ಬೆಂಗಳೂರು: ವಾಯುಮಾಲೀನ್ಯದಿಂದ ತುತ್ತಾಗಿರುವ ಪ್ರಮುಖ ನಗರಗಳಲ್ಲಿ ಮೊದಲ ಸ್ಥಾನದಲ್ಲಿರುವುದು ದೆಹಲಿ. ಅತೀ ಹೆಚ್ಚು ಮಾಲೀನ್ಯದಿಂದಾಗಿ ದೆಹಲಿಯಲ್ಲಿ ಹಲವು ಬಾರಿ ಶಾಲೆಗಳಿಗೆ ರಜೆಯನ್ನ ನೀಡಿದ್ದು ಕೂಡ ಉಂಟು. ಇದೆಲ್ಲದರ ಮಧ್ಯೆ ಕಕರ್ನಾಟಕದ ಈ ನಗರಗಳಲ್ಲಿ ಗಾಳಿಯ ಗುಣಮಟ್ಟ ನಿಯಂತ್ರಣದಲ್ಲಿದೆ ಎನ್ನಲಾಗ್ತಿದೆ.
ಈ ಚಳಿಗಾಲದ ಆರಂಭದಲ್ಲಿ ಕರ್ನಾಟಕದ ಈ ನಗರಗಳಲ್ಲಿ ಗಾಳಿ ಗುಣಮಟ್ಟದ ಸೂಚ್ಯಾಂಕವು ಭಾರತದ ಇತರೆ ರಾಜ್ಯಗಳಿಗಿಂತ ನಿಯಂತ್ರಣದಲ್ಲಿದೆ, ಮತ್ತು ಉತ್ತಮವಾಗಿದೆ ಎಂದು ವರದಿ ಹೇಳಿದೆ. ಇದಲ್ಲದೆ, ರಾಯಚೂರು ಜಿಲ್ಲೆ ಕರ್ನಾಟಕದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ನಂತರ ಮಡಿಕೇರಿ ಎರಡನೇ ಸ್ಥಾನದಲ್ಲಿದೆ.

ಹವಾಮಾನ-ತಂತ್ರಜ್ಞಾನದ ಸ್ಟಾರ್ಟ್‌ಅಪ್ ರೆಸ್ಪೈರ್ ಲಿವಿಂಗ್ ಸೈನ್ಸಸ್‌ನಿಂದ ಅಟ್ಲಾಸ್‌ಎಕ್ ಪ್ಲಾಟ್‌ಫಾರ್ಮ್ ಈ ವರದಿಯನ್ನ ಮಾಡಿದ್ದು, ಇದು ಮಹಾರಾಷ್ಟ್ರ ಮೂಲದ ಸಂಸ್ಥೆಯಾಗಿದೆ. ಈ ಸಂಶೋಧನೆಗಳು ಎಲ್ಲಾ ಭಾರತೀಯ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಇನ್ನು ಈ ತಂಡವು ನವೆಂಬರ್ 3-16, 2024ರಿಂದ 281 ಭಾರತೀಯ ನಗರಗಳ ಗಾಳಿಯ ಗುಣಮಟ್ಟವನ್ನ ಅಧ್ಯಯನ ಮಾಡಿದೆ. ಅವರು ದೀಪಾವಳಿಯ ನಂತರ PM2.5 ಮಟ್ಟವನ್ನು ಅಂದರೆ ಚಳಿಗಾಲದ ಆರಂಭದ ಗಾಳಿಯ ಗುಣಮಟ್ಟವನ್ನ ವರದಿ ಮಾಡಿದ್ದಾರೆ.
ಇವರು ವರದಿ ಮಡಿರುವ ಪ್ರಕಾರ, ರಾಯಚೂರು ರಾಜ್ಯದ ಸ್ವಚ್ಛ ನಗರಗಳಲ್ಲಿ ಒಂದು ಎಂದು ಗುರುತಿಸಿಕೊಂಡಿದೆ. ಸರಾಸರಿ PM2.5 ಮಟ್ಟವನ್ನು 17.9 μg/m3 ದಾಖಲಿಸಿದೆ. ನಂತರ ಮಡಿಕೇರಿ-18.4 μg/m3. ರಾಜ್ಯದ ಎರಡೂ ನಗರಗಳು ಉತ್ತಮ ಗಾಳಿಯ ಗುಣಮಟ್ಟ ಹೊಂದಿದೆ ಎಂದು ವರದಿಯಾಗಿದ್ದು, ಇದರ ಹಿಂದೆ ಸ್ಥಳೀಯ ಆಡಳಿತದ ಶ್ರಮ ಇದೆ ಎಂದು ತಿಳಿದುಬಂದಿದೆ. ಕಡಿಮೆ ಕೈಗಾರಿಕಾ ಪ್ರದೇಶ ಮತ್ತು ಅನುಕೂಲಕರ ಭೌಗೋಳಿಕ ಸ್ಥಿತಿಯನ್ನ ಹೊಂದಿರುವುದೇ ಇದಕ್ಕೆ ಕಾರಣ ಎನ್ನಲಾಗ್ತಿದೆ. ಇನ್ನು ಈ ನಗರಗಳು ಭಾರತದಾದ್ಯಂತ ಗುರುತಿಸಿಕೊಂಡಿವೆ. ಜೊತೆಗೆ ಈ ನಗರಗಳು ಈಶಾನ್ಯ ನಗರಗಳೊಂದಿಗೆ ಸ್ಥಾನವನ್ನ ಪಡೆದುಕೊಂಡಿವೆ. ಅಂದರೆ ಮಣಿಪುರದ ಇಂಫಾಲ್ (14.2 μg/m3), ಅಸ್ಸಾಂನ ನಾಗಾನ್ (16.9 μg/m3) ಮತ್ತು ಇತರ ದಕ್ಷಿಣ ನಗರ- ತಮಿಳುನಾಡಿನ ಅರಿಯಲೂರ್ (15.0 μg/m3)ಗಳ ಜೊತೆ ಕರ್ನಾಟಕದ ಈ ನಗರಗಳು ಗುರುತಿಸಿಕೊಂಡಿವೆ.
ಹಾಗೆ ಈ ನಗರಗಳ ಬಗ್ಗೆ ರೆಸ್ಪೈರರ್ ಲಿವಿಂಗ್ ಸೈನ್ಸಸ್‌ನ ಸಂಸ್ಥಾಪಕ ಮತ್ತು ಸಿಇಒ ರೋನಕ್ ಸುತಾರಿಯಾ ಮಾತನಾಡಿದ್ದು, ಉಡುಪಿ (21.2 μg/m3), ಮೈಸೂರು (25.7 μg/m3) ಮತ್ತು ಶಿವಮೊಗ್ಗ (27.4 μg/m3) ಸೇರಿದಂತೆ ಹೆಚ್ಚಿನ ನಗರ ಸೇರಿದಂತೆ ಕರ್ನಾಟಕವು ಒಟ್ಟಾರೆಯಾಗಿ ಉತ್ತಮ ಗಾಳಿಯ ಗುಣಮಟ್ಟದ ಶ್ರೇಯಾಂಕವನ್ನು ಹೊಂದಿದೆ ಎಂದರು. ಇನ್ನು ಸಹ ಉತ್ತಮ ವರ್ಗದಲ್ಲಿ ಬೆಂಗಳೂರು ಕೂಡ ಸರಾಸರಿ PM2.5 ಮಟ್ಟ 40.8 μg/m3 ಶ್ರೇಯಾಂಕ ಹೊಂದುವುದರೊಂದಿಗೆ ಮಧ್ಯಮ ಗಾಳಿಯ ಗುಣಮಟ್ಟವನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗಿದೆ ಎಂದು ವರದಿಯಾಗಿದೆ. ಇದರ ಜೊತೆಗೆ ಮುಂಬೈ ಮತ್ತು ಚೆನ್ನೈ ಸೇರಿದಂತೆ ಅನೇಕ ಪ್ರಮುಖ ಮೆಟ್ರೋರನಗಳಿಗಿಂತ ಉತ್ತಮ ವಾಯು ಗುಣಮಟ್ಟವನ್ನ ಹೊಂದಿವೆ ಎಂದರು.
ಪೂರ್ವಭಾವಿ ನೀತಿಗಳು, ಪ್ರಾದೇಶಿಕ ಸಹಯೋಗ ಮತ್ತು ಸುಸ್ಥಿರ ನಗರ ಯೋಜನೆಗಳ ಮೂಲಕ ಶುದ್ಧ ಗಾಳಿಯನ್ನ ಹೊಂದುವ ಗುರಿಗಳನ್ನು ಸಾಧಿಸಬಹುದು ಎಂದು ಕರ್ನಾಟಕದ ಅಧ್ಯಯನಗಳು ತೋರಿಸಿಕೊಟ್ಟಿವೆ ಎಂದು ಅವರು ಉಲ್ಲೇಖಿಸಿದರು. ಹಾಗೆ ರಾಯಚೂರು ಮತ್ತು ಮಡಿಕೇರಿಯ ಗಾಳಿಯ ಗುಣಮಟ್ಟದ ಶ್ರೇಯಾಂಕಗಳು ಪರಿಸರ ಆರೋಗ್ಯಕ್ಕೆ ಆದ್ಯತೆ ನೀಡುತ್ತಿರುವ ಹಿನ್ನೆಲೆ ನಗರ ಮತ್ತು ಕೈಗಾರಿಕಾ ಬೆಳವಣಿಗೆಯನ್ನು ನಿರ್ವಹಿಸುವ ಪ್ರಾಮುಖ್ಯತೆಗೆ ಸಾಕ್ಷಿಯಾಗಿದೆ ಎಂದು ಸಿಇಒ ರೋನಕ್ ಸುತಾರಿಯಾ ಹೇಳಿದರು.
ಭಾರತದಲ್ಲಿ ದೆಹಲಿಯಂತಹ ದೈತ್ಯ ಮಾಲೀನ್ಯ ಪ್ರದೇಶಗಳಲ್ಲಿ ಭಾರತದ ಒಂದಿಷ್ಟು ನಗರಗಳು ಶುದ್ಧ ಗಾಳೀಯನ್ನ ಸೆವಿಸುತ್ತಿವೆ ಎನ್ನುವುದೇ ಒಳ್ಳೆಯ ಸಂಗತಿ. ಇನ್ನು ಈ ನಿಟ್ಟಿನಲ್ಲಿ ಭಾರತದ ಇನ್ನು ಹತ್ತು ಹಲವು ನಗರಗಳು ಉತ್ತಮ ಗಾಳಿ ಗುಣಮಟ್ಟ ಹೊಂದುವಂತೆ ಮುಂಜಾಗ್ರತ ಕ್ರಮಗಳನ್ನ ವಹಿಸಿದ್ರೆ ಒಳ್ಳೆಯದು. ಜೊತೆಗೆ ಸರ್ಕಾರ ಕೂಡ ಈ ಕಾರ್ಯಗಳಿಗೆ ಸ್ಥಳೀಯರಿಗೆ ಬೆಂಬಲವನ್ನ ನೀಡಿದ್ರೆ ಭಾರತದ ಹಲವು ಭಾಗಗಳಲ್ಲಿ ನಾವು ಶುದ್ಧ ಗಾಳಿಯನ್ನ ಕಾಣಬಹುದು.


Click it and Unblock the Notifications