For Quick Alerts
ALLOW NOTIFICATIONS  
For Daily Alerts

ಕೃಷಿ ಸಾಲದ ಚಕ್ರಬಡ್ಡಿ ಮನ್ನಾ ಇಲ್ಲ: ಹಣಕಾಸು ಸಚಿವಾಲಯ

|

ನವದೆಹಲಿ, ಅಕ್ಟೋಬರ್ 31: ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳ ಸಾಲಗಳು ಕೇಂದ್ರ ಸರ್ಕಾರದ ಕಳೆದ ವಾರ ಘೋಷಿಸಿದ ಚಕ್ರಬಡ್ಡಿ ಮನ್ನಾ ಯೋಜನೆಗೆ ಅರ್ಹವಾಗಿರುವುದಿಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.

ಬೆಳೆ ಸಾಲ ಅಥವಾ ಟ್ರ್ಯಾಕ್ಟರ್ ಖರೀದಿಗಾಗಿ ಪಡೆದುಕೊಂಡ ಸಾಲವನ್ನು ಕೃಷಿ ಹಾಗೂ ಕೃಷಿ ಜತೆಗೆ ಬೆಸೆದುಕೊಂಡಿರುವ ಚಟುವಟಿಕೆಗಳಿಗೆ ಸಂಬಂಧಿಸಿದ ಸಾಲ ಎಂದು ಪರಿಗಣಿಸಲಾಗುತ್ತದೆ. ಕಳೆದ ವಾರ ಪ್ರಕಟಿಸಿರುವ ಚಾಲದ ಮೇಲಿನ ಚಕ್ರಬಡ್ಡಿ ಮನ್ನಾ ಯೋಜನೆಯು ಇಂತಹ ಸಾಲಗಳಿಗೆ ಅನ್ವಯವಾಗುವುದಿಲ್ಲ ಎಂದು ಸಚಿವಾಲಯ ಶುಕ್ರವಾರ ತಿಳಿಸಿದೆ.

ಕ್ರೆಡಿಟ್ ಕಾರ್ಡ್ ಮೂಲಕ ಪಡೆದುಕೊಂಡ ಸಾಲವು ಫೆಬ್ರವರಿ 29ರಂದು ಎಷ್ಟು ಇತ್ತೋ ಅಷ್ಟಕ್ಕೆ ಮಾತ್ರವೇ ಚಕ್ರಬಡ್ಡಿ ಮನ್ನಾದ ಪ್ರಯೋಜನ ಸಿಗಲಿದೆ. ಕ್ರೆಡಿಟ್ ಕಾರ್ಡ್ ಮೂಲಕ ಪಡೆದುಕೊಳ್ಳುವ ಇಎಂಐ ಸೌಲಭ್ಯಕ್ಕೆ ವಿಧಿಸಲಾಗುವ ಬಡ್ಡಿದರವನ್ನು ಆಧಾರವಾಗಿಟ್ಟುಕೊಂಡು ಚಕ್ರಬಡ್ಡಿಯ ಮೊತ್ತವನ್ನು ನಿಗದಿಪಡಿಸಲಾಗುತ್ತದೆ ಎಂದು ಅದು ವಿವರಿಸಿದೆ.

ಕೃಷಿ ಸಾಲದ ಚಕ್ರಬಡ್ಡಿ ಮನ್ನಾ ಇಲ್ಲ: ಹಣಕಾಸು ಸಚಿವಾಲಯ

ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳ ಸಾಲಗಳು ಮೊರಟೋರಿಯಂ ಯೋಜನೆಯಡಿಯಲ್ಲಿನ ಎಂಟು ವಿಭಾಗಗಳಲ್ಲಿ ಬರುವುದಿಲ್ಲ. ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳು (ಎಂಎಸ್ಎಂಇ) ಪಡೆದ ಸಾಲ, ಶಿಕ್ಷಣ ಸಾಲ, ಕ್ರೆಡಿಟ್ ಸಾಲ, ಗ್ರಾಹಕ ಉಪಯೋಗದ ವಸ್ತುಗಳ ಖರೀದಿಯ ಸಾಲ, ಗೃಹ ಸಾಲ, ವಾಹನ ಸಾಲ ಹಾಗೂ ವೈಯಕ್ತಿಕ ಸಾಲಗಳಲ್ಲಿ 2 ಕೋಟಿವರೆಗಿನ ಆರು ತಿಂಗಳ ಅವಧಿಯ ಚಕ್ರಬಡ್ಡಿಯನ್ನು ಮನ್ನಾ ಮಾಡುವ ಸೌಲಭ್ಯ ಸಿಗಲಿದೆ.

ನವೆಂಬರ್ 5ರ ವೇಳೆಗೆ ಆರು ತಿಂಗಳ ಅವಧಿಯವರೆಗೆ ಎರಡು ಕೋಟಿ ರೂ ವರೆಗಿನ ಸಾಲಗಳ ಮೇಲಿನ ಬಡ್ಡಿ ಮನ್ನಾ ಯೋಜನೆ ಜಾರಿಗೆ ತರುವಂತೆ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಸೇರಿದಂತೆ ಎಲ್ಲ ಸಾಲ ನೀಡುವ ಸಂಸ್ಥೆಗಳಿಗೆ ರಿಸರ್ವ್ ಬ್ಯಾಂಕ್ ಸೂಚನೆ ನೀಡಿದೆ.

English summary

Agriculture Loans Not Part Of Interest On Interest Waiver: Finance Ministry

Finance Ministry has clarifies that the agriculture and allied activity loans are not eligible for the interest on interest waiver announced by the government.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X