2025 ರ ಸಾಲಿನ ಏರ್‌ಶೋ ಬೃಹತ್ ಯಲಹಂಕ ವಲಯ ವ್ಯಾಪ್ತಿಯಲ್ಲಿ ವಾಯುಸೇನಾ ನೆಲೆಯಲ್ಲಿ ಫೆ 10 ರಿಂದ 14ರವರೆಗೆ ನಡೆಯಲಿದೆ. ಅಂತರಾಷ್ಟ್ರೀಯ ಮಟ್ಟದ 'ಏರ್ ಇಂಡಿಯಾ-2025 ಇದಾಗಿದ್ದು, ಈ ಕಾರ್ಯಕ್ರಮಕ್ಕೆ ಅಡ್ಡಿಯಾಗದಂತೆ ಈಗಾಗಲೇ ಅನೇಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಇನ್ನು ವಾಯುನೆಲೆಯಲ್ಲಿ ನಡೆಯಲಿರುವ ಏರೋ ಇಂಡಿಯಾ 2025 ಪ್ರದರ್ಶನದ ಹಿನ್ನೆಲೆಯಲ್ಲಿ ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಯಲ್ಲಿ ವ್ಯತ್ಯಯ ಆಗಲಿದೆ ಎಂದು ಏರ್ ಪೋರ್ಟ್ ತನ್ನ ಪ್ರಕಟಣೆ ತಿಳಿಸಿದೆ.

ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಗೆ ತಾತ್ಕಾಲಿಕವಾಗಿ ಅಡಚಣೆ ಉಂಟಾಗಲಿದೆ. ಏಷ್ಯಾದ ಪ್ರಮುಖ ಮಿಲಿಟರಿ ವಾಯುಯಾನ ಕಾರ್ಯಕ್ರಮದಿಂದಾಗಿ 10 ದಿನಗಳ ಅವಧಿಯಲ್ಲಿ ಒಟ್ಟು 47 ಗಂಟೆಗಳ ಕಾಲ ವಿಮಾನ ಸಂಚಾರಕ್ಕೆ ಬದಲಾವಣೆಯಾಗಲಿದೆ.
ವಿಮಾನ ಹಾರಾಟ ವೇಳಾಪಟ್ಟಿಗಳ ಮೇಲೆ ಪರಿಣಾಮ:
ನಿಗದಿತ ಅವಧಿಯಲ್ಲಿ ಪ್ರತಿದಿನ ಕೆಲವು ಗಂಟೆಗಳ ಕಾಲ ವಾಯುಪ್ರದೇಶ ಮುಚ್ಚುವಿಕೆಯಿಂದಾಗಿ ವಿಮಾನಗಳ ಕಾರ್ಯಾಚರಣೆಗಳು ವ್ಯತ್ಯಯವಾಗಬಹುದು. ಪ್ರಯಾಣಿಕರು ತಮ್ಮ ನಿಗದಿತ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಿ ನವೀಕರಿಸಿದ ವಿಮಾನ ಸಮಯಪಟ್ಟಿ ಮತ್ತು ಪ್ರಯಾಣ ಯೋಜನೆಗಳನ್ನು ಪಡೆಯಲು ಸಲಹೆ ನೀಡಲಾಗಿದೆ.
ವ್ಯತ್ಯಯ ಸಮಯ :
ಫೆಬ್ರವರಿ 5 ಮತ್ತು 8, 2025: ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ
ಫೆಬ್ರವರಿ 9, 2025: ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ
ಫೆಬ್ರವರಿ 10, 2025: ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಮಧ್ಯಾಹ್ನ 2 ರಿಂದ ಸಂಜೆ 4 ರವರೆಗೆ
ಫೆಬ್ರವರಿ 11ಮತ್ತು12, 2025: ಮಧ್ಯಾಹ್ನ 12 ರಿಂದ ಮಧ್ಯಾಹ್ನ 3 ರವರೆಗೆ
ಫೆಬ್ರವರಿ 13 ಮತ್ತು14, 2025: ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ
ಈ ಅವಧಿಯಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಅನುಕೂಲವಾಗುವಂತೆ ಯೋಜಿಸಲು ಮತ್ತು ಸಂಭಾವ್ಯ ವಿಳಂಬಗಳು ಅಥವಾ ಸಮಯಪಟ್ಟಿ ಬದಲಾವಣೆಗಳನ್ನು ಪ್ರಮುಖವಾಗಿ ಗಣನೆಗೆ ತೆಗೆದುಕೊಳ್ಳಲು ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು ಕೋರಿದ್ದಾರೆ
ಏರೋ ಇಂಡಿಯಾದ 15ನೇ ಆವೃತ್ತಿ ಫೆಬ್ರವರಿ 10ರಿಂದ 14ರವರೆಗೆ ಯಲಹಂಕ ವಾಯುಪಡೆ ನಿಲ್ದಾಣದಲ್ಲಿ ನಡೆಯಲಿದೆ. ಇನ್ನು ಕೇವಲ ೧೮ ದಿನ ಮಾತ್ರ ಬಾಕಿ ಇರುವುದರಿಂದ ಪೂರ್ವಾಭ್ಯಾಸ ಮತ್ತು ಬಹುನಿರೀಕ್ಷಿತ ವೈಮಾನಿಕ ಪ್ರದರ್ಶನ ಸೇರಿದಂತೆ ಮಹತ್ವದ ಕಾರ್ಯಕ್ರಮ ಸಿದ್ಧತೆ ನಡೆಯಬೇಕಿದೆ. ಇದು ವಾಯುಪ್ರದೇಶ ನಿರ್ಬಂಧಗಳಿಗೆ ಪ್ರಾಥಮಿಕ ಕಾರಣವಾಗಿದೆ. ಈ ಪ್ರದೇಶವು ಕೆಂಪೇಗೌಡ ವಿಮಾನ ನಿಲ್ದಾಣದ ಸಮೀಪದಲ್ಲೇ ಇದೆ. ಈ ದಿನಗಳಲ್ಲಿ ವಿಮಾನ ಸಂಚಾರದಲ್ಲಿ ವ್ಯತ್ಯಯವಾಗಲಿದೆ.
ಡ್ರೋನ್, ಹಾಟ್ ಏರ್ ಬಲೂನ್ ನಿಷೇಧ
ಕರ್ನಾಟಕ ಸರ್ಕಾರವು ಯಾವುದೇ ಡ್ರೋನ್, ಹಾಟ್ ಏರ್ ಬಲೂನ್ ಸೇರಿ ಬೆಂಗಳೂರಿನಲ್ಲಿ ಯಾವುದೇ ರೀತಿಯ ಉಪ- ಸಂಪ್ರದಾಯಿಕ ವೈಮಾನಿಕ ಹಾರಾಟದ ಮೇಲೆ ಫೆಬ್ರವರಿ 10 ರಿಂದ ಐದು ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಲೋಹದ ಹಕ್ಕಿಗಳ ಕಲರವಕ್ಕೆ ಯಲಹಂಕ ವಾಯುನೆಲೆ ಸಿದ್ಧವಾಗುತ್ತಿದ್ದು ಇದಕ್ಕಾಗಿ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.
ಐದು ದಿನಗಳ ಕಾಲ ನಡೆಯುವ ಏರ್ ಶೋ ಗೆ ಫೆಬ್ರವರಿ 10 ರಿಂದ 12 ರವರೆಗೆ ಬಿ 2 ಬಿ ( ಬ್ಯೂಸಿನೆಸ್ ಟು ಬ್ಯೂಸಿನೆಸ್ ) ಸಭೆಗಳು ನಡೆಯಲಿದ್ದು, ಕೊನೆಯ ಎರಡು ದಿನ ಫೆಬ್ರವರಿ 13 ಮತ್ತು 14ರಂದು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಿದೆ. ಏರೋಸ್ಪೇಸ್ ವಲಯದಿಂದ ದೊಡ್ಡ ಶ್ರೇಣಿಯ ಮಿಲಿಟರಿ ವೇದಿಕೆಗಳ ವಾಯು ಪ್ರದರ್ಶನ ಮತ್ತು ಸ್ಥಿರ ಪ್ರದರ್ಶನ ಇರಲಿದೆ.


Click it and Unblock the Notifications