು ಶೇಕಡ 3 ರಷ್ಟು ಇಳಿಕೆಯಾಗಿದೆ. ಬಹುತೇಕ ಸ್ಟಾಕ್‌ಗಳು ಕುಸಿತವಾಗಿದೆ. ಯಾವ ಸ್ಟಾಕ್‌ಗಳು ಎಷ್ಟು ಇಳಿಕೆಯಾಗಿದೆ ತಿಳಿಯಿರಿ.. ಮುಂದೆ ಓದಿ...

ಮಾರುಕಟ್ಟೆ ನಿಯಂತ್ರಕ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಸಲ್ಲಿಸಿದ ಅದಾನಿ-ಹಿಂಡೆನ್‌ಬರ್ಗ್ ಪ್ರಕರಣದ ವರದಿಯ ಬಗ್ಗೆ ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಿತು. ಕಳೆದ ತಿಂಗಳು, ಅದಾನಿ-ಹಿಂಡೆನ್‌ಬರ್ಗ್ ವಿಚಾರವಾಗಿ ಸಾರ್ವಜನಿಕ ಹಿತಾಸಕ್ತಿ ಸಲ್ಲಿಸಿದೆ. ಅದಾದ ಬಳಿಕ ಸುಪ್ರೀಂ ವಿಚಾರಣೆಯನ್ನು ನಡೆಸುತ್ತಿದೆ.
ಅದಾನಿ ಗ್ರೂಪ್ ವಿರುದ್ಧದ ಎರಡು ಆರೋಪಗಳನ್ನು ಹೊರತುಪಡಿಸಿ ಉಳಿದೆಲ್ಲವೂ ತನಿಖೆಯನ್ನು ಪೂರ್ಣಗೊಳಿಸಿದೆ ಎಂದು ಆಗಸ್ಟ್‌ನಲ್ಲಿ ಸೆಬಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಈ ವರ್ಷದ ಜನವರಿ 24 ರಂದು, ಯುಎಸ್ ಮೂಲದ ಹಿಂಡೆನ್‌ಬರ್ಗ್ ರಿಸರ್ಚ್ ಅದಾನಿ ಗ್ರೂಪ್ ಷೇರು ಮಾರುಕಟ್ಟೆಯಲ್ಲಿ ವಂಚನೆ ಮಾಡಿದೆ ಎಂದು ಆರೋಪಿಸಿದೆ. ಆರೋಪಗಳ ತನಿಖೆ ನಡೆಸಲು ಸುಪ್ರೀಂ ಸೆಬಿಗೆ ಹೇಳಿದೆ. ತನಿಖೆಯನ್ನು ವಹಿಸಿಕೊಳ್ಳಲು ಆರು ಸದಸ್ಯರ ತಜ್ಞರ ಸಮಿತಿಯನ್ನು ಮಾರ್ಚ್‌ನಲ್ಲಿ ರಚಿಸಲಾಗಿದೆ.
ಅದಾನಿ ಸ್ಟಾಕ್ಸ್ ಎಷ್ಟಿದೆ ನೋಡಿ
ಅಕ್ಟೋಬರ್ 13ರಂದು ಈ ಸಮಯಕ್ಕೆ ಅದಾನಿ ಗ್ರೂಪ್‌ನ ಅದಾನಿ ಎಂಟರ್‌ಪ್ರೈಸಸ್ ಶೇಕಡ 2.77 ರಷ್ಟು ಕುಸಿತ ಕಂಡಿದೆ, ಅದಾನಿ ಪೋರ್ಟ್ಸ್ ಶೇಕಡ 0.41 ನಷ್ಟು ಇಳಿಕೆಯಾಗಿದೆ. ಅದಾನಿ ಟೋಟಲ್ ಗ್ಯಾಸ್ ಸುಮಾರು ಶೇಕಡ 0.90 ರಷ್ಟು ಕುಗ್ಗಿದೆ. ಆದರೆ ಈ ನಡುವೆ ಅದಾನಿ ಗ್ರೀನ್ ಮತ್ತು ಅದಾನಿ ಎನರ್ಜಿ ಸೊಲ್ಯೂಷನ್ಸ್ ಕ್ರಮವಾಗಿ ಶೇಕಡ 0.61 ಮತ್ತು ಶೇಕಡ 0.86 ರಷ್ಟು ಇಳಿಕೆಯನ್ನು ಕಂಡಿದೆ.
ಈ ನಡುವೆ ಅದಾನಿ ವಿಲ್ಮಾರ್ ಷೇರುಗಳು ಶೇಕಡ 0.85 ನಷ್ಟು ಕುಸಿದಿದೆ. ಅದಾನಿ ಗ್ರೂಪ್‌ನ ಸಿಮೆಂಟ್ ಸ್ಟಾಕ್ ಅಂಬುಜಾ ಸಿಮೆಂಟ್ಸ್ ಸಹ ಶೇಕಡ 0.64 ನಷ್ಟು ಇಳಿಕೆಯಾಗಿದೆ. ಈ ನಡುವೆ ಅದಾನಿ ಸಂಸ್ಥೆಯ ಇನ್ನೊಂದು ಸಿಮೆಂಟ್ ಸ್ಟಾಕ್ ಆದ ಎಸಿಸಿ ಶೇಕಡ 0.45 ರಷ್ಟು ಕುಸಿತಗೊಂಡಿದೆ. ಸಂಸ್ಥೆಯ ಮಾಧ್ಯಮ ಸ್ಟಾಕ್ ಆದ ಎನ್‌ಡಿಟಿವಿ ಶೇಕಡ 0.023ರಷ್ಟು ಇಳಿದಿದೆ. ಅದಾನಿ ಪವರ್ ಶೇಕಡ 1.22 ರಷ್ಟು ನಷ್ಟ ಕಂಡಿದೆ.


Click it and Unblock the Notifications