ಕಳೆದ ವರ್ಷ..ಅಂದರೆ 2024ರ ಜುಲೈನಲ್ಲಿ ಟೆಲಿಕಾಂ ಕಂಪನಿಗಳು ದರ ಏರಿಸಿ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದ್ದವು.. ಪ್ರಮುಖವಾಗಿ ಭಾರತಿ ಏರ್‍ಟೆಲ್, ವೊಡಾಫೋನ್ ಐಡಿಯಾ, ಜಿಯೋ ಕಂಪನಿಗಳು ಹೆಚ್ಚಾಗಿ ದರ ಏರಿಸಿದ್ದವು. ಈಗ ಈ ಮೂರು ಟೆಲಿಕಾಂ ಕಂಪನಿಗಳಲ್ಲಿ ವಿಭಜಿತ ಪ್ರವೃತ್ತಿಗಳು ಗೋಚರಿಸುತ್ತಿವೆ. ಅದರಲ್ಲೂ ಈ ಏರಿಕೆಯಿಂದ ಭಾರತಿ ಏರ್‍ಟೆಲ್ ಲಿಮಿಟೆಡ್ ಪ್ರಮುಖ ಲಾಭಾಂಶದ ಹಚಿಕೆದಾರನಾಗಿದೆ ಎನ್ನಲಾಗುತ್ತಿದೆ. ಅಲ್ಲದೇ ಈ ಸಂಸ್ಥೆ ತನ್ನ ಆರ್ಥಿಕ ಸ್ಥಿರತೆಯನ್ನು ಮುಂದುವರೆಸಿರುವುದು ಕಂಡು ಬಂದಿದೆ.
ಇನ್ನು MOFSL (ಮೊತಿಲಾಲ್ ಒಸ್ವಾಲ್ ಫೈನಾನ್ಷಿಯಲ್ ಸರ್ವಿಸಸ್) ತನ್ನ ವರದಿಯಲ್ಲಿ ವೊಡಾಫೋನ್ ಐಡಿಯಾ ದೊಡ್ಡ ಮಟ್ಟದ ಬಂಡವಾಳ ಹೂಡಿಕೆಗೆ ಯೋಜನೆ ಹಾಕಿಕೊಂಡಿದೆ. ಇದರ ಹೊರತಾಗಿಯೂ ಭಾರತಿ ಏರ್‌ಟೆಲ್ ಮತ್ತು ಆರ್‌ಜಿಯೋ ತಮ್ಮ ಬಲಿಷ್ಠ ಹಣಕಾಸು ಸಾಮರ್ಥ್ಯದ ಆಧಾರದ ಮೇಲೆ ಮಾರುಕಟ್ಟೆ ಹಂಚಿಕೆಯನ್ನು ವೃದ್ಧಿಸುತ್ತಿದೆ ಎಂಬುದು ವರದಿಯಲ್ಲಿ ತಿಳಿದು ಬಂದಿದೆ. ಭಾರತೀಯ ಟೆಲಿಕಾಂ ಉದ್ಯಮದ ಏಕೀಕೃತ ಮಾರುಕಟ್ಟೆ ಸ್ಥಿತಿ, ಡೇಟಾ ಬಳಕೆಯ ಅಂಕಿ ಅಂಶ, ಜಾಗತಿ ಮಟ್ಟದಲ್ಲಿ ಅತ್ಯಂತ ಕಡಿಮೆ ಬಳಕೆದಾರರ ಆದಾಯ ಮತ್ತು ಟೆಲಿಕಾಂ ಕಂಪನಿಗಳಿಂದ ನಷ್ಟದ ಮೌಲ್ಯ ಮರಳಿಕೆ..ಈ ಎಲ್ಲಾ ಅಂಶಗಳನ್ನು ಇಟ್ಟುಕೊಂಡು ಮುಂದಿನ ದಿನಗಳಲ್ಲಿ MOFSL, ಇನ್ನೂ ಒಂದು ಹಂತದ ದರ ಪರಿಷ್ಕರಣೆ ಮಾಡುವ ಬಗ್ಗೆ ನಿರೀಕ್ಷಿಸಿದೆ ಎನ್ನಲಾಗುತ್ತಿದೆ.

ಇನ್ನು 2025ರ ಡಿಸೆಂಬರ್ ವೇಳೆಗೆ 15% ದರ ಏರಿಕೆ ಸಾಧ್ಯತೆ ಇದೆ ಎನ್ನಲಾಗಿದೆ. ಅಂದರೆ ಭಾರತಿ ಏರ್‌ಟೆಲ್ ಮತ್ತು ಆರ್‌ಜಿಯೋ ಪ್ರಮುಖ ಲಾಭದ ಬಗ್ಗೆ ಚಿಂತನೆ ನಡೆಸುತ್ತಿದ್ದು ವೋಡಾಫೋನ್ ಐಡಿಯಾಗೆ ಸವಾಲು ಒಡ್ಡಲು ಮುಂದಾಗಿದೆ ಎನ್ನಲಾಗುತ್ತಿದೆ. ಅಂದರೆ ಡಿಸೆಂಬರ್ ವೇಳೆಗೆ 15% ದರ ಏರಿಕೆ ಅಥವಾ ಪ್ರತಿ ತಿಂಗಳು ₹50 ಹೆಚ್ಚಳ ಸಾಧ್ಯವಿದೆ. ಇನ್ನು ನೆಟ್‌ವರ್ಕ್ ಬಲವರ್ಧನೆಗಾಗಿ ವೊಡಾಫೋನ್ ಐಡಿಯಾ ಎರಡ್ಮೂರು ವರ್ಷಗಳಲ್ಲಿ, 50 ಸಾವಿರ ಕೋಟಿಯಿಂದ 55 ಸಾವಿರ ಕೋಟಿ ಹೂಡಿಕೆಗೆ ತಯಾರಾಗಿದೆ. ಈ ಹೂಡಿಕೆ ಯೋಜನೆ ಮಿತವಾಗಿದೆ. ಅಲ್ಲದೇ ಅದು ಹೆಚ್ಚುವರಿ ಸಾಲ ಪಡೆದುಕೊಳ್ಳುವ ಶಕ್ತಿ ಮೇಲೆ ಮತ್ತು ಭಾರತ ಸರ್ಕಾರದಿಂದ ಇನ್ನಷ್ಟು ಸಹಾಯ ಪಡೆಯುವುದರ ಮೇಲೆ ಅವಲಂಬಿತವಾಗಿದೆ ಎಂದು MOFSL ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.
ಇತ್ತ ದರ ಏರಿಕೆಯಿಂದ ಏರ್‍ಟೆಲ್-ಜಿಯೋಗೆ ಹೋಲಿಸಿದರೆ ವೊಡಾಫೋನ್ ಐಡಿಯಾ ಲಾಭ ಗಳಿಸುವಲ್ಲಿ ವಿಫಲವಾಗಿದೆ ಏಕೆಂದರೆ, ಕಡಿಮೆ ಗುಣಮಟ್ಟದ ಗ್ರಾಹಕರ ವಿನ್ಯಾಸ ಮತ್ತು ನಿರಂತರ ಗ್ರಾಹಕ ನಷ್ಟವೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಜನಪ್ರಿಯ ಸ್ಮಾಟ್‌ಫೋನ್‌ಗಳ ಮೇಲಿನ ದರ ಏರಿಕೆ ಹಾಗೂ ಉತ್ತಮ ಯೋಜನೆಗಳ ದರವನ್ನು ಮೂರು ಬಾರಿ ದುಪ್ಪಟ್ಟು ಮಾಡಿದರೂ ವೋಡಾಫೋನ್ ಐಡಿಯಾದ ಆದಾಯ ಸರಿಯಾಗಿ ತೂಗಿಲ್ಲ. ನಿಜ ಹೇಳಬೇಕೆಂದರೆ 2019ಕ್ಕಿಂತ ಈಗ ಇನ್ನು 2% ಕಡಿಮೆಯಾಗಿದೆ. ಆಗಿನಿಂದ ಇದು ತನ್ನ ಗ್ರಾಹಕರನ್ನು ಕಳೆದುಕೊಳ್ಳುತ್ತಲೇ ಬಂದಿದೆ ಎನ್ನಲಾಗಿದೆ. 2024ರ ಜುಲೈನಲ್ಲಾದ ದರ ಏರಿಕೆಯಲ್ಲೂ ವೊಡಾಫೋನ್ ಐಡಿಯಾ ಆದಾಯ, ಕೇವಲ 7% ಹೆಚ್ಚಾಗಿದೆ. ಅಂದರೆ ಅದಾಜು ₹2,600 ಕೋಟಿ ಅಷ್ಟೇ ಹೆಚ್ಚಾಗಿದೆ ಎನ್ನಲಾಗಿದೆ. ಇದು ಅದರ ಸರಾಸರಿ 17% ದರ ಏರಿಕೆಗೆ ಹೋಲಿಸಿದರೆ ಕಡಿಮೆಯೇ ಎಂದು MOFSL ವಿಶ್ಲೇಷಿಸಿದೆ.
ಮತ್ತೊಂದೆಡೆ ಭಾರತಿ ಏರ್‍ಟೆಲ್ ತನ್ನ ಗ್ರಾಹಕರನ್ನು ಹೆಚ್ಚಿಸಿಕೊಳ್ಳುತ್ತ ಬಂದಿದ್ದು, ತನ್ನ ಸುಧಾರಿತ ದರ ಏರಿಕೆಯಿಂದ ಸ್ಪಷ್ಟ ಮುನ್ನಡೆ ಸಾಧಿಸುತ್ತಿದೆ. MOFSLನ ಅಂದಾಜಿನ ಪ್ರಕಾರ, ಭಾರತಿ ಏರ್‌ಟೆಲ್ ಮೂರು ಖಾಸಗಿ ಟೆಲಿಕಾಂ ಸಂಸ್ಥೆಗಳ ನಡುವೆ ಗ್ರಾಹಕ ಮಾರುಕಟ್ಟೆ ಹಂಚಿಕೆಯಲ್ಲಿ 45 ಬಿಪಿಎಸ್ ಗಳಿಸಿತು. ಆದರೆ VIL 55 ಬಿಪಿಎಸ್ ಕಳೆದುಕೊಂಡಿತು ಎನ್ನಲಾಗಿದೆ.
ದರ ಏರಿಕೆ ಮಾಡಿರುವುದರಿಂದ ಪ್ರತಿ ಬಳಕೆದಾರನ ಕಡೆಯಿಂದ ಟೆಲಿಕಾಂ ಕಂಪನಿಗೆ ಆದಾಯ ಹೆಚ್ಚಾಗಿದೆ. ಅದರಲ್ಲೂ ಭಾರತಿ ಏರ್‌ಟೆಲ್ ಮತ್ತು ಜಿಯೋ ದರ ಏರಿಕೆಯಿಂದ ಅತ್ಯಂತ ಹೆಚ್ಚು ಲಾಭ ಪಡೆಯಬಹುದು, ಏಕೆಂದರೆ ಅವರ ಗ್ರಾಹಕನ ನೆಲೆ ಸದೃಢವಾಗಿದೆ ಎಂಬುದಾಗಿದೆ. ವೊಡಾಫೋನ್ ಐಡಿಯಾಗೆ ಹೊಸ ಗ್ರಾಹಕರನ್ನು ಸೆಳೆಯುವುದು ಹಾಗೂ ಹಳೆಯ ಗ್ರಾಹಕರನ್ನು ಉಳಿಸಿಕೊಳ್ಳುವುದು ಕಷ್ಟವಾಗಬಹುದು. ಕೆಲವು ಕಡಿಮೆ ಬಂಡವಾಳದ ಗ್ರಾಹಕರು ವೊಡಾಫೋನ್ ಐಡಿಯಾದ ಸೇವೆ ತೊರೆಯಬಹುದು ಅಥವಾ ಕಡಿಮೆ ಮೊತ್ತದ ಪ್ಲಾನ್‌ಗಳಿಗೆ ಬದಲಾಗಬಹುದು..ಇದು ಜಿಯೋ ಹಾಗೂ ಏರ್‍ಟೆಲ್‌ಗೆ ಲಾಭವಾಗಲಿದೆ ಎಂಬುದು ತಿಳಿದು ಬಂದಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications