Airtel & Blinkit: ಬ್ಲಿಂಕಿಟ್‌ನಿಂದ ಏರ್‌ಟೆಲ್ ಸಿಮ್ ಡೆಲಿವರಿ..ಹೊಸ ಪ್ರಯತ್ನ! ಸಿಮ್ ಆಕ್ಟಿವೇಟ್ ಮಾಡೋದು ಅತಿ ಸುಲಭ

ಬ್ಲಿಂಕಿಂಟ್‌ನಲ್ಲಿ ದಿನಸಿ ವಸ್ತುಗಳು, ಎಲೆಕ್ಟ್ರಾನಿಕ್ ಡಿವೈಸ್‌ಗಳು, ಬಟ್ಟೆ ಇತ್ಯಾದಿ ವಸ್ತುಗಳನ್ನು ಮನೆ ಬಾಗಿಲಿಗೆ ತರಿಸಿಕೊಳ್ತಿದ್ದ ಜನ, ಇನ್ಮುಂದೆ ಏರ್ ಟೆಲ್‌ ಸಿಮ್‌ನ ಕೂಡ ತರಿಸಿಕೊಳ್ಳಬಹುದು. ಸಾಮಾನ್ಯವಾಗಿ ಈ ರೀತಿಯ ಆವಿಷ್ಕಾರ ಸ್ವಲ್ಪ ಕಷ್ಟಕರ. ಆದ್ರೆ ಈ ಬ್ಲಿಂಕಿಟ್‌ ಈ ಹೊ ಪ್ರಯತ್ನಕ್ಕೆ ಕೈ ಹಾಕಿದೆ. ಇದಕ್ಕೆ ಸಾಟಿ ಎಂಬಂತೆ, ಭಾರ್ತಿ ಏರ್‌ಟೆಲ್ ಕೂಡ ಒಂದು ಹೆಜ್ಜೆ ಮುಂದೆ ಇಟ್ಟಿದೆ.

Airtel & Blinkit: ಬ್ಲಿಂಕಿಟ್‌ನಿಂದ ಏರ್‌ಟೆಲ್ ಸಿಮ್ ಡೆಲಿವರಿ..!

ಹೌದು, ಟೆಲಿಕಾಂ ಕ್ಷೇತ್ರದಲ್ಲಿ ಭಾರ್ತಿ ಏರ್‌ಟೆಲ್ ಮತ್ತೊಮ್ಮೆ ಗ್ರಾಹಕರ ಅನುಭವವನ್ನು ಮುಂಚಿತಗೊಳಿಸುವ ದಿಸೆಯಲ್ಲಿ ಹೆಜ್ಜೆ ಇಟ್ಟಿದೆ. ತ್ವರಿತ ವಿತರಣೆಯ ಶ್ರೇಣಿಯಲ್ಲಿ ಹೆಸರು ಮಾಡಿರುವ ಬ್ಲಿಂಕಿಟ್ ಜೊತೆ ಕೈಜೋಡಿಸಿ, ಈಗ ಏರ್‌ಟೆಲ್ ಕೇವಲ 10 ನಿಮಿಷಗಳಲ್ಲಿ ಸಿಮ್ ಕಾರ್ಡ್ ಮನೆ ಬಾಗಿಲಿಗೆ ತಲುಪಿಸುವ ನೂತನ ಸೇವೆ ಆರಂಭಿಸಿದೆ. ಈ ಸೇವೆಯು ಸದ್ಯದ ಮಟ್ಟಿಗೆ ದೇಶದ ಪ್ರಮುಖ 16 ನಗರಗಳಲ್ಲಿ ಲಭ್ಯವಿದ್ದು, ಭವಿಷ್ಯದಲ್ಲಿ ಇನ್ನಷ್ಟು ನಗರಗಳಿಗೆ ವಿಸ್ತರಿಸಲಿದೆ.

₹49ರೂ.ಗೆ ತಕ್ಷಣದ ಡೆಲಿವರಿ:

ಈ ಸೇವೆಯ ಮುಖ್ಯ ಉದ್ದೇಶ, ಗ್ರಾಹಕರಿಗೆ ಅತಿಹೆಚ್ಚು ಹೊರೆಯಾಗದಂತೆ ಸಿಮ್ ಕಾರ್ಡ್ ಖರೀದಿಸಲು ಸಹಾಯ ಮಾಡುವುದು. ಈಗ ಬ್ಲಿಂಕಿಟ್‌ನಲ್ಲಿ ಗ್ರಾಹಕರು, ಕೇವಲ ₹49 ನಾಮಮಾತ್ರ ಶುಲ್ಕಕ್ಕೆ, ಅಡ್ಡಿ ಅಡೆತಡೆಯಿಲ್ಲದೆ ಹೊಸ ಸಿಮ್ ಕಾರ್ಡ್‌ನ್ನು ತಮ್ಮ ಮನೆಗೆ ತಲುಪಿಸಿಕೊಳ್ಳಬಹುದು. ಇದಕ್ಕಾಗಿ ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಅಥವಾ ನೇರವಾಗಿ ಗ್ರಾಹಕಸೇವೆ ಸಂಖ್ಯೆ 9810012345 ಮೂಲಕ ಸಂಪರ್ಕ ಸಾಧಿಸಬಹುದು. ಸೇವೆ ಆರಂಭದ ದಿನದಿಂದಲೇ, ಇದು ಗ್ರಾಹಕರಿಂದ ಉತ್ತಮ ಪ್ರತಿಸ್ಪಂದನ ಪಡೆಯುತ್ತಿದೆ.

ಯಾವೆಲ್ಲಾ ನಗರಗಳಲ್ಲಿ ಈ ಸೌಲಭ್ಯ ಲಭ್ಯ?

ದೆಹಲಿ, ಗುರ್ಗಾಂವ್, ಫರಿದಾಬಾದ್, ಸೋನೆಪತ್, ಅಹಮದಾಬಾದ್, ಸೂರತ್, ಚೆನ್ನೈ, ಭೋಪಾಲ್, ಇಂದೋರ್, ಬೆಂಗಳೂರು, ಮುಂಬೈ, ಪುಣೆ, ಲಕ್ನೋ, ಜೈಪುರ, ಕೋಲ್ಕತ್ತಾ ಮತ್ತು ಹೈದರಾಬಾದ್ ನಗರಗಳಲ್ಲಿ ಪ್ರಾರಂಭದಲ್ಲಿ ಈ ಸೇವೆ ಲಭ್ಯವಿದೆ.

ಸಿಮ್ ಸಕ್ರಿಯಗೊಳಿಸುವಿಕೆ ಸುಲಭ:

ಸಿಮ್ ಕಾರ್ಡ್‌ ತಲುಪಿದ ನಂತರ, ಗ್ರಾಹಕರು ತಮ್ಮ ಆಧಾರ್ ಆಧಾರಿತ KYC ಪ್ರಕ್ರಿಯೆ ಮೂಲಕ ಸರಳವಾಗಿ ಸಿಮ್ ಅನ್ನು ಸಕ್ರಿಯಗೊಳಿಸಬಹುದು. ಇದನ್ನು ಗ್ರಾಹಕರು ತಮ್ಮ ನೆರವಿನೊಂದಿಗೆ ಆನ್‌ಲೈನ್‌ ಮಾರ್ಗದರ್ಶನದಿಂದ ಸಹ ಮುಗಿಸಿಕೊಳ್ಳಬಹುದು. ಸಿಮ್ ಸಕ್ರಿಯಗೊಳಿಸುವಿಕೆಗೆ 15 ದಿನಗಳ ಗಡುವು ನೀಡಲಾಗಿದೆ.

ಪ್ರಿಪೇಯ್ಡ್, ಪೋಸ್ಟ್‌ಪೇಯ್ಡ್ ಅಥವಾ ನಂಬರ್ ಪೋರ್ಟ್ ಆಯ್ಕೆ:

ಗ್ರಾಹಕರು ಸಿಮ್ ಸಕ್ರಿಯಗೊಳಿಸಿದ ನಂತರ, ತಮ್ಮ ಅನುಕೂಲತೆಗೆ ತಕ್ಕಂತೆ ಪ್ರಿಪೇಯ್ಡ್ ಅಥವಾ ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ ಆಯ್ಕೆಮಾಡಬಹುದು. ಇತರ ನೆಟ್‌ವರ್ಕ್‌ ಬಳಕೆದಾರರು ತಮ್ಮ ಪುರಾತನ ಸಂಖ್ಯೆಯನ್ನೇ ಉಳಿಸಿಕೊಂಡು ಏರ್‌ಟೆಲ್‌ಗೆ ಪೋರ್ಟ್ ಮಾಡುವ ಅವಕಾಶವನ್ನೂ ಬಳಸಿಕೊಳ್ಳಬಹುದು.

ಕಂಪನಿಗಳ ಪ್ರತಿಕ್ರಿಯೆ:

ಭಾರ್ತಿ ಏರ್‌ಟೆಲ್‌ನ ಕನೆಕ್ಟೆಡ್ ಹೋಮ್ಸ್ ವಿಭಾಗದ ಸಿಇಒ ಸಿದ್ಧಾರ್ಥ್ ಶರ್ಮಾ ಅವರು ಹೇಳುವುದೇನೆಂದರೆ. ನಾವು ಗ್ರಾಹಕರ ಜೀವನವನ್ನು ಸರಳಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಂದು ಹೆಜ್ಜೆಯನ್ನೂ ಇಡುತ್ತಿದ್ದೇವೆ. ಬ್ಲಿಂಕಿಟ್ ಜೊತೆಗಿನ ಈ ಸಹಕಾರದ ಮೂಲಕ, ಇಂದು 16 ನಗರಗಳಲ್ಲಿ ಈ ಸೇವೆ ಲಭ್ಯವಿದೆ. ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ನಗರಗಳಿಗೆ ವಿಸ್ತರಿಸಲು ನಾವು ಉತ್ಸುಕರಾಗಿದ್ದೇವೆ ಎಂಬುದಾಗಿದೆ.

ಬ್ಲಿಂಕಿಟ್‌ನ ಸಿಇಒ ಅಲ್ಬಿಂದರ್ ಧಿಂಡ್ಸಾ:

ಗ್ರಾಹಕರ ಸಮಯ ಮತ್ತು ತೊಂದರೆ ಉಳಿಸುವ ನಿಟ್ಟಿನಲ್ಲಿ, ನಾವು ಏರ್‌ಟೆಲ್‌ ಜೊತೆ ಕೈಜೋಡಿಸಿದ್ದೇವೆ. ನಾವು 10 ನಿಮಿಷಗಳಲ್ಲಿ ಸಿಮ್ ವಿತರಣೆ ಮಾಡುವ ಜವಾಬ್ದಾರಿಯನ್ನು ಹೊತ್ತಿದ್ದೇವೆ. ಅದೇ ಸಮಯದಲ್ಲಿ, ಗ್ರಾಹಕರು ತಾವು ಬೇಕಾದ ಪ್ರಿಪೇಯ್ಡ್ ಅಥವಾ ಪೋಸ್ಟ್‌ಪೇಯ್ಡ್ ಸೇವೆ ಆಯ್ಕೆ ಮಾಡಬಹುದು, ಅಥವಾ ಪೋರ್ಟ್ ಮಾಡುವ ಆಯ್ಕೆಯನ್ನೂ ಉಪಯೋಗಿಸಬಹುದು ಎಂಬುದು ಬ್ಲಿಂಕಿಟ್‌ನ ಸಿಇಒ ಅಲ್ಬಿಂದರ್ ಧಿಂಡ್ಸಾ ಅವರ ಮಾತಾಗಿದೆ.

ಟೆಲಿಕಾಂ ಸೇವೆಯ ಭವಿಷ್ಯ ಈಗ ನಿಮ್ಮ ಬಾಗಿಲಲ್ಲಿದೆ:

ಈ ಹೊಸ ಉಪಕ್ರಮವು ಭಾರತದಲ್ಲಿ ಮೊಬೈಲ್ ಸೇವೆಗಳ ಗ್ರಾಹಕರ ಅನುಭವವನ್ನು ಬದಲಾಯಿಸಲು ಮೊದಲ ಹೆಜ್ಜೆಯಾಗಿದ್ದು, ಇದರಿಂದ ಗ್ರಾಹಕರಿಗೆ ವೇಗದ, ಸುಲಭ ಹಾಗೂ ಅನುಕೂಲಕರ ಸೇವೆ ಒದಗಿಸಲು ಸಾಧ್ಯವಾಗುತ್ತಿದೆ. ತಾಂತ್ರಿಕತೆ, ಗ್ರಾಹಕಸೇವೆ ಮತ್ತು ತ್ವರಿತ ವಿತರಣೆಯ ಸಮ್ಮಿಲನವೇ ಈ ಯೋಜನೆಯ ಯಶಸ್ಸಿಗೆ ನಾಂದಿ ಹಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+