ಅದಾನಿ ಗ್ರೂಪ್ ವಿರುದ್ಧ ಹಿಂಡನ್‌ಬರ್ಗ್ ವರದಿ ಬಳಿಕ ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆಯಲ್ಲಿ ಭಾರೀ ನಷ್ಟವನ್ನು ಕಂಡಿದೆ. ಈಗ ಅದಾನಿ ಗ್ರೂಪ್ ಚೇರ್‌ಮನ್ ಗೌತಮ್ ಅದಾನಿ ಮತ್ತು ಅವರ ಕುಟುಂಬವು ಎಲ್ಲ ಅದಾನಿ ಷೇರುಗಳ ಆಧಾರಿತ ಸಾಲವನ್ನು ಮರುಪಾವತಿ ಮಾಡಿದೆ ಎಂದು ಲಂಡನ್‌ನಲ್ಲಿ ಹಿರಿಯ ಅಧಿಕಾರಿಗಳು ತಮ್ಮ ಹೂಡಿಕೆದಾರರಿಗೆ ತಿಳಿಸಿದೆ ಎಂದು ಬ್ಲ್ಯೂಬರ್ಗ್ ಬುಧವಾರ ವರದಿ ಮಾಡಿದೆ. ಈ ಸಭೆ ಹಾಜರಾದವರ ಬಗ್ಗೆಯೂ ಉಲ್ಲೇಖಿಸಿದೆ.
ಅದಾನಿ ಗ್ರೂಪ್ ವಿಶ್ವದಾದ್ಯಂತ ಹಲವಾರು ದೇಶಗಳಲ್ಲಿ ರೋಡ್ ಶೋ ನಡೆಸುತ್ತಿದೆ. ಲಂಡನ್, ದುಬೈ ಸೇರಿದಂತೆ ಹಲವಾರು ಯುಎಸ್ ನಗರಗಳಲ್ಲಿ ಅದಾನಿ ಗ್ರೂಪ್ ರೋಡ್ ಶೋ ನಡೆಸಿದೆ. ಪ್ರಮುಖವಾಗಿ ಸಂಸ್ಥೆಯ ಹಣಕಾಸು ಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ, ಹೂಡಿಕೆದಾರರ ಮನವೊಲಿಸುವ ಸಲುವಾಗಿ ಅದಾನಿ ಗ್ರೂಪ್ ಈ ಕ್ರಮವನ್ನು ಕೈಗೊಂಡಿದೆ. ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್ ಸ್ಟಾಕ್‌ಗಳು ಕುಸಿತ ಕಂಡ ಬಳಿಕ ತನ್ನ ಸ್ಥಾನವನ್ನು ಮತ್ತೆ ಪಡೆದುಕೊಳ್ಳುವ ಪ್ರಯತ್ನ ಗ್ರೂಪ್ ಮಾಡುತ್ತಿದೆ.

ಅದಾನಿ ಗ್ರೂಪ್‌ನ ಮುಖ್ಯ ಹಣಕಾಸು ಅಧಿಕಾರಿ ಜಗ್‌ಶೀಂದರ್ ಸಿಂಗ್ ಸೇರಿದಂತೆ ಅದಾನಿ ಗ್ರೂಪ್‌ನ ನಿರ್ವಹಣಾ ತಂಡವು ಮಾರ್ಚ್ 7ರಿಂದ ಮಾರ್ಚ್ 15ರವರೆಗೆ ನಡೆಯಲಿರುವ ರೋಡ್ ಶೋಗಳಲ್ಲಿ ಭಾಗಿಯಾಗುತ್ತಿದ್ದಾರೆ. ಈ ಹಿಂದೆ ಪ್ರಕಟವಾದ ವರದಿಯೊಂದು ಅದಾನಿ ಗ್ರೂಪ್ ಗುರವಾರದ ವೇಳೆಗೆ ಸುಮಾರು 500 ಮಿಲಿಯನ್ ಡಾಲರ್ ಸಾಲವನ್ನು ಮರುಪಾವತಿ ಮಾಡಿದೆ ಎಂದು ಉಲ್ಲೇಖಿಸಿತ್ತು. ಇನ್ನು 7,000 ಕೋಟಿ ರೂಪಾಯಿ ಸಾಲ ಮರುಪಾವತಿಸಲಾಗಿದೆ ಎಂದು ಕೂಡಾ ವರದಿಯಾಗಿದೆ.
ಅದಾನಿ ಗ್ರೂಪ್ ವಂಚನೆಯನ್ನು ಮಾಡಿದೆ ಎಂದು ಹಿಂಡನ್‌ಬರ್ಗ್ ವರದಿಯನ್ನು ಪ್ರಕಟಿಸಿದ ಬಳಿಕ ಅದಾನಿ ಗ್ರೂಪ್ ಷೇರುಪೇಟೆಯಲ್ಲಿ ಹಿನ್ನಡೆ ಅನುಭವಿಸಿದೆ. ಈಗ ಸಾಲ ಮರುಪಾವತಿ, ಪೂರ್ವ ಪಾವತಿ ಮೂಲಕ ಅದಾನಿ ಗ್ರೂಪ್ ತನ್ನ ಹೂಡಿಕೆದಾರರಲ್ಲಿ ವಿಶ್ವಾಸವನ್ನು ಮತ್ತೆ ಸೃಷ್ಟಿಸುವ ಪ್ರಯತ್ನ ಮಾಡಿದೆ. ಕಳೆದ ಕೆಲವು ಸೆಷನ್‌ಗಳಲ್ಲಿ ಅದಾನಿ ಗ್ರೂಪ್ ಲಾಭವನ್ನು ಕಾಣುತ್ತಿದ್ದರೂ, ಸಂಸ್ಥೆಯು ಒಟ್ಟಾಗಿ 145 ಬಿಲಿಯನ್ ಡಾಲರ್ ಆದಾಯವನ್ನು ಕಳೆದುಕೊಂಡಿದೆ.
ಜನವರಿ 24, 2023ರಂದು ಅದಾನಿ ಗ್ರೂಪ್ ಹಿಂಡನ್‌ಬರ್ಗ್ ವರದಿಯನ್ನು ಪ್ರಕಟಿಸಿದೆ. ಅದಾನಿ ಗ್ರೂಪ್ ಸ್ಟಕ್ ಮ್ಯಾನಿಫುಲೇಷನ್ ಮಾಡಿದೆ ಎಂದು ಆರೋಪ ಮಾಡಲಾಗಿದೆ. ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆಯಲ್ಲಿ ವಂಚನೆ ಮಾಡಿರುವ ಬಗ್ಗೆ ನಾವು ಹಲವಾರು ದಾಖಲೆಗಳನ್ನು ಪರಿಶೀಲನೆ ಮಾಡಿದ್ದೇವೆ. 12ರಷ್ಟು ದೇಶಗಳಿಗೆ ಭೇಟಿ ನೀಡಿ ಸ್ವತಃ ಸ್ಥಳ ಪರಿಶೀಲನೆ ಮಾಡಿದ್ದೇವೆ. ಇದರಿಂದಾಗಿ ಅದಾನಿ ಗ್ರೂಪ್‌ಯು ವಂಚನೆಯನ್ನು ನಡೆಸುತ್ತಿದೆ ಎಂದು ತಿಳಿದುಬಂದಿದೆ ಎಂದು ವರದಿ ಹೇಳಿದೆ.


Click it and Unblock the Notifications