ಯಶಸ್ವಿನ ಕಥೆ: 5100 ಕೋಟಿ ರೂ. ಕಂಪನಿ ಕಟ್ಟಿ ಬೆಳೆಸಿ ಟಾಟಾ ಗ್ರೂಪ್‌ಗೆ ಮಾರಾಟ

ಭಾರತದಲ್ಲಿ ಸದ್ಯ ಉದ್ಯಮಿಗಳಿಗೆ ಹೇಳಿ ಮಾಡಿಸಿದ ಸಮಯ ಎಂದರೆ ತಪ್ಪಾಗಲಾರದು. ಇಡೀ ವಿಶ್ವದಲ್ಲಿ ಸದ್ಯ ಏಶ್ಯಾ ಖಂಡದಲ್ಲಿ ಅದರಲ್ಲೂ ಭಾರತದಲ್ಲಿ ವೇಗದಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯುತ್ತಿದೆ. ರಿಯಲ್‌ ಎಸ್ಟೇಟ್‌, ಮೂಲಭೂತ ಸೌಕರ್ಯಗಳ ಕಾಮಗಾರಿಗಳು ಸೇರಿದಂತೆ ಉದ್ಯಮಿಗಳು ಕೂಡ ವೇಗದಲ್ಲಿ ತಮ್ಮ ಉದ್ಯಮವನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ.

ಹಾಗಾಗಿ ಸದ್ಯ ಭಾರತದಲ್ಲಿ ವಿಶ್ವದ ಅನೇಕ ಹೂಡಿಕೆದಾರರು ಕೂಡ ಇಲ್ಲಿನ ಷೇರುಮಾರುಕಟ್ಟೆ ಸೇರಿದಂತೆ ಹಲವು ಕಡೆಗಳಲ್ಲಿ ಉದ್ಯಮವನ್ನು ಆರಂಬಿಸುತ್ತಿದ್ದಾರೆ. ಅದೂ ಅಲ್ಲದೆ ಶೂನ್ಯದಿಂದ ಆರಂಭ ಮಾಡಿದ ಕಂಪೆನಿಯನ್ನು ಬಹುಕೋಟಿ ಉದ್ಯಮ ಸಂಸ್ಥೆಯನ್ನಾಗಿ ಕೂಡ ಉದ್ಯಮಿಗಳು ಬದಲಿಸುತ್ತಿದ್ದಾರೆ. ಅದೇ ರೀತಿ ಅಜಾಜ್ ಗುಪ್ತಾ ಇದಕ್ಕೆ ಉತ್ತಮ ನಿದರ್ಶನಗಳಲ್ಲಿ ಒಬ್ಬರಾಗಿದ್ದಾರೆ. 1996ರಲ್ಲಿ ಇವರು ಸ್ಥಾಪಿಸಿದ್ದ ಚಿಂಗ್ಸ್‌ ಸೀಕ್ರೆಟ್‌ ಆಂಡ್‌ ಸ್ಮಿತ್‌ & ಜೋನ್ಸ್‌ ಎಂಬ ಆಹಾರ ತಯಾರಿಕಾ ಸಂಸ್ಥೆಯನ್ನು ಆರಂಭಿಸಿ ಸದ್ಯ ಬರೊಬ್ಬರಿ 5100 ಕೋಟಿ ರೂ. ಮೊತ್ತಕ್ಕೆ ಟಾಟಾ ಸಂಸ್ಥೆಗೆ ಮಾರಾಟ ಮಾಡಿದ್ದಾರೆ.

 5100 ಕೋ.ರೂ. ಮೌಲ್ಯದ ಸಂಸ್ಥೆ ಹುಟ್ಟುಹಾಕಿ ಟಾಟಾಗೆ ಮಾರಾಟ!

ಯಾರಿವರು ಅಜಾಜ್ ಗುಪ್ತಾ?

ಅಜಾಜ್ ಅವರು ಸಲಹೆಗಾರರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದು, ಮಾರ್ಕೆಟಿಂಗ್ ಏಜೆನ್ಸಿಯನ್ನು ನಡೆಸುತ್ತಿದ್ದರು. ಇದರ ಹೊರತಾಗಿಯೂ ಅವರು ಸ್ವಂತ ಉದ್ಯಮವನ್ನು ನಡೆಸುವ ಬಗ್ಗೆ ಯಾವಾಗಲೂ ಯೋಜನೆ ಹಾಕಿಕೊಂಡಿದ್ದರು. ಗುಪ್ತಾ ಮೀರತ್‌ನ CCS ವಿಶ್ವವಿದ್ಯಾನಿಲಯದಿಂದ ಬ್ಯಾಚುಲರ್ ಆಫ್ ಆರ್ಟ್ಸ್ ವಿಷಯದಲ್ಲಿ ಪದವಿ ಪಡೆದುಕೊಂಡಿದ್ದರು. ಈ ಚೈನೀಸ್‌ ಆಹಾರ ಉದ್ಯಮ ಸ್ಥಾಪಿಸುವ ಅವರ ಆಸೆಯನ್ನು ಈಡೇರಿಸಿಕೊಂಡರು.

ಕ್ಯಾಪಿಟಲ್ಸ್‌ ಫುಡ್ಸ್‌ ಆರಂಭ

1996 ರಲ್ಲಿ ಅವರು ಕ್ಯಾಪಿಟಲ್ ಫುಡ್ಸ್ ಎನ್ನುವ ಸಂಸ್ಥೆಯನ್ನು ಸ್ಥಾಪಿಸಿದರು. ಭಾರತದಲ್ಲಿ ಹೊರಗೆ ತಿನ್ನುವ ಅಭ್ಯಾಸಕ್ಕಿಂತ ಮನೆಯಲ್ಲೇ ತಯಾರಿಸಿದ ಆಹಾರವನ್ನು ಹೆಚ್ಚಾಗಿ ತಿನ್ನಲು ಬಯಸುತ್ತಾರೆ ಎಂಬ ವಿಚಾರವನ್ನೇ ಅವರು ಅಂದೇ ಕಂಡುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಇದಕ್ಕೆ ನೆರವು ನೀಡುವ ನಿಟ್ಟಿನಲ್ಲಿ ಹಲವು ವಿಧದ ವಿಭಿನ್ನ ಚೀನಾದ ಆಹಾರೋತ್ಪನ್ನಗಳನ್ನು ಅವರು ಬಿಡುಗಡೆ ಮಾಡಿದರು. ಅವರ ಉತ್ಪನ್ನಗಳಲ್ಲಿ ಚಟ್ನಿ, ವಿವಿಧ ರೀತಿಯ ಮಸಾಲಗಳು, ಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಕೂಡ ಸೇರಿದೆ. ಇನ್ನು ಅಜಾಜ್ ಅವರ ಎರಡೂ ಬ್ರ್ಯಾಂಡ್‌ಗಳಾದ ಚಿಂಗ್ಸ್ ಸೀಕ್ರೆಟ್ ಮತ್ತು ಸ್ಮಿತ್ & ಜೋನ್ಸ್ ಹೆಸರು ವಿದೇಶಿ ಹೆಸರುಗಳನ್ನು ಹೊಂದಿದೆ.

ಭಾರತದ ಸಂಪ್ರದಾಯಕ್ಕೆ ಅನುಗುಣವಾದ ಆಹಾರ

ಭಾರತೀಯರು ಹೆಚ್ಚಾಗಿ ಹೊರಗೆ ತಿನ್ನುವುದಕ್ಕಿಂತ ಹೆಚ್ಚಾಗಿ ಮನೆಯಲ್ಲಿ ಅಡುಗೆಗಳಿಗೆ ಆದ್ಯತೆ ನೀಡುತ್ತಾರೆ ಎಂದು ಅರ್ಥಮಾಡಿಕೊಂಡ ಗುಪ್ತಾ ಈ ಮಾರುಕಟ್ಟೆಗೆ ಅನುಗುಣವಾಗಿ ವೈವಿಧ್ಯಮಯ ಉತ್ಪನ್ನಗಳನ್ನು ಬಿಡುಗಡೆ ಮಾಡಿದರು. ಅದೂ ಅಲ್ಲದೆ ಚೈನೀಸ್‌ ಅಡುಗೆ ಖಾದ್ಯಗಳ ಬಗ್ಗೆ ಭಾರತೀಯರು ಹೆಚ್ಚಿನ ಆಸಕ್ತಿ ಹೊಂದಿದ್ದಾರೆ ಎಂದು ಅವರು ಅಂದೇ ತಿಳಿದುಕೊಂಡು, ಸಂಸ್ಥೆ ಆರಂಭಿಸಿದ್ದರು. ರೆಸ್ಟೋರೆಂಟ್‌ಗಳಿಗೆ ಹೋಗಿ ಸಮಯ ವ್ಯರ್ಥ ಮಾಡುವುದಕ್ಕಿಂತ ಮನೆಯಲ್ಲೇ ಅದಕ್ಕೆ ಸಂಬಂಧಿಸಿದ ಮಸಾಲೆ ವಸ್ತುಗಳನ್ನು ಪಡೆದುಕೊಂಡು ಸುಲಭವಾಗಿ ಮಾಡಬಹುದು ಎಂಬ ರೀತಿಯಲ್ಲಿ ಸಂಸ್ಥೆಯು ಮಾರ್ಕೆಂಟಿಂಗ್‌ ನಡೆಸಿತು. ಈ ಮಾರ್ಕೆಂಟಿಂಗ್‌ ಸರಿಯಾದ ರೀತಿಯಲ್ಲೇ ಕೆಲಸ ಮಾಡಿತು. ಈ ಅವಧಿಯಲ್ಲಿ ಭಾರತೀಯರು ಅಜಾಜ್ ಅವರ ಸಂಸ್ಥೆಯ ಮಸಾಲೆ ವಸ್ತುಗಳನ್ನು ಖರೀದಿಸಿ ಮನೆಯಲ್ಲೇ ಚೈನೀಸ್‌ ಅಡುಗೆಗಳನ್ನು ಸುಲಭ ರೀತಿಯಲ್ಲಿ ಮಾಡತೊಡಗಿದರು. ಹೀಗೆ ಆರಂಭವಾದ ಸಂಸ್ಥೆ ಇಂದು ದೊಡ್ಡ ಉದ್ಯಮವಾಗಿ ಬೆಳೆದಿದೆ.

ಕಂಪೆನಿ ಖರೀದಿಸಿದ ಟಾಟಾ

ಉತ್ತಮ ಲಾಭದತ್ತ ಮುನ್ನಡೆಯುತ್ತಿದ್ದ ಈ ಕಂಪೆನಿಯನ್ನು ಖರೀದಿಸಲು ನೆಸ್ಲೆ, ಯೂನಿಲಿವರ್‌ ಹಾಗೂ ಟಾಟಾ ಸಂಸ್ಥೆಗಳು ಭಾರೀ ಪೈಪೋಟಿ ನಡೆಸಿದ್ದವು. ಆದರೆ ಅಂತಿಮವಾಗಿ ಭಾರತದ ಕಂಎನಿ ಟಾಟಾ ಗ್ರೂಪ್‌ ನ ಅಡಿಯಲ್ಲಿ ಬರುವ ಎಫ್‌ಎಂಸಿಜಿ ಕಂಪನಿ ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್, ಕ್ಯಾಪಿಟಲ್ ಫುಡ್ಸ್‌ನ ಸಂಪೂರ್ಣ 100% ಪಾಲನ್ನು ಪಡೆದುಕೊಂಡಿತು. ಈಗಾಗಲೇ ಕ್ಯಾಪಿಟಲ್‌ ಫುಡ್ಸ್‌ ಪ್ಯಾಕೇಜ್ಡ್‌ ಆಹಾರ ವಲಯದಲ್ಲಿ ಹೆಸರಾಂತ ಸಂಸ್ಥೆಯಾಗಿ ಹೊರಹೊಮ್ಮಿದೆ. ವೇಗವಾಗಿ ಬೆಳೆಯುತ್ತಿರುವ ವರ್ಗಗಳಲ್ಲಿ ಮನೆಯೊಳಗಿನ ಬಳಕೆಗೆ ಅನುಗುಣವಾಗಿ ವಿಶಿಷ್ಟ ಶ್ರೇಣಿಯ ಉತ್ಪನ್ನಗಳನ್ನು ಈ ಸಂಸ್ಥೆ ಹೊಂದಿದೆ. ಸದ್ಯ ಈ ಕ್ಯಾಪಿಟಲ್‌ ಫುಡ್ಸ್‌ ಸಂಸ್ಥೆಯು ಟಾಟಾ ಸಂಸ್ಥೆಯ ಅಧೀನಕ್ಕೆ ಬಂದಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+