Aero India 2025: ಯಲಹಂಕದಲ್ಲಿ ಕ್ರೇನ್‌ ಬಳಕೆ, ಮಾಂಸ ಮಾರಾಟಕ್ಕೆ ಬಿಬಿಎಂಪಿ ನಿರ್ಬಂಧ

ಬೆಂಗಳೂರಿನ ಯಲಹಂಕದಲ್ಲಿ ಈ ಬಾರಿ ಏರೋ ಇಂಡಿಯಾ ಕಾರಣದಿಂದಾಗಿ 2025ರ ಜನವರಿ 23 ರಿಂದ ಯಲಹಂಕದ ಸುತ್ತಾಮುತ್ತ ಕ್ರೇನ್‌ ಬಳಕೆ ಮತ್ತು ಮಾಂಸ ಮಾರಾಟವನ್ನ ಬಿಬಿಎಂಪಿ ನಿಷೇದಿಸಿದೆ.

ಫೆಬ್ರವರಿ 10 ರಿಂದ 14 ರ ನಡುವೆ ವಾಯುಯಾನ ಪ್ರದರ್ಶನಗಳು ಮತ್ತು ಚಟುವಟಿಕೆಗಳನ್ನು ಒಳಗೊಂಡಿರುವ ಏರೋ ಇಂಡಿಯಾ 2025 ಕ್ಕೆ ಮುಂಚಿತವಾಗಿ ಬಿಬಿಎಂಪಿ ಹಲವಾರು ನಿರ್ದೇಶನಗಳನ್ನು ನೀಡಿತ್ತು. ಯಲಹಂಕದ 13 ಕಿಲೋ ಮೀಟರ್‌ ವ್ಯಪ್ತಿಯಲ್ಲಿ ಮೀನು, ಮಾಂಸ ಮತ್ತು ಮಾಂಸಹಾರಿ ವಸ್ತುಗಳನ್ನ ಮಾರಾಟ ಮಾಡಕೂಡದು ಎಂದು ಬಿಬಿಎಂಪಿ ನಿಷಾದಾಜ್ಞೆಯನ್ನ ಜಾರಿ ಮಾಡಿದೆ. ಈ ಹಿನ್ನೆಲೆ ಆ ಪ್ರದೇಶದಲ್ಲಿರುವವರಿಗೆ ನೋಟಿಸ್‌ ಜಾರಿ ಮಾಡಿದೆ.

ಯಲಹಂಕದಲ್ಲಿ ಮಾಂಸ ಮಾರಾಟಕ್ಕೆ ಬಿಬಿಎಂಪಿ ನಿರ್ಬಂಧ! ಏಕೆ?

ಏರೋ ಇಂಡಿಯಾ 2025ರ ಪ್ರದರ್ಶನವು 10-02-2025 ರಿಂದ 14-02-2025ರವರೆಗೆ ಏಎರ್‌ಫೋರ್ಸ್‌ ಸ್ಟೇಷನ್‌ ಯಲಹಂಕದಲ್ಲಿ ನಡೆಯಲಿದೆ. ಈ ಹಿನ್ನೆಲೆ 13 ಕಿಲೋ ಮೀಟರ್‌ ಅಂತರದಲ್ಲಿ ಕೋಳಿ, ಮೀನು ಸೇರಿದಂತೆ ಮಾಂಸಹಾರದ ಅಂಗಡಿಗಳನ್ನ ಮುಚ್ಚಲು ಬಿಬಿಎಂಪಿ ತಿಳಿಸಿದೆ. ಜೊತೆಗೆ ಮಾಸದ ಖಾದ್ಯಗಳನ್ನ ಸೇವಿಸುವುದನ್ನು ಕೂಡ ನಿಷೇದಿಸಿದೆ. ಜೊತೆ ಅಲ್ಲಿರುವ ಮಾಂಸದ ಅಂಗಡಿಗಳಿಗೆ, ಹೋಟೆಲ್‌ ರೆಸ್ಟೋರಂಟ್‌ ಮಾಲೀಕರಿಗೆ ಜೊತೆಗೆ ಸಾರ್ವಜನಿಕರಿಗೆ ಬಿಬಿಎಂಪಿ ಸೂಚನೆಯನ್ನ ನೀಡಿದೆ. ಹಾಗೆ 23ನೇ ಜನವರಿ 2025 ರಿಂದ 17ನೇ ಫೆಬ್ರವರಿ 2025 ರವರೆಗೆ ಮಾಂಸ ಮಾರಾಟ ಹಾಗು ಕ್ರೇನ್‌ ಬಳಕೆಯನ್ನ ಮಾಡಬಾರದು ಎಂದು ಬಿಬಿಎಂಪಿ ತನ್ನ ಪ್ರಕಟಣೆಯ ಮೂಲಕ ತಿಳಿಸಿದೆ.

ಬೆಂಗಳೂರಿನ ಯಲಹಂಕದಲ್ಲಿ ಏರ್‌ಫೋರ್ಸ್ ಸ್ಟೇಷನ್‌ನಲ್ಲಿ 15ನೇ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯುತ್ತಿದ್ದು ಈ ಹಿನ್ನೆಲೆ ಇದಕ್ಕಾಗಿ ಏರ್‌ಫೋರ್ಸ್‌ ಹಾಗು ಬಿಬಿಎಂಪಿ ಸಕಲ ಸಿದ್ದತೆಗಳನ್ನ ಮಾಡಿಕೊಳ್ತಿದೆ. ಹೀಗಾಗಿ ಇದಕ್ಕೂ ಮುಂಚಿತವಾಗಿ ಸಾಕಷ್ಟು ಕ್ರಮಗಳನ್ನ ತೆಗೆದುಕೊಂಡಿದೆ. ಪ್ರದರ್ಶನಕ್‌ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಟ್ಟಡ ನಿರ್ಮಾಣಕ್ಕೆ ಕ್ರೇನ್ ಬಳಕೆಯನ್ನು ಮತ್ತು ಸುತ್ತಮುತ್ತಲಿನ ಮಾಂಸ ಮಾರಾಟ ಕೇಂದ್ರಗಳನ್ನು ಮುಚ್ಚಬೇಕು, ಹೀಗೆ ಹತ್ತುಹಲವು ಕಟ್ಟುನಿಟ್ಟಿನ ನಿರ್ಬಂಧಗಳನ್ನು ಬಿಬಿರಎಂಪಿ ಘೋಷಿಸಿದೆ.

ಇದು ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನವಾಗಿದ್ದು, ಐದು ದಿನಗಳ ಕಾಲ ಈ ವೈಮಾನಿಕ ಪ್ರದರ್ಶನ ನಡೆತಲಿದೆ. ಫೆಬ್ರವರಿ 10 ರಿಂದ 14 ರವರೆಗೆ ಈ ಏರೋ ಇಂಡಿಯಾ ಪ್ರದರ್ಶನ ನಡೆಯಲಲಿದೆ. ಈ ಪ್ರದರ್ಶನಕ್ಕಾಗಿ ಭಾರತ ಮಾತ್ರವಲ್ಲದೇ ದೇಶ ವಿದೇಶಗಳಿಂದ ನೂರಾರು ಸೂಪರ್ಸಾನಿಕ್ ಫೈಟರ್ ಜೆಟ್‌ಗಳು ಕೂಡ ಭಾಗವಹಿಸುವ ನಿರೀಕ್ಷೆಯಿದೆ. ಇನ್ನು ಈ ಅದ್ಭುತ ವೈಮಾನಿಕ ಪ್ರದರ್ಶನವನ್ನ ಕಣ್ತುಂಬಿಕೊಳ್ಳಲು ಹಲವೆಡೆಯಿಂದದ ಜನರು ಬಂದು ಸೇರಲಿದ್ದಾರೆ.

ಪ್ರದರ್ಶನದ ಸಮಯದಲ್ಲಿ ಹಾಗು ವಿಮನ ಅಭ್ಯಾಸದ ಸಮಯದಲ್ಲಿ ಪಕ್ಷಿಗಳಿಂದ ಆಗುವ ತೊಂದೆಗನ್ನ ತಪ್ಪಿಸಲು ಹಾಗೆ ಸುರಕ್ಷತೆಯನ್ನು ಕಾಪಾಡಲು ಈ ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಳ್ಳಲಾಗ್ತಿದೆ. ಪರಭಕ್ಷಕ ಪಕ್ಷಿಗಳು, ಅದರಲ್ಲೂ ಹದ್ದುಗಳು, ಉಳಿದ ಆಹಾರ ಜೊತೆಗೆ ಮಾಂಸದ ತ್ಯಾಜ್ಯವನ್ನ ಅವು ತಿನ್ನುತ್ತವೆ, ಅದಕ್ಕಾಗಿಯೇ ಅಧಿಕಾರಿಗಳು ಅಪಘಾತಗಳನ್ನು ತಡೆಗಟ್ಟಲು ಅವುಗಳನ್ನು ಆಕಾಶದಲ್ಲ ಹಾರದಂತೆ ನೋಡಿಕೊಳ್ಳಲು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ.

ಈ ನಿಯಮಗಳನ್ನ ಯಾರೇ ಉಲ್ಲಂಘಿಸಿದರೂ ಕೂಡ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುದು , ಹಾಗೆ ಬಿಬಿಎಂಪಿ ಕಾಯಿದೆ 2020 ಮತ್ತು ಇಂಡಿಯನ್ ಏರ್‌ಕ್ರಾಫ್ಟ್ ನಿಯಮಗಳು 1937 ನಿಯಮ 91 ರ ಅಡಿಯಲ್ಲಿ ಅವರಿಗೆ ಶಿಕ್ಷೆಗೆ ವಿಧಿಸಲಗುವುದು ಎಂದು BBMP ಸೂಚನೆಯನ್ನ ನೀಡಿದೆ.

ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನವಾದ ಏರೋ ಇಂಡಿಯಾಪ್ದರ್ಶನ ಮೊದಲು 1996ರಲ್ಲಿ ಆರಂಭವಗಿದ್ದು, ಇಲ್ಲಿವರೆಗೆ ಯಶಸ್ವಿಯಗಿ ನಡೆದುಕೊಂಡು ಬಂದಿದೆ. ಈ ವರ್ಷವೂ ಏರೋ ಇಂಡಿಯಾ-2025 ಫೆಬ್ರವರಿ 10 ರಿಂದ 14 ರವರೆಗೆ ಯಲಹಂಕ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ನಡೆಯಲಿದೆ. ಭಾರತೀಯ ವಾಯುಪಡೆಯ ಜೆಟ್‌ಗಳು ಮತ್ತು ಹೆಲಿಕಾಪ್ಟರ್ ಏರೋಬ್ಯಾಟಿಕ್ಸ್ ತಂಡಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ.

ಐದು ದಿನಗಳ ಕಾಲ ಈ ಪ್ರದರ್ಶನ ನಡೆಲಿದ್ದು, ಉದ್ಘಾಟನಾ ಕಾರ್ಯಕ್ರಮ, ರಕ್ಷಣಾ ಮಂತ್ರಿಗಳ ಕಾನ್ಕ್ಲೇವ್, ಸಿಇಒಗಳ ರೌಂಡ್-ಟೇಬಲ್, iDEX ಸ್ಟಾರ್ಟ್-ಅಪ್ ಈವೆಂಟ್, ಏರ್‌-ಟೇಕಿಂಗ್ ಏರ್ ಶೋಗಳು, ಇಂಡಿಯಾ ಪೆವಿಲಿಯನ್ ಅನ್ನು ಒಳಗೊಂಡಿರುವ ದೊಡ್ಡ ಪ್ರದರ್ಶನ ಪ್ರದೇಶ ಮತ್ತು ಏರೋಸ್ಪೇಸ್ ವ್ಯಾಪಾರ ಮೇಳವನ್ನ ಕೂಡ ಈ ಪ್ರದರ್ಶನ ಒಳಗೊಂಡಿದೆ. ಇನ್ನು ಈ ಬಾರಿ ಪ್ರದರ್ಶನದ ಥೀಮ್‌ 'ದಿ ರನ್‌ವೇ ಟು ಎ ಬಿಲಿಯನ್ ಆಪರ್ಚುನಿಟೀಸ್' ಆಗಿದೆ.

ಕಟ್ಟಡ ನಿರ್ಮಾಣಕ್ಕಾಗಿ ಬಳಕೆ ಮಾಡುತ್ತಿರುವ ಕ್ರೇನ್‌ಗಳ ಎತ್ತರವನ್ನ ಕಡಿಮ ಮಾಡಲು ಈ ಹಿಂದೆಯೇ ಬಿಬಎಂಪ ಸೂಚನೆಯನ್ನ ನೀಡಿತ್ತು. ಅಲ್ಲದೇ ಈ ಪ್ರದರ್ಶನದ ವೇಳೆ ಅಂದರೆ ಫೆಬ್ರವರಿ 1 ರಿಂದ 14 ರ ನಡುವೆ ಎಲ್ಲಾ ಕ್ರೇನ್ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕು ಎಂದು ಬಿಬಿಎಂಪಿ ನೋಟಸ್‌ ನೀಡುವ ಮೂಲಕ ಸೂಚನೆಯನ್ನ ನೀಡಿದೆ.

ಈ ಪ್ರದರ್ಶನವು ವಿದೇಶಿ ಮತ್ತು ಭಾರತೀಯ ಸಂಸ್ಥೆಗಳ ನಡುವಿನ ಪಾಲುದಾರಿಕೆಯನ್ನು ರೂಪಿಸಲು ಮತ್ತು ಸ್ವದೇಶೀಕರಣ ಪ್ರಕ್ರಿಯೆಯನ್ನು ವೇಗಗೊಳಿಸಲು ಹಾಗೆ ಜಾಗತಿಕ ಮೌಲ್ಯ ಸರಪಳಿಯಲ್ಲಿ ಹೊಸ ಮಾರ್ಗಗಳ ಅನ್ವೇಷಣೆಗೆ ಈ ವೇದಿಕೆ ಸಹಾಯ ಮಾಡುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+