ಫೆ. 16 ರಂದು ನಾಲ್ಕನೇ ಆವೃತ್ತಿಯ ಎಐ ಇಂಪ್ಯಾಕ್ಟ್ ಸಮ್ಮಿಟ್ 2026ಕ್ಕೆ (AI Impact Summit 2026) ಪ್ರಧಾನಿ ನರೇಂದ್ರ ಮೋದಿ (Narendra Modi) ಚಾಲನೆ ನೀಡಿದ್ದಾರೆ. ಸೋಮವಾರದಿಂದ ಫೆಬ್ರವರಿ 20 ರವರೆಗೂ ಐದು ದಿನಗಳ ಕಾಲ ಭಾರತ್ ಮಂಟಪಂನಲ್ಲಿ ಈ ಶೃಂಗಸಭೆ ನಡೆಯಲಿದೆ. ಇನ್ನು 'ಜನತೆ, ಭೂಮಿ ಮತ್ತು ಪ್ರಗತಿ' ಥೀಮ್‌ನಲ್ಲಿ ಈ ಶೃಂಗಸಭೆ ನಡೆಯಲಿದೆ ಎನ್ನಲಾಗಿದೆ. ಇನ್ನು ಭಾರತದಲ್ಲಿ ಎಐ ಇಂಪ್ಯಾಕ್ಟ್ ಶೃಂಗಸಭೆ ಇದೇ ಮೊದಲ ಬಾರಿಗೆ ನಡೆಯುತ್ತಿದ್ದು, ಭಾರೀ ನಿರೀಕ್ಷೆಗಳನ್ನು ಹುಟ್ಟಿಸಿದೆ.

ಇನ್ನು ಈ ಬಾರಿಯ ಎಐ ಇಂಪ್ಯಾಕ್ಟ್ ಸಮ್ಮಿಟ್ 2026, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಬೇಡಿಕೆ ಅಪಾರವಾಗಿ ಹೆಚ್ಚುತ್ತಿದೆ ಎಂಬ ಸ್ಪಷ್ಟ ಸಂದೇಶವನ್ನು ನೀಡಿದೆ. ವ್ಯಾಪಾರ, ಸರ್ಕಾರಿ ಮತ್ತು ತಂತ್ರಜ್ಞಾನ ಸಂಸ್ಥೆಗಳು AI ಅಳವಡಿಸಿಕೊಂಡಂತೆ, ಶಕ್ತಿಯುತ ಹಾಗೂ ವಿಶ್ವಾಸಾರ್ಹ ದತ್ತಾಂಶ ಮೂಲಸೌಕರ್ಯದ ಅಗತ್ಯ, ಅತಿ ಪ್ರಮುಖವಾಗಿದೆ.
ವಿಶ್ವದ ಅತಿ ದೊಡ್ಡ ಎಐ ಡೇಟಾ ಸೆಂಟರ್!
ಈ ಮಧ್ಯೆ ಭಾರತದ ಅತಿದೊಡ್ಡ ಐಟಿ ಸೇವಾ ಸಂಸ್ಥೆಯಾದ ಟಿಸಿಎಸ್, ತನ್ನ ಸಬ್ಸಿಡಿಯರಿ ಹೈಪರ್‌ವೋಲ್ಟ್ ಎಐ ಡೇಟಾ ಸೆಂಟರ್ ಲಿಮಿಟೆಡ್ ಮೂಲಕ ಭಾರತದಲ್ಲಿ ಗಿಗಾವ್ಯಾಟ್ (GW) ಸ್ಕೇಲ್‌ನ ಎಐ-ರೆಡಿ ಡೇಟಾ ಸೆಂಟರ್‌ಗಳನ್ನು ನಿರ್ಮಿಸುವ ದೊಡ್ಡ ಯೋಜನೆ ಆರಂಭಕ್ಕೆ ಮುಂದಾಗಿದೆ. ಇದು ವಿಶ್ವದ ಅತಿದೊಡ್ಡ ಎಐ ಡೇಟಾ ಸೆಂಟರ್ ಎಂದು ಕರೆಯಲಾಗುತ್ತಿದ್ದು, ಭಾರತದ ಎಐ ಮತ್ತು ಡಿಜಿಟಲ್ ಇನ್‌ಫ್ರಾಸ್ಟ್ರಕ್ಚರ್‌ಗೆ ಮಹತ್ವದ ಹೆಜ್ಜೆಯಾಗಲಿದೆ.
ಈ ಯೋಜನೆಗಾಗಿ ಮೊದಲ ಹಂತದಲ್ಲಿ ಸುಮಾರು 1.2 ಗಿಗಾವ್ಯಾಟ್ (1200) ಸಾಮರ್ಥ್ಯದ ಎಐ ಡೇಟಾ ಸೆಂಟರ್‌ಗಳನ್ನು ನಿರ್ಮಿಸುವ ಗುರಿ ಹೊಂದಿದೆ. ಭಾರತದಲ್ಲಿರುವ ಪ್ರಸ್ತುತ ಡೇಟಾ ಸೆಂಟರ್ ಸಾಮರ್ಥ್ಯ ಸುಮಾರು 1.5 ಗಿಗಾವ್ಯಾಟ್ ಇದ್ದು, 2030 ರ ವೇಳೆಗೆ 10 ಗಿಗಾವ್ಯಾಟ್‌ಗಿಂತಲೂ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
ಈ ಬೇಡಿಕೆಯನ್ನು ಪೂರೈಸಲು, ಟಿಸಿಎಸ್ (TCS) 'ಹೈಪರ್‌ವೋಲ್ಟ್' (HyperVault) ಅನ್ನು ಪರಿಚಯಿಸಲು ಮುಂದಾಗಿದೆ. ಇದು ಹೈಪರ್‌ಸ್ಕೇಲರ್‌ಗಳು ಮತ್ತು AI-ಚಾಲಿತ ಉದ್ಯಮಗಳಿಗಾಗಿ ವಿನ್ಯಾಸಗೊಳಿಸಲಾದ ಸುರಕ್ಷಿತ, ಬೃಹತ್-ಪ್ರಮಾಣದ AI-ಸಿದ್ಧ ಮೂಲಸೌಕರ್ಯವಾಗಿದ್ದು, ಮುಂದಿನ ಪೀಳಿಗೆಯ AI ಕಂಪ್ಯೂಟಿಂಗ್ ಅಗತ್ಯಗಳಿಗೆ ಬೆಂಬಲ ನೀಡಲು ಸಿದ್ಧವಾಗಿದೆ.
ಇನ್ನು ಎಐ ಡೇಟಾ ಸೆಂಟರ್ ನಿರ್ಮಾಣಕ್ಕಾಗಿ ಟಿಸಿಎಸ್ ಮತ್ತು ಗ್ಲೋಬಲ್ ಇನ್ವೆಸ್ಟ್‌ಮೆಂಟ್ ಫರ್ಮ್ ಟಿಪಿಜಿ ಜಂಟಿಯಾಗಿ 18,000 ಕೋಟಿವರೆಗೆ ಹೂಡಿಕೆ ಮಾಡಲು ಮುಂದಾಗಿದೆ. ಇದರಲ್ಲಿ ಟಿಸಿಎಸ್ 51% ಷೇರು ಹೊಂದಿರಲಿದ್ದು, ಟಿಪಿಜಿ $1 ಬಿಲಿಯನ್‌ಗಿಂತಲೂ ಹೆಚ್ಚು ಹೂಡಿಕೆ ಮಾಡುವ ನಿರೀಕ್ಷೆಯಿದೆ. ಈ ಮೂಲಕ ದೇಶದ ಉದ್ಯಮ ಜಗತ್ತು, ಟೆಕ್ನಾಲಜಿಯಲ್ಲಿ ಭಾರೀ ಬೆಳವಣಿಗೆಯಾಗುವ ಸಾಧ್ಯತೆ ಇದೆ.
ಭಾರತ ಈಗಾಗಲೇ ಡಿಜಿಟಲರ್ ಅಡಾಪ್ಷನ್, ಕ್ಲೌಡ್, ಎಐ ವರ್ಕ್‌ಲೋಡ್‌ಗಳಿಂದಾಗಿ ವೇಗವಾಗಿ ಡೇಟಾ ಸೆಂಟರ್ ಹಬ್ ಆಗಿ ಬೆಳವಣಿಗೆ ಕಾಣುತ್ತಿದೆ. 2019 ರಿಂದ ಈ ಕ್ಷೇತ್ರಕ್ಕಾಗಿ ಸುಮಾರು $94 ಬಿಲಿಯನ್ ಹೂಡಿಕೆ ಬಂದಿದೆ. ಇದೀಗ ಟಿಸಿಎಸ್ ಕೈಗೊಂಡಿರುವ ಈ ಯೋಝನೆ ಭಾರತವನ್ನು ಯುಎಸ್ ಮತ್ತು ಚೀನಾದಂತಹ ದೇಶಗಳೊಂದಿಗೆ ಎಐ ರೇಸ್‌ನಲ್ಲಿ ಸ್ಪರ್ಧಿಸುವಂತೆ ಮಾಡಲಿದೆ ಎಂದು ಹೇಳಲಾಗಿದೆ.


Click it and Unblock the Notifications