ಸರ್ಜಾಪುರದಿಂದ ಹೆಬ್ಬಾಳಕ್ಕೆ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋ ರೆಡ್ ಲೈನ್ ಬಂದ ನಂತರ ಅಲ್ಲಿನ ಬಾಡಿಗೆ ಮನೆಗಳ ದರಗಳು ಕೂಡ ಹೆಚ್ಚಲಿವೆ. ಬೆಂಗಳೂರು ಮೆಟ್ರೋ ರೆಡ್ ಲೈನ್ ಸರ್ಜಾಪುರದಿಂದ ಹೆಬ್ಬಾಳಕ್ಕೆ ಸಂಪರ್ಕ ಕಲ್ಪಿಸಲಿದ್ದು, ಇದರ ಕಾಮಗಾರಿ ಮುಗಿಯತ್ತಿದ್ದಂತೆ ಅಲ್ಲಿನ ಬಾಡಿಗೆ ಮನೆಗಳ ದರಗಳು ಕೂಡ ಏರಿಕೆಯಾಗಲಿವೆ ಎಂದು ಅಲ್ಲಿನ ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಮುಂದಿನ ಎರಡು ವರ್ಷಗಳಲ್ಲಿ ಬಾಡಿಗೆ ದರಗಳು ಶೇಕಡಾ 10 ರಿಂದ 30ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ರಾಜ್ಯ ಸಚಿವ ಸಂಪುಟ ಅನುಮೋದನೆಯಿಂದಾಗಿ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್‌ಗೆ ಈಗಾಗಲೇ ಮೆಟ್ರೋ ಕಾಮಗಾರಿಗಾಗಿ ಭೂಮಿ ದೊರೆತಿದ್ದು, ವಿನ್ಯಸದ ಕೆಲಸ ಸೇರಿದಂತೆ, ನಿರ್ಮಾಣ ಕಾರ್ಯವನ್ನ ಆರಂಭಿಸಲು ಅವಕಾಶವನ್ನ ನೀಡಿದೆ. ಆದ್ರೆ ಇದರ ಜೊತೆಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆ ಪಡೆದ ನಂತರವೇ ಇದರ ನಿರ್ಮಾಣ ಕಾರ್ಯ ಆರಂಭವಾಗುವುದು.

ಕರ್ನಾಟಕದ ಸಚಿವ ಸಂಪುಟ ಡಿಸೆಂಬರ್ 7 ರಂದು ನಮ್ಮ ಮೆಟ್ರೋ 3A ಹಂತ ಅಂದರೆ ನಮ್ಮ ಮೆಟ್ರೋ ರೆಡ್‌ಲೈನ್ ಮಾರ್ಗದ ಕಾಮಗಾರಿಗೆ ಅನುಮೋದನೆಯನ್ನ ನೀಡಿತು. ಈ ಮೆಟ್ರೋ ಮಾರ್ಗವು 36.59-ಕಿಮೀ ಬೆಂಗಳೂರಿನ ಐಟಿ ಕಾರಿಡಾರ್ ಆಗಿರುವ ಸರ್ಜಾಪುರ ಮತ್ತು ಹೆಬ್ಬಾಳ ಮಾರ್ಗವನ್ನ ಸಂಪರ್ಕಿಸಲಿವೆ. ಇದು ನಗರದ ಸಂಪರ್ಕವನ್ನ ಮತ್ತಷ್ಟು ಹೆಚ್ಚಿಸುತ್ತದೆ.
ಸರ್ಜಾಪುರ ಐಟಿ ಕಾರಿಡಾರ್ ಆಗಿದ್ದರು ಕೂಡ ಹೆಬ್ಬಾಳವು ಪ್ರಮುಖ ಮೂರು ಸ್ಥಳಗಳನ್ನು ಸಂರ್ಕಿಸುತ್ತದೆ, ಹಾಗೆ ಇದು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹಾಗೆ ಪೂರ್ವದಲ್ಲಿ ಕೆಆರ್‌ಪುರಂ, ಮತ್ತು ಪಶ್ಚಿಮದಲ್ಲಿ ತುಮಕೂರು ರಸ್ತೆಯಂತಹ ಪ್ರಮುಖ ಸ್ಥಳಗಳನ್ನ ಹೊಂದಿದೆ.
ರೆಡ್ ಲೈನ್ ಮೆಟ್ರೋ ಎಷ್ಟು ಪ್ರದೇಶಗಳನ್ನ ಒಳಗೊಂಡಿದೆ.
ಬೆಂಗಳೂರು ಮೆಟ್ರೋದ ರೆಡ್ ಲೈನ್ ಅನ್ನು ಬೆಂಗಳೂರಿನ ಐಟಿ ಕಾರಿಡಾರ್ ಎಂದೂ ಕರೆಯುತ್ತಾರೆ. ಇದು ನಗರದ ಉತ್ತರ ಮತ್ತು ದಕ್ಷಿಣ ಭಾಗಗಳನ್ನು ಒಟ್ಟು 29.5 ಕಿಲೋಮೀಟರ್ ವ್ಯಾಪಿಸಿದೆ. ಈ ಮಾರ್ಗವು 28 ನಿಲ್ದಾಣಗಳನ್ನ ಒಳಗೊಂಡಿದೆ.
ಇದು ಉತ್ತರದಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎಡಿ) ಪ್ರಾರಂಭವಾಗಿ ದಕ್ಷಿಣದಲ್ಲಿ ಸಿಲ್ಕ್ ಬೋರ್ಡ್ ಜಂಕ್ಷನ್‌ಗೆ ವಿಸ್ತರಿಸುತ್ತದೆ, ಹೆಬ್ಬಾಳ, ಯಲಹಂಕ, ಸಂಜಯನಗರ ಮತ್ತು ಎಂಜಿ ರಸ್ತೆಯಂತಹ ಪ್ರಮುಖ ಪ್ರದೇಶಗಳ ಮೂಲಕ ಹಾದುಹೋಗುತ್ತದೆ.
ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಪ್ರಮುಖ ವಾಣಿಜ್ಯ ಮತ್ತು ವಸತಿ ಕೇಂದ್ರಗಳಿಗೆ ಸಮರ್ಥ ಸಂಪರ್ಕವನ್ನು ಒದಗಿಸಲು, ವಿಮಾನ ನಿಲ್ದಾಣ, ಕೇಂದ್ರ ವ್ಯಾಪಾರ ಜಿಲ್ಲೆಗಳು ಮತ್ತು ನಗರದ ಇತರ ಪ್ರಮುಖ ಪ್ರದೇಶಗಳಿಗೆ ಪ್ರವೇಶವನ್ನು ಸುಧಾರಿಸಲು ಈ ಮಾರ್ಗವನ್ನು ವಿನ್ಯಾಸಗೊಳಿಸಲಾಗಿದೆ. ರೆಡ್ ಲೈನ್ ಬೆಂಗಳೂರಿನಲ್ಲಿ ಒಟ್ಟಾರೆ ಸಾರ್ವಜನಿಕ ಸಾರಿಗೆ ಮೂಲಸೌಕರ್ಯವನ್ನು ಹೆಚ್ಚಿಸುತ್ತದೆ ಮತ್ತು ಈ ಪ್ರದೇಶಗಳಲ್ಲಿ ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
28,405 ಕೋಟಿ ರೂ. ವೆಚ್ಚದ ಈ ಯೋಜನೆಯು, ಕೇಂದ್ರ ಸಚಿವ ಸಂಪುಟದ ಅನುಮೋದನೆಯನ್ನ ಪಡೆಯಲು ಮುಂದಾಗ್ತಿದೆ. ಏಕೆಂದ್ರೆ ಕೇಂದ್ರ ನಮ್ಮ ಮೆಟ್ರೋದ 50% ಈಕ್ವಿಟಿ ಪಾಲನ್ನ ಹೊಂದಿದೆ. ಡಿಸೆಂಬರ್ 2025ರ ವೇಳೆಗೆ ಅಥವಾ ಅದಕ್ಕಿಂತ ಮೊದಲು ಕೇಂದ್ರ ಸಂಪುಟದ ಅನುಮೋದನೆಯನ್ನ ಪಡೆಯುವ ನಿರೀಕ್ಷೆ ಇದೆ. ಹಾಗೆ ಈ ಯೋಜನೆ ಐದುವರೆ ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಅಂದರೆ 2031ರ ವೇಳೆಗೆ ಈ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎನ್ನಲಾಗ್ತಿದೆ. ಪ್ರತಿ ಕಿಲೋಮೀಟರ್ ನಿರ್ಮಾಣ ವೆಚ್ಚ 776 ಕೋಟಿ ರೂ. ಆಗಿದ್ದು, ಇದು ನಮ್ಮ ಮೆಟ್ರೋದ ಇತಿಹಾಸದಲ್ಲಿ ಅತ್ಯಂತ ದುಬಾರಿ ವೆಚ್ಚದ ಮೆಟ್ರೋ ಕಾಮಗಾರಿ ಇದಾಗಿದೆ.
ಇದು ಬಾಡಿಗೆ ಮನೆಗಳ ಮೇಲೆ ಹೇಗೆ ಪರಿಣಾಮ ಬೀರಲಿದೆ
ಈ ಮೆಟ್ರೋ ಮಾರ್ಗ ಸರ್ಜಾಪುರ ಮತ್ತು ಸುತ್ತಮುತ್ತಲಿನ ರಿಯಲ್ ಎಸ್ಟೇಟ್ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅಲ್ಲದೆ, ಮಧ್ಯ ಬೆಂಗಳೂರು ಮತ್ತು ಕೋರಮಂಗಲದ ಇತರ ಪ್ರದೇಶಗಳನ್ನು ಸಂಪರ್ಕಿಸುವ ಮಾರ್ಗವಾದ್ದರಿಂದ, ಈ ಭಾಗದಲ್ಲಿ ಟೆಕ್ಕಿಗಳು ಮನೆಗಳಿಗಾಗಿ ಹುಡುಕಬಹುದು. ಅಲ್ಲಿ ಈಗಾಗಲೇ ರಿಯಲ್ ಎಸ್ಟೇಟ್ ಬೆಲೆಗಳು ಹೆಚ್ಚಾಗಿದ್ದು, ಈ ಭಾಗದಲ್ಲಿ ಉತ್ತಮ ಮೂಲಸೌಕರ್ಯಗಳು ದೊರೆಯುುವುದರಿಂದ ಜನರು ಈ ಭಾಗಕ್ಕೆ ಹೆಚ್ಚು ವಲಸೆ ಹೋಗಬಹುದು.
ಈಗಾಗಲೇ ಬಾಡಿಗೆಗಳು ಗಗನಕ್ಕೇರುತ್ತಿದ್ದು, ಜನರು ಅನುಕೂಲಕರ ಸಾರಿಗೆ ಸೌಲಭ್ಯಗಳೊಂದಿಗೆ ಕೈಗೆಟುಕುವ, ದರದಲ್ಲಿ ಮನೆಗಳನ್ನ ಹುಡುಕುತ್ತಾರೆ. ತಜ್ಞರ ಪ್ರಕಾರ, ಉತ್ತರ ಮತ್ತು ಆಗ್ನೇಯವನ್ನು ಸಂಪರ್ಕಿಸುವ ನಿರೀಕ್ಷೆಯಿರುವ ರೆಡ್ ಲೈನ್ ಮೆಟ್ರೋ ಪ್ರಯಾಣಕ್ಕೂ ಕೂಡ ಉತ್ತಮ ಆಯ್ಕೆಯಾಗಬಹುದು.
ಸಾಮಾನ್ಯವಾಗಿ, ಮುಂದಿನ 3-4 ವರ್ಷಗಳಲ್ಲಿ, ಆಗ್ನೇಯ ಬೆಂಗಳೂರಿನಲ್ಲಿ ಬಾಡಿಗೆಗಳು ಕನಿಷ್ಠ ಶೇಕಡಾ 10-20 ರಷ್ಟು ಹೆಚ್ಚಾಗಲಿವೆ. ಅಲ್ಲದೆ, ಈಗ ಮುಂದಿನ ಐದು ವರ್ಷಗಳಲ್ಲಿ ಮೆಟ್ರೋ ನಿರ್ಮಾಣವಾಗಲಿದ್ದು, ನಾವು 10% ರಷ್ಟು ಹೆಚ್ಚುವರಿ ಬಾಡಿಗೆ ದರವನ್ನ ನಿರೀಕ್ಷಿಸಬಹುದು ಎಂದು ತಜ್ಞರು ಹೇಳುತ್ತಾರೆ.
ದಕ್ಷಿಣ ಬೆಂಗಳೂರಿನ ಭಾಗಗಳಲ್ಲಿ ತಿಂಗಳಿಗೆ 30,000-35,000 ರೂ. ಬಾಡಿಗೆಗೆ 2BHK ಮನೆಗಳು ಲಭ್ಯವಿದೆ. ಸರ್ಜಾಪುರವು 2BHK ಗಾಗಿ ತಿಂಗಳಿಗೆ 40,000 ರೂಗಳಷ್ಟು ಬಾಡಿಗೆ ದರ ಹೆಚ್ಚಾಗಬಹುದು.
ಹಾಗೆ ಉತ್ತರ ಬೆಂಗಳೂರಿನ ಶ್ರೀರಾಮ್ ಪ್ರಾಪರ್ಟೀಸ್ ಮತ್ತು ಬ್ರಿಗೇಡ್ ಗ್ರೂಪ್‌ನಂತಹ ಪ್ರಮುಖ ಡೆವಲಪರ್‌ಗಳ ಲಾಂಚ್ ಪೋರ್ಟ್‌ಫೋಲಿಯೊದ ಪ್ರಮುಖ ಭಾಗವಾಗಿದೆ. ಉತ್ತರ ಬೆಂಗಳೂರು ಭಾಗಗಳಾದ ಯಶವಂತಪುರ ಮತ್ತು ಹೆಣ್ಣೂರು, ₹25,000 ರಿಂದ ₹30,000 ವಾರ್ಷಿಕವಾಗಿ 2BHK ಅಪಾರ್ಟ್‌ಮೆಂಟ್‌ಗಳನ್ನು ಒದಗಿಸಲಾಗುತ್ತಿದೆ. ಇನ್ನು ಹೆಬ್ಬಾಳ್ ಮುಂತಾದ ಪ್ರದೇಶಗಳಲ್ಲಿ ಇದರ ಬೆಲೆಗಳು 30,000ಕ್ಕಿಂತ ಹೆಚ್ಚಿದೆ.
ಬ್ರೋಕರ್‌ಇನ್‌ಬ್ಲೂ ಮುಖ್ಯ ರಿಯಲ್ ಎಸ್ಟೇಟ್ ಅಧಿಕಾರಿ ಮಂಜೇಶ್ ಎಸ್ ರಾವ್, ಮೆಟ್ರೋ ಸಂಪರ್ಕವು ಉತ್ತರ ಬೆಂಗಳೂರಿನಲ್ಲಿ ಕನಿಷ್ಠ 20% ರಿಂದ 30% ರಷ್ಟು ಬಾಡಿಗೆ ಬೆಲೆಗಳನ್ನು ಹೆಚ್ಚಿಸಬಹುದು ಎಂದರು.


Click it and Unblock the Notifications