Pahalgam Attack: ಸಂತ್ರಸ್ತರ ರಕ್ಷಣೆಗಳಿದ 59 ವಿಮಾನಗಳು..25 ಮೃತದೇಹ 123 ಸಂಬಂಧಿಕರ ಸ್ಥಳಾಂತರ ಕಾರ್ಯ..!

ಪಹಲ್ಗಾಮ್ ಘಟನೆ..ಇದು ಕೇವಲ ಭಾರತವನ್ನಷ್ಟೇ ಅಲ್ಲ. ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಒಂದು ಹಿಂಸಾಚಾರ. ಭಾರತೀಯ ಹಿಂದೂಗಳ ಎದೆಗೆ ಗುಂಡಿಟ್ಟು ಕೊಲ್ಲುತ್ತಿರುವ ಉಗ್ರರ ನಡೆ, ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. All Eyes On Pahalgam..ಅಂದರೆ ಈಗ ಎಲ್ಲರ ಕಣ್ಣು, ಎಲ್ಲರ ಚಿತ್ತ ಪಹಲ್ಗಾಮ್‌ನತ್ತ ನೆಟ್ಟಿದೆ. ಅದು ನಿಜಕ್ಕೂ ಸುಳ್ಳಲ್ಲ. ಏಕೆಂದರೆ ಈ ಉಗ್ರ ದಾಳಿಯಲ್ಲಿ ಜೀವ ಬಿಟ್ಟ ಭಾರತೀಯರ ಸಂಖ್ಯೆ 25..ಅಥವಾ ಅದಕ್ಕಿಂತ ಹೆಜ್ಜಾಗಿಯೂ ಇರಬಹುದು. ಪಹಲ್ಗಾಮ್‌ನಲ್ಲಿ ಪ್ರಾಣ ಬಿಟ್ಟವರ ಕುರಿತು ನಿಜಕ್ಕೂ ಸಂತಾಪವಿದೆ. ಆದರೆ ಆ ಮೃತದೇಹಗಳನ್ನು ಅವರ ಮನೆಗೆ ತಲುಪಿಸುವುದು ಕೂಡ ಅಷ್ಟೇ ದೊಡ್ಡ ಜವಾಬ್ದಾರಿಯಾಗಿದೆ. ಹೀಗಾಗಿ ಬೃಹತ್ ಪ್ರಮಾಣದಲ್ಲಿ ವಿಮಾನ ಸೇವೆಗಳನ್ನು ಕಾರ್ಯಗತಗೊಳಿಸಲಾಗಿದೆ. ಬುಧವಾರದಂದು ಮಾತ್ರ ಶ್ರೀನಗರದಿಂದ 59 ವಿಮಾನಗಳು ಹಾರಿದೆಯೆಂಬುದು ನಾಗರಿಕ ವಿಮಾನಯಾನ ಇಲಾಖೆ ನೀಡಿರುವ ಮಾಹಿತಿ. ಈ ಪಟ್ಟಿಯಲ್ಲಿ ಏಳು ಹೆಚ್ಚುವರಿ ವಿಮಾನಗಳೂ ಸೇರಿವೆ.

Pahalgam Attack: ಸಂತ್ರಸ್ತರ ರಕ್ಷಣೆಗಳಿದ 59 ವಿಮಾನಗಳು..!

ಇನ್ನು 2019ರ ಪುಲ್ವಾಮಾ ದಾಳಿ ಇನ್ನೆಂದೂ ಮರೆಯಲಾಗದ ದುಃಖಕರವಾದ ಘಟನೆ. ಆ ಘಟನೆ ಇತ್ತೀಚೆಗಷ್ಟೇ ನಡೆದಂತಿದೆ. ಭಾರತೀಯ ಸೇನೆಯಲ್ಲಿದ್ದ ಸೈನಿಕರನ್ನು ಕಳೆದುಕೊಂಡವರ ಕುಟುಂಬ ಇಂದಿಗೂ ಕಣ್ಣಿರಲ್ಲೇ ಕೈತೊಳಿಯುತ್ತಿದೆ. ಆದರೆ ಆ ಒಂದು ಘಟನೆ ಮಾಸುವ ಮುನ್ನವೇ ಇಂತಹ ಅತ್ಯಂತ ಭೀಕರ ಘಟನೆ ಮತ್ತೊಮ್ಮೆ ನಡೆದಿದ್ದು, ನಿಜಕ್ಕೂ ಭಾರತೀಯರ ಕಣ್ಣು ಒದ್ದೆ ಮಾಡುವ ಸಂಗತಿ. ಇತ್ತ ಶ್ರೀನಗರದಲ್ಲಿ ಬಂದಿರುವ ಪ್ರವಾಸಿಗರ ಸಂಖ್ಯೆಯಲ್ಲಿ ಅತಿಯಾಗಿ ಏರಿಕೆ ಕಂಡುಬಂದಿದೆ. ಇದರಿಂದಾಗಿ, ನಾಗರಿಕ ವಿಮಾನಯಾನ ಸಚಿವಾಲಯವು ಟಿಕೆಟ್ ದರಗಳನ್ನು ಸಮಂಜಸ ಮಟ್ಟದಲ್ಲಿ ಇರಿಸಲು ನಿರ್ಧರಿಸಿದೆ.

ಮಂಗಳವಾರ ಪಹಲ್ಗಾಮ್‌ನಲ್ಲಿ ನಡೆದ ಘಟನೆಯಲ್ಲಿ ಮಾಹಿತಿ ಪ್ರಕಾರ 25ಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ. ಈ ಪೈಕಿ ಹೆಚ್ಚಿನವರು ಪ್ರವಾಸಿಗರಾಗಿದ್ದು, ಅವರೆಲ್ಲ ತಮ್ಮ ಕುಟುಂಬ ಸದಸ್ಯರೊಂದಿಗೆ ಬಂದಿದ್ದರು. ಈ ದುರಂತದ ನಂತರ ಬುಧವಾರ 52 ನಿಗದಿತ ಮತ್ತು 7 ಹೆಚ್ಚುವರಿ ವಿಮಾನಗಳು ಕಾರ್ಯಾಚರಿಸಿದ್ದು, 25 ಮೃತದೇಹಗಳು ಹಾಗೂ 123 ಕುಟುಂಬ ಸದಸ್ಯರನ್ನು ಗಮ್ಯಸ್ಥಾನಗಳಿಗೆ ಕಳುಹಿಸಲಾಗಿದೆ.

ಬೆಳಿಗ್ಗೆ 6 ರಿಂದ ಮಧ್ಯಾಹ್ನ 12ರೊಳಗೆ, 3,337 ಮಂದಿ ಶ್ರೀನಗರ ವಿಮಾನ ನಿಲ್ದಾಣದಿಂದ ಹೊರಟಿದ್ದಾರೆ. ಇಂಡಿಗೋ, ಏರ್ ಇಂಡಿಯಾ ಮತ್ತು ಸ್ಪೈಸ್‌ಜೆಟ್ ಸೇರಿ ಹಲವು ವಿಮಾನಯಾನ ಸಂಸ್ಥೆಗಳು ಹೆಚ್ಚುವರಿ ವಿಮಾನಗಳನ್ನು ಚಾಲನೆಯಲ್ಲಿಟ್ಟಿವೆ. ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಅವರು ವಿಮಾನ ಕಂಪನಿಗಳಿಗೆ ಯಾವುದೇ ರೀತಿಯ ಟಿಕೆಟ್ ದರ ಏರಿಕೆಗೆ ಅವಕಾಶ ನೀಡದಂತೆ ಕಟ್ಟುನಿಟ್ಟಾದ ನಿರ್ದೇಶನ ನೀಡಿದ್ದಾರೆ. ಟಿಕೆಟ್‌ಗಳ ಮೇಲ್ವಿಚಾರಣೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕೆಲವೆಡೆ ಟಿಕೆಟ್ ದರಗಳು ₹50,000ರ ನಂತರ ಏರಿರುವುದು ಗಂಭೀರ ಚರ್ಚೆಗೆ ಕಾರಣವಾಗಿದ್ದು, ಇಂಡಿಗೋ ಮತ್ತು ಏರ್ ಇಂಡಿಯಾ ಸಂಸ್ಥೆಗಳು ಮಧ್ಯಮ ದರಗಳ ಭರವಸೆ ನೀಡಿದ್ದಾರೆ. ಏರ್ ಇಂಡಿಯಾ ಶ್ರೀನಗರ-ಮುಂಬೈ ಮತ್ತು ಶ್ರೀನಗರ-ದೆಹಲಿ ಮಾರ್ಗದಲ್ಲಿ ದರ ಮಿತಿಗೊಳಿಸಿರುವುದಾಗಿ ತಿಳಿಸಿದೆ. ವಿಮಾನ ಬುಕಿಂಗ್ ಸೈಟ್‌ಗಳಲ್ಲಿ ಕಾಣಸಿಗುವ ಹೆಚ್ಚಿನ ದರಗಳು ಸಾಮಾನ್ಯವಾಗಿ ಬಹು ನಿಲ್ದಾಣ ಅಥವಾ ಹೆಚ್ಚುವರಿ ಸೌಲಭ್ಯಗಳ ಕಾರಣದಿಂದ ಆಗಿವೆ ಎಂದು ಸಂಸ್ಥೆಗಳು ಸ್ಪಷ್ಟಪಡಿಸಿದ್ದವೆ.

ಪ್ರವಾಸಿಗರ ಸುರಕ್ಷಿತ ಮರಳಿಕೆಗೆ ಶ್ರೀನಗರ ವಿಮಾನ ನಿಲ್ದಾಣದಲ್ಲಿ ವಿಶೇಷ ವ್ಯವಸ್ಥೆಗಳು ಮಾಡಲಾಗಿದೆ. ಅಲ್ಲಿ ನಿಯಂತ್ರಣ ಕೊಠಡಿ, ತಾತ್ಕಾಲಿಕ ಟೆಂಟ್, ಕುಳಿತುಕೊಳ್ಳುವ ವ್ಯವಸ್ಥೆ, ಆಹಾರ, ಚಹಾ, ಬಿಸ್ಕತ್ತುಗಳ ವ್ಯವಸ್ಥೆಯೂ ಕೂಡಾ ಒದಗಿಸಲಾಗಿದೆ. ಇದಕ್ಕೂ ಮೊದಲು, ನಾಲ್ಕು ಹೆಚ್ಚುವರಿ ವಿಮಾನಗಳು ಘೋಷಣೆಗೊಂಡಿದ್ದರೂ, ಅದಕ್ಕೆ ಹೆಚ್ಚಾಗಿ ಇನ್ನೂ ಮೂರು ವಿಮಾನಗಳು ದೆಹಲಿಗೆ ನೇಮಕಗೊಂಡಿವೆ ಎಂದು ಸಚಿವರು 'ಎಕ್ಸ್'ನಲ್ಲಿ ತಿಳಿಸಿದ್ದಾರೆ. ಅವುಗಳಲ್ಲಿ ಎರಡು ಇಂಡಿಗೋ ಮತ್ತು ಒಂದು ಸ್ಪೈಸ್ ಜೆಟ್‌ನಿಂದ ಚಾಲನೆಯಲ್ಲಿದೆ.

ಪಹಲ್ಗಾಮ್ ದಾಳಿಯ ನಂತರ ಪ್ರವಾಸಿಗರಿಂದ ಹೆಚ್ಚಿದ ಬೇಡಿಕೆಗೆ ತಕ್ಷಣ ಸ್ಪಂದಿಸಿರುವ ವಿಮಾನಯಾನ ಸಂಸ್ಥೆಗಳಿಗೆ ಡಿಜಿಸಿಎ ಧನ್ಯವಾದ ತಿಳಿಸಿದೆ. ಶ್ರೀನಗರದಿಂದ ವಿವಿಧ ನಗರಗಳಿಗೆ ನಿರಂತರ ಸಂಪರ್ಕವನ್ನು ಖಚಿತಪಡಿಸುವಂತೆ ಸೂಚನೆ ನೀಡಲಾಗಿದೆ. ಇಂಡಿಗೋ, ಸ್ಪೈಸ್‌ಜೆಟ್, ಏರ್ ಇಂಡಿಯಾ, ಅಕಾಸಾ ಏರ್ ಹಾಗೂ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಸಂಸ್ಥೆಗಳು ಬುಕ್ ಮಾಡಿರುವ ಪ್ರಯಾಣಿಕರಿಗೆ ಏಪ್ರಿಲ್ 30 ರವರೆಗೆ ಉಚಿತ ರದ್ದತಿ ಮತ್ತು ಮರುಹೊಂದಿಸುವಿಕೆಗೆ ಅವಕಾಶ ನೀಡಿವೆ.

ಅಕಾಸಾ ಏರ್ ಸಂಸ್ಥೆ, ಏಪ್ರಿಲ್ 23-29ರೊಳಗಿನ ಎಲ್ಲಾ ಪ್ರಯಾಣಗಳಿಗೆ ಪೂರಕ ಮರುಪಾವತಿಯನ್ನು ಘೋಷಿಸಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಯು ದಿನಾಂಕ ಬದಲಾವಣೆ ಹಾಗೂ ದರ ವ್ಯತ್ಯಾಸಗಳ ಮೇಲೂ ಸಂಪೂರ್ಣ ವಿನಾಯಿತಿ ನೀಡಿದೆ. ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಮ ಕ್ಷೇತ್ರಕ್ಕೆ ತಾತ್ಕಾಲಿಕ ಹೊಡೆತವಿದೆ ಎಂದು ಟ್ರಾವೆಲ್ ಏಜೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಅಜಯ್ ಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ. "ನಾವು ಪ್ರವಾಸೋದ್ಯಮದ ಪುನಶ್ಚೇತನಕ್ಕೆ ನಿಷ್ಠರಾಗಿದ್ದೇವೆ" ಎಂದು ಅವರು ಹೇಳಿದರು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+