ಬೆಂಗಳೂರು: ಅದೆಷ್ಟೋ ಮಂದಿ ಮಂಗಳೂರು, ಬೆಂಗಳೂರಿನಿಂದ (Mangaluru-Bengaluru) ಹೊರ ದೇಶಗಳಿಗೆ ವಿಮಾನ ಪ್ರಯಾಣ ಮಾಡುತ್ತಾರೆ. ಅದರಲ್ಲೂ ಮಂಗಳೂರಿನಲ್ಲಿ ಅನೇಕ ಯುವಕರು ವಿದೇಶಗಳಿಗೆ ಹೋಗಿ ಉದ್ಯೋಗ ಮಾಡುತ್ತಿರುತ್ತಾರೆ. ಇನ್ನೂ ಕೆಲವರು ಮಂಗಳೂರಿನಿಂದ ಬೆಂಗಳೂರಿಗೆ, ಬೆಂಗಳೂರಿನಿಂದ ಮಂಗಳೂರಿಗೆ ವಿಮಾನದಲ್ಲೇ ಪ್ರಯಾಣ ಮಾಡುತ್ತಾರೆ. ಇದೀಗ ಅಂತಹವರಿಗಾಗಿ ಬಂಪರ್ ಸುದ್ದಿಯೊಂದಿದೆ. ಬಹು ಜನಪ್ರಿಯ ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express) ಪ್ರಯಾಣಿಕರ ಅನುಕೂಲಕ್ಕಾಗಿ ಮಹತ್ವದ ಕ್ರಮವೊಂದನ್ನು ಕೈಗೊಂಡಿದೆ.

ಹೌದು, ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಿಂದ ಬೆಂಗಳೂರು-ಮಂಗಳೂರು-ಬೆಂಗಳೂರು ಮಾರ್ಗದಲ್ಲಿ ಹೊಸದಾಗಿ ದೈನಂದಿನ ರಾತ್ರಿ ವಿಮಾನ ಸೇವೆಯನ್ನು ಪರಿಚಯಿಸಲು ನಿರ್ಧರಿಸಿದೆ. ಈ ಬಗ್ಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದಲೂ ಮಾಹಿತಿ ಬಿಡುಗಡೆ ಮಾಡಲಾಗಿದೆ.
ಯಾವಾಗದಿಂದ ಆರಂಭ?
ಏರ್ ಇಂಡಿಯಾ ಎಕ್ಸ್‌ಪ್ರೆಸ್ ಇದೀಗ ಹೊಸದಾಗಿ ದಿನನಿತ್ಯ ರಾತ್ರಿ ವೇಳೆಯಲ್ಲಿ ವಿಮಾನ ಸೇವೆ ನೀಡಲಿದೆ. ಈ ಹೊಸ ಸೇವೆ ಮಾರ್ಚ್ 10, 2026 ರಿಂದ ಆರಂಭವಾಗಲಿದ್ದು, ಮಾರ್ಚ್ 28, 2026 ರವರೆಗೆ ಮುಂದುವರೆಯಲಿದೆ ಎಂದು ಹೇಳಲಾಗಿದೆ.
ವಿಮಾನದ ವಿವರಗಳು:
ವಿಮಾನ ನಂಬರ್ IX 5971, ಬೆಂಗಳೂರಿನಿದ ಮಂಗಳೂರು ಸಂಚಾರ ಮಾಡಲಿದೆ. ಈ ವಿಮಾನ ರಾತ್ರಿ 9:25 ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರಿನಿಂದ ನಿರ್ಗಮಿಸಲಿದೆ. ಆ ವಿಮಾನ ಅದೇ ರಾತ್ರಿ 10:40 ಕ್ಕೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪುತ್ತದೆ. ಕೇವಲ 1 ಗಂಟೆ 15 ನಿಮಿಷಗಳಲ್ಲಿ ಮಂಗಳೂರು ತಲುಪುತ್ತದೆ.
ಇನ್ನು ಫ್ಲೈಟ್ ಸಂಖ್ಯೆ IX 5972, ಮಂಗಳೂರಿನಿಂದ ಬೆಂಗಳೂರಿಗೆ ಬರಲಿರುವ ವಿಮಾನ ರಾತ್ರಿ 11:10 ಕ್ಕೆ ಹೊರಡುತ್ತದೆ. ಮಂಗಳೂರಿನಿಂದ ನಿರ್ಗಮಿಸಿದ ಆ ವಿಮಾನ ಅದೇ ರಾತ್ರಿ 12:20 am ಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿಗೆ ತಲುಪುತ್ತದೆ. ಇಲ್ಲಿ ಪ್ರಯಾಣದ ಅವಧಿ 1 ಗಂಟೆ 10 ನಿಮಿಷಗಳಾಗಿರುತ್ತದೆ.
ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಮಹತ್ವದ ನಿರ್ಧಾರ!
ಈ ಹೊಸ ಲೇಟ್ ನೈಟ್ ಫ್ಲೈಟ್ ಸೇವೆಯಿಂದಾಗಿ ಮಂಗಳೂರು ಮತ್ತು ಬೆಂಗಳೂರು ವಿಮಾನ ಪ್ರಯಾಣಿಕರಿಗೆ ಭಾರೀ ಪ್ರಯೋಜನವಾಗಲಿದೆ. ವಿಶೇಷವಾಗಿದೆ ತುರ್ತು ಸಂದರ್ಭದಲ್ಲಿ, ಹಠಾತ್ ಹೊರಡುವ ಪ್ಲಾನ್ ಮಾಡುವವರಿಗೆ ಬಹಳ ಅನುಕೂಲವಾಗಲಿದೆ. ಸದ್ಯ ಈ ಸೇವೆ ದಿನನಿತ್ಯ ಕಾರ್ಯಚರಿಸುತ್ತದೆ ಎನ್ನಲಾಗಿದೆ.
ಟಿಕೆಟ್ ಬುಕ್ ಮಾಡುವುದು ಹೇಗೆ?
ಇನ್ನು ಈ ಸೇವೆ ಪಡೆಯಲಿಚ್ಛಿಸುವವರು ಟಿಕೆಟ್ ಬುಕ್ ಮಾಡಬೇಕೆಂದರೆ, ಏರ್ ಇಂಡಿಯಾ ಎಕ್ಸ್‌ಪ್ರೆ್ ಅಧಿಕೃತ ವೆಬ್‌ಸೈಟ್, ಮೊಬೈಲ್ ಅಪ್ಲಿಕೇಶನ್ ಅಥವಾ ಟ್ರಾವೆಲ್ ಏಜೆನ್ಸಿಗಳ ಮೂಲಕ ಮಾಡಬಹುದು.
ಈ ನಿರ್ಧಾರಕ್ಕೆ ಕಾರಣವೇನು?
ಮುಖ್ಯವಾಗಿ ಪ್ರಯಾಣಿಕರ ಬೇಡಿಕೆಯಿಂದಾಗಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಈ ಸೇವೆಯನ್ನು ನೀಡುತ್ತಿದೆ. ಬೆಂಗಳೂರು ಮತ್ತು ಮಂಗಳೂರು ನಡುವೆ ವ್ಯಾಪಾರ, ವಿದ್ಯಾರ್ಥಿಗಳು, ವೀಕೆಂಡ್ ಪ್ರಯಾಣಿಕರು ಹೆಚ್ಚಾಗಿದ್ದಾರೆ. ಅದೇ ಕಾರಣದಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಈ ನಿರ್ಧಾರಕ್ಕೆ ಮುಂದಾಗಿದೆ. ಇದೇ ಮಾರ್ಚ್ 10 ರಿಂದ ಈ ಸೇವೆ ಆರಂಭವಾಗಲಿದ್ದು, ಲೇಟ್ ನೈಟ್ ಪ್ರಯಾಣ ಮಾಡುವವರಿಗೆ ಇದು ಭಾರೀ ಪ್ರಯೋಜನವಾಗಲಿದೆ.


Click it and Unblock the Notifications