ಬೆಂಗಳೂರು, ಆಗಸ್ಟ್ 30: ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ಒ) ಅಡಿಯಲ್ಲಿ ಉದ್ಯೋಗಿಗಳು ತಮ್ಮ ಮತ್ತು ತಮ್ಮ ಕುಟುಂಬಕ್ಕೆ ಅನೇಕ ಸೌಲಭ್ಯಗಳನ್ನು ಪಡೆಯಬಹುದು.ಬಹುದು. ಇದರ ಬಗ್ಗೆ ತುಂಬಾ ಜನರಿಗೆ ಗೊತ್ತಿಲ್ಲ. ಇಂತಹ ಒಂದು ಲಾಭ, ಪಿಂಚಣಿಗೆ ಸಂಬಂಧಿಸಿದ್ದಾಗಿದೆ.
ಇಪಿಎಫ್ಒ ಸದಸ್ಯರ ವೇತನದ ಇಂತಿಷ್ಟು ಭಾಗವನ್ನು ಪಿಎಫ್ ಗೆ ಎಂದು ಜಮಾ ಮಾಡಿರಲಾಗುತ್ತದೆ. ಇದರಿಂದ ನಿವೃತ್ತಿ ವೇಳೆಗೆ ಹಣ ಕ್ರೋಢೀಕರಣ ಆಗೋ ಜೊತೆಗೆ ಕುಟುಂಬಕ್ಕೆ ಹಣಕಾಸಿನ ಭದ್ರತೆ ಸಿಗುತ್ತದೆ. 58 ವರ್ಷಕ್ಕೆ ನಿವೃತ್ತಿ ಆದಾಗ ಅಥವಾ ನಿವೃತ್ತಿ ವಯಸ್ಸಿಗೆ ಬಂದಾಗ ಉದ್ಯೋಗಿಗಳು ಪಿಂಚಣಿ ಪಡೆಯುವುದಕ್ಕೆ ಅರ್ಹರಾಗುತ್ತಾರೆ. ಒಂದು ವೇಳೆ ಉದ್ಯೋಗಿ ಮೃತಪಟ್ಟರೆ, ಅವರ ಕುಟುಂಬ ಸದಸ್ಯರು ಫ್ಯಾಮಿಲಿ ಪೆನ್ಷನ್ ಪಡೆಬಹುದು. ಉದ್ಯೋಗಿಗಳ ಪಿಂಚಣಿ ಯೋಜನೆ (ಇಪಿಎಫ್-95) ಅಡಿ ಈ ಸೌಲಭ್ಯ ಸಿಗುತ್ತದೆ.

ಕಂಪನಿಯು ಉದ್ಯೋಗಿಗಳ ವೇತನದ ಬೇಸಿಕ್ ಮತ್ತು ಡಿಎದ ಶೇಕಡ 12 ರಷ್ಟನ್ನು ಕಡಿತ ಮಾಡಿ, ಅಷ್ಟೂ ಮೊತ್ತವನ್ನ ಉದ್ಯೋಗಿಯ ಭವಿಷ್ಯ ನಿಧಿ (ಪಿಎ) ಖಾತೆಗೆ ಜಮೆ ಮಾಡಲಾಗುತ್ತದೆ. ಇದಕ್ಕೆ ಹೆಚ್ಚುವರಿಯಾಗಿ ಕಂಪೆನಿಯು ಸ್ವತಃ ಶೇಕಡ 12 ರಷ್ಟನ್ನ ಈ ನಿಧಿಗೆ ನಿಮ್ಮ ಹೆಸರಲ್ಲಿ ಜಮೆ ಮಾಡುತ್ತದೆ. ಈ ಪೈಕಿ ಶೇಕಡ 8.33 ರಷ್ಟು ಉದ್ಯೋಗಿಗಳ ಭವಿಷ್ಯ ನಿಧಿ - ಇಪಿಎಸ್ ಅಡಿ ಸೇರಿರುತ್ತದೆ. ಉಳಿದಿದ್ದು ಪಿ ಎಫ್ ಖಾತೆಗೆ ಜಮಾ ಆಗುತ್ತದೆ. ಆದಾಗ್ಯೂ, ಪಿಂಚಣಿ ಖಾತೆಗೆ ಜಮೆ ಆಗುವ ಮೊತ್ತದ ಲೆಕ್ಕಾಚಾರಕ್ಕೆ ಬೇಸಿಕ್ ಅಥವಾ ಮೂಲ ವೇತನದ ಗರಿಷ್ಠ ಮಿತಿ 15 ಸಾವಿರ ರೂಪಾಯಿ.
ಇಪಿಎಫ್ 95 ಅಡಿಯಲ್ಲಿನ ಪಿಂಚಣಿ ಸೌಲಭ್ಯ ಕೇವಲ ಸದಸ್ಯರಿಗೆ ಮಾತ್ರವಲ್ಲ ಅವರು ನಿವೃತ್ತರಾಗುವುದಕ್ಕೂ ಮೊದಲೇ ಅಥವಾ ನಿವೃತ್ತಿ ನಂತರ ಮೃತಪಟ್ಟಲ್ಲಿ ಅವರ ಪತಿ ಅಥವಾ ಪತ್ನಿ ಮತ್ತು ಮಕ್ಕಳಿಗೆ ಸಿಗುತ್ತದೆ. ಈ ಯೋಜನೆಯಡಿ ಕುಟುಂಬ ಸದಸ್ಯರಿಗೆ ಯಾವಾಗ ಪಿಂಚಣಿ ಸಿಗುತ್ತದೆ ಮತ್ತು ಯಾವ ರೀತಿಯ ಪಿಂಚಣಿ ಸಿಗುತ್ತದೆ ಎನ್ನುವುದನ್ನು ಸಹ ತಿಳಿದುಕೊಳ್ಳಬೇಕು.
ಇಪಿಎಸ್ ಅಡಿಯಲ್ಲಿ ಉದ್ಯೋಗಿಯು ಕೆಲಸದಲ್ಲಿರೋವಾಗಲೆ ಮೃತಪಟ್ಟರೆ ಅವರ ಪತಿ ಅಥವಾ ಪತ್ನಿಯು ಮಾಸಿಕ ವಿಧವಾ ವೇತನ ಅಥವಾ ವಿಧುರ ವೇತನಕ್ಕೆ ಅರ್ಹರಾಗುತ್ತಾರೆ. ಇದು ಉದ್ಯೋಗಿಗೆ ಸಿಗುತ್ತಿರುವ ಪಿಂಚಣಿಯ ಶೇಕಡ 50 ರಷ್ಟಿರುತ್ತದೆ. ಆದರೆ ಕನಿಷ್ಠ ಪಿಂಚಣಿ ಒಂದು ಸಾವಿರ ರೂಪಾಯಿ ಇರುತ್ತದೆ. ಮೃತ ಉದ್ಯೋಗಿಯ ಅವಲಂಬಿತ ಮಕ್ಕಳೂ ಕೂಡ ಅವರಿಗೆ 25 ವರ್ಷ ವಯಸ್ಸಾಗುವವರೆಗೆ ಪಿಂಚಣಿ ಪಡೆಯುವುದಕ್ಕೆ ಅರ್ಹರಾಗಿರುತ್ತಾರೆ. ಪ್ರತಿಯೊಬ್ಬ ಮಕ್ಕಳಿಗೂ ಮೃತರ ಪತಿ ಅಥವಾ ಪತ್ನಿಗೆ ಸಿಗುವ ವೇತನದ ಶೇಕಡ 25 ರಷ್ಟು ಪಿಂಚಣಿ ಸಿಗುತ್ತದೆ. ಮೃತರ ಪತಿ ಅಥವಾ ಪತ್ನಿಗೆ ಅವರ ಜೀವಿತಾವಧಿಯವರೆಗೂ ಈ ಪಿಂಚಣಿ ಸಿಗುತ್ತದೆ. ಆದರೆ ಅವಲಂಬಿತ ಮಕ್ಕಳಿಗೆ ಅವರಿಗೆ 25 ವರ್ಷ ವಯಸ್ಸಾಗುವರೆಗೆ ಸಿಗತ್ತೆ. ಒಂದು ವೇಳೆ ಮೃತರ ಸಂಗಾತಿ ಮರುವಿವಾಹ ಆದರೆ ಈ ಸವಲತ್ತು ಸಿಗುವುದಿಲ್ಲ. ಪ್ರಸ್ತುತ ಮದನ್ ಅವರ ಕುಟುಂಬಕ್ಕೆ 1 ಸಾವಿರದ 500 ರೂಪಾಯಿ ಪಿಂಚಣಿ ಸಿಗುತ್ತದೆ.
ಒಂದು ವೇಳೆ ಉದ್ಯೋಗಿಯ ಮರಣಾನಂತರ ಅವರ ಪತ್ನಿ ಕೂಡ ಸಾವನ್ನಪ್ಪಿದರೆ ಆಗ ಮಕ್ಕಳಿಗೆ ಪಿಂಚಣಿ ಸಿಗುತ್ತದೆ. ಅನಾಥ ಪಿಂಚಣಿ ಯೋಜನೆಯಡಿ ವಿಧವಾ ಪಿಂಚಣಿ ಮೊತ್ತವು ಒಟ್ಟು ಪಿಂಚಣಿ ಮೊತ್ತದ ಶೇಕಡ 75 ರಷ್ಟಿರತ್ತೆ. ಇದು ಗರಿಷ್ಠ ಇಬ್ಬರು ಮಕ್ಕಳಿಗೆ ಸಿಗುತ್ತದೆ. ಇದರಡಿ ಪ್ರತಿ ಮಗುವಿಗೆ ಕನಿಷ್ಠ 750 ರೂಪಾಯಿ ಪಿಂಚಣಿ ಸಿಗುತ್ತದೆ. ಇದು ಗರಿಷ್ಠ ಇಬ್ಬರು ಮಕ್ಕಳಿಗೆ, ಅವರವರಿಗೆ 25 ವರ್ಷ ವಯಸ್ಸಾಗೋವರೆಗೂ ಸಿಗುತ್ತದೆ. ಒಂದು ವೇಳೆ ಮಕ್ಕಳೇನಾದರೂ ದಿವ್ಯಾಂಗರಾಗಿದ್ದರೆ ಅವರಿಗೆ ಈ ಪಿಂಚಣಿ ಜೀವಮಾನವಿಡೀ ದೊರೆಯುತ್ತದೆ.
ಒಂದು ವೇಳೆ ಉದ್ಯೋಗಿಯು ವಿವಾಹವಾಗಿಲ್ಲದೇ ಇದ್ದರೆ ಅಥವಾ ಮದುವೆಗೂ ಮೊದಲೇ ಉದ್ಯೋಗದಲ್ಲಿರೋವಾಗಲೇ ಮೃತಪಟ್ಟರೆ, ಉದ್ಯೋಗಿಯ ತಂದೆಗೆ ಈ ಕುಟುಂಬ ಪಿಂಚಣಿ ಸಿಗುತ್ತದೆ. ಒಂದು ವೇಳೆ ತಂದೆ ಇಲ್ಲದೇ ಇದ್ದರೆ ಸಾವಿಗೀಡಾದ ವ್ಯಕ್ತಿಯ ತಾಯಿಗೆ ಅವರ ಜೀವಮಾನವಿಡೀ ಈ ಪಿಂಚಣಿ ಸೌಲಭ್ಯ ಸಿಗುತ್ತದೆ. ಇದರಡಿ ಕನಿಷ್ಠ ಪಿಂಚಣಿ ಮೊತ್ತ ಒಂದು ಸಾವಿರ ರೂಪಾಯಿ ಇರುತ್ತದೆ.
ಇಪಿಎಸ್ ಅಡಿ ಕುಟುಂಬ ಪಿಂಚಣಿ ಸೌಲಭ್ಯ ಪಡೆಯುವುದಕ್ಕೆ ಉದ್ಯೋಗಿಯ ಮರಣ ಪ್ರಮಾಣ ಪತ್ರ, ಫಲಾನುಭವಿಗಳ ಆಧಾರ್ ಕಾರ್ಡ್, ಮಕ್ಕಳ ಬ್ಯಾಂಕ್ ಖಾತೆ ವಿವರಗಳು, ಮಕ್ಕಳ ವಯಸ್ಸಿನ ಪುರಾವೆ ಕೊಡಬೇಕು. ಕಂಪನಿ ಅಥವಾ ಇಪಿಎಫ್ಒ ಪ್ರಾದೇಶಿಕ ಕಚೇರಿಯಲ್ಲೂ ಈ ದಾಖಲೆಗಳನ್ನು ಸಲ್ಲಿಸಬಹುದು.
ಇಪಿಎಸ್ ಡೆಫಿನಿಷನ್ ಪ್ರಕಾರ, ಕುಟುಂಬ ಸದಸ್ಯರು ಅಥವಾ ಫ್ಯಾಮಿಲಿ ಮೆಂಬರ್ಸ್ ಅಂದರೆ ಪೋಷಕರು, ಪತಿ ಅಥವಾ ಪತ್ನಿ ಮತ್ತು ಮಕ್ಕಳು. ಕಾನೂನುಬದ್ಧವಾಗಿ ದತ್ತು ಪಡೆದ ಮಕ್ಕಳು ಕೂಡ ಕುಟುಂಬದ ಭಾಗ ಅಂತಾನೇ ಪರಿಗಣಿಸಲಾಗತ್ತದೆ. ಒಂದು ವೇಳೆ ಇಪಿಎಸ್ ನಲ್ಲಿ ಬೇರೆ ಯಾರನ್ನಾದರೂ ನಾಮಿನಿ ಮಾಡಿದರೆ, ಅದು ಇನ್ ವ್ಯಾಲಿಡ್ ಆಗುತ್ತದೆ. ಬೇರೆಯವರಿಗೆ ಪಿಂಚಣಿ ಸಿಗುವುದಿಲ್ಲ ನಾಮನಿರ್ದೇಶನದಲ್ಲಿ ಕುಟುಂಬ ಸದಸ್ಯರ ಹೆಸರನ್ನು ನಮೂದಿಸದೇ ಇದ್ದರೂ ಕೂಡ. ಗಂಡ ಅಥವಾ ಹೆಂಡತಿ ಮತ್ತು ಮಕ್ಕಳನ್ನ ಫ್ಯಾಮಿಲಿ ಪೆನ್ಷನ್ ಬೆನಿಫೀಷಿಯರಿ ಎಂದು ಆಟೊಮ್ಯಾಟಿಕ್ ಆಗಿ ಪರಿಗಣಿಸಲಾಗತ್ತದೆ ಎನ್ನುವುದು ನಿಮ್ಮ ಗಮನದಲ್ಲಿ ಇರಬೇಕು.


Click it and Unblock the Notifications