ಭಾರತವೂ ಈ ಕೊರೊನಾ ವೈರಸ್ ಸಾಂಕ್ರಾಮಿಕದ ನಡುವೆಯೂ ಆರ್ಥಿಕವಾಗಿ ಮುನ್ನಡೆ ಸಾಧಿಸಲಿದೆ. ಈ ಆರ್ಥಿಕ ಅಭಿವೃದ್ದಿಯಲ್ಲಿ ತಂತ್ರಜ್ಞಾನವು ಪ್ರಮುಖ ಸ್ಥಾನವನ್ನು ವಹಿಸುತ್ತದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಹೇಳಿದ್ದಾರೆ.
ಇನ್ನು ದೇಶದಲ್ಲಿ 4G ಬಳಕೆ ಬಗ್ಗೆ ಮಾತನಾಡಿದ ಮುಕೇಶ್ ಅಂಬಾನಿ, ಎಲ್ಲಾ 2G ಬಳಕೆದಾರರು 4G ಗೆ ಬದಲಾಗಬೇಕು ಎಂದು ಅಭಿಪ್ರಾಯಿಸಿದ್ದಾರೆ. ಬಳಿಕ 5G ಬಳಕೆಯತ್ತ ಮುಂದುವರಿಯಬೇಕು. ಇನ್ನು 5G ಬಳಕೆಗೆ ಉತ್ತೇಜನ, ಕೈಗೆಟಕುವ ದರದಲ್ಲಿ ಲಭಿಸುವ ತಾಂತ್ರಿಕ ವಸ್ತುಗಳು, ಫೈಬರ್ ಕನೆಕ್ಟಿವಿಟಿ, ಡಿಜಿಟಲ್ ಬಳಕೆಯ ಆದ್ಯತೆಯ ಬಗ್ಗೆ ಹೆಚ್ಚು ಕೇಂದ್ರೀಕರಿಸಿ ಮುಕೇಶ್ ಅಂಬಾನಿ ಮಾತನಾಡಿದ್ದಾರೆ.
"ಮುಂಬರುವ ಯಾವುದೇ ಕೋವಿಡ್ ಅಲೆಯನ್ನು ತಡೆಗಟ್ಟುವಲ್ಲಿ ಅಥವಾ ಎದುರಿಸುವಲ್ಲಿ ಭಾರತ ಸಫಲವಾಗಿದೆ ಎಂಬುವದಲ್ಲಿ ನನಗೆ ಅತೀವ ವಿಶ್ವಾಸವಿದೆ. ಹಾಗೆಯೇ ಕೊರೊನಾ ವೈರಸ್ ನಡುವೆಯೂ ಭಾರತ ಆರ್ಥಿಕ ಪ್ರಗತಿಯನ್ನು ಮತ್ತೆ ಕಾಣಲಿದೆ ಎಂಬ ವಿಶ್ವಾಸವಿದೆ," ಎಂದು ಇಂಡಿಯಾ ಮೊಬೈಲ್ ಕಾಂಗ್ರೆಸ್‌ನಲ್ಲಿ ಮುಕೇಶ್ ಅಂಬಾನಿ ನುಡಿದಿದ್ದಾರೆ.

ಇನ್ನು ಈ ಸಂದರ್ಭದಲ್ಲೇ ಟೆಲಿಕಾಂ ಹಾಗೂ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಿದ ಭಾರತದ ಅತೀ ದೊಡ್ಡ ಟೆಲಿಕಾಂ ಕಂಪನಿ ಜಿಯೋ, "ಕೊರೊನಾ ವೈರಸ್ ಸೋಂಕು ಸಂದರ್ಭದಲ್ಲಿ ಚಿಪ್‌ಗಳ ಕೊರತೆ ಕಂಡು ಬಂದಿತ್ತು. ಆ ಸಂದರ್ಭದಲ್ಲಿ ನಾವು ಚಿಪ್‌ಸೆಟ್‌ಗಳ ಬಳಕೆ ಮುಂದುವರಿಸಿದ್ದೇವೆ.
ಈ ವೇಳೆ ಮಾತನಾಡಿದ ಆರ್‌ಐಎಲ್ ಅಧ್ಯಕ್ಷ, "ಗ್ರಾಹಕರನ್ನು ಅಧಿಕ ಮಾಡಲು ಜನರಿಗೆ ಕೈಗೆಟಕುವ ದರವೂ ಕೂಡಾ ಅತೀ ಮುಖ್ಯವಾಗಿದೆ. ನಮ್ಮ ಗ್ರಾಹಕರನ್ನು ಹೆಚ್ಚಳ ಮಾಡಲು ಜನರ ಕೈಗೆಟಕುವ ದರದಲ್ಲಿ ವಸ್ತುಗಳ ಮಾರಾಟ ಮಾಡುವುದು ಅತೀ ಮುಖ್ಯ ಎಂಬುವುದನ್ನು ನಾವು ಮರೆಯಬಾರದು. ಭಾರತವು ಡಿಜಿಟಲ್ ಸಹಭಾಗಿತ್ವದತ್ತ ಮುಖ ಮಾಡಬೇಕು. ನಾವು ಡಿಜಿಟಲ್ ಬಳಕೆಯನ್ನು ಕಡಿಮೆ ಮಾಡುವ ರಾಷ್ಟ್ರ ಆಗಬಾರದು," ಎಂದು ಅಭಿಪ್ರಾಯಿಸಿದ್ದಾರೆ.
ವಿಶ್ವದ ಟಾಪ್ ವ್ಯಾಪಾರಸ್ಥರಾಗಲೂ ಮುಂದಾದ ಜಿಯೋ
ಇನ್ನು 5G ಬಳಕೆಯ ಬಗ್ಗೆ ಪ್ರಸ್ತಾಪ ಮಾಡಿದ ರಿಲಾಯನ್ಸ್ ಡಿಜಿಟಲ್, "2G ಬಳಕೆ ಮಾಡುವುದು ಮಿಲಿಯನ್‌ಗಟ್ಟಲೆ ಜನರ ಕನೆಕ್ಟಿವಿಟಿಯನ್ನು ಕಡಿಮೆ ಮಾಡಿದೆ. ಜನರಲ್ಲಿ ಕನೆಕ್ಟಿವಿಟಿಯನ್ನು ಹೆಚ್ಚಳ ಮಾಡಬೇಕಾದರೆ 2G ಬಳಕೆಯನ್ನು ಕಡಿಮೆ ಮಾಡಬೇಕು, ಜನರು ಅಧಿಕವಾಗಿ 4G ಬಳಕೆ ಮಾಡಬೇಕು," ಎಂದು ಅಂಬಾನಿ ಹೇಳಿದ್ದಾರೆ. ಇನ್ನು ಅಂಬಾನಿ ಪ್ರತಿಸ್ಪರ್ಧಿಗಳಾದ ಏರ್‌ಟೆಲ್ ಮತ್ತು Vi ಇನ್ನೂ ಕೂಡಾ 2G ಸೇವೆಗಳನ್ನು ನೀಡುತ್ತಿವೆ ಆದರೂ ಕೂಡಾ ಜನರು 4G ಕಡೆಗೆ ವಲಸೆ ಹೋಗುತ್ತಿದ್ದಾರೆ. ತಾವು 5G ತಂತ್ರಜ್ಞಾನವನ್ನು ಪರಿಚಯಿಸಿ ವಿಶ್ವದ ಟಾಪ್ ವ್ಯಾಪಾರಸ್ಥರು ಆಗುತ್ತೇವೆ ಎಂಬ ಭರವಸೆಯನ್ನು ಜಿಯೋ, ಪುನರುಚ್ಚರಿಸಿದೆ. "ನಾವು 5G ತಂತ್ರಜ್ಞಾನದತ್ತ ಮುಖ ಮಾಡಿದ್ದೇವೆ. ನಾವು ಶೇಕಡ ನೂರರಷ್ಟು ಬೆಳವಣಿಗೆ ಹೊಂದಿದ್ದೇವೆ. ಜಿಯೋ ನೆಟ್‌ವರ್ಕ್ ಅನ್ನು ನಾವು ಶೀಘ್ರವೇ 4G ಯಿಂದ 5G ಗೆ ಅಪ್‌ಗ್ರೇಡ್ ಮಾಡಲಿದ್ದೇವೆ," ಎಂದು ಅಂಬಾನಿ ಭರವಸೆ ವ್ಯಕ್ತಪಡಿಸಿದ್ದಾರೆ.
"ಸರ್ಕಾರವು ಉತ್ತಮ ನಿಯಂತ್ರಣ ಮತ್ತು ನೀತಿ ಚೌಕಟ್ಟನ್ನು ಹಾಕುತ್ತಿದೆ. ಇದು ಸಾವಿರಾರು ಭಾರತೀಯ ಉದ್ಯಮಿಗಳು ಮತ್ತು ಸ್ಟಾರ್ಟ್-ಅಪ್‌ಗಳಿಗೆ ಸಹಾಯಕವಾಗಿದೆ. ಪ್ಲಾಟ್‌ಫಾರ್ಮ್, ಅಪ್ಲಿಕೇಶನ್‌ಗಳು ಮತ್ತು ಪರಿಹಾರವನ್ನು ರಚಿಸಲು ಭಾರತದ ಡಿಜಿಟಲ್ ರೂಪಾಂತರವನ್ನು ವೇಗಗೊಳಿಸಲು ಭಾರತೀಯ ಉದ್ಯಮಿಗಳು ಮತ್ತು ಸ್ಟಾರ್ಟ್-ಅಪ್‌ಗಳಿಗೆ ಸರ್ಕಾರವು ಸಹಾಯ ಮಾಡಿದೆ," ಎಂದು ಕೂಡಾ ಇದೇ ವೇಳೆ ಅಂಬಾನಿ ಹೇಳಿದ್ದಾರೆ.
ಇತ್ತೀಚೆಗೆ ಏರ್‌ಟೆಲ್, ವೋಡಾಫೋನ್ ತನ್ನ ದರವನ್ನು ಅಧಿಕ ಮಾಡಿದೆ. ಈ ಬೆನ್ನಲ್ಲೇ ಜಿಯೋ ಕೂಡಾ ದರವನ್ನು ಏರಿಸಿದೆ. ಭಾರತದ ಪ್ರಮುಖ ಟೆಲಿಕಾಂ ಸೇವಾ ಪೂರೈಕೆದಾರ ಕಂಪನಿಗಳು ತಮ್ಮ ಪ್ರೀಪೇಯ್ಡ್ ಗ್ರಾಹಕರಿಗೆ ಹೊಸ ಆಫರ್ ಜೊತೆಗೆ ದರ ಪಟ್ಟಿಯನ್ನು ಪರಿಷ್ಕರಿಸಿದೆ.


Click it and Unblock the Notifications