ಸೆಪ್ಟೆಂಬರ್ 2023ರಲ್ಲಿ ಒಟ್ಟು ಪ್ರಯಾಣಿಕ ವಾಹನ (ಪಿವಿ) ಮಾರಾಟವು ಶೇಕಡ 3.09 ರಷ್ಟು ಏರಿಕೆಯಾಗಿ 3,16,908ಕ್ಕೆ ತಲುಪಿದೆ. ನಾವು 2022ರ ಲೆಕ್ಕಾಚಾರ ನೋಡಿದಾಗ ಪಿವಿ ಮಾರಾಟ ಸೆಪ್ಟೆಂಬರ್‌ನಲ್ಲಿ 3,07,389 ಆಗಿತ್ತು. ಆದರೆ ಇದೇ ಸಂದರ್ಭದಲ್ಲಿ ಪ್ರಯಾಣಿಕ ಕಾರು ಮಾರಾಟ ಪ್ರಮಾಣವು ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ.
ಹಬ್ಬದ ಸೀಸನ್‌ಗೂ ಮುನ್ನ ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರಯಾಣಿಕ ಕಾರುಗಳ ಮಾರಾಟವು ಸುಮಾರು ಶೇಕಡ 21.6 ರಷ್ಟು ಕುಸಿತವನ್ನು ಕಂಡಿದೆ. ಸೆಪ್ಟೆಂಬರ್ 2022 ರಲ್ಲಿ 1,42,727 ಪ್ರಯಾಣಿಕ ಕಾರುಗಳ ಮಾರಾಟವಾಗಿದೆ. ಆದರೆ ಸೆಪ್ಟೆಂಬರ್ 2023 ರಲ್ಲಿ ಈ ಪ್ರಮಾಣವು 1,11,889ಕ್ಕೆ ಇಳಿಕೆಯಾಗಿದೆ ಎಂದು ಉದ್ಯಮ ಸಂಸ್ಥೆ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (ಎಸ್‌ಐಎಎಂ) ಸೋಮವಾರ ಉಲ್ಲೇಖಿಸಿದೆ.

ಇನ್ನು ನಾವು ತ್ರೈಮಾಸಿಕ ಲೆಕ್ಕಾಚಾರದಲ್ಲಿ ನೋಡಿದಾಗಲೂ ಇದೇ ರೀತಿಯ ಬೆಳವಣಿಗೆ ಕಂಡು ಬಂದಿದೆ. ಹಣಕಾಸು ವರ್ಷ 2023-24 ರ ಎರಡನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್) ದೇಶೀಯ ಮಾರಾಟವು ಒಂದು ವರ್ಷದ ಹಿಂದಿನ ಅವಧಿಯಲ್ಲಿದ್ದ 4,68,513 ರಿಂದ 3,96,499 ಯುನಿಟ್‌ಗಳಿಗೆ ಕುಸಿದಿದೆ.
ಮೈನಸ್ ಝೀರೋದ ಉಪಾಧ್ಯಕ್ಷ ಸೂರಜ್ ಘೋಷ್, "ಪ್ಯಾಸೆಂಜರ್ ಕಾರುಗಳಲ್ಲಿನ ಕುಸಿತವು ಯುಟಿಲಿಟಿ ವೆಹಿಕಲ್ಸ್ (ಯುವಿ) ವಿಭಾಗದಲ್ಲಿನ ಬೆಳವಣಿಗೆಯಿಂದಾಗಿ ಆಗಿದೆ," ಎಂದು ಅಭಿಪ್ರಾಯಿಸಿದ್ದಾರೆ. ಗಮನಾರ್ಹವಾಗಿ, ಯುಟಿಲಿಟಿ ವೆಹಿಕಲ್ಸ್ ಅಥವಾ ಯುವಿಗಳ ಮಾರಾಟವು ಶೇಕಡ 28 ರಷ್ಟು ಬೆಳವಣಿಗೆ ಕಂಡಿದೆ.
ದ್ವಿಚಕ್ರ ವಾಹನ ವಿಭಾಗವು ಸೆಪ್ಟೆಂಬರ್ 2022 ರಲ್ಲಿ 17,35,199 ರಿಂದ ಸೆಪ್ಟೆಂಬರ್ 2023 ರಲ್ಲಿ 17,49,794 ಯುನಿಟ್‌ಗಳಿಗೆ ಶೇಕಡ 1 ಕ್ಕಿಂತ ಕಡಿಮೆ ಬೆಳವಣಿಗೆ ಕಂಡಿದೆ. ಎರಡನೇ ತ್ರೈಮಾಸಿಕದಲ್ಲಿ ದ್ವಿಚಕ್ರ ವಾಹನಗಳ ದೇಶೀಯ ಮಾರಾಟವು ಕಳೆದ ವರ್ಷ ಇದೇ ಅವಧಿಯಲ್ಲಿ 46,73,931 ರಿಂದ 45,98,442 ಕ್ಕೆ ಶೇಕಡ 1.6 ರಷ್ಟು ಇಳಿಕೆಯಾಗಿದೆ. ಇದಲ್ಲದೆ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ದ್ವಿಚಕ್ರ ವಾಹನಗಳ ಸಗಟು ಪ್ರಮಾಣವು ಅಲ್ಪ ಪ್ರಮಾಣದ ಬೆಳವಣಿಗೆಯನ್ನು ದಾಖಲಿಸಿವೆ.
"ಭಾರತೀಯ ಕಾರು ಮಾರುಕಟ್ಟೆಯು ಯುವಿಗಳ ಕಡೆಗೆ ಗ್ರಾಹಕರ ಆದ್ಯತೆಗಳಲ್ಲಿ ಬದಲಾವಣೆಗೆ ಸಾಕ್ಷಿಯಾಗಿದೆ. ದೀರ್ಘಾವಧಿಯ ಪ್ರವೃತ್ತಿಯನ್ನು ಗಮನಿಸಿದರೆ, ಯುವಿಗಳು ತಮ್ಮ ಮಾರುಕಟ್ಟೆ ಪಾಲನ್ನು ಸ್ಥಿರವಾಗಿ ಹೆಚ್ಚಿಸುತ್ತಿವೆ. FY12 ರಲ್ಲಿ 14 ಪ್ರತಿಶತದಿಂದ FY23 ನಲ್ಲಿ 52 ಪ್ರತಿಶತಕ್ಕೆ ಮತ್ತು FY24 ರ ಮೊದಲ ತ್ರೈಮಾಸಿಕದಲ್ಲಿ 55 ಪ್ರತಿಶತಕ್ಕೆ ಏರಿದೆ," ಎಂದು ಸಲಹಾ ಸಂಸ್ಥೆ ಅಲ್ವಾರೆಜ್ & ಮಾರ್ಸಲ್‌ನಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿರುವ ಮನೀಶ್ ಸೈಗಲ್ ಹೇಳಿದರು.
ಹಬ್ಬದ ಸೀಸನ್ ಸಮೀಪ
ಹಬ್ಬದ ಸೀಸನ್ ಹತ್ತಿರದಲ್ಲಿದೆ. ಈಗಾಗಲೇ ದೇಶದ ಹಲವಾರು ಭಾಗಗಳಲ್ಲಿ ಪ್ರಾರಂಭವಾಗಿದೆ. ಅದರ ಹೊರತಾಗಿಯೂ, ಒಟ್ಟಾರೆ ಪ್ರಯಾಣಿಕ ವಾಹನ ವಿಭಾಗದಲ್ಲಿ ತಜ್ಞರು ಸಮತಟ್ಟಾದ ಬೆಳವಣಿಗೆಯನ್ನು ಸೂಚಿಸಿದ್ದಾರೆ. ಈ ವರ್ಷ ಹಬ್ಬದ ಸೀಸನ್‌ನಲ್ಲಿ ಸುಮಾರು 20 ದಿನಗಳ ವಿಳಂಬವಾಗಿದೆ. ಅಕ್ಟೋಬರ್ ದ್ವಿತೀಯಾರ್ಧ ಮತ್ತು ನವೆಂಬರ್ ಮೊದಲಾರ್ಧದ ನಡುವೆ ಬೇಡಿಕೆಯು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಘೋಷ್ ಹೇಳಿದರು.
ಎಫ್‌ಎಡಿಎ ಡೇಟಾ ಏನು ಹೇಳುತ್ತದೆ?
ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ ಫೆಡರೇಶನ್ (ಎಫ್‌ಎಡಿಎ) ಸೆಪ್ಟೆಂಬರ್ 2023 ರ ವಾಹನ ರಿಟೇಲ್ ಡೇಟಾವನ್ನು ಬಿಡುಗಡೆ ಮಾಡಿದೆ. ಅಕ್ಟೋಬರ್ 9 ರಂದು ಬಿಡುಗಡೆಯಾದ ಡೇಟಾದ ಪ್ರಕಾರ ಆಟೋಮೊಬೈಲ್ ರಿಟೇಲ್ ಮಾರಾಟವು ವರ್ಷದಿಂದ ವರ್ಷಕ್ಕೆ ಬರೋಬ್ಬರಿ ಶೇಕಡ 20 ರಷ್ಟು ಬೆಳವಣಿಗೆಯನ್ನು ಕಂಡಿದೆ.
ಎಫ್‌ಎಡಿಎ ಭಾರತದಲ್ಲಿ ಆಟೋಮೊಬೈಲ್ ರೀಟೇಲ್ ಅನ್ನು ಪ್ರತಿನಿಧಿಸುವ ಒಂದು ಉನ್ನತ ರಾಷ್ಟ್ರೀಯ ಸಂಸ್ಥೆಯಾಗಿದೆ. ಈ ಸಂಸ್ಥೆ ಬಿಡುಗಡೆ ಮಾಡಿದ ಡೇಟಾವು ಟೋಮೊಬೈಲ್ ರಿಟೇಲ್ ಮಾರಾಟದಲ್ಲಿ ಬೆಳವಣಿಗೆ ತೋರಿಸಿದೆ. "ಸೆಪ್ಟೆಂಬರ್ 2023 ರಲ್ಲಿ ವಾಹನದ ರಿಟೇಲ್ ವ್ಯಾಪಾರವು ಶೇಕಡ 20 ರಷ್ಟು ಎರಡಂಕಿಯ ವರ್ಷದಿಂದ ವರ್ಷಕ್ಕೆ ಬೆಳವಣಿಗೆಯನ್ನು ದಾಖಲಿಸಿದೆ," ಎಂದು ಸಂಸ್ಥೆ ಹೇಳಿಕೊಂಡಿದೆ.
ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ ಫೆಡರೇಶನ್ (ಎಫ್‌ಎಡಿಎ) ಹೇಳಿಕೆಯ ಪ್ರಕಾರ, ತಿಂಗಳಿನಿಂದ ತಿಂಗಳಿಗೆ ಉದ್ಯಮವು ಸ್ವಯಂ ಮಾರಾಟದಲ್ಲಿ ಶೇಕಡ 3.5 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಆದರೆ ಟ್ರಾಕ್ಟರ್ ವಿಭಾಗವು ಕುಸಿಯುತ್ತಲೇ ಇದೆ. ಟ್ರಾಕ್ಟರ್ ವಿಭಾಗ ಶೇಕಡ 26 ರಷ್ಟು ಕುಸಿತಗೊಂಡಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications