ಭಾರತೀಯ- ಅಮೇರಿಕನ್ ಆದ ಅಜಯ್ ಬಂಗಾ ವಿಶ್ವ ಬ್ಯಾಂಕ್‌ನ ಮುಂದಿನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಯಿದೆ. ಯಾರ ವಿರೋಧವು ಇಲ್ಲದೆ ಜಾಗತಿಕವಾಗಿ ಉನ್ನತ ಸಂಸ್ಥೆಯಾದ ವಿಶ್ವ ಬ್ಯಾಂಕ್‌ನ ಅಧ್ಯಕ್ಷರಾಗಲು ಭಾರತ ಮೂಲದ ಅಜಯ್ ಬಂಗಾ ಸಿದ್ಧರಾಗಿದ್ದಾರೆ. ಈ ಹಿಂದೆ ಅಂದರೆ ಫೆಬ್ರವರಿಯಲ್ಲಿ ಮಾಸ್ಟರ್‌ಕಾರ್ಡ್‌ನ ಮಾಜಿ ಸಿಇಒ ಮತ್ತು ಭಾರತ ಮೂಲದ ಅಜಯ್ ಬಂಗಾರ ಹೆಸರನ್ನು ವಿಶ್ವಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ವಾಷಿಂಗ್ಟನ್ ನಾಮನಿರ್ದೇಶನ (ಶಿಫಾರಸು) ಮಾಡುವುದಾಗಿ ಯುಎಸ್ ಅಧ್ಯಕ್ಷ ಜೋ ಬೈಡೆನ್ ತಿಳಿಸಿದ್ದಾರೆ.
ಯುಎಸ್ ಅಧ್ಯಕ್ಷ ಜೋ ಬೈಡೆನ್ ಮಾಡಿದ ಈ ನಾಮನಿರ್ದೇಶನವನ್ನು (ಶಿಫಾರಸು) ಈವರೆಗೂ ಯಾವುದೇ ದೇಶವು ವಿರೋಧ ಮಾಡಿಲ್ಲ. ಹಾಗೆಯೇ ಈ ಉನ್ನತ ಸ್ಥಾನಕ್ಕೆ ಬೇರೆ ಯಾವುದೇ ವ್ಯಕ್ತಿಯನ್ನು ನಾಮನಿರ್ದೇಶನ ಮಾಡಲಾಗಿಲ್ಲ. ಜೋ ಬೈಡೆನ್ ಈ ಸ್ಥಾನಕ್ಕೆ ಅಜಯ್ ಬಂಗಾರನ್ನು ಶಿಫಾರಸು ಮಾಡುತ್ತಾ ಬಂಗಾರನ್ನು ಹಾಡಿಹೊಗಳಿದ್ದಾರೆ. ಅಜಯ್ ಬಂಗಾ ಈ ಸ್ಥಾನಕ್ಕೆ ಹೇಗೆ ಅರ್ಹರು ಹಾಗೂ ಯಾವೆಲ್ಲ ಹಣಕಾಸು ಕಾರ್ಯಗಳನ್ನು ಸಮರ್ಥವಾಗಿ ನಿರ್ವಹಣೆ ಮಾಡಿದ್ದಾರೆ ಎಂಬ ಬಗ್ಗೆ ಯುಎಸ್ ಅಧ್ಯಕ್ಷ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

"ಅಜಯ್ ಬಂಗಾ ಮೂರು ದಶಕಕ್ಕೂ ಅಧಿಕ ಸಮಯದಿಂದ ಜಾಗತಿಕವಾಗಿ ಉದ್ಯೋಗ ಸೃಷ್ಟಿ, ದೊಡ್ಡ ಆರ್ಥಿಕತೆಯಲ್ಲಿ ಹೂಡಿಕೆ ಸೃಷ್ಟಿಸುವಲ್ಲಿ, ಹಲವಾರು ಬದಲಾವಣೆಗಳ ಮೂಲಕವೇ ಜಾಗತಿಕವಾಗಿ ಸಂಸ್ಥೆಗಳಿಗೆ ಮಾರ್ಗದರ್ಶನವನ್ನು ಯಶಸ್ವಿಯಾಗಿ ನೀಡುತ್ತಾ ಬಂದಿದ್ದಾರೆ. ಅಂತಹ ವ್ಯಕ್ತಿಯ ಹೆಸರನ್ನು ವಾಷಿಂಗ್ಟನ್ ವಿಶ್ವ ಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶಿಸುತ್ತದೆ," ಯುಎಸ್ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ.
ಅಜಯ್ ಬಂಗಾ ಮಾತ್ರ ಶಿಫಾರಸು
ವಿಶ್ವ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ ಸಮಯವಕಾಶವನ್ನು ಬುಧವಾರ ವಿಶ್ವ ಬ್ಯಾಂಕ್ ಕೊನೆ ಮಾಡಿದ್ದು, ಈಗ ಈ ಸ್ಥಾನಕ್ಕೆ ಶಿಫಾರಸು ಆಗಿರುವುದು ಅಜಯ್ ಬಂಗಾ ಮಾತ್ರ. ಈ ಸ್ಥಾನಕ್ಕೆ ಯಾವುದೇ ವ್ಯಕ್ತಿಯನ್ನು ಶಿಫಾರಸು ಮಾಡಲು ವಿಶ್ವ ಬ್ಯಾಂಕ್ ಸುಮಾರು ಒಂದು ತಿಂಗಳ ಅವಕಾಶವನ್ನು ನೀಡಿತ್ತು. ಆದರೆ ಅಜಯ್ ಬಂಗಾರನ್ನು ಯುಎಸ್ ಅಧ್ಯಕ್ಷ ಶಿಫಾರಸು ಮಾಡಿದ್ದು ಹೊರತಾಗಿ ಬೇರೆ ಯಾವುದೇ ದೇಶವು ಯಾವುದೇ ಅಭ್ಯರ್ಥಿಯನ್ನು ಶಿಫಾರಸು ಮಾಡಿಲ್ಲ. ಹೀಗಿರುವಾಗ ಬೋರ್ಡ್ ಮೇ ತಿಂಗಳಿಗೂ ಮುನ್ನವೇ ತನ್ನ ಮುಂದಿನ ಕ್ರಮವನ್ನು ಕೈಗೊಂಡು ಅಜಯ್ ಬಂಗಾರದನ್ನು ವಿಶ್ವ ಬ್ಯಾಂಕ್ ಅಧ್ಯಕ್ಷರಾಗಿ ಘೋಷಣೆ ಮಾಡುವ ನಿರೀಕ್ಷೆಯಿದೆ.
ಈ ಬಗ್ಗೆ ಮಾಹಿತಿ ನೀಡಿದ ಯುಎಸ್ ಹಣಕಾಸು ಕಾರ್ಯದರ್ಶಿ ಜಾನೆಟ್ ಯೆಲೆನ್, "ಮುಂದಿನ ಕೆಲವು ತಿಂಗಳಿನಲ್ಲೇ ವಿಶ್ವ ಬ್ಯಾಂಕ್‌ನಲ್ಲಿ ಪ್ರಮುಖವಾದ ಪರಿವರ್ತನೆಯನ್ನು ನೀವು ಕಾಣಬಹುದಾಗಿದೆ. ಅಮೆರಿಕಾ ಅಧ್ಯಕ್ಷ ಬೈಡೆನ್ ನಾಮನಿರ್ದೇಶಿತ ಅಜಯ್ ಬಂಗಾ ವಿಶ್ವ ಬ್ಯಾಂಕ್‌ನ ಮುಂದಿನ ಅಧ್ಯಕ್ಷರಾಗುತ್ತಾರೆ ಎಂದು ನಿರೀಕ್ಷಿಸುತ್ತೇವೆ. 21ನೇ ಶತಮಾನದ ಸಮಸ್ಯೆಗಳನ್ನು ಸರಿಯಾಗಿ ನಿರ್ವಹಣೆ ಮಾಡಲು ಅಜಯ್ ಬಂಗಾರಿಗೆ ಸಾಧ್ಯವೆಂದು ನಾವು ನಂಬುತ್ತೇವೆ. ಬಡತನ ನಿರ್ಮೂಲನೆ, ಅಭಿವೃದ್ಧಿಗೆ ಸಹಾಯಕವಾದ ಕ್ರಮ ಕೈಗೊಳ್ಳಲಿದ್ದಾರೆ," ಎಂದಿದ್ದಾರೆ.
ಮಾಸ್ಟರ್‌ಕಾರ್ಡ್‌ನ ಮಾಜಿ ಸಿಇಒ ಮತ್ತು ಭಾರತ ಮೂಲದ ಅಜಯ್ ಬಂಗಾ ವಿಶ್ವ ಬ್ಯಾಂಕ್‌ನ ಅಧ್ಯಕ್ಷ ಸ್ಥಾನಕ್ಕೆ ಏರಿದರೆ, ವಿಶ್ವದ ಉನ್ನತ ಸಂಸ್ಥೆಯ ಸ್ಥಾನವನ್ನು ಏರಿದ ಮೊದಲ ಭಾರತೀಯ-ಅಮೇರಿಕನ್ ಹಾಗೂ ಸಿಖ್- ಅಮೇರಿಕನ್ ಆಗಲಿದ್ದಾರೆ. ಪ್ರಸ್ತುತ ವಿಶ್ವಬ್ಯಾಂಕ್‌ನ ಮುಖ್ಯಸ್ಥರಾದ ಡೇವಿಡ್ ಮಾಲ್ಪಾಸ್ ಶೀಘ್ರ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಜೂನ್‌ನಲ್ಲಿ ತನ್ನ ಸ್ಥಾನದಿಂದ ಕೆಳಕ್ಕೆ ಇಳಿಯಲಿದ್ದಾರೆ. ಆ ಸ್ಥಾನವನ್ನು ಅಜಯ್ ಬಂಗಾ ತುಂಬುವ ಸಾಧ್ಯತೆಯಿದೆ.


Click it and Unblock the Notifications