ಸೆಕ್ಯೂರಿಟೀಸ್ ಆಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ಮನವಿಯನ್ನು ಸಲ್ಲಿಸಿದೆ. ಅದಾನಿ - ಹಿಂಡನ್‌ಬರ್ಗ್ ವರದಿಯ ಬಗ್ಗೆ ಸೆಬಿ ಸುಪ್ರೀಂ ಕೋರ್ಟ್‌ಗೆ 41 ಪುಟಗಳ ಅಫಿಡವಿಟ್ ಅನ್ನು ಸಲ್ಲಿಸಿದೆ. ಇದರಲ್ಲಿ ತಜ್ಞರ ಸಮಿತಿ ಮತ್ತು ಅರ್ಜಿದಾರರ ಶಿಫಾರಸುಗಳನ್ನು ದಾಖಲಿಸಿದೆ. ಹಾಗೆಯೇ ಸೆಬಿಯು ಸುಪ್ರೀಂ ಕೋರ್ಟ್‌ನಿಂದ ಸೂಕ್ತ ಆದೇಶಕ್ಕಾಗಿ ಮನವಿ ಮಾಡಿದೆ.
ಸೆಕ್ಯುರಿಟೀಸ್ ಮಾರುಕಟ್ಟೆಯ ಮೇಲೆ ನೆಗೆಟಿವ್ ಪ್ರಭಾವವನ್ನು ಮಿತಿಗೊಳಿಸುವ ನಿಟ್ಟಿನಲ್ಲಿ ಶೀಘ್ರವೇ ಕ್ರಮವನ್ನು ಕೈಗೊಳ್ಳುವ ಅಗತ್ಯವಿದೆ ಎಂದು ತಜ್ಞರ ಸಮಿತಿಯು ಹೇಳಿದೆ. ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆಯಲ್ಲಿ ವಂಚನೆಯನ್ನು ಮಾಡಿದೆ ಎಂದು ಜನವರಿಯಲ್ಲಿ ಅದಾನಿ ಗ್ರೂಪ್ ವರದಿ ಮಾಡಿದೆ. ಇದಾದ ಬಳಿಕ ಅದಾನಿ ಸ್ಟಾಕ್ ಮಾರುಕಟ್ಟೆಯಲ್ಲಿ ಭಾರೀ ನಷ್ಟವನ್ನು ಕಂಡಿದೆ.

ಸೆಬಿಗೆ ಸುಪ್ರೀಂ ಕೋರ್ಟ್‌ನ ಗಡುವು
ಪ್ರಸ್ತುತ ಈ ಪ್ರಕರಣದ ತನಿಖೆ ನಡೆಯುತ್ತಿದೆ. ಅದಾನಿ- ಹಿಂಡನ್‌ಬರ್ಗ್ ವರದಿಯ ಸಮಸ್ಯೆಯು ತನಿಖೆಯನ್ನು ಪೂರ್ಣಗೊಳಿಸಿದೆ. ನಂತರ ಅದರ ವರದಿಯನ್ನು ಸಲ್ಲಿಸಲು ಸುಪ್ರೀಂ ಕೋರ್ಟ್ ಮಾರುಕಟ್ಟೆ ನಿಯಂತ್ರಕರಿಗೆ ಆಗಸ್ಟ್ 14, 2023 ರವರೆಗೆ ಅವಕಾಶ ನೀಡಿತ್ತು. ಈಗ ಸೆಬಿಯು ಸುಮಾರು 41 ಪುಟಗಳ ಅಫಿಡವಿಟ್ ಅನ್ನು ಸಲ್ಲಿಸಿದೆ.
ಅದಾನಿ ಗ್ರೂಪ್ ಷೇರುಗಳು ಹೇಗಿದೆ?
ಅದಾನಿ - ಹಿಂಡನ್‌ಬರ್ಗ್ ವರದಿಯ ಬಗ್ಗೆ ಸೆಬಿ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಅನ್ನು ಸಲ್ಲಿಸಿದೆ. ಇದಾದ ಬೆನ್ನಲ್ಲೇ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್, ಅದಾನಿ ಪೋರ್ಟ್ಸ್ ಮತ್ತು ಎಸ್‌ಇಜೆಡ್, ಅದಾನಿ ಪವರ್ ಲಿಮಿಟೆಡ್ ಮತ್ತು ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಷೇರುಗಳು ಲಾಭವು ಕಡಿಮೆಯಾಗಿದೆ. ಅದಾನಿ ಟೋಟಲ್ ಗ್ಯಾಸ್, ಅದಾನಿ ಟ್ರಾನ್ಸ್‌ಮಿಷನ್ ಮತ್ತು ಅದಾನಿ ವಿಲ್ಮಾರ್‌ನಂತಹ ಇತರ ಷೇರುಗಳು ಕೂಡಾ ಕುಸಿತ ಕಂಡಿದೆ.
ತಜ್ಞರ ಸಮಿತಿ ಮತ್ತು ಅರ್ಜಿದಾರರ ಶಿಫಾರಸುಗಳನ್ನು ಸೆಬಿ ದಾಖಲಿಸಿದೆ. ಸುಪ್ರೀಂ ಕೋರ್ಟ್ ನಾಳೆ ಪ್ರಕರಣದ ವಿಚಾರಣೆಯನ್ನು ನಿಗದಿಪಡಿಸಿದೆ. ಅದಾನಿ- ಹಿಂಡನ್‌ಬರ್ಗ್ ಸಮಸ್ಯೆಯ ತನಿಖೆಯನ್ನು ಪೂರ್ಣಗೊಳಿಸಲು ಮತ್ತು ಅದರ ವರದಿಯನ್ನು ಸಲ್ಲಿಸಲು ಸುಪ್ರೀಂ ಕೋರ್ಟ್ ಸೆಬಿಗೆ ಆಗಸ್ಟ್ 14 ರವರೆಗೆ ಕಾಲಾವಕಾಶ ನೀಡಿತ್ತು.
ಅದಾನಿ ಎಂಟರ್‌ಪ್ರೈಸಸ್‌ನ ಷೇರುಗಳು ಗರಿಷ್ಠ 2,461.90 ರೂಪಾಯಿಯ ಗರಿಷ್ಠ ಮಟ್ಟಕ್ಕೆ ತಲುಪಿದೆ, ಅದಾದ ಬಳಿಕ ಶೇಕಡ 1.54ರಷ್ಟು ಏರಿಕೆಯಾಗಿ 2,415.60 ರೂಪಾಯಿಯಂತೆ ಟ್ರೇಡಿಂಗ್ ನಡೆಸುತ್ತಿದೆ. ಅದಾನಿ ಪೋರ್ಟ್ಸ್ ಷೇರುಗಳು ಶೇ.0.55ರಷ್ಟು ಏರಿಕೆಯಾಗಿ 722.70 ರೂಪಾಯಿಗೆ ವಹಿವಾಟು ನಡೆಸುತ್ತಿದೆ. ಈ ದಿನ ಈ ಸ್ಟಾಕ್ 729.85 ರೂಪಾಯಿಯ ಗರಿಷ್ಠ ಮಟ್ಟಕ್ಕೆ ತಲುಪಿದೆ. ಅದಾನಿ ಪವರ್ ಶೇ.0.3ರಷ್ಟು ಏರಿಕೆಯಾಗಿ ರೂಪಾಯಿ 244.60ಕ್ಕೆ ತಲುಪಿದ್ದು ದಿನದ ಗರಿಷ್ಠ ಮಟ್ಟ 249.35 ರೂಪಾಯಿ ಆಗಿದೆ.
ಅದಾನಿ ಟ್ರಾನ್ಸ್‌ಮಿಷನ್‌ನ ಷೇರುಗಳು ಶೇಕಡ 0.95 ರಷ್ಟು ಕುಸಿದು 752.75 ರೂಪಾಯಿಯಂತೆ ವಹಿವಾಟು ನಡೆಸಿದೆ. ಇಂದು ಮುಂಜಾನೆ 764.15 ರೂಪಾಯಿಯ ಗರಿಷ್ಠ ಮಟ್ಟಕ್ಕೆ ಏರಿದೆ. ಅದಾನಿ ವಿಲ್ಮಾರ್ ಶೇಕಡ 0.56ರಷ್ಟು ಇಳಿಕೆಯಾಗಿ, 401.60 ರೂಪಾಯಿಗೆ ತಲುಪಿದೆ. ದಿನದ ವಹಿವಾಟಿನಲ್ಲಿ 407.45 ರೂಪಾಯಿಯ ಗರಿಷ್ಠ ಮಟ್ಟಕ್ಕೆ ಹೆಚ್ಚಳವಾಗಿದೆ. ಅದಾನಿ ಟೋಟಲ್ ಗ್ಯಾಸ್ ಶೇ.0.12ರಷ್ಟು ಕುಸಿದು 642.10 ರೂಪಾಯಿಗೆ ತಲುಪಿದೆ. ಈ ಷೇರು ಇಂದು ಗರಿಷ್ಠ 652 ರೂಪಾಯಿಗೆ ವಹಿವಾಟಿನ ನಡುವೆ ತಲುಪಿದೆ. ಎಸಿಸಿ, ಅಂಬುಜಾ ಸಿಮೆಂಟ್ಸ್ ಮತ್ತು ಎನ್‌ಡಿಟಿವಿಯಂತಹ ಷೇರುಗಳು ಹೆಚ್ಚು ಏರಿಳಿತ ಕಂಡಿಲ್ಲ.
ಇನ್ನು ಅದಾನಿ ಗ್ರೂಪ್ ಸ್ಟಾಕ್‌ಗಳು ಜೂನ್ 23 ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಅದಾನಿ ಗ್ರೂಪ್‌ನ ಸ್ಟಾಕ್‌ಗಳು ಸುಮಾರು ಶೇಕಡ 6ರಷ್ಟು ಇಳಿಕೆಯನ್ನು ಕಂಡಿದೆ. ಬಿಎಸ್‌ಇಯಲ್ಲಿ ವಹಿವಾಟಿನ ಮಧ್ಯದಲ್ಲಿ ಸ್ಟಾಕ್‌ಗಳು ಇಳಿಕೆಯನ್ನು ಕಂಡಿದೆ. ಅದಾನಿ ಸ್ಟಾಕ್ ಕುಸಿತ ಕಾಣಲು ಈ ಹಿಂದಿನಂತೆಯೇ ಹಿಂಡನ್‌ಬರ್ಗ್ ವರದಿಯೇ ಕಾರಣವಾಗಿದೆ.


Click it and Unblock the Notifications