ವಿದೇಶಕ್ಕೆ ಪ್ರಯಾಣಿಸುವಾಗ ಅಥವಾ ದೂರ ಪ್ರಯಾಣದ ವೇಳೆ ನಮ್ಮ ಪ್ರೀತಿಪಾತ್ರರನ್ನು ನಾವು ಸಾಮಾನ್ಯವಾಗಿ ತಬ್ಬಿಕೊಂಡು ವಿದಾಯ ಹೇಳುವುದು...ಅಥವಾ ನಮ್ಮನ್ನು ಬೇಟಿಯಾಗಲು ಬಂದಾಗ ಅಪ್ಪಿಕೊಂಡು ಸ್ವಾಗತಿಸುವುದು ಸಾಮಾನ್ಯ. ವಿಮಾನ ನಿಲ್ದಾಣದಲ್ಲಿ ಸಾಮಾನ್ಯವಾಗಿ ಇಂತಹ ದೃಶ್ಯಗಳು ಹೆಚ್ಚಾಗಿ ಕಂಡುಬರುತ್ತದೆ. ಈಗ ವಿಮಾನ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿರುತ್ತದೆ. ಹೀಗಾಗಿ ವಿಮಾನ ನಿಲ್ದಾಣದ ನಿಯಮಗಳಲ್ಲಿ ಬದಲಾವಣೆಗಳನ್ನು ತಂದಿದೆ. ಯಾಕೆಂದರೆ ಈ ವಿಮಾನ ನಿಲ್ದಾಣದಲ್ಲಿ ಪರಸ್ಪರ ತಬ್ಬಿಕೊಳ್ಳುವುದೇ ಸಮಸ್ಯೆಯಾಗಿದೆ.
ಇದೇ ಕಾರಣಕ್ಕೆ ಇನ್ಮುಂದೆ ವಿಮಾನ ನಿಲ್ದಾಣದಲ್ಲಿ ಪ್ರೀತಿಪಾತ್ರರನ್ನು ಬೀಳ್ಕೊಡುವಾಗ ಕೇವಲ ಮೂರು ನಿಮಿಷಗಳ ಕಾಲ ಮಾತ್ರ ತಬ್ಬಿಕೊಳ್ಳಲು ಅವಕಾಶ ನೀಡಲಾಗುತ್ತಿದೆ. ಇದರ ಜೊತೆಗೆ, ವಿಮಾನ ನಿಲ್ದಾಣದಲ್ಲಿ ಪ್ರವೇಶಿಸುವುದು, ಹೊರಹೋಗುವುದು ಹಾಗೂ ಇತರ ಪ್ರಯಾಣಿಕರೊಂದಿಗೆ ಸಂವಹನ ನಡೆಸುವ ವಿಧಾನಗಳಿಗೂ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಇದನ್ನು ಪ್ರಯಾಣಿಕರು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ.

ನ್ಯೂಜಿಲೆಂಡ್‌ನ ಡ್ಯುನೆಡಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರೀತಿಪಾತ್ರರಿಗೆ ವಿದಾಯ ಹೇಳುವಾಗ ತಬ್ಬಿಕೊಳ್ಳುವ ಸಮಯದ ಮಿತಿಯನ್ನು ನಿಗದಿಪಡಿಸಲಾಗಿದೆ. ಇಲ್ಲಿ ಡ್ರಾಪ್-ಆಫ್ ಪ್ರದೇಶದಲ್ಲಿ ಅಪ್ಪುಗೆಯ ಗರಿಷ್ಠ ಸಮಯವನ್ನು ಮೂರು ನಿಮಿಷಗಳಲ್ಲಿ ಇರಿಸಲಾಗಿದೆ. ಒಬ್ಬ ವ್ಯಕ್ತಿಯು ಈ ಮಿತಿಗಿಂತ ಹೆಚ್ಚು ತಬ್ಬಿಕೊಂಡರೆ, ವಿಮಾನ ನಿಲ್ದಾಣದ ಸಿಬ್ಬಂದಿ ತಕ್ಷಣ ಕ್ರಮ ಅಲ್ಲಿ ಹಾಜರಾಗಿ ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ. ಪ್ರಯಾಣಿಕರ ನೂಕುನುಗ್ಗಲು ಹಾಗೂ ಭದ್ರತಾ ವ್ಯವಸ್ಥೆ ಕಾಪಾಡಲು ಈ ನಿಯಮ ಜಾರಿಗೆ ತರಲಾಗಿದೆ.
ನಿಯಮವೇನು?
ಡ್ಯುನೆಡಿನ್ ವಿಮಾನ ನಿಲ್ದಾಣವು ಪ್ರಯಾಣಿಕ ದಟ್ಟಣೆಯಿಂದ ಕೂಡಿದ್ದು, ಇಲ್ಲಿ ಡ್ರಾಪ್-ಆಫ್ ವಲಯದಲ್ಲಿ ಪರಸ್ಪರ ಹಗ್ ಮಾಡಿಕೊಳ್ಳುವ ಸಮಯವನ್ನು ಮೂರು ನಿಮಿಷಗಳಿಗೆ ಸೀಮಿತಗೊಳಿಸಲಾಗಿದೆ. ಈ ನಿಯಮವನ್ನು ಜಾರಿಗೆ ತಂದಿರುವ ಹಿಂದಿರುವ ಕಾರಣವೆಂದರೆ ಹಿಂದೆ ಇಲ್ಲಿ ಜನರು ವಿದಾಯ ಹೇಳುವಾಗ ಬಹಳಷ್ಟು ಸಮಯ ಉಳಿದುಕೊಳ್ಳುತ್ತಿದ್ದರು. ಆದ್ರೆ ಈಗ ತಂದಿರುವ ಹೊಸ ನಿಯಮದಿಂದ ಪ್ರಯಾಣಿಕರು ಬರಲು ಮತ್ತು ಹೋಗಲು ತೊಂದರೆಯಾಗುವುದಿಲ್ಲ. ಈ ಭಾಗದಲ್ಲಿ ಇತರೆ ಪ್ರಯಾಣಿಕರಿಗೆ ಸ್ಥಳಾವಕಾಶದ ಕೊರತೆಯಾಗದಂತೆ ಕಾಲಮಿತಿ ನಿಗದಿಪಡಿಸಲಾಗಿದೆ. ಯಾರಾದರೂ ಈ ನಿಯಮವನ್ನು ಉಲ್ಲಂಘಿಸಿದರೆ, ಅವರಿಗೆ ದಂಡವನ್ನು ಸಹ ವಿಧಿಸಬಹುದಾಗಿದೆ.
ವಿಮಾನ ನಿಲ್ದಾಣದಲ್ಲಿ ಅಪ್ಪುಗೆಯ ಸಮಯ ಮಿತಿ ಏಕೆ?
ವಿಮಾನ ನಿಲ್ದಾಣಗಳಲ್ಲಿ ಪ್ರತಿದಿನ ಸಾವಿರಾರು ಜನರು ಬಂದು ಹೋಗುತ್ತಾರೆ. ಡ್ರಾಪ್-ಆಫ್ ವಲಯದಲ್ಲಿ ಹೆಚ್ಚು ಹೊತ್ತು ನಿಂತು ಅಪ್ಪಿಕೊಳ್ಳುವುದರಿಂದ ಅಲ್ಲಿ ಜನಸಂದಣಿ ಹೆಚ್ಚಾಗಿ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಈ ಮಿತಿಯಿಂದಾಗಿ ಎಲ್ಲಾ ಪ್ರಯಾಣಿಕರು ಸುಲಭವಾಗಿ ತಮ್ಮ ವಾಹನಗಳನ್ನು ಪಾರ್ಕ್ ಮಾಡಿ, ಪ್ರೀತಿಪಾತ್ರರನ್ನು ಬೀಳ್ಕೊಡಬಹುದು ಮತ್ತು ವಿಮಾನಕ್ಕೆ ತೆರಳಬಹುದು. ಅಲ್ಲದೇ ಪ್ರತಿ ಪ್ರಯಾಣಿಕನಿಗೂ ಸಮಯ ಎನ್ನುವುದು ಬಹಳಷ್ಟು ಮುಖ್ಯ. ಒಬ್ಬರ ಅನುಕೂಲಕ್ಕೆ ಇನ್ನೊಬ್ಬರಿಗೆ ಅನಾನುಕೂಲವಾಗಬಾರದು. ಅಲ್ಲದೇ ಈ ನಿಯಮದಿಂದಾಗಿ ವಿಮಾನ ನಿಲ್ದಾಣದಲ್ಲಿ ಎಲ್ಲಾ ಕೆಲಸಗಳು ಸುಗಮವಾಗಿ ನಡೆಯುತ್ತವೆ ಮತ್ತು ವಿಳಂಬವಾಗುವ ಸಾಧ್ಯತೆ ಕಡಿಮೆಯಾಗುತ್ತದೆ.
ವೈಜ್ಞಾನಿಕ ಸಂಶೋಧನೆಗಳ ಪ್ರಕಾರ, ಮಾನವನ ದೇಹವು 20 ಸೆಕೆಂಡುಗಳ ಅಪ್ಪುಗೆಯಿಂದಲೇ ಸಂತೋಷ ಮತ್ತು ವಿಶ್ರಾಂತಿಯನ್ನು ನೀಡುವ ಹಾರ್ಮೋನ್ ಆಕ್ಸಿಟೋಸಿನ್ ಅನ್ನು ಬಿಡುಗಡೆ ಮಾಡುತ್ತದೆ. ಇದರರ್ಥ, ಪ್ರೀತಿಪಾತ್ರರನ್ನು ಬೀಳ್ಕೊಡಲು ಮೂರು ನಿಮಿಷ ನೀಡಿದರೆ ಸಾಕಷ್ಟು ಸಮಯ ನೀಡಿದಂತಾಗುತ್ತದೆ.ವಿಮಾನ ನಿಲ್ದಾಣದಲ್ಲಿ ಅಪ್ಪುಗೆಯ ಸಮಯ ಮಿತಿಯನ್ನು ವೈಜ್ಞಾನಿಕ ಸಂಶೋಧನೆಗಳು, ಸಾರ್ವಜನಿಕ ಸ್ಥಳದ ಸ್ವರೂಪ, ಸುಗಮ ಸಂಚಾರ, ಸುರಕ್ಷತೆ ಮತ್ತು ಸಮಯ ನಿರ್ವಹಣೆಯನ್ನು ಗಮನದಲ್ಲಿಟ್ಟುಕೊಂಡು ಹೇರಲಾಗಿದೆ. ಇದು ಎಲ್ಲಾ ಪ್ರಯಾಣಿಕರಿಗೆ ಸಮಾನ ಅವಕಾಶವನ್ನು ನೀಡುತ್ತದೆ ಮತ್ತು ವಿಮಾನ ನಿಲ್ದಾಣದಲ್ಲಿ ಸುಗಮ ಕಾರ್ಯಾಚರಣೆಗೆ ಅನುವು ಮಾಡಿಕೊಡುತ್ತದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?



Click it and Unblock the Notifications