ಏರೋ ಇಂಡಿಯಾ ಪ್ರದರ್ಶನಕ್ಕೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಈ ಹಿನ್ನೆಲೆ ಯಲಹಂಕದಲ್ಲಿ ಜನವರಿ 23ರಿಂದ ಸರಿಯಾಗಿ ಒಂದು ತಿಂಗಳು ಮಾಂಸ ಮಾರಾಟ ಮಾಡಬರದು ಎಂದು ಬಿಬಿಎಂಪಿ ನಿರ್ಬಂಧವನ್ನ ಹೇರಿದೆ. ಇನ್ನು ಇದರ ವಿರುದ್ಧ ಹೋಟೆಲ್ ಮಾಲೀಕರು ಖಂಡನೆಯನ್ನ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಬೃಹತ್ ಬೆಂಗಳೂರು ಹೊಟೇಲ್ ಅಸೋಸಿಯೇಷನ್ (ಬಿಬಿಎಚ್‌ಎ) ಮತ್ತು ಬಿಬಿಎಂಪಿ ವಿರುದ್ಧ ಸಾಕಷ್ಟು ವಿವಾದಗಳು ಆರಂಭವಾಗಿದೆ.
ಈ ಕುರಿತಾಗಿ ಬೃಹತ್ ಬೆಂಗಳೂರು ಹೊಟೇಲ್ ಅಸೋಸಿಯೇಷನ್ (ಬಿಬಿಎಚ್‌ಎ) ಅಧ್ಯಕ್ಷ ಪಿಸಿ ರಾವ್ ಅವರು ಬಿಬಿಎಂಪಿಗೆ ಪತ್ರವೊಂದನ್ನ ಬರೆದಿದ್ದಾರೆ. ಏರ್ ಶೋ ಸಮಯದಲ್ಲಿ ಅಂದರೆ ಜನವರಿ 26ರಿಂದ ಫೆಬ್ರವರಿ 17ರವರೆಗೆ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಿರುವುದು ಸಂಪೂರ್ಣ ಅವೈಜ್ಞಾನಿಕ. ಅಲ್ಲದೆ ಒಂದು ತಿಂಗಳು ಇಲ್ಲಿ ಹೋಟೆಲ್‌ಗಳನ್ನ ನಡೆಸಲು ಸಮಸ್ಯೆಯಾಗುತ್ತದೆ. ಅಲ್ಲದೆ ಈ ಪ್ರದೇಶದಲ್ಲಿ 5,000 ಕ್ಕೂ ಹೆಚ್ಚು ಸ್ಟಾರ್ ಹೋಟೆಲ್ಗಳು, ಪಬ್‌ಗಳು, ಬಾರ್‌ಗಳು, ರೆಸ್ಟೋರೆಂಟ್‌ಗಳು ಇವೆ. ಜೊತೆಗೆ ಜನಪ್ರಿಯಾ ಬಿರಿಯಾನಿ ಹೋಟೆಲ್‌ಗಳು ಕೂಡ ಇವೆ. ಈ ರೀತಿ ನಿರ್ಬಂಧ ಹೇರುವುದರಿಂದ ಇಲ್ಲಿನ ವ್ಯಾಪಾರಿಗಳಿಗೆ ತೊಂದರೆಯಾಗಲಿದೆ. ಸಂಪೂರ್ಣ ಸ್ಥಗಿತ ಮಾಡಿದರೆ ತೋಂದರೆ ಉಂಟಾಗಬಹುದು. ಹೀಗಾಗಿ ಏರ್ ಶೋ ಸುತ್ತಾಮುತ್ತಾ ಇರುವ ಮಾಂಸದ ಅಂಗಡಿಗಳನ್ನು ಮಾತ್ರ ಒಂದು ವಾರ ಮುಚ್ಚಲು ಅಧಿಕಾರಿಗಳು ಸೂಚನೆಯನ್ನ ನೀಡಬೇಕು ಎಮದು ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಜೊತೆಗೆ ಈ ರೀತಿ ನಿಷೇಧವನ್ನ ಮಾಡುವುದರಿಂದ ಹೋಟೆಲ್ ಉದ್ಯಮಗಳ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಹೋಟೆಲ್ ತ್ಯಾಜ್ಯಗಳನ್ನ ಕಸದ ಚೀಲಗಳಲ್ಲಿ ಸಂಗ್ರಹಿಸಲಾಗುತ್ತದೆ. ಹಾಗೆ ಹೋಟೆಗಳ ಬಳಿ ಪಕ್ಷಿಗಳು ಆಹಾರಕ್ಕಾಗಿ ಬರುವುದಿಲ್ಲ ಬರದಂತೆ ಕ್ರಮಗಳನ್ನ ಕೂಡ ತೆಗೆದುಕೊಳ್ಳುತ್ತೇವೆ. ಇದರ ಜೊತೆಗೆ ಏರ್‌ಫೀಲ್ಡ್‌ನ ಒಳಗೆ ಇರುವ ಅಥಿತಿಗಳಿಗೆ ಇಲ್ಲಿನ ಹೋಟೆಲ್‌ಗಳಿಂದಲೇ ಮಾಮಸದ ಊಟವನ್ನ ನೀಡಲಾಗುತ್ತದೆ. ಹಾಗೆ ಮದುವೆ, ಕಾರ್ಯಕ್ರಮಗಳು, ಸಭೆಗಳು ಎಮದು ಸಾಕಷ್ಟು ಆರ್ಡರ್‌ಗಳು ಕೂಡ ಬಂದಿವೆ. ಈಗ ಒಂದು ತಿಂಗಳು ಮಾಂಸ ನಿಷೇಧ ಮಾಡುವುದರಿಂದ ಈ ಎಲ್ಲಾ ಕಾರ್ಯಕ್ರಮಗಳಿಗೆ ತೊಂದರೆಯಾಗಲಿದೆ ಎಂದು ಪಿಸಿ ರಾವ್ ಅವರು ಪತ್ರದ ಮೂಲಕ ತಿಳಿಸಿದ್ದಾರೆ.
ಕಳೆದ ವಾರ ಬಿಬಿಎಂಪಿ ಫೆಬ್ರವರಿ 10 ರಿಂದ 14 ರ ನಡುವೆ ವಾಯುಯಾನ ಪ್ರದರ್ಶನ ಮತ್ತು ಚಟುವಟಿಕೆಗಳು ಇರುವ ಹಿನ್ನೆಲೆ ಬಿಬಿಎಂಪಿ ಹಲವಾರು ನಿರ್ದೇಶನಗಳನ್ನು ನೀಡಿದೆ. ಯಲಹಂಕದ 13 ಕಿಲೋ ಮೀಟರ್ ವ್ಯಪ್ತಿಯಲ್ಲಿ ಮೀನು, ಮಾಂಸ ಮತ್ತು ಮಾಂಸಹಾರಿ ವಸ್ತುಗಳನ್ನ ಮಾರಾಟ ಮಾಡಕೂಡದು ಎಂದು ಬಿಬಿಎಂಪಿ ನಿಷಾದಾಜ್ಞೆಯನ್ನ ಜಾರಿ ಮಾಡಿದೆ. ಈ ಹಿನ್ನೆಲೆ ಆ ಪ್ರದೇಶದಲ್ಲಿರುವವರಿಗೆ ನೋಟಿಸ್ ಜಾರಿ ಮಾಡಿದೆ.
ಬಿಬಿಎಂಪಿ ನೋಟಿಸ್‌ನಲ್ಲಿ ಏನಿದೆ?
ಏರೋ ಇಂಡಿಯಾ 2025ರ ಪ್ರದರ್ಶನವು 10-02-2025 ರಿಂದ 14-02-2025ರವರೆಗೆ ಏಎರ್‌ಫೋರ್ಸ್ ಸ್ಟೇಷನ್ ಯಲಹಂಕದಲ್ಲಿ ನಡೆಯಲಿದೆ. ಈ ಹಿನ್ನೆಲೆ 13 ಕಿಲೋ ಮೀಟರ್ ಅಂತರದಲ್ಲಿ ಕೋಳಿ, ಮೀನು ಸೇರಿದಂತೆ ಮಾಂಸಹಾರದ ಅಂಗಡಿಗಳನ್ನ ಮುಚ್ಚಲು ಬಿಬಿಎಂಪಿ ತಿಳಿಸಿದೆ. ಜೊತೆಗೆ ಮಾಸದ ಖಾದ್ಯಗಳನ್ನ ಸೇವಿಸುವುದನ್ನು ಕೂಡ ನಿಷೇದಿಸಿದೆ. ಜೊತೆ ಅಲ್ಲಿರುವ ಮಾಂಸದ ಅಂಗಡಿಗಳಿಗೆ, ಹೋಟೆಲ್ ರೆಸ್ಟೋರಂಟ್ ಮಾಲೀಕರಿಗೆ ಜೊತೆಗೆ ಸಾರ್ವಜನಿಕರಿಗೆ ಬಿಬಿಎಂಪಿ ಸೂಚನೆಯನ್ನ ನೀಡಿದೆ. ಹಾಗೆ 23ನೇ ಜನವರಿ 2025 ರಿಂದ 17ನೇ ಫೆಬ್ರವರಿ 2025 ರವರೆಗೆ ಮಾಂಸ ಮಾರಾಟ ಹಾಗು ಕ್ರೇನ್ ಬಳಕೆಯನ್ನ ಮಾಡಬಾರದು ಎಂದು ಬಿಬಿಎಂಪಿ ತನ್ನ ಪ್ರಕಟಣೆಯ ಮೂಲಕ ತಿಳಿಸಿದೆ.
ಬೆಂಗಳೂರಿನ ಯಲಹಂಕದಲ್ಲಿ ಏರ್‌ಫೋರ್ಸ್ ಸ್ಟೇಷನ್‌ನಲ್ಲಿ 15ನೇ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯುತ್ತಿದ್ದು ಈ ಹಿನ್ನೆಲೆ ಇದಕ್ಕಾಗಿ ಏರ್‌ಫೋರ್ಸ್ ಹಾಗು ಬಿಬಿಎಂಪಿ ಸಕಲ ಸಿದ್ದತೆಗಳನ್ನ ಮಾಡಿಕೊಳ್ತಿದೆ. ಹೀಗಾಗಿ ಇದಕ್ಕೂ ಮುಂಚಿತವಾಗಿ ಸಾಕಷ್ಟು ಕ್ರಮಗಳನ್ನ ತೆಗೆದುಕೊಂಡಿದೆ. ಪ್ರದರ್ಶನಕ್‌ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಟ್ಟಡ ನಿರ್ಮಾಣಕ್ಕೆ ಕ್ರೇನ್ ಬಳಕೆಯನ್ನು ಮತ್ತು ಸುತ್ತಮುತ್ತಲಿನ ಮಾಂಸ ಮಾರಾಟ ಕೇಂದ್ರಗಳನ್ನು ಮುಚ್ಚಬೇಕು, ಹೀಗೆ ಹತ್ತುಹಲವು ಕಟ್ಟುನಿಟ್ಟಿನ ನಿರ್ಬಂಧಗಳನ್ನು ಬಿಬಿರಎಂಪಿ ಘೋಷಿಸಿದೆ.
ಇದು ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನವಾಗಿದ್ದು, ಐದು ದಿನಗಳ ಕಾಲ ಈ ವೈಮಾನಿಕ ಪ್ರದರ್ಶನ ನಡೆತಲಿದೆ. ಫೆಬ್ರವರಿ 10 ರಿಂದ 14 ರವರೆಗೆ ಈ ಏರೋ ಇಂಡಿಯಾ ಪ್ರದರ್ಶನ ನಡೆಯಲಲಿದೆ. ಈ ಪ್ರದರ್ಶನಕ್ಕಾಗಿ ಭಾರತ ಮಾತ್ರವಲ್ಲದೇ ದೇಶ ವಿದೇಶಗಳಿಂದ ನೂರಾರು ಸೂಪರ್ಸಾನಿಕ್ ಫೈಟರ್ ಜೆಟ್‌ಗಳು ಕೂಡ ಭಾಗವಹಿಸುವ ನಿರೀಕ್ಷೆಯಿದೆ. ಇನ್ನು ಈ ಅದ್ಭುತ ವೈಮಾನಿಕ ಪ್ರದರ್ಶನವನ್ನ ಕಣ್ತುಂಬಿಕೊಳ್ಳಲು ಹಲವೆಡೆಯಿಂದದ ಜನರು ಬಂದು ಸೇರಲಿದ್ದಾರೆ.
ಪ್ರದರ್ಶನದ ಸಮಯದಲ್ಲಿ ಹಾಗು ವಿಮನ ಅಭ್ಯಾಸದ ಸಮಯದಲ್ಲಿ ಪಕ್ಷಿಗಳಿಂದ ಆಗುವ ತೊಂದೆಗನ್ನ ತಪ್ಪಿಸಲು ಹಾಗೆ ಸುರಕ್ಷತೆಯನ್ನು ಕಾಪಾಡಲು ಈ ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಳ್ಳಲಾಗ್ತಿದೆ. ಪರಭಕ್ಷಕ ಪಕ್ಷಿಗಳು, ಅದರಲ್ಲೂ ಹದ್ದುಗಳು, ಉಳಿದ ಆಹಾರ ಜೊತೆಗೆ ಮಾಂಸದ ತ್ಯಾಜ್ಯವನ್ನ ಅವು ತಿನ್ನುತ್ತವೆ, ಅದಕ್ಕಾಗಿಯೇ ಅಧಿಕಾರಿಗಳು ಅಪಘಾತಗಳನ್ನು ತಡೆಗಟ್ಟಲು ಅವುಗಳನ್ನು ಆಕಾಶದಲ್ಲ ಹಾರದಂತೆ ನೋಡಿಕೊಳ್ಳಲು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ.
ಈ ನಿಯಮಗಳನ್ನ ಯಾರೇ ಉಲ್ಲಂಘಿಸಿದರೂ ಕೂಡ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುದು , ಹಾಗೆ ಬಿಬಿಎಂಪಿ ಕಾಯಿದೆ 2020 ಮತ್ತು ಇಂಡಿಯನ್ ಏರ್‌ಕ್ರಾಫ್ಟ್ ನಿಯಮಗಳು 1937 ನಿಯಮ 91 ರ ಅಡಿಯಲ್ಲಿ ಅವರಿಗೆ ಶಿಕ್ಷೆಗೆ ವಿಧಿಸಲಗುವುದು ಎಂದು BBMP ಸೂಚನೆಯನ್ನ ನೀಡಿದೆ.


Click it and Unblock the Notifications