ಬಂದೇ ಬಿಡ್ತು ಅಕ್ಷಯ ತೃತೀಯ; ಚಿನ್ನ ಸೇರಿ ಮಂಗಳಕರ ಖರೀದಿಯ ಮುಹೂರ್ತವಿದು

ಅಕ್ಷಯ ತೃತೀಯ ಹಿಂದೂ ಸಂಪ್ರದಾಯದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಇದನ್ನು ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷ ತೃತೀಯಾ ತಿಥಿಯಂದು ಆಚರಿಸಲಾಗುತ್ತದೆ. "ಅಕ್ಷಯ ತೃತೀಯ" ಇದರಲ್ಲಿ ಎರಡು ಪದಗಳಿದ್ದು ಎರಡನೇ ಶಬ್ದ ದಿನಕ್ಕೆ ಸಂಬಂಧಿಸಿದ್ದು, ಆಗಿದ್ದರೆ ಅಕ್ಷಯ ಎನ್ನುವುದು ಯಾವುದಕ್ಕೆ ಕ್ಷಯ ಇಲ್ಲವೋ, ಅಂತ್ಯ ಇಲ್ಲವೋ ಎಂದಿಗೂ ಕಡಿಮೆಯಾಗದ ಅಥವಾ ಶಾಶ್ವತವಾದದ್ದು, ಅಕ್ಷಯ ಎನ್ನಲಾಗುತ್ತದೆ. ಅಕ್ಷಯ ತೃತೀಯದಂದು ಶುಭ ಕೆಲಸಗಳನ್ನು ಮಾಡಿದ್ರೆ ಅಂತ್ಯವಿಲ್ಲದ ಫಲವನ್ನು ತಂದು ಕೊಡುತ್ತದೆ. ಈ ಕಾರಣಕ್ಕೆ ಸಮಾಜಕ್ಕೆ ಒಳ್ಳೆಯದನ್ನು ಬಿತ್ತಬೇಕು, ಮಂಗಳಕರವಾದನ್ನು ಮಾಡಬೇಕು ಎನ್ನುವುದು ನಮ್ಮ ಹಿರಿಯರು ಪಾಲಿಸಿಕೊಂಡು ಬಂದಿರುವ ಸಂಪ್ರದಾಯ. ಹೀಗಾಗಿಯೇ ಅಕ್ಷಯ ತೃತೀಯ ದಿನವು ಸಮೃದ್ಧಿ, ಭರವಸೆ ಮತ್ತು ಯಶಸ್ಸನ್ನು ಸೂಚಿಸುತ್ತದೆ.

ಈ ಬಾರಿಯ ಅಕ್ಷಯ ತೃತೀಯ ಯಾವಾಗ?

2025 ರ ಈ ಬಾರಿಯ ಅಕ್ಷಯ ತೃತೀಯವನ್ನು ಏಪ್ರಿಲ್ 30 ರಂದು ಆಚರಿಸಲಾಗುತ್ತದೆ.

ಅಕ್ಷಯ ತೃತೀಯ:  ಚಿನ್ನ ಖರೀದಿ ಮುಹೂರ್ತ ಮತ್ತು ಮಹತ್ವ

ಪೌರಾಣಿಕ ನಂಬಿಕೆಗಳ ಪ್ರಕಾರ, ಭಗವಾನ್ ಶ್ರೀಹರಿಯ ಆರನೇ ಅವತಾರವಾದ ಪರಶುರಾಮನ ಅವತಾರವು ಅಕ್ಷಯ ತೃತೀಯ ದಿನದಂದು ನಡೆಯಿತು ಎನ್ನಲಾಗುತ್ತದೆ. ಇದೇ ಕಾರಣಕ್ಕೆ ಈ ದಿನವನ್ನು ಪರಶುರಾಮ ಜಯಂತಿ ಎಂದೂ ಆಚರಿಸಲಾಗುತ್ತದೆ.

ಪಂಚಾಗದ ಪ್ರಕಾರ, ತೃತೀಯ ತಿಥಿಯು ಏಪ್ರಿಲ್ 29 ರ ಸಂಜೆ 5 ಗಂಟೆ 31 ನಿಮಿಷಕ್ಕೆ ಪ್ರಾರಂಭವಾಗಿ, ಏಪ್ರಿಲ್ 30 ರ ಮಧ್ಯಾಹ್ನ 2 ಗಂಟೆ 12 ನಿಮಿಷದವರೆಗೆ ಇರುತ್ತದೆ. ಸೂರ್ಯೋದಯದ ತಿಥಿಯನ್ನು ಪರಿಗಣಿಸುವುದರಿಂದ, ಅಕ್ಷಯ ತೃತೀಯವನ್ನು ಏಪ್ರಿಲ್ 30 ರಂದು ಆಚರಿಸುವುದು ರೂಢಿಯಲ್ಲಿದೆ. ಈ ದಿನವು ಪೂಜೆ, ಶುಭಾರಂಭ ಮತ್ತು ಖರೀದಿ ಇತ್ಯಾದಿಗಳಿಗೆ ಪ್ರಶಸ್ತ ದಿನ ಎಂದು ಪರಿಗಣಿಸಲಾಗುತ್ತದೆ.

ಅಕ್ಷಯ ತೃತೀಯದಂದು ಚಿನ್ನ ಖರೀದಿಸುವುದನ್ನು ಶುಭವೆಂದು ಏಕೆ ಪರಿಗಣಿಸಲಾಗುತ್ತದೆ?

ಧಾರ್ಮಿಕ ನಂಬಿಕೆಗಳ ಪ್ರಕಾರ ಅಕ್ಷಯ ತೃತೀಯವು ಹಿಂದೂ ಸಂಸ್ಕೃತಿಯಲ್ಲಿ ಅತ್ಯಂತ ಮಹತ್ವದ ಹಬ್ಬವಾಗಿದೆ. ಈ ದಿನದಂದು ಚಿನ್ನ ಮತ್ತು ಆಭರಣಗಳನ್ನು ಕೊಳ್ಳುವುದು ಬಹಳ ಶುಭವೆಂದು ಭಾವಿಸಲಾಗಿದೆ. ಚಿನ್ನವನ್ನು ಕೇವಲ ಲೋಹವಾಗಿ ಪರಿಗಣಿಸುವುದಿಲ್ಲ. ಇದನ್ನು ಸಂಪತ್ತು, ಪವಿತ್ರತೆ ಮತ್ತು ಮಂಗಳಕರತ್ವದ ಸಂಕೇತ ಎಂದೇ ಭಾವಿಸಲಾಗುತ್ತದೆ. ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸುವುದರಿಂದ ಮನೆಗೆ ಸಂಪತ್ತು ಮತ್ತು ಅದೃಷ್ಟವು ಒಲಿದು ಬರುತ್ತದೆ.

ಇದಲ್ಲದೆ, ಈ ದಿನದಂದು ಬ್ರಹ್ಮಾಂಡದ ಶಕ್ತಿಗಳು ಒಗ್ಗೂಡಿ ಸಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತವೆ ಎನ್ನುವುದು ನಂವಿಕೆ ಆದ್ದರಿಂದಲೇ, ಅಕ್ಷಯ ತೃತೀಯದಂದು ಮಾಡುವ ಯಾವುದೇ ಹೊಸ ಬಗೆಯ ಹೂಡಿಕೆ ಅಥವಾ ಖರೀದಿಗಳು ಯಶಸ್ಸನ್ನು ತಂದುಕೊಡುವ ಸಾಧ್ಯತೆ ಹೆಚ್ಚಿರುತ್ತದೆ. ಈ ಕಾರಣದಿಂದಲೇ, ಅನೇಕ ಜನರು ಈ ವಿಶೇಷ ದಿನದಂದು ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಅಥವಾ ಚಿನ್ನ, ಬೆಳ್ಳಿ, ಪ್ಲಾಟಿನಂ ಸಹಿತ ಮಹತ್ವದ ಖರೀದಿಗಳನ್ನು ಮಾಡಲು ಬಯಸುತ್ತಾರೆ.

ಸಮೃದ್ಧಿಯ ಸಂಕೇತ: ಭಾರತದಾದ್ಯಂತ ಅದರಲ್ಲೂ ಹಿಂದೂಗಳು ಬೆಳ್ಳಿ- ಬಂಗಾರವನ್ನು ಸಂಪತ್ತು ಮತ್ತು ಸಮೃದ್ಧಿಯ ದೇವತೆಯಾದ ಲಕ್ಷ್ಮಿ ದೇವಿಯ ಸಂಕೇತ ಎಂದು ಪರಿಗಣಿಸುತ್ತಾರೆ. ಹೀಗಾಗಿ ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸುವುದರಿಂದ ದೇವಿಯ ಆಶೀರ್ವಾದ ದೊರಕಿ ಸಂಪತ್ತಿನಲ್ಲಿ ನಿರಂತರ ಬೆಳವಣಿಗೆ ಎಂಬುವುದು ನಂಬಿಕೆ. ಇದೇ ಕಾರಣಕ್ಕೆ ಅಂದು ಚಿನ್ನದಂಗಡಿಗಳಿಗೆ ಜನ ಮುಗಿಬೀಳುತ್ತಾರೆ.

ಶಾಶ್ವತ ಮೌಲ್ಯ

ಚಿನ್ನವು ಅತ್ಯಮೂಲ್ಯವಾದ ಲೋಹವಾಗಿದ್ದು ಅದು ಕಾಲಾನಂತರದಲ್ಲೂ ಅದರ ಮೌಲ್ಯವನ್ನು ಏರಿಸಿಕೊಂಡೇ ಸಾಗುತ್ತದೆ. ಬಹಳಷ್ಟು ಮಂದಿ ಚಿನ್ನವನ್ನು ಹೂಡಿಕೆಯಾಗಿಯೂ ಪರಿಗಣಿಸುತ್ತಾರೆ.

ಆಧ್ಯಾತ್ಮಿಕ ಮಹತ್ವ

ಈ ಶುಭ ದಿನದಂದು, ಸಂಪತ್ತಿನ ಅಧಿಪತಿಯಾದ ಭಗವಾನ್ ಕುಬೇರನು ತಾನು ಕಳೆದುಕೊಂಡ ಸಂಪತ್ತನ್ನು ಪಡೆದನೆಂದು ನಂಬಲಾಗಿದೆ. ಹೀಗಾಗಿ, ಈ ದಿನದಂದು ಚಿನ್ನವನ್ನು ಖರೀದಿ ಅತ್ಯಂತ ಮಂಕಳಕರ ಎಂದು ಭಾವಿಸಲಾಗುತ್ತದೆ.

ಸಕಾರಾತ್ಮಕ ಶಕ್ತಿ

ಅಕ್ಷಯ ತೃತೀಯದಂದು ಆಕಾಶಕಾಯಗಳ ಶುಭ ಜೋಡಣೆಯು ಚಿನ್ನದೊಂದಿಗೆ ಸಂಬಂಧಿಸಿದ ಸಕಾರಾತ್ಮಕ ಶಕ್ತಿಯನ್ನು ವರ್ಧಿಸುತ್ತದೆ ಎಂದು ನಂಬಲಾಗಿದೆ, ಇದು ಮತ್ತೆ ಹೂಡಿಕೆಗೆ ಸೂಕ್ತ ಸಮಯವಾಗಿದೆ.

ಸಂಪ್ರದಾಯ ಮತ್ತು ನಂಬಿಕೆ

ಅಕ್ಷಯ ತೃತೀಯದಂದು ಚಿನ್ನ ಖರೀದಿಸುವ ಸಂಪ್ರದಾಯವು ತಲೆಮಾರುಗಳ ಮೂಲಕ ಸಾಗಿ ಬಂದಿದೆ, ಇದು ಚಿನ್ನ ಖರೀದಿಸುವ ಶುಭದ ಮೇಲಿನ ನಂಬಿಕೆಯನ್ನು ಬಲಪಡಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+