ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ

ವಿವಿಧ ಬೇಡಿಕೆ ಈಡೇರಿಕೆಗಳಿಗೆ ಆಗ್ರಹಿಸಿ ಸೋಮವಾರದಿಂದ ನಡೆಯಬೇಕಿದ್ದ ಎರಡು ದಿನದ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಲಾಗಿದೆ. ಇದಕ್ಕೆ ಕಾರಣವೇನು, ಮಹತ್ವದ ಸಭೆ ನಡೆಯುವುದು ಯಾವಾಗ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ನವದೆಹಲಿ, ಜನವರಿ 29: ವಿವಿಧ ಬೇಡಿಕೆ ಈಡೇರಿಕೆಗಳಿಗೆ ಆಗ್ರಹಿಸಿ ಸೋಮವಾರದಿಂದ ನಡೆಯಬೇಕಿದ್ದ ಎರಡು ದಿನದ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಲಾಗಿದೆ.

ಹೌದು, ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಸದಸ್ಯರು ಸೇರಿದಂತೆ ಕೆಲವು ಬ್ಯಾಂಕ್ ಮುಖ್ಯಸ್ಥರು ಶನಿವಾರ ಮುಂಬೈನಲ್ಲಿ ಸಮನ್ವಯ ಸಭೆ ನಡೆಯಿತು. ಈ ವೇಳೆ ಜನವರಿ 30 ಮತ್ತು 31ರಂದು ನಡೆಸಲು ತೀರ್ಮಾನಿಸಲಾಗಿದ್ದ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರವನ್ನು ಮುಂದೂಡಿದೆ ಎಂದು ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘದ (AIBEA) ಪ್ರಧಾನ ಕಾರ್ಯದರ್ಶಿ ಸಿಎಚ್ ವೆಂಕಟಾಚಲಂ ತಿಳಿಸಿದರು.

2 ದಿನ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಇಲ್ಲ: ಜ.31ಕ್ಕೆ ಮಹತ್ವದ ಸಭೆ

ಅಷ್ಟೇ ಅಲ್ಲದೇ ಬೇಡಿಕೆಗಳ ಇನ್ನಷ್ಟು ಚರ್ಚೆ, ರಾಷ್ಟ್ರವ್ಯಾಪಿ ಆಯೋಜನೆ ಬಗ್ಗೆ ಜನವರಿ 31 ರಂದು ಒಕ್ಕೂಟಗಳೊಂದಿಗೆ ಸಭೆ ನಡೆಸಲು ಭಾರತೀಯ ಬ್ಯಾಂಕ್‌ಗಳ ಸಂಘ (IBA) ಒಪ್ಪಿಕೊಂಡಿದೆ ಎಂದು ಇದೇ ವೇಳೆ ಅವರು ಸ್ಪಪ್ಟಪಡಿಸಿದರು.

ಮುಂಬೈನಲ್ಲಿ ನಡೆದ ಸಮನ್ವಯ ಸಭೆಯಲ್ಲಿ, ಮೂರು ಸಾಮಾನ್ಯ ವಿಷಯಗಳಾದ ಐದು ದಿನಗಳ ಬ್ಯಾಂಕಿಂಗ್ ಕಾರ್ಯ, ಪಿಂಚಣಿ ನವೀಕರಣ ಹಾಗೂ ಹಳೆಯ ಪಿಂಚಣಿ ಯೋಜನೆ ಮರುಸ್ಥಾಪನೆ ಬಗ್ಗೆ ಈಗಾಗಲೇ ಬ್ಯಾಂಕ್ ಯುನಿಯನ್‌ಗಳು ಬೇಡಿಕೆ ಇಟ್ಟಿವೆ. ಈ ಸಂಬಂಧ ಹಮ್ಮಿಕೊಂಡಿದ್ದ ಮುಷ್ಕರ ಕಾರಣಾಂತರಳಿಂದ ಮುಂದೂಡಿದ್ದು, ಆ ಬಗ್ಗೆಚರ್ಚೆಗೆ ಜನವರಿ 31 ರಂದು ಮಹತ್ವದ ಸಭೆ ನಡೆಸಲು ಸಜ್ಜಾಗಿವೆ.

ಪ್ರಮುಖ ಈ ಮೂರು ಸಮಸ್ಯೆಗಳ ಹೊರತಾಗಿ ಬಾಕಿ ಉಳಿದಿರುವ ಸಮಸ್ಯೆಗಳನ್ನು ಆಯಾ ಅಧಿಕಾರಿಗಳು ಮತ್ತು ಕಾರ್ಮಿಕ ಸಂಘಗಳ ಜೊತೆಗೆ ಪ್ರತ್ಯೇಕವಾಗಿ ಸಭೆ ನಡೆಸಿ ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು. ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಹಲವಾರು ಬ್ಯಾಂಕ್ ಯೂನಿಯನ್‌ಗನ್ನು ಒಳಗೊಂಡ ಮುಖ್ಯ ಸಂಸ್ಥೆ/ಒಕ್ಕೂಟವಾಗಿದೆ. ಇದೇ ಒಕ್ಕೂಟ ಕೆಲವು ದಿನಗಳ ಹಿಂದೆ ಮುಷ್ಕರಕ್ಕ ಕರೆ ನೀಡಿತ್ತು.

2 ದಿನ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಇಲ್ಲ: ಜ.31ಕ್ಕೆ ಮಹತ್ವದ ಸಭೆ

ಐದು ದಿನಗಳ ಬ್ಯಾಂಕಿಂಗ್ ಕಾರ್ಯ, ಪಿಂಚಣಿ ನವೀಕರಣಗೊಳಿಸುವುದು, ಉಳಿಕೆ ಸಮಸ್ಯೆಗಳು, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS)ರದ್ದುಗೊಳಿಸುವುದು, ವೇತನ ಪರಿಷ್ಕರಣೆ ಮಾಡುವ ಬೇಡಿಕೆಗಳ ಚಾರ್ಟರ್‌ನಲ್ಲಿ ತಕ್ಷಣದ ಮಾತುಕತೆ ಮತ್ತು ಸಮರ್ಪಕ ನೇಮಕಾತಿಗಾಗಿ ಈ ಕೆಳಗಿನ ಬೇಡಿಕೆಗಳನ್ನು ಒತ್ತಾಯಿಸಲು ಬ್ಯಾಂಕ್ ಒಕ್ಕೂಟಗಳು ಮುಷ್ಕರಕ್ಕೆ ಕರೆ ನೀಡಿವೆ. ಈ ಮುಷ್ಕರ ಬಗ್ಗೆ ಮಂಗಳವಾರ ಅಂತಿಮ ನಿರ್ಧಾರ ಪ್ರಕಟಗೊಳ್ಳುವ ಸಾಧ್ಯತೆ ಇದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+