ಭಾರತದ ದೈತ್ಯ ಟೆಲಿಕಾಂ ಕಂಪನಿಗಳಾಗಿರುವ ಏರ್‌ಟೆಲ್ ಮತ್ತು ಜಿಯೋ ಕಂಪನಿಗಳು ಈ ಹೊಸ ವರ್ಷಕ್ಕೆ ಹೊಸ ಪ್ರೀಪೇಯ್ಡ್ ಯೋಜನೆಗಳನ್ನ ಪ್ರಾರಂಭ ಮಾಡುತ್ತಿವೆ.
ಭಾರತಿ ಏರ್‌ಟೆಲ್ 398 ಬೆಲೆಗೆ ಹೊಸ ಪ್ರೀಪೇಯ್ಡ್ ಯೋಜನೆಯನ್ನ ಪರಿಚಯ ಮಾಡ್ತಿದೆ. ಇದು ಹೈಸ್ಪೀಡ್ ಸಂಪರ್ಕ ಸೇರಿದಂತೆ ಪ್ರೀಮಿಯಂ ಮನರಂಜನೆಯನ್ನು ಕೂಡ ಒದಗಿಸುತ್ತಿದೆ. ಅಲ್ಲದೆ ಈ ಎಲ್ಲಾ ಪ್ರೀಪೇಯ್ಡ್ ಪ್ರಯೋಜನಗಳು ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್, ಕಂಪನಿಯ ವೆಬ್‌ಸೈಟ್ ಮತ್ತು ರಿಟೇಲ್ ಔಟ್‌ಲೆಟ್‌ಗಳಲ್ಲಿ ಲಭ್ಯವಿದೆ. ಏರ್‌ಟೆಲ್‌ನ ಈ ಪ್ರೀಪೇಯ್ಡ್ ಯೋಜನೆಯು ಮನರಂಜನೆ ಜೊತೆಗೆ ಗ್ರಾಹಕರಿಗೆ ಉತ್ತಮ ಡೇಟಾ ಪ್ರಯೋಜನಗಳನ್ನ ನೀಡುವ ಗುರಿಯನ್ನು ಹೊಂದಿದೆ.

ಈ ಪ್ರೀಪೇಯ್ಡ್ ಯೋಜನೆ ವೈಶಿಷ್ಟ್ಯಗಳೇನು?
ಏರ್‌ಟೆಲನ ಈ 398 ಪ್ರೀಪೇಯ್ಡ್ ಯೋಜನೆಯು ಪ್ರಮುಖವಾಗಿ ಗ್ರಾಹಕರನ್ನ ಆಕರ್ಷಿಸಲು ವಿನ್ಯಾಸಗೊಳಿಸಲಾಗಿದೆ. ಅಲ್ಲದೆ ಗ್ರಹಕರಿಗಾಗಿ ಉತ್ತಮ ಉತ್ತಮ ಡೇಟಾ ಸೌಲಭ್ಯ ಹಾಗೆ ಇದರ ಜೊತೆಗೆ ಪ್ರೀಮಿಯಂ ಮನೊರಂಜನೆ ಪ್ರಯೋಜನಗಳನ್ನ ನೀಡುತ್ತಿದೆ. ಇನ್ನು ಈ ಯೋಜನೆಯ ಪ್ರಮುಖ ವೈಶಿಷ್ಟ್ಯವನ್ನ ನಾವು ನೋಡೋದಾದ್ರೆ, ಈ ಯೋಜೆಯು 28-ದಿನದ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನ ಹೊಂದಿದೆ.
ಇದು ಬಳಕೆದಾರರಿಗೆ ಲೈವ್ ಕ್ರೀಡೆಗಳು, ಚಲನಚಿತ್ರಗಳು ಮತ್ತು ಜನಪ್ರಿಯ ವೆಬ್ ಸೀರೀಸ್‌ಗಳನ್ನ ನೀಡಲು ಅವಕಾಶವನ್ನ ಕಲ್ಪಿಸಿಕೊಡುತ್ತದೆ. ಅದಲ್ಲದೆ, Hotstar ಮೊಬೈಲ್ ಚಂದಾದಾರಿಕೆಯು ಜಾಹೀರಾತುಗಳನ್ನ ಒಳಗೊಂಡಿದ್ದು, ಬಳಕೆದಾರರು ನಿರ್ದಿಷ್ಟವಾಗಿ ಸ್ಮಾರ್ಟ್‌ಫೋನ್‌ನಲ್ಲಿ ಅಂದರೆ ಕೇವಲ ಒಂದು ಮೊಬೈಲ್‌ನಲ್ಲಿ ಮಾತ್ರ ಈ ಎಲ್ಲಾ ಪ್ರಯೋಜಗಳನ್ನ ಪಡೆಯಬಹುದು.
ಸಾಮಾನ್ಯವಾಗಿ ಹಾಟ್‌ಸ್ಟಾರ್ ಚಂದಾದಾರಿಕೆಗೆ ತಿಂಗಳಿಗೆ 149 ಹಾಗೆ ವಾರ್ಷಿಕವಾಗಿ ರೂ 499 ರೂಗಳ ರೀಚಾರ್ಜ್ ಮಾಡಬೇಕಗುತ್ತದೆ. ಆದ್ರೆ ಏರ್‌ಟೆಲ್ ತರುತ್ತಿರುವ ಈ ಹೊಸ ಪ್ರಿಪೇಯ್ಡ್ ಯೋಜನೆಯ ಮೂಲಕ ಈ ಯೋಜನೆಯನ್ನೂ ಕೂಡ ಉಚಿತವಾಗಿ ಪಡೆಯಬಹುದು.
398 ರೂ ಏರ್‌ಟೆಲ್ ಯೋಜನೆಯ ಮೂಲಕ ಅನಿಯಮಿತ ಸ್ಥಳೀಯ, ಎಸ್‌ಟಿಡಿ ಮತ್ತು ರೋಮಿಂಗ್ ಕರೆಗಳು, ಹಾಟ್‌ಸ್ಟಾರ್ ಚಂದಾದಾರಿಕೆಯ ಜೊತೆಗೆ ದಿನಕ್ಕೆ 2GBಯ 5G ಡೇಟಾ, ದಿನಕ್ಕೆ 100 SMS ಇವೆಲ್ಲವುಗಳ ಪ್ರಯೋಜನವನ್ನ ನೀವು 28-ದಿನಗಳವರೆಗೆ ಪಡೆಯಬಹದು.
ಏರ್ಟೆಲ್ Vs ಜಿಯೋ
ಏರ್‌ಟೆಲ್‌ನ ಈ ಹೊಸ ಪ್ರೀಪೇಯ್ಡ್ ಯೋಜನೆಯ ನಂತರ ಇದರ ಪ್ರಾಥಮಿಕ ಪ್ರತಿಸ್ಪರ್ಧಿ ರಿಲಯನ್ಸ್ ಜಿಯೋ ಕೂಡ ಪ್ರಮುಖ ಪ್ರಿಪೇಯ್ಡ್ ಯೋಜನೆಯನ್ನು ಗ್ರಾಹಕರಿಗಾಗಿ ಪರಿಚಯ ಮಾಡ್ತಿದೆ. ಜಿಯೋ ಹೊಸ ವರ್ಷಕ್ಕಾಗಿ ಒಂದು ಹೊಸ ಸ್ವಾಗತ ಯೋಜನೆಯನ್ನ ಜನರಿಗೆ ನೀಡ್ತಿದೆ. ರೂ. 2025 ಬೆಲೆಯ ಹೊಸ ರೀಚಾರ್ಜ್ ಪ್ಲಾನ್ ಒಂದನ್ನ ಜನರ ಮಂದಿಡ್ತಿದೆ. ಇದು 200-ದಿನಗಳ ಮಾನ್ಯತೆಯನ್ನು ಹೊಂದಿದೆ. ಇನ್ನು ಏರ್‌ಟೆಲ್‌ನ 28-ದಿನದ ಯೋಜನೆನ್ನ ಜನರ ಮುಂದಿಡ್ತಿದೆ.
ರಿಲಯನ್ಸ್ ಜಿಯೋ ಹೊಸ ವರ್ಷದ ಸ್ವಾಗತ ಯೋಜನೆಯು ಗ್ರಾಹಕರಿಗೆ ಅನ್‌ಲಿಮಿಟೆಡ್ ಕರೆ ಮತ್ತು 500 GBಯ 4G ಡೇಟಾವನ್ನು ಒದಗಿಸುತ್ತದೆ. ಹಾಗೆ ದೈನಂದಿನ ಬಳಕೆಗೆ 2.5GB ಡೇಟಾ ಪ್ರಯೋಜನವನ್ನ ಒದಗಿಸುತ್ತಿದೆ. ಹಾಗೆ ದೈನಂದಿನ ಮಿತಿ ಮುಗಿದ ನಂತರ, ಬಳಕೆದಾರರು ಕಡಿಮೆ ವೇಗದ ಡೇಟಾ ಪ್ರಯೋಜನವನ್ನ ಪಡೆಯಬಹುದು. ಹೆಚ್ಚುವರಿಯಾಗಿ, ಈ ಯೋಜನೆಯ ಅರ್ಹ ಬಳಕೆದಾರರಿಗೆ ಅನ್‌ಲಿಮಿಟೆಡ್ 5G ಡೇಟಾವನ್ನು ಕೂಡ ನೀಡುತ್ತಿದೆ. ಜಿಯೋದ ಸುಧಾರಿತ ನೆಟ್‌ವರ್ಕ್‌ನಲ್ಲಿ ತಡೆರಹಿತ ಸಂಪರ್ಕವನ್ನು ಇದು ಗ್ರಹಕರಿಗೆ ಖಚಿತಪಡಿಸುತ್ತದೆ.
ಈ ಯೋಜನೆಯ ಇತರ ವೈಶಿಷ್ಟ್ಯಗಳು ಅನಿಯಮಿತ SMS ಮತ್ತು JioTV, JioCinema ಮತ್ತು JioCloud ನಂತಹ ಅಪ್ಲಿಕೇಶನ್‌ಗಳ JioSuiteಗಳ ಪ್ರಯೋಜನಗಳನ್ನ ಪೆಯುವ ಮೂಲಕ ಮನರಂಜನೆ ಹಾಗು ಉಪಯುಕ್ತ ಅನುಭವವನ್ನ ಗ್ರಾಹಕರಿಗೆ ನೀಡುತ್ತದೆ.
ಈ ಕೊಡುಗೆಯ ಜೊತೆಗೆ ರಿಲಯನ್ಸ್ ಜಿಯೋ ನಿಮಗೆ 2,150ರೂ ಮೌಲ್ಯದ ಕೂಪನ್‌ಗಳನ್ನ ಸಹ ನೀಡುತ್ತಿದ. ಇದರಲ್ಲಿ ಕನಿಷ್ಠ 2,500ರೂ ಖರೀದಿಗೆ ರಿಡೀಮ್ ಮಾಡಬಹುದಾದ 500ರೂಗಳ AJIO ಕೂಪನ್, ಕನಿಷ್ಠ 499ರ ಸ್ವಿಗ್ಗಿ ಆರ್ಡರ್‌ಗಳ ಮೇಲೆ 150ರೂ. ರಿಯಾಯಿತಿ ಮತ್ತು EaseMyTrip.com ಮೂಲಕ ಫ್ಲೈಟ್ ಬುಕಿಂಗ್‌ನಲ್ಲಿ 1,500ರೂಗಳ ರಿಯಾಯಿತಿಯಂತಹ ಪ್ರಯೋಜನಳನ್ನ ನೀಡುತ್ತಿದೆ. ಹಾಗೆ ನೀವು ಈ ಎಲ್ಲಾ ಪ್ರಯೋಜನಗಳನ್ನ ನೀವು ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಎರಡರಲ್ಲೂ ಪಡೆಯಬಹುದು. ಚಂದಾದಾರರು MyJio ಅಪ್ಲಿಕೇಶನ್ ಅಥವಾ ಅಧಿಕೃತ Reliance Jio ವೆಬ್‌ಸೈಟ್ ಮೂಲಕ ಸುಲಭವಾಗಿ ಯೋಜನೆಯನ್ನು ಪಡೆಯಬಹದು.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications