ಭಾರತದಲ್ಲಿ ಅತ್ಯಂತ ಸಿರಿವಂತ ಉದ್ಯಮಿಗಳು ಯಾರು ಎಂದರೆ ಥಟ್ ಅಂಥ ಕೇಳಿ ಬರೋದೇ ಅಂಬಾನಿ, ಅದಾನಿ ಹೆಸರುಗಳು. ಇದು ನಿಜ ಕೂಡಾ ಕೈಗಾರಿಕೋದ್ಯಮಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷರಾದ ಮುಖೇಶ್ ಅಂಬಾನಿ ಅವರು ಭಾರತದ ಮಾತ್ರವಲ್ಲ ಏಷ್ಯಾದಲ್ಲೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅವರ ನಿವ್ವಳ ಮೌಲ್ಯ ಫೋರ್ಬ್ಸ್ ಪ್ರಕಾರ $91.1 ಬಿಲಿಯನ್ ಆಗಿದೆ. ಮುಖೇಶ್ ಅಂಬಾನಿ ಅವರ ಅಪಾರ ಸಂಪತ್ತಿನ ಹಿಂದೆ ಇರೋದು ಸುಮಾರು $120 ಬಿಲಿಯನ್ ಆದಾಯ ಹೊಂದಿರುವ ವ್ಯಾಪಾರ ಸಾಮ್ರಾಜ್ಯವಾದ ರಿಲಯನ್ಸ್ ಇಂಡಸ್ಟ್ರೀಸ್.

ಮುಖೇಶ್ ಅಂಬಾನಿ ತಮ್ಮ ಕಿರಿಯ ಮಗ ಅನಂತ್ ಅಂಬಾನಿ ಅವರ ಅದ್ದೂರಿ ಮದುವೆಗೆ ಸುಮಾರು 5,000 ಕೋಟಿ ರೂಪಾಯಿ ಖರ್ಚು ಮಾಡುವ ಮೂಲಕ ಜಾಗತಿಕ ಸುದ್ದಿಗಳಲ್ಲಿ ಸ್ಥಾನ ಪಡೆದರು. ವಿವಾಹಪೂರ್ವ ಮತ್ತು ವಿವಾಹದ ನಂತರದ ಅದ್ದೂರಿ ಆಚರಣೆಗಳು ಜಾಗತಿಕವಾಗಿಯೇ ಚರ್ಚಿಸಲ್ಪಟ್ಟಿತ್ತು. ಇವರು ಪ್ರಸ್ತುತ ವಿಶ್ವದ 12 ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಇವವರ ಮೂವರು ಉತ್ತರಾಧಿಕಾರಿಗಳಾದ ಆಕಾಶ್ ಅಂಬಾನಿ, ಇಶಾ ಅಂಬಾನಿ ಮತ್ತು ಅನಂತ್ ಅಂಬಾನಿ ಕೂಡ ಕಂಪನಿಯಲ್ಲಿ ಗಮನಾರ್ಹ ಪಾಲನ್ನು ಹೊಂದಿದ್ದು, ತಲಾ 80,52,021 ಷೇರುಗಳನ್ನು ಹೊಂದಿದ್ದಾರೆ. ಆದರೆ ಮುಖೇಶ್ ಮತ್ತು ನೀತಾ ಅಂಬಾನಿಯ ಈ ಮೂವರು ಮಕ್ಕಳಲ್ಲಿ ಯಾರು ಅತ್ಯಂತ ಶ್ರೀಮಂತರು ಮತ್ತು ಅವರು ಎಷ್ಟು ಸಂಬಳ ಪಡೆಯುತ್ತಾರೆ ಎಂಬುವುದು ನಿಮಗೆ ಗೊತ್ತಾ?
ಆಕಾಶ್ ಅಂಬಾನಿ
ಮುಖೇಶ್ ಮತ್ತು ನೀತಾ ಅಂಬಾನಿ ಅವರ ಹಿರಿಯ ಪುತ್ರ ಆಕಾಶ್ ಅಂಬಾನಿ. ಇವರು ಇಶಾ ಅಂಬಾನಿಯವರ ಅವಳಿ ಸಹೋದರ ಕೂಡಾ ಆಗಿದ್ದಾರೆ. ವಜ್ರ ಉದ್ಯಮದಲ್ಲಿ ಹೆಸರುವಾಸಿಯಾದ ರಸೆಲ್ ಮೆಹ್ತಾ ಅವರ ಪುತ್ರಿ ಶ್ಲೋಕಾ ಮೆಹ್ತಾ ಅವರನ್ನು ವಿವಾಹವಾಗಿದ್ದಾರೆ. ಆಕಾಶ್ ಮತ್ತು ಶ್ಲೋಕ ಪ್ರಸ್ತುತ ತಮ್ಮ ಕುಟುಂಬದೊಂದಿಗೆ ತಮ್ಮ ಐಷಾರಾಮಿ ಭವನವಾದ ಆಂಟಿಲಿಯಾದಲ್ಲಿ ವಾಸಿಸುತ್ತಿದ್ದಾರೆ.
ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಆಕಾಶ್ ಅವರು ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್‌ನ ಮಂಡಳಿಯಲ್ಲಿ ನಿರ್ದೇಶಕರೂ ಆಗಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಆಕಾಶ್ ವಾರ್ಷಿಕ 5.6 ಕೋಟಿ ರೂ. ಸಂಬಳ ಪಡೆಯುತ್ತಾರೆ, ಇದು ಅವರ $40.1 ಬಿಲಿಯನ್ (ಸುಮಾರು ರೂ. 3,32,815 ಕೋಟಿ) ನಿವ್ವಳ ಮೌಲ್ಯಕ್ಕೆ ಕೊಡುಗೆ ನೀಡುತ್ತದೆ.
ಇಶಾ ಅಂಬಾನಿ
ಆಕಾಶ್ ಅವರ ಅವಳಿ ಸಹೋದರಿ ಇಶಾ ಅಂಬಾನಿ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಮಂಡಳಿಯಲ್ಲಿ ಕಾರ್ಯನಿರ್ವಾಹಕೇತರ ನಿರ್ದೇಶಕಿ ಸ್ಥಾನವನ್ನು ಹೊಂದಿದ್ದಾರೆ. ಇದಲ್ಲದೇ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್, ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್, ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ ಮತ್ತು ರಿಲಯನ್ಸ್ ಫೌಂಡೇಶನ್ (RF), ರಿಲಯನ್ಸ್ ಫೌಂಡೇಶನ್ ಇನ್ಸ್ಟಿಟ್ಯೂಷನ್ ಆಫ್ ಎಜುಕೇಶನ್ ಅಂಡ್ ರಿಸರ್ಚ್ ಮತ್ತು ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್‌ನಲ್ಲಿ ಮಂಡಳಿಯ ಸದಸ್ಯರಾಗಿ ಕಾರ್ಯನಿರ್ವಾಹಕ ನಾಯಕತ್ವ ತಂಡಗಳ ಪ್ರಮುಖ ಭಾಗವಾಗಿದ್ದಾರೆ.
ಹೆಚ್ಚುವರಿಯಾಗಿ, ಇಶಾ ಅವರು ತಿರಾ ಬ್ಯೂಟಿಯ ಕಾರ್ಯನಿರ್ವಾಹಕ ನಿರ್ದೇಶಕಿ ಮತ್ತು ಸಹ-ಸಂಸ್ಥಾಪಕಿಯಾಗಿದ್ದಾರೆ. ಅವರ ವಾರ್ಷಿಕ ವೇತನ ಸುಮಾರು 4.2 ಕೋಟಿ ರೂ., ಮತ್ತು ಅವರ ನಿವ್ವಳ ಮೌಲ್ಯ 800 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಹುರುನ್ ಶ್ರೀಮಂತರ ಪಟ್ಟಿಯಲ್ಲಿ ಅವರು 31 ನೇ ಸ್ಥಾನದಲ್ಲಿದ್ದರು.
ಅನಂತ್ ಅಂಬಾನಿ
ಸಿರಿವಂತ ಉದ್ಯಮಿಗಳ ಕಿರಿಯ ಪುತ್ರ ಅನಂತ್ ಅಂಬಾನಿ, ರಿಲಯನ್ಸ್ ಜಿಯೋದಲ್ಲಿ ಇಂಧನ ಮತ್ತು ದೂರಸಂಪರ್ಕ ವಿಭಾಗಗಳನ್ನು ಮುನ್ನಡೆಸುತ್ತಿದ್ದಾರೆ. ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ಮತ್ತು ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್‌ನ ನಿರ್ದೇಶಕರ ಮಂಡಳಿಯಲ್ಲೂ ಅವರಿದ್ದಾರೆ. ವಾರ್ಷಿಕವಾಗಿ 4.2 ಕೋಟಿ ರೂಪಾಯಿಗಳ ಸಂಬಳವನ್ನು ಪಡೆಯುತ್ತಾರೆ ಎನ್ನಲಾಗಿದೆ. ಅವರ ಅಂದಾಜು ನಿವ್ವಳ ಮೌಲ್ಯ 40 ಬಿಲಿಯನ್ ಡಾಲರ್‌ಗಳು, ಅಂದರೆ ಸುಮಾರು 3,32,482 ಕೋಟಿ ರೂಪಾಯಿಗಳು. ಮುಖೇಶ್ ಅಂಬಾನಿಯವರ ಮಕ್ಕಳಲ್ಲಿ ಅತ್ಯಂತ ಶ್ರೀಮಂತರಲ್ಲಿ ಆಕಾಶ್ ನಂತರ ಎರಡನೇ ಸ್ಥಾನದಲ್ಲಿದ್ದಾರೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications